ಪ್ರಧಾನಿ ನರೇಂದ್ರ ಮೋದಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಏಕೆಂದರೆ ಇಬ್ಬರೂ “ಸುಳ್ಳು ಭರವಸೆಗಳನ್ನು ನೀಡುತ್ತಾರೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. “ಕೇಜ್ರಿವಾಲ್ ಅಧಿಕಾರಕ್ಕೆ ಬಂದಾಗ ದೆಹಲಿ ಹೇಗಿತ್ತು ಎಂದು ನಿಮಗೆ ನೆನಪಿದೆಯೇ?. ಅವರು ಭ್ರಷ್ಟಾಚಾರವನ್ನು ತೆಗೆದುಹಾಕುವುದಾಗಿ ಹೇಳಿದರು. ಆದರೆ ವಾಸ್ತವವಾಗಿ ಏನು ಸಂಭವಿಸಿದೆ? ಮಾಲಿನ್ಯ ಮತ್ತು ಹಣದುಬ್ಬರ ಹೆಚ್ಚುತ್ತಲೇ ಇದೆ.” ಎಂದು ರಾಹುಲ್ ಹೇಳಿದ್ದಾರೆ. ಪ್ರಧಾನಿ ಮೋದಿಗೂ
ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈಶಾನ್ಯ ದೆಹಲಿಯಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, “ಮೋದಿ ಅವರಂತೆಯೇ, ಕೇಜ್ರಿವಾಲ್ ಅವರು ಒಂದರ ನಂತರ ಒಂದರಂತೆ ಸುಳ್ಳು ಭರವಸೆಗಳನ್ನು ನೀಡುತ್ತಲೇ ಇದ್ದಾರೆ. ಅವರುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ.” ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಫೆಬ್ರವರಿ 5 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕೇಜ್ರಿವಾಲ್ ಮತ್ತು ಮೋದಿ ಹಣದುಬ್ಬರ ಏರಿಕೆಗೆ ಕಾರಣ ಎಂದು ಕಾಂಗ್ರೆಸ್ ನಾಯಕ ಹೇಳಿದ್ದು, ಇಬ್ಬರೂ “ಕೆಲವು ಕೋಟ್ಯಾಧಿಪತಿಗಳಿಗೆ” ಸೇವೆ ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜಾತಿ ಜನಗಣತಿ ನಡೆಸುವ ಬಗ್ಗೆ ಮತ್ತು ಶಿಕ್ಷಣ, ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯ ಮೇಲಿನ 50% ಮಿತಿಯನ್ನು ರದ್ದುಗೊಳಿಸುವ ಬೇಡಿಕೆಯ ಬಗ್ಗೆ ಕೇಜ್ರಿವಾಲ್ ಅವರ ನಿಲುವನ್ನು ಸ್ಪಷ್ಟಪಡಿಸುವಂತೆ ರಾಹುಲ್ ಗಾಂಧಿ ಕೇಳಿದ್ದಾರೆ.
“ಹಿಂದುಳಿದವರಿಗೆ ಮೀಸಲಾತಿ ಬೇಕೇ ಮತ್ತು ಜಾತಿ ಜನಗಣತಿ ನಡೆಸುವ ಬಗ್ಗೆ ಅವರ ನಿಲುವನ್ನು ಜನರು ಕೇಜ್ರಿವಾಲ್ ಅವರನ್ನು ಕೇಳಬೇಕು” ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರಧಾನಿ ಮೋದಿಗೂ
#WATCH | Delhi: Addressing a public rally in Seelampur, Congress leader and Lok Sabha LoP Rahul Gandhi says, "Do you remember that Delhi when Sheila Dikshit was the chief minister of the national capital? … Arvind Kejriwal had said he will clean Delhi, make it corruption-free.… pic.twitter.com/stdT5pwtWD
— ANI (@ANI) January 13, 2025
ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, “ಇಂದು ರಾಹುಲ್ ಗಾಂಧಿ ದೆಹಲಿಗೆ ಬಂದರು. ಅವರು ನನ್ನನ್ನು ತುಂಬಾ ನಿಂದಿಸಿದರು. ಆದರೆ ನಾನು ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಅವರ ಹೋರಾಟ ಕಾಂಗ್ರೆಸ್ ಅನ್ನು ಉಳಿಸುವುದಾಗಿದ್ದು, ನನ್ನದು ದೇಶವನ್ನು ಉಳಿಸುವುದಾಗಿದೆ.” ಎಂದು ಹೇಳಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಪಕ್ಷವಾದ ಇಂಡಿಯಾ ಮೈತ್ರಿಯ ಸದಸ್ಯರಾಗಿದ್ದರೂ, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. 2024 ರ ಲೋಕಸಭಾ ಚುನಾವಣೆಯಲ್ಲಿ, ಆಮ್ ಆದ್ಮಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟವು ದೆಹಲಿಯ ಎಲ್ಲಾ ಏಳು ಸಂಸದೀಯ ಸ್ಥಾನಗಳನ್ನು ಒಟ್ಟಾಗಿ ಸ್ಪರ್ಧಿಸಿತ್ತು. ಆದರೆ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು.
ಡಿಸೆಂಬರ್ 26 ರಂದು ಕೇಜ್ರಿವಾಲ್ ಅವರನ್ನು “ದೇಶ ವಿರೋಧಿ” ಎಂದು ಕರೆದಿದ್ದಕ್ಕಾಗಿ ದೆಹಲಿ ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಅನ್ನು ಇಂಡಿಯಾ ಮೈತ್ರಿಯಿಂದ ತೆಗೆದುಹಾಕಲು ಪ್ರಯತ್ನಿಸುವುದಾಗಿ ಆಮ್ ಆದ್ಮಿ ಪಕ್ಷ ಹೇಳಿತ್ತು.
ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಸೋಲಿಸಲು ಕಾಂಗ್ರೆಸ್ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕಿ ಮತ್ತು ಮುಖ್ಯಮಂತ್ರಿ ಅತಿಶಿ ಆರೋಪಿಸಿದ್ದರು. ದೆಹಲಿಯಲ್ಲಿ ಕಾಂಗ್ರೆಸ್ ಚುನಾವಣಾ ಅಭ್ಯರ್ಥಿಗಳು ಬಿಜೆಪಿಯಿಂದ ಹಣವನ್ನು ಪಡೆಯುತ್ತಿದ್ದಾರೆ ಎಂದು “ವಿಶ್ವಾಸಾರ್ಹ ಮೂಲಗಳಿಂದ” ತಮ್ಮ ಪಕ್ಷಕ್ಕೆ ತಿಳಿಸಲಾಗಿದೆ ಎಂದು ಅತಿಶಿ ಹೇಳಿದ್ದರು.
ಇದನ್ನೂಓದಿ: ಮೋದಿ ಪದವಿ ಪ್ರಕರಣ | ಕುತೂಹಲ ತಣಿಸುವುದು ಆರ್‌ಟಿಐ ಉದ್ದೇಶವಲ್ಲ ಎಂದ ದೆಹಲಿ ವಿಶ್ವವಿದ್ಯಾಲಯ!
ಮೋದಿ ಪದವಿ ಪ್ರಕರಣ | ಕುತೂಹಲ ತಣಿಸುವುದು ಆರ್‌ಟಿಐ ಉದ್ದೇಶವಲ್ಲ ಎಂದ ದೆಹಲಿ ವಿಶ್ವವಿದ್ಯಾಲಯ!


