ನಿರುದ್ಯೋಗ ಸಮಸ್ಯೆ ಕುರಿತು ಗುರುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ದೇಶದ ಉದ್ಯೋಗ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕೊನೆಗೊಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಹರಿಯಾಣದ ಅಸ್ಸಾಂದ್‌ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ 5 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಸಭೆಯಲ್ಲಿ ಜಾತಿ ಗಣತಿ ವಿಚಾರವನ್ನು ಪ್ರಸ್ತಾಪಿಸಿದ ಅವರು, ಬಿಜೆಪಿಯು ಜನರನ್ನು ವಿಭಜಿಸಿ ಪರಸ್ಪರರ ವಿರುದ್ಧ ಎತ್ತಿಕಟ್ಟುತ್ತಿದೆ ಎಂದು ಆರೋಪಿಸಿದ್ದಾರೆ. “ಕಾಂಗ್ರೆಸ್ ಹರಿಯಾಣ ಚುನಾವಣೆಯನ್ನು ಸ್ವೀಪ್ ಮಾಡಲಿದೆ. ಬಿರುಗಾಳಿ ಬರಲಿದೆ ಮತ್ತು ನಾವು ಎಲ್ಲರಿಗಾಗಿ ಸರ್ಕಾರವನ್ನು ರಚಿಸುತ್ತೇವೆ” ಎಂದು ರಾಹುಲ್ ಹೇಳಿದ್ದಾರೆ. ರ‍್ಯಾಲಿಯಲ್ಲಿ ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಉದಯಭಾನ್ ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: ಆಹಾರ ಮಳಿಗೆಗಳಲ್ಲಿ ಮಾಲೀಕರ ಹೆಸರು ಪ್ರದರ್ಶಿಸಲು ಆದೇಶ : ಬಿಜೆಪಿಯನ್ನು ಅನುಸರಿಸಿದ ಕಾಂಗ್ರೆಸ್ ಸರ್ಕಾರ
ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಪಕ್ಷವು ಹರಿಯಾಣವನ್ನು “ನಾಶಗೊಳಿಸಿದೆ” ಎಂದು ಆಪಾದಿಸಿದ್ದಾರೆ. ತಮ್ಮ ಇತ್ತೀಚಿನ ಅಮೆರಿಕ ಭೇಟಿಯನ್ನು ಉಲ್ಲೇಖಿಸಿದ ಅವರು ತಮ್ಮ ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಉತ್ತಮ ಭವಿಷ್ಯವನ್ನು ಹುಡುಕಲು ಅಲ್ಲಿಗೆ ಹೋದ ಹರಿಯಾಣದ ಕೆಲವು ಯುವಕರನ್ನು ತಾನು ಭೇಟಿಯಾದೆ ಎಂದು ಹೇಳಿದ್ದಾರೆ.
ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ 15 ರಿಂದ 20 ಹರಿಯಾಣ ಯುವಕರು ಒಂದೇ ಕೋಣೆಯಲ್ಲಿ ಉಳಿದುಕೊಂಡಿದ್ದಾರೆ. ಅವರು ಅಮೆರಿಕವನ್ನು ಕಝಾಕಿಸ್ತಾನ್ ಮತ್ತು ಟರ್ಕಿಯಂತಹ ದೇಶಗಳು ಹಾಗೂ ದಕ್ಷಿಣ ಅಮೆರಿಕಾದ ರಾಷ್ಟ್ರಗಳು ಮತ್ತು ಪನಾಮದ ಕಾಡುಗಳ ಮೂಲಕ ಪ್ರಯಾಣಿಸಿ ತಲುಪಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಇದನ್ನೂ ಓದಿ: ಪ್ರಕರಣಗಳ ತನಿಖೆಗೆ ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆ ಹಿಂಪಡೆಯಲು ಸಂಪುಟ ಸಭೆಯಲ್ಲಿ ನಿರ್ಧಾರ
ಹರಿಯಾಣ ಈ ಯುವಕರು ಅಮೆರಿಕಾಕ್ಕೆ ತೆರಳುವ ದಾರಿಯಲ್ಲಿ ಮಾಫಿಯಾದಿಂದ ಲೂಟಿ ಮಾಡಲ್ಪಟ್ಟರು ಮತ್ತು ಅವರ ಸಹೋದರರು ಸಾವಿಗೀಡಾದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಮೇರಿಕಾವನ್ನು ತಲುಪಲು ಕನಿಷ್ಠ 35 ಲಕ್ಷ ರೂಪಾಯಿಗಳ ಅಗತ್ಯವಿದೆ ಎಂದು ಒಬ್ಬ ಯುವಕ ಹೇಳಿದ್ದಾಗಿ ಹೇಳಿದ ಅವರು, ಈ ಯುವಕರು ಅತಿಯಾದ ಬಡ್ಡಿದರದಲ್ಲಿ ಸಾಲ ಪಡೆದು ಅಥವಾ ತಮ್ಮ ಕೃಷಿ ಭೂಮಿಯನ್ನು ಮಾರಾಟ ಮಾಡಿ ಅಮೆರಿಕಾಕ್ಕೆ ತೆರಳಿದರು ಎಂದು ರಾಹುಲ್ ಗಾಂಧಿ ನಿರುದ್ಯೋಗಿ ಯುವಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಅಮೆರಿಕಕ್ಕೆ ಪ್ರಯಾಣಿಸುವ ಹಣವನ್ನು ಉಳಿಸಿ ಹರಿಯಾಣದಲ್ಲಿ ಏನಾದರೂ ಉದ್ಯಮ ಪ್ರಾರಂಭಿಸಬಹುದಲ್ಲವೆ ಎಂದು ಆ ಯುವಕರಿಗೆ ಕೇಳಿದಾಗ, ಆ ಹಣದಿಂದ ಯಾವುದೇ ಉದ್ಯಮ ಪ್ರಾರಂಭಿಸುವುದು ಕಾರ್ಯಸಾಧ್ಯವಲ್ಲ ಎಂದು ಅವರು ಉತ್ತರಿಸಿದ್ದರು. ಹರಿಯಾಣದಲ್ಲಿ 50 ಲಕ್ಷ ರೂಪಾಯಿಯಿಂದ ಕೂಡಾ ಉದ್ಯಮ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಮೋದಿ
ಈ ಯುವಕರಲ್ಲಿ ಒಬ್ಬ ಯುವಕ ಉದ್ಯಮಕ್ಕೆ ಪ್ರಯತ್ನಿಸಿ ವಿಫಲರಾದರು ಎಂದು ಅವರು ಹೇಳಿದ್ದಾರೆ. ಬಿಜೆಪಿ ಸರ್ಕಾರವು “ತಪ್ಪಾಗಿ” ಜಿಎಸ್‌ಟಿ ಜಾರಿ ಮಾಡಿ ಸಣ್ಣ ಉದ್ಯಮಗಳನ್ನು “ಕೊಲ್ಲುತ್ತಿದೆ” ಎಂದು ರಾಹುಲ್ ಗಾಂಧಿ ಆರೋಪಿಸಿದರು. ದೇಶದಲ್ಲಿ ನಿರುದ್ಯೋಗ ಮತ್ತು ಹಣದುಬ್ಬರವಿದೆ ಎಂದು ಯುವಕರು ಹೇಳಿದ್ದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ವಿಡಿಯೊ ನೋಡಿ: ಕಲಬುರಗಿ- ಗೌರಿಯದ್ದು ವೈಚಾರಿಕ ಕೊಲೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ರಹಮತ್ ತರೀಕೆರೆ ಮಾತುಗಳು


