ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರ ಲಿಬರಲ್ ಪಕ್ಷವು ಸೋಮವಾರ (ಏಪ್ರಿಲ್ 28, 2025) ಕೆನಡಾ ಫೆಡರಲ್ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದೆ ಎಂದು ವರದಿಯಾಗಿದೆ.
ಕೆನಡಾವನ್ನು ಅಮೆರಿಕದ ತೆಕ್ಕೆಗೆ ಪಡೆಯುತ್ತೇವೆ, 51ನೇ ರಾಜ್ಯವನ್ನಾಗಿ ಮಾಡುತ್ತೇವೆ ಎಂಬ ಡೊನಾಲ್ಟ್ ಟ್ರಂಪ್ ಬೆದರಿಕೆ ಮತ್ತು ಟ್ರಂಪ್ ಆಡಳಿತ ವ್ಯಾಪಾರ ಸಂಬಂಧವಾಗಿ ಕೆನಡಾ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಚುನಾವಣೆಯ ಮೇಲೆ ಪರಿಣಾಮ ಬೀರಿದೆ ಎಂದು ವರದಿಗಳು ಹೇಳಿವೆ.
ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ ಬಳಿಕ ಒಟ್ಟಾವದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮಾರ್ಕ್ ಕಾರ್ನಿ, “ಅಮೆರಿಕದ ಬೆದರಿಕೆಗಳನ್ನು ಎದುರಿಸಲು ಕೆನಡಿಯನ್ನರು ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದ್ದಾರೆ. ಎರಡನೇ ಮಹಾಯುದ್ದದ ನಂತರ ಕೆನಡಾ ಮತ್ತು ಅಮೆರಿಕ ಹಂಚಿಕೊಂಡಿದ್ದ ಪರಸ್ಪರ ಪ್ರಯೋಜನಕಾರಿ ವ್ಯವಸ್ಥೆಯ ಕುರಿತು ಚುನಾವಣೆ ಪ್ರಚಾರದ ಸಮಯದಲ್ಲಿ ನೀಡಿದ ಭರವಸೆಗಳನ್ನು ಅವರು ಪುನರುಚ್ಚರಿಸಿದ್ದಾರೆ. ನಾವು ಅಮೆರಿಕದ ದ್ರೋಹದ ಆಘಾತದಿಂದ ಹೊರಬಂದಿದ್ದೇವೆ, ಆದರೆ ನಾವು ಅವರಿಂದ ಅನುಭವಿಸಿದ್ದನ್ನು ಎಂದಿಗೂ ಮರೆಯಬಾರದು” ಎಂದು ಹೇಳಿದ್ದಾರೆ.
Thank you, Canada.
Our strength lies in our resolve to work together. United, we will build Canada strong. pic.twitter.com/uN6h4LUAEP— Mark Carney (@MarkJCarney) April 29, 2025
ಅಮೆರಿಕದ ಜೊತೆಗಿನ ಹಳೆಯ ಸಂಬಂಧ ಮುಗಿದೋಗಿದೆ. ನಮ್ಮ ಬಗ್ಗೆ ನಾವು ಎಚ್ಚರ, ಕಾಳಜಿ ವಹಿಸಬೇಕು. ಯುಎಸ್ ಜೊತೆಗಿನ ವ್ಯಾಪಾರ ಯುದ್ದದಲ್ಲಿ ನಾವು ಗೆಲ್ಲುತ್ತೇವೆ ಎಂದ ಮಾರ್ಕ್ ಕಾರ್ನಿ, ಯುಎಸ್‌ನ ಸುಂಕ ಹೇರಿಕೆ ಮತ್ತು ಸ್ವಾಧೀನ ಬೆದರಿಕೆಯಿಂದ ಮುಂದೆ ಉಂಟಾಗುವ ಅಪಾಯಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಮತ ಎಣಿಕೆ ಮುಗಿಯುವಾಗ ಲಿಬರಲ್‌ಗಳು ಸಂಸತ್ತಿನ 343 ಸ್ಥಾನಗಳಲ್ಲಿ ಕನ್ಸರ್ವೇಟಿವ್ ಪಕ್ಷಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೂ, ಅವರು ಸಂಪೂರ್ಣ ಬಹುಮತ ಗಳಿಸುತ್ತಾರಾ? ಅಥವಾ ಸರ್ಕಾರ ರಚಿಸಲು ಮತ್ತು ಶಾಸನ ಅಂಗೀಕರಿಸಲು ಒಂದು ಅಥವಾ ಅದಕ್ಕಿಂತ ಹೆಚ್ಚು ಸಣ್ಣ ಪಕ್ಷಗಳನ್ನು ಅವಲಂಬಿಸಬೇಕೇ ಎಂಬುದು ತಕ್ಷಣ ಸ್ಪಷ್ಟವಾಗಿಲ್ಲ ಎಂದು ವರದಿಯಾಗಿದೆ.
ಟ್ರಕ್ ಚಾಲಕರು ಇಂಗ್ಲಿಷ್ ತಿಳಿದಿರಬೇಕು ಎಂಬ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ; ಕಳವಳ ವ್ಯಕ್ತಪಡಿಸಿದ ಸಿಖ್ ಗುಂಪು


