Homeಚಳವಳಿ‘ಖಾಸಗೀಕರಣ’: ಒಕ್ಕೂಟ ಸರ್ಕಾರದ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಸಲಿರುವ ವಿದ್ಯುತ್ ವಲಯದ ನೌಕರರು

‘ಖಾಸಗೀಕರಣ’: ಒಕ್ಕೂಟ ಸರ್ಕಾರದ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಸಲಿರುವ ವಿದ್ಯುತ್ ವಲಯದ ನೌಕರರು

- Advertisement -
- Advertisement -

ಖಾಸಗೀಕರಣ ನೀತಿಗಳ ವಿರುದ್ಧ ವಿದ್ಯುತ್ ವಲಯದ ಕಾರ್ಮಿಕರು ಮಂಗಳವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಆಲ್ ಇಂಡಿಯಾ ಪವರ್ ಎಂಜಿನಿಯರ್ಸ್ ಫೆಡರೇಶನ್ (AIPEF) ತಿಳಿಸಿದೆ. “ವಿದ್ಯುತ್ ನೌಕರರು ಮತ್ತು ಎಂಜಿನಿಯರ್‌ಗಳ ರಾಷ್ಟ್ರೀಯ ಸಮನ್ವಯ ಸಮಿತಿಯ (NCCOEEE) ಕರೆ ಮೇರೆಗೆ ದೇಶಾದ್ಯಂತ ವಿದ್ಯುತ್ ನೌಕರರು ಮತ್ತು ಇಂಜಿನಿಯರ್‌ಗಳು ಒಕ್ಕೂಟ ಸರ್ಕಾರದ ಖಾಸಗೀಕರಣ ನೀತಿಗಳ ವಿರುದ್ಧ ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಲಿದ್ದಾರೆ” ಎಂದು AIPEF ತನ್ನ ಹೇಳಿಕೆಯನ್ನು ತಿಳಿಸಿದೆ.

ಫೆಡರೇಶನ್ ಹೇಳಿಕೆಯ ಪ್ರಕಾರ, NCCOEEE ಕೋರ್ ಕಮಿಟಿ ನಾಯಕರು ಫೆಬ್ರವರಿ 1 ರಂದು ಪಂಜಾಬ್ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ ಮತ್ತು ಚಂಡೀಗಢ ಯುಟಿ ವಿದ್ಯುತ್ ಇಲಾಖೆಯ ಖಾಸಗೀಕರಣದ ವಿರುದ್ಧ ಅವರಿಗೆ ಜ್ಞಾಪಕ ಪತ್ರವನ್ನು ಹಸ್ತಾಂತರಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಗೋವಾ ಚುನಾವಣೆ: ಉಚಿತ ವಿದ್ಯುತ್, ಉದ್ಯೋಗ ಖಾತ್ರಿ ಭರವಸೆ ನೀಡಿದ ಅರವಿಂದ್ ಕೇಜ್ರಿವಾಲ್

ಜೊತೆಗೆ NCCOEEE ಕೋರ್ ಕಮಿಟಿ ಪದಾಧಿಕಾರಿಗಳು ಫೆಬ್ರವರಿ 2 ರಂದು ಪುದುಚೇರಿಯಲ್ಲಿ ಪುದುಚೇರಿ ವಿದ್ಯುತ್ ನೌಕರರ ಮುಷ್ಕರ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

AIPEF ಅಧ್ಯಕ್ಷ ಶೈಲೇಂದ್ರ ದುಬೆ ಮಾತನಾಡಿ, “ದೇಶಾದ್ಯಂತ ಸುಮಾರು 1.5 ಮಿಲಿಯನ್ ಪವರ್ ಎಂಪ್ಲಾಯೀಸ್ ಮತ್ತು ಇಂಜಿನಿಯರ್‌ಗಳು NCCOEEEಯ ಕರೆ ಮೇರೆಗೆ ಫೆಬ್ರವರಿ 1 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಕ್ಕೂಟ ಸರ್ಕಾರದ ಖಾಸಗೀಕರಣ ನೀತಿಗಳ ವಿರುದ್ಧ ಮತ್ತು ಯೋಜನೆಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದ್ದಾರೆ” ಎಂದು ಹೇಳಿದ್ದಾರೆ.

ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ-2021 ಹಿಂಪಡೆಯಬೇಕು ಎಂಬುವುದು ವಿದ್ಯುತ್ ನೌಕರರು ಮತ್ತು ಇಂಜಿನಿಯರ್‌ಗಳ ಪ್ರಮುಖ ಬೇಡಿಕೆಯಾಗಿದೆ.

ಖಾಸಗೀಕರಣದ ವಿರುದ್ಧ ಯುಟಿ ಪವರ್ ನೌಕರರ ಮುಷ್ಕರವನ್ನು ಬೆಂಬಲಿಸಲು NCCOEEE ಕೋರ್ ಕಮಿಟಿ ನಾಯಕರು ಫೆಬ್ರವರಿ 1 ರಂದು ಚಂಡೀಗಢವನ್ನು ತಲುಪಲಿದ್ದಾರೆ ಎಂದು ಶೈಲೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ಯುಪಿ ಚುನಾವಣೆ ಪ್ರಚಾರ ಪ್ರಾರಂಭಿಸಿದ ಎಎಪಿ: 300 ಯೂನಿಟ್‌‌ವರೆಗೆ ಉಚಿತ ವಿದ್ಯುತ್‌ ಭರವಸೆ!

ಲಾಭ ಗಳಿಸುತ್ತಿರುವ ಚಂಡೀಗಢದ ವಿದ್ಯುತ್ ಇಲಾಖೆಯ ಖಾಸಗೀಕರಣದ ವಿರುದ್ಧ ಫೆ.1ರಂದು ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಲಿದ್ದಾರೆ. ಚಂಡೀಗಢ ವಿದ್ಯುತ್ ಇಲಾಖೆ ಕಳೆದ ಏಳು ವರ್ಷಗಳಿಂದ ಲಾಭ ಗಳಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

2020-2021 ರ ವರ್ಷದ ಲಾಭವು 257 ಕೋಟಿ ರೂ.ಗಳಷ್ಟಿತ್ತು ಮತ್ತು ಚಂಡೀಗಢದಲ್ಲಿ ಲೈನ್ ನಷ್ಟಗಳು ಕೇವಲ 09.2% ಮಾತ್ರವಾಗಿದೆ. ಪಂಜಾಬ್ ಮತ್ತು ಹರಿಯಾಣಕ್ಕೆ ಹೋಲಿಸಿದರೆ ಚಂಡೀಗಢದ ಸುಂಕವೂ ಅಗ್ಗವಾಗಿದೆ. ಅಂತಹ ಲಾಭದಾಯಕ ಉದ್ಯಮಗಳನ್ನು ಖಾಸಗೀಕರಣ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ.

ಲಾಭ ಗಳಿಸುತ್ತಿರುವ ಪುದುಚೇರಿ ವಿದ್ಯುತ್ ಇಲಾಖೆಗಳ ಖಾಸಗೀಕರಣದ ವಿರುದ್ಧ ಪುದುಚೇರಿ ವಿದ್ಯುತ್ ನೌಕರರು ಮತ್ತು ಇಂಜಿನಿಯರ್‌ಗಳು ಫೆಬ್ರವರಿ 1 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಫೆಡರೇಶನ್ ಹೇಳಿದೆ.

ಇದನ್ನೂ ಓದಿ: ವಿದ್ಯುತ್ ಮಸೂದೆ 2021; ಕೃಷಿಗೆ ಮತ್ತು ವಿದ್ಯುತ್ ವಲಯದ ಕಾರ್ಮಿಕರಿಗೆ ಮಾರಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...