Homeಕರ್ನಾಟಕಬಾಗಲಕೋಟೆಯಲ್ಲಿ ಕಬ್ಬಿನ ಟ್ರಾಕ್ಟರುಗಳಿಗೆ ಬೆಂಕಿ ಹಚ್ಚಿದ ಘಟನೆಗೆ ರೈತಪರ ಸಂಘಟನೆಗಳ ಖಂಡನೆ

ಬಾಗಲಕೋಟೆಯಲ್ಲಿ ಕಬ್ಬಿನ ಟ್ರಾಕ್ಟರುಗಳಿಗೆ ಬೆಂಕಿ ಹಚ್ಚಿದ ಘಟನೆಗೆ ರೈತಪರ ಸಂಘಟನೆಗಳ ಖಂಡನೆ

- Advertisement -
- Advertisement -

‘ವಿನಾಶಕಾರಿ ಕೃತ್ಯಗಳನ್ನು ರೈತಚಳವಳಿ ಎಂದೂ ಪಾಲಿಸಿಲ್ಲ’ ಬಾಗಲಕೋಟೆಯ ಸೈದಾಪುರದಲ್ಲಿ ಹಲವಾರು ಕಬ್ಬು ತುಂಬಿದ ಟ್ರಾಕ್ಟರುಗಳು ಸುಟ್ಟು ಭಸ್ಮವಾಗಿರುವುದು ವಿಷಾದನೀಯ. ಇದಕ್ಕೆ ಯಾರೇ ಪ್ರೇರಣೆ ನೀಡಿದ್ದರೂ ಈ ಕೃತ್ಯವನ್ನು ನಾವು ಖಂಡಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪ, ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಚುಕ್ಕಿನಂಜುಂಡಸ್ವಾಮಿ, ನೂರ್ ಶ್ರೀಧರ್, ಡಿ.ಹೆಚ್, ಪೂಜಾರ್ ಸೇರಿದಂತೆ ಹಲವು ರೈತ ನಾಯಕರು, ರೈತಪರ ಹೋರಾಟಗಾರರು ಹೇಳಿದ್ದಾರೆ. 

ಕಬ್ಬಿನ ಟ್ರಾಕ್ಟರುಗಳಿಗೆ ಬೆಂಕಿ ಹೊತ್ತಿರುವ ದುರ್ಘಟನೆ ಕುರಿತು ರೈತ ಹಾಗೂ ರೈತಪರ ಸಂಘಟನೆಗಳು ತುರ್ತು ಹೇಳಿಕೆ ಬಿಡುಗಡೆ ಮಾಡಿದ್ದು, ಕರ್ನಾಟಕದ ರೈತ ಚಳವಳಿ ಇತಿಹಾಸದುದ್ದಕ್ಕೂ ಶಾಂತಿಯುತವಾಗಿ ನಡೆದು ಬಂದಿದೆ. ರೈತರದು ಸದಾ ಜೀವಪರ ನಿಲುವು, ವಿನಾಶಕಾರಿ ಕೃತ್ಯಗಳನ್ನು ರೈತ ಚಳವಳಿ ಎಂದೂ ಪಾಲಿಸಿಲ್ಲ, ಸಮ್ಮತಿಸಿಲ್ಲ. 

ಆದರೆ ಈ ಘಟನೆಗೆ ಇತ್ತೀಚಿಗೆ ನಡೆದ ರೈತ ಚಳವಳಿ ಸರಿಯಾದ ರೀತಿಯಲ್ಲಿ ಸಮಾರೋಪಗೊಳ್ಳದೇ ಹೋದದ್ದು ಮುಖ್ಯ ಕಾರಣವಾಗಿದೆ. ಇದಕ್ಕೆ ಕೇಂದ್ರ ಸರ್ಕಾರ, ರಾಜ್ಯಸರ್ಕಾರ, ಕಾರ್ಖಾನೆ ಮಾಲೀಕರು ಹಾಗೂ ಜಿಲ್ಲಾಡಳಿತ ಪ್ರಮುಖ ಹೊಣೆಯನ್ನು ಹೊತ್ತುಕೊಳ್ಳಲೇಬೇಕಿದೆ.

ಅವೈಜ್ಞಾನಿಕ ಎಫ್‌ ಆರ್‌ ಪಿ ಯನ್ನು ನಿಗದಿಮಾಡುವ ಮೂಲಕ ಕೇಂದ್ರ ಸರ್ಕಾರ ಸಮಸ್ಯೆಯ ಮೂಲವಾಗಿ ಕೆಲಸ ಮಾಡಿದೆ.

ಸೂಕ್ತ ಬೆಲೆ ಸಿಗದೆ ರೈತರ ಆಕ್ರೋಶ ಸ್ಪೋಟ ಗೊಂಡಾಗ ರಾಜ್ಯಸರ್ಕಾರ ಕೂಡಲೇ ಅದನ್ನು ಬಗೆಹರಿಸುವ ಬಿಗಿ ನಿಲುವು ತೆಗೆದುಕೊಳ್ಳಲು ಮುಂದಾಗಲಿಲ್ಲ. ಕೊನೆಗೆ ಪರಿಸ್ಥಿತಿ ಕೈಮೀರಿದಾಗ ಕಾರ್ಖಾನೆ ಮಾಲೀಕರ ಸಭೆ ಕರೆಯಿತು. ಆ ಸಭೆಯಲ್ಲಿ ಕೋಟ್ಯಾಂತರ ಲಾಭ ಮಾಡುತ್ತಿರುವ ಕಾರ್ಖಾನೆ ಮಾಲೀಕರು ರೈತರಿಗೆ ಪ್ರತಿಟನ್ನಿಗೆ ನೂರುರೂ ಹೆಚ್ಚಿಸಲು ತಯಾರಿರಲಿಲ್ಲ. 

ಇವರ ಲೋಭಕೋರತನ, ಮೊಂಡು ನಿಲುವು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿತು. ಕೊನೆಗೆ ರಾಜ್ಯ ಸರ್ಕಾರ ತಾನೂ 50 ರೂ ಸೇರಿಸಿ 3300 ರೂ ಕೊಡುವ ತೀರ್ಮಾನ ತೆಗೆದುಕೊಂಡಿತಾದರೂ ರಿಕವರಿಯನ್ನು10.25 ಬದಲು11.25 ಕ್ಕೆನಿಗದಿಮಾಡಿದ್ದು,  ಕೊಟ್ಟಂತೆ ಕಂಡರೂ ಏನೂ ಕೊಡಲಿಲ್ಲ, ಎಂಬ ಭಾವ ರೈತರಲ್ಲಿ ಉಳಿಯಲು ಕಾರಣವಾಯಿತು. 

ಈ ಕಾರಣಕ್ಕಾಗಿಯೇ ಬಾಗಲಕೋಟೆಯಲ್ಲಿ ಹೋರಾಟ ನಿಲ್ಲದೆ ಮುಂದುವರಿಯಿತು. ರೈತರನ್ನುಕರೆದು, ವಿಶ್ವಾಸಕ್ಕೆ ತೆಗೆದುಕೊಂಡು, ತನ್ನಿಂದ ಆಗಿರುವ ಅಚಾತುರ್ಯವನ್ನು ಸರಿಪಡಿಸಿಕೊಂಡು ರಿಕವರಿಯನ್ನು 10.25 ಗೆ ತರುವ ಬದಲು, ಜಿಲ್ಲಾಸಚಿವರು “ಹೋರಾಟ ಮುಗಿದಿದೆ, ಕಬ್ಬುಸಾಗಿಸಿ” ಎಂಬ ಸಂದೇಶವನ್ನು ಕಾರ್ಖಾನೆ ಮಾಲೀಕರಿಗೆ ಕೊಟ್ಟರು.

ರೈತರ ಪ್ರತಿರೋಧವನ್ನು ಲೆಕ್ಕಿಸದೆ ಜಿಲ್ಲಾಡಳಿತ ಮತ್ತು ಕಾರ್ಖಾನೆ ಮಾಲೀಕರು ಸೇರಿ ಪೋಲೀಸ್‌ ಬಲದ ಬೆಂಬಲದಲ್ಲಿ ಕಬ್ಬು ಸಾಗಿಸಲು ಹೊರಟಿದ್ದು, ರೈತರ ಆಕ್ರೋಶಕ್ಕೂ, ಈ ದುರ್ಘಟನೆಗೂ ಕಾರಣವಾಗಿದೆ. ಹಾಗಾಗಿ ಸರ್ಕಾರಗಳು ಹಾಗೂ ಜಿಲ್ಲಾಡಳಿತ ಈ ದುರ್ಘಟನೆಯ ಹೊಣೆಯನ್ನು ಹೊತ್ತುಕೊಳ್ಳಬೇಕಿದೆ. ರೈತರನ್ನು ಕಾಡುವ ಬದಲು ನಷ್ಟಕ್ಕೊಳಗಾಗಿರುವ ರೈತರಿಗೆ ಕೂಡಲೇ ನಷ್ಟ ಪರಿಹಾರ ಕಟ್ಟಿಕೊಟ್ಟು, ರೈತರ ಸಭೆಯನ್ನು ಕರೆದು ಮೂಲ ಸಮಸ್ಯೆಯನ್ನು ನ್ಯಾಯಸಮ್ಮತವಾಗಿ ಬಗೆಹರಿಸುವ ಅಗತ್ಯವಿದೆ. 

ಈ ಬಾರಿಯ ಚಳವಳಿ ಐಕ್ಯನಾಯಕತ್ವದಲ್ಲಿ ನಡೆಯದೆ ಹಲವಾರು ಕೇಂದ್ರಗಳಾಗಿ ನಡೆದದ್ದೂ ಸಹ ಈ ಗೊಂದಲಕ್ಕೆಇಂಬುಕೊಟ್ಟಿದೆ. ರೈತ ಚಳವಳಿಯ ಭಾಗವಾಗಿ ನಾವೂ ಆತ್ಮಾವಲೋಕನ ಮಾಡಿಕೊಳ್ಳುವ ವಿಚಾರಗಳು ಇವೆ ಎಂದಿದ್ದಾರೆ. 

ರಾಜ್ಯ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯಗಳು:

  1. ಕಬ್ಬಿನ ಪ್ರತಿ ಟನ್ನಿಗೆ, 10.25 ರಿಕವರಿ ಮಾನದಂಡದ ಮೇಲೆ, ಕನಿಷ್ಟ 3300 ಬೆಲೆ ನಿಗದಿ ಮಾಡಬೇಕು.
  2. ನಷ್ಟಕ್ಕೊಳಗಾಗಿರುವ ರೈತರಿಗೆ ಕಾರ್ಖಾನೆಗಳು ಹಾಗೂ ಸರ್ಕಾರ ಸೇರಿ ಸುಟ್ಟು ಹೋಗಿರುವ ಟ್ರಾಕ್ಟರ್‌ ಗಳಿಗೂ ಸೇರಿದಂತೆ
    ನಷ್ಟ ಪರಿಹಾರ ಕಟ್ಟಿಕೊಡಬೇಕು.

3.ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಬಗೆ ಹರಿಸಲು ಕೂಡಲೇ ಮುಖ್ಯಮಂತ್ರಿಗಳು ಸಭೆ ಕರೆಯಬೇಕು.

  1. ರಿಕವರಿ ಟೆಸ್ಟಿನಲ್ಲಿ, ತೂಕದಲ್ಲಿ, ಪಾವತಿಯಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
  2. ಎಫ್‌ ಆರ್‌ ಪಿ ದರದಲ್ಲಿ, ಎಥೆನಾಲ್‌ ಪ್ರಮಾಣದಲ್ಲಿ ಕರ್ನಾಟಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿ ಪಡಿಸಲು ಹಾಗೂ ರಿಕವರಿಯನ್ನು ಈಗಿರುವ 10.25 ಬದಲು ಮೊದಲಿನಂತೆ 9.25 ಗೆ ಇಳಿಸಬೇಕುಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ರಾಜ್ಯಸರ್ಕಾರ ಮುಂದೊಡಗು ತೆಗೆದು ಕೊಳ್ಳಬೇಕು.

ಹೆಚ್.‌ ಆರ್.‌ ಬಸವರಾಜಪ್ಪ [ಅಧ್ಯಕ್ಷರು, ಕರ್ನಾಟಕರಾಜ್ಯರೈತಸಂಘಹಾಗೂಹಸಿರುಸೇನೆ]
ಬಡಗಲಪುರನಾಗೇಂದ್ರ [ಅಧ್ಯಕ್ಷರು, ಕರ್ನಾಟಕರಾಜ್ಯರೈತಸಂಘ]
ಚುಕ್ಕಿನಂಜುಂಡಸ್ವಾಮಿ [ರಾಜ್ಯಅಧ್ಯಕ್ಷೀಯಮಂಡಳಿಸದಸ್ಯರು, ಕರ್ನಾಟಕರಾಜ್ಯರೈತಸಂಘ (ಸಾಮೂಹಿಕನಾಯಕತ್ವ)]
ಸಿದ್ಗೌಡಮೋದಗಿ [ಅಧ್ಯಕ್ಷರು, ಭಾರತೀಯಕೃಷಿಕಸಮಾಜ [ಸಂಯುಕ್ತ]]
ನೂರ್‌ ಶ್ರೀಧರ್‌, [ಅಧ್ಯಕ್ಷರು, ಕರ್ನಾಟಕಜನಶಕ್ತಿ]
ಡಿ.ಹೆಚ್.‌ ಪೂಜಾರ್‌ [ಅಧ್ಯಕ್ಷರು, AIUKS]
ಭಗವಾನ್‌ ರೆಡ್ಡಿ, [ರಾಜ್ಯಕಾರ್ಯದರ್ಶಿ, AIKKMS]
ಸಿರಿಮನೆನಾಗರಾಜ್‌ [ಉಪಾಧ್ಯಕ್ಷರು, ಭೂಮಿಮತ್ತುವಸತಿಹಕ್ಕುವಂಚಿತರಹೋರಾಟಸಮಿತಿ]

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...