ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ 59 ಚೀನೀ ಆ್ಯಪ್‌ಗಳನ್ನು ಭಾರತ ನಿಷೇಧಿಸಿದ್ದರಿಂದ ಸುಮಾರು 2.44 ಲಕ್ಷ ಅನುಯಾಯಿಗಳನ್ನು ಹೊಂದಿರುವ ಚೀನಾದ ಸಾಮಾಜಿಕ ಜಾಲತಾಣ ವೀಬೊ ಆಪ್ ನಲ್ಲಿನ ತಮ್ಮ ಖಾತೆಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಡಿಲೀಟ್ ಮಾಡಿದ್ದಾರೆ.
59 ಚೈನೀಸ್ ಆ್ಯಪ್‌ಗಳ ನಿಷೇಧವನ್ನು ದೇಶ ಘೋಷಿಸಿದ ಕ್ಷಣದಿಂದ ಮೋದಿ ವೀಬೊ ಆಪ್ ತೊರೆಯಲು ನಿರ್ಧರಿಸಿದ್ದಾರೆ ಎಂದು ವಿಶ್ವಾಸಾರ್ಹ ಸರ್ಕಾರಿ ಮೂಲಗಳು ಐಎಎನ್‌ಎಸ್‌ಗೆ ತಿಳಿಸಿವೆ.
“59 ಚೀನೀ ಆ್ಯಪ್‌ಗಳನ್ನು ನಿಷೇಧಿಸಲು ಸರ್ಕಾರ ಕ್ರಮ ಕೈಗೊಂಡದ್ದರಿಂದ, ಪ್ರಧಾನಿ ಮೋದಿ ಚೀನಾದ ಸಾಮಾಜಿಕ ಜಾಲತಾಣ ವೇದಿಕೆ ವೀಬೊದಿಂದ ನಿರ್ಗಮಿಸುತ್ತಾರೆ. ಇದು ಆರ್ಥಿಕವಾಗಿ ಹಾಗೂ ವೈಯಕ್ತಿಕವಾಗಿ ಗಡಿಯ ವಿಚಾರದಲ್ಲಿ ಕಠಿಣ ಸಂದೇಶವಾಗಿದೆ” ಎಂದು ಬಿಜೆಪಿಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅಭಿಪ್ರಾಯ ಪಟ್ಟಿದ್ದಾರೆ.
After Govt move of banning 59 Chinese Apps , PM @narendramodi exits from Chinese social media platform WEIBO also …. Strong message at the border , on economic front & at personal level too … #IndiaChinaFaceOff
— B L Santhosh (@blsanthosh) July 1, 2020
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಫೋಟೋಗಳನ್ನು ಹೊಂದಿದ್ದ ಎರಡು ಪೋಸ್ಟ್‌ಗಳು ಸೇರಿದಂತೆ ಪ್ರಧಾನ ಮಂತ್ರಿ ವೀಬೊ ಖಾತೆಯ ಮೇಲಿನ ಎಲ್ಲಾ ಪೋಸ್ಟ್‌ಗಳು, ಚಿತ್ರಗಳು ಮತ್ತು ಕಾಮೆಂಟ್‌ಗಳನ್ನು ಅಳಿಸಲಾಗಿದೆ.
ಕಳೆದ ತಿಂಗಳು, ಸರ್ಕಾರದ ನಿಯಂತ್ರಣ ಮತ್ತು ಸೆನ್ಸಾರ್‌ಶಿಪ್‌ಗೆ ಹೆಸರುವಾಸಿಯಾದ ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆಗಳು ನರೇಂದ್ರ ಮೋದಿಯವರ ಭಾಷಣ ಮತ್ತು ಗಡಿ ಸಾಲಿನಲ್ಲಿ ಭಾರತದ ಅಧಿಕೃತ ಹೇಳಿಕೆಗಳನ್ನು ತೆಗೆದುಹಾಕಿದೆ. ದೇಶದ ಗಡಿ ಪರಿಸ್ಥಿತಿಯ ಬಗ್ಗೆ ಮೋದಿಯವರ ಜೂನ್ 18 ರ ಹೇಳಿಕೆಗಳು ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ವೀಚಾಟ್‌ನಲ್ಲಿ ಬಳಕೆದಾರರಿಗೆ ನೀಡಲು ಆಗಲಿಲ್ಲ.
ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಜೂನ್ 15 ರಂದು ನಡೆದ ಹಿಂಸಾಚಾರ ನಡೆದು 20 ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಧಾನ ಮಂತ್ರಿ ಖುದ್ದಾಗಿ ಹೇಳಿದ್ದಾರೆ. ಚೀನಾದ ಮಾತ್ರ ಇನ್ನೂ ಎಷ್ಟು ಸಾವುನೋವುಗಳಾಗಿವೆ ಎಂದು ಬಹಿರಂಗಪಡಿಸಿಲ್ಲ.
ಗಡಿ ವಿಚಾರವನ್ನು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರ ಹೇಳಿಕೆಯನ್ನು ಕೂಡಾ ಅಧಿಕೃತ ವೀಚಾಟ್ ಖಾತೆಯಿಂದ ತೆಗೆದುಹಾಕಲಾಗಿದೆ.
ಸಂದೇಶವನ್ನು ಅಳಿಸಿದ ನಂತರ WeChat ನಲ್ಲಿ “ಈ ವಿಷಯವು ನಮ್ಮ ನಿಯಮಗಳನ್ನು ಉಲ್ಲಂಘಿಸುವ ಕಾರಣ ಅದನ್ನು ವೀಕ್ಷಿಸಲು ಸಾಧ್ಯವಿಲ್ಲ.” ಎಂದು ಬರೆಯಲಾಗಿದೆ
2015 ರಲ್ಲಿ ಚೀನಾ ಭೇಟಿಗೆ ಮುಂಚಿತವಾಗಿ, ಮೋದಿಯವರು ವೀಬೊದಲ್ಲಿ ಖಾತೆಯನ್ನು ತೆರೆದರು, ಇದನ್ನು ಚೀನಾದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು, ಟ್ವಿಟರ್‌ಗೆ ಸಮಾನವೆಂದು ಪರಿಗಣಿಸಲಾಗಿದೆ.
ಓದಿ: ಪತಂಜಲಿ ಕೊರೊನಾ ಔಷಧಿ: ಆಯುರ್ವೇದ ವೈದ್ಯಶಾಸ್ತ್ರಕ್ಕೆ ಮಸಿ ಬಳಿಯುವ ಪ್ರಯತ್ನ


