Homeಮುಖಪುಟಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರ ಪರ ಪ್ರಗತಿಪರರ ಟ್ವಿಟ್ಟರ್‌ & ಸಹಿಸಂಗ್ರಹ ಅಭಿಯಾನ

ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರ ಪರ ಪ್ರಗತಿಪರರ ಟ್ವಿಟ್ಟರ್‌ & ಸಹಿಸಂಗ್ರಹ ಅಭಿಯಾನ

- Advertisement -
- Advertisement -

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್‌ ಆಡಿದ ಮಾತುಗಳಿಗೆ ರಾಜ್ಯದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಚಿತ್ರದುರ್ಗ ಮತ್ತು ರಾಯಚೂರಿನಲ್ಲಿ ಪತ್ರಿಕಾಗೋಷ್ಠಿಗಳು ನಡೆದಿದ್ದು ಪ್ರತಿಭಟನೆಗೆ ಕರೆ ಕೊಡಲಾಗಿದೆ.

ಬಹಳಷ್ಟು ಜನರು ಯತ್ನಾಳ್‌ ಮತ್ತು ಬಿಜೆಪಿ ಸಿಟ್ಟಿಗೆದ್ದಿದ್ದು ಟ್ವಿಟ್ಟರ್‌ ಅಭಿಯಾನಕ್ಕೆ ಕರೆ ಕೊಡಲಾಗಿದೆ. ಅಲ್ಲದೇ ಬರಗೂರು ರಾಮಚಂದ್ರಪ್ಪ, ಬಿ.ಟಿ. ಲಲಿತಾನಾಯಕ್, ಸಿದ್ಧನಗೌಡ ಪಾಟೀಲ್, ಕೆ.ಪಿ.ಸುರೇಶ, ಬಿ ಟಿ ಜಾಹ್ನವಿ, ಬಸೂ, ದಿನೇಶ್ ಅಮಿನ್ ಮಟ್ಟು, ಅರುಣ್ ಜೋಳದಕೂಡ್ಲಿಗಿ, ಬಿ. ಶ್ರೀಪಾದ ಭಟ್, ಅಕ್ಷತಾ ಹುಂಚದಕಟ್ಟೆ, ಬಿದಲೋಟಿ ರಂಗನಾಥ್, ಎಲ್.ಎನ್. ಮುಕುಂದರಾಜ್ ಸೇರಿದಂತೆ ನೂರಾರು ಪ್ರಗತಿಪರರು ಸಹಿ ಮಾಡಿರುವ ಖಂಡನಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಖಂಡನಾ ಹೇಳಿಕೆ ಕೆಳಗಿನಂತಿದೆ.

ನಾಡಿನ ಸಾಕ್ಷಿಪ್ರಜ್ಞೆ, ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ, ಶ್ರೀ ಎಚ್.ಎಸ್. ದೊರೆಸ್ವಾಮಿಯವರ ಕುರಿತು ಶಾಸಕ ಬಸನಗೌಡ ಯತ್ನಾಳ್ ಅವಹೇಳನಕಾರಿ ಮಾತುಗಳ ವಿರುದ್ಧ ಖಂಡನಾ ಹೇಳಿಕೆ ಕೆಳಗಿನಂತಿದೆ.

ನಿಮಗೆ ತಿಳಿದಿರುವಂತೆ ನಿನ್ನೆ ಬಿಜಾಪುರದ ಒಂದು ಸಭೆಯಲ್ಲಿ ಶಾಸಕ ಬಸನಗೌಡ ಯತ್ನಾಳ್, ಸಂದರ್ಭವೇ ಇಲ್ಲದಿದ್ದರೂ ಸ್ವಾತಂತ್ರ್ಯ ಹೋರಾಟಗಾರ ಶ್ರೀ ದೊರೆಸ್ವಾಮಿಯವರ ವಿಚಾರ ಎಳೆತಂದು, ಅತ್ಯಂತ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. 102 ವರ್ಷಗಳ ಹಿರಿಯ ಜೀವ, ನಾಡಿನ ಸಾಕ್ಷಿಪ್ರಜ್ಞೆ, ಎಲ್ಲ ಜನಪರ ಚಿಂತನೆ-ಚಳವಳಿಗಳ ಒಡನಾಡಿಯಾಗಿರುವ ಶ್ರೀ ದೊರೆಸ್ವಾಮಿಯವರು ಕರ್ನಾಟಕಕ್ಕೆ ಮಾತ್ರವಲ್ಲ, ನಮ್ಮ ದೇಶದ ಆಸ್ತಿ.‌ ನಮ್ಮೆಲ್ಲರ ಹೆಮ್ಮೆ.‌ ಅಂತಹವರ ಕುರಿತಾಗಿ, ಸ್ವತಃ ಯಾವುದೇ ಒಳ್ಳೆಯ ಕೆಲಸ ಮಾಡಿರದ, ಜನರ ಪರವಾದ ಚಿಂತನೆಯಾಗಲಿ, ಕ್ರಿಯೆಯಾಗಲಿ ಇಲ್ಲದ ಒಬ್ಬ ವ್ಯಕ್ತಿ ಈ ರೀತಿಯ ಮಾತುಗಳನ್ನಾಡುವುದು ಅತ್ಯಂತ ಆಕ್ಷೇಪಾರ್ಹವಾದುದು.

ಈಗ ಶಾಸಕನಾಗಿರುವ ಈ ಬಸನಗೌಡ ಯತ್ನಾಳ್ ತಾನೇ ಚುನಾವಣಾ ಆಯೋಗಕ್ಕೆ ಕೊಟ್ಟ ಮಾಹಿತಿಯ ಪ್ರಕಾರ, ಆತನ ವಿರುದ್ಧ ‘ವಂಚನೆ, ಶಾಂತಿಗೆ ಭಂಗ ತಂದಿರುವುದು, ಗಲಭೆಗೆ ಕುಮ್ಮಕ್ಕು’ ಸೇರಿದಂತೆ ಸುಮಾರು 23 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇಂತಹ ವ್ಯಕ್ತಿ ಶ್ರೀ ದೊರೆಸ್ವಾಮಿಯಂತಹ ಪ್ರಮಾಣಿಕ, ಸಜ್ಜನ, ಬದ್ಧತೆಯುಳ್ಳ ಹೋರಾಟಗಾರರನ್ನು “ಪಾಕಿಸ್ತಾನದ ಏಜೆಂಟ್, ಆತ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ, ಅವನು ಗುಂಡಿಗೆ ಬಲಿಯಾಗುತ್ತಾನೆ” ಇತ್ಯಾದಿಯಾಗಿ ಏಕವಚನದಲ್ಲಿ ಮಾತಾಡಿರುವುದು ಕನ್ನಡಿಗರಾದ ನಮ್ಮೆಲ್ಲರಲ್ಲಿ ಅಪಾರ ಆಕ್ರೋಶ ಹುಟ್ಟಿಸಿದೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಶ್ರೀ ದೊರೆಸ್ವಾಮಿಯವರ ಪಾತ್ರವೇನು ಎಂಬ ಬಗ್ಗೆ ಅಧಿಕೃತ ದಾಖಲೆಗಳು ಲಭ್ಯವಿದ್ದು, ಅದು ಚರಿತ್ರೆಯಲ್ಲಿ ಈಗಾಗಲೇ ಗಟ್ಟಿಯಾಗಿ ದಾಖಲಾಗಿರುವ ಸಂಗತಿಯಾಗಿದೆ. ಅವರು ಕೇವಲ ಬ್ರಿಟೀಷರನ್ನು ಭಾರತದಿಂದ ಓಡಿಸುವುದಕ್ಕಷ್ಟೆ ಸೀಮಿತವಾಗದೆ, ಒಂದು ಸುಂದರ, ಸಮಾನ, ಸಹಬಾಳ್ವೆಯ ಭಾರತವನ್ನು ಕಟ್ಟುವ ಕನಸನ್ನಿಟ್ಟುಕೊಂಡು ನಿರಂತರವಾಗಿ ಶ್ರಮಿಸುತ್ತಾ ಬಂದ ಅಪರೂಪದ ಗಾಂಧಿವಾದಿ ಹೋರಾಟಗಾರರು. ಮಹಾತ್ಮಾ ಗಾಂಧೀಜಿಯವರ ಒಡನಾಡಿಯಾಗಿದ್ದ ಈ ಮಹಾನ್‌ ಚೇತನ ಇಂದಿಗೂ ಅವರಂತೆಯೆ ಸತ್ಯಪಕ್ಷಪಾತಿಯಾಗಿ, ನೇರನಿಷ್ಠುರಿಯಾಗಿ, ನಾಡಿನ ಜನತೆಯ ಹಿತಾಸಕ್ತಿಗೆ ಮತ್ತು ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನುಡಿಯುತ್ತಾ, ನಡೆಯುತ್ತಾ ಬಂದಿರುವುದು, ಯತ್ನಾಳನಂತಹ ಹೊಣೆಗೇಡಿಗಳಿಗೆ ನುಂಗಲಾರದ ತುತ್ತಾಗಿದೆ. ಆತನ ಇಂತಹ ಮಾತುಗಳು ಶ್ರೀ ದೊರೆಸ್ವಾಮಿಯವರಿಗೆ ಮಾತ್ರವಲ್ಲ, ಇಡೀ ಸ್ವಾತಂತ್ರ್ಯ ಚಳವಳಿಗೇ ಬಗೆದ ಅಪಚಾರವಾಗಿದೆ.

ಯತ್ನಾಳನಿಗಾಗಲಿ ಅವರ ಪಕ್ಷಕ್ಕಾಗಲೀ, ಸ್ವಾತಂತ್ರ್ಯ ಚಳವಳಿಯ ಗಂಧಗಾಳಿ ಗೊತ್ತಿಲ್ಲ. ಇಡೀ ಭಾರತದ ಜನತೆ ಜಾತಿ-ಧರ್ಮ ಬೇಧಬಿಟ್ಟು ಒಗ್ಗೂಡಿ, ಪರಕೀಯರನ್ನು ಭಾರತ ಬಿಟ್ಟು ತೊಲಗಿಸುವ ಮತ್ತು ಸ್ವತಂತ್ರ, ಸಮಾನ ಭಾರತ ಕಟ್ಟುವ ಉದ್ದೇಶದಿಂದ ಪ್ರಾಣವನ್ನು‌ ಲೆಕ್ಕಿಸದೆ ಹೋರಾಡುತ್ತಿರುವಾಗ, ಅದರಲ್ಲೇ ಕೋಮುವಾದದ ಹುಳಿಹಿಂಡುತ್ತಾ ಸ್ವಾತಂತ್ರ್ಯ ಚಳವಳಿಗೇ ದ್ರೋಹ ಬಗೆದ ಪಕ್ಷ ಅದು. ಅಂತಹ ಪಕ್ಷದೊಳಗೆ ಯತ್ನಾಳನಂತಹವರನ್ನೇ ಸಾಕಿಕೊಂಡಿರುವುದರಲ್ಲಿ ಆಶ್ಚರ್ಯವಿಲ್ಲ. ಇಂತಹ ಅನೇಕರು ಇತ್ತೀಚೆಗೆ ಜೀವಪರವಾದ ಅಭಿಪ್ರಾಯ ವ್ಯಕ್ತಪಡಿಸುವವರ ಮೇಲೆ, ಎನ್‌ಪಿಆರ್-ಎನ್‌ಆರ್‌ಸಿಯಂತಹ ಜೀವವಿರೋಧಿತನವನ್ನು ವಿರೋಧಿಸುವವರ ಮೇಲೆ ದಾಳಿ ಮಾಡುತ್ತಿರುವುದನ್ನು, ಸ್ವತಂತ್ರ ಚಿಂತನೆಗೆ ಬೆದರಿಕೆ ಒಡ್ಡುತ್ತಿರುವುದನ್ನು ನೋಡುತ್ತಿದ್ದೇವೆ.‌ ಅಷ್ಟೇ ಏಕೆ, ಸರ್ಕಾರದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕವಿಗಳು, ಪತ್ರಕರ್ತರು, ಶಿಕ್ಷಕರು, ಹೋರಾಟಗಾರರು, ಸಾರ್ವಜನಿಕರು- ಎಲ್ಲರ ಮೇಲೆ ದೇಶದ್ರೋಹದ ಆರೋಪ ಹೊರಿಸುತ್ತಾ ಬಂಧಿಸುತ್ತಿರುವುದನ್ನೂ ನೋಡುತ್ತಿದ್ದೇವೆ. ಇದು ಭಯಭೀತಿಯ ವಾತಾವರಣ ಸೃಷ್ಟಿಸುತ್ತಾ, ಕೋಮುಗಲಭೆಗಳಿಗೆ ಪ್ರಚೋದನೆ ನೀಡುತ್ತಾ, ಭಾರತದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಪ್ರಯತ್ನ.

ಆದ್ದರಿಂದ, ಸಂವಿಧಾನ ವಿರೋಧಿಯಾದ ಈ ಎಲ್ಲ ಬೆಳವಣಿಗೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಭಾರತವು, ಎಂದಿಗೂ ಶಾಂತಿ-ಸಹಬಾಳ್ವೆಯ ನಾಡಾಗಿ ಉಳಿಯಬೇಕು ಮತ್ತು ಹಾಗಾದಾಗ ನಾವು ನಿಜವಾಗಿಯೂ ಅಭಿವೃದ್ಧಿಪಥದಲ್ಲಿ ಸಾಗಲು ಸಾಧ್ಯ ಎಂದು ಭಾವಿಸುತ್ತೇವೆ.

ಆದ್ದರಿಂದ, ಕೆಳಗೆ ಸಹಿ ಮಾಡಿರುವ‌ ನಾವೆಲ್ಲರೂ, ಈ ಆಗ್ರಹಗಳನ್ನು ಮುಂದಿಡುತ್ತಿದ್ದೇವೆ.

1.ಶಾಸಕ ಬಸನಗೌಡ ಯತ್ನಾಳ್ ಮೇಲೆ, ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಕ್ಕೆ, ಸ್ವಾತಂತ್ರ್ಯ ಚಳವಳಿಯನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಕ್ಕೆ ಮತ್ತು ಸ್ವಾತಂತ್ರ್ಯ ಹೋರಾಟಗಾರ ಶ್ರೀ ದೊರೆಸ್ವಾಮಿಯವರ ಬಗ್ಗೆ ಅತ್ಯಂತ ಆಕ್ಷೇಪಾರ್ಹವಾಗಿ ಮಾತನಾಡಿದ್ದಕ್ಕೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು.

2.ಶ್ರೀ ದೊರೆಸ್ವಾಮಿಯವರ ಕುರಿತು “ಅವನು ಗುಂಡಿಗೆ ಬಲಿಯಾಗುತ್ತಾನೆ” ಎಂದು ಹೇಳಿರುವುದು ಕೊಲೆಗೆ ಪ್ರಚೋದನೆ ಮಾಡುವಂತಹ ಹೇಳಿಕೆಯಾಗಿದೆ.‌ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಯತ್ನಾಳ್ ಮೇಲೆ ಕೊಲೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆಯೂ ಕ್ರಮ ಕೈಗೊಳ್ಳಬೇಕು.

3.ಯತ್ನಾಳ್ ಸಂವಿಧಾನದ 51 ಎ (ಬಿ) ಉಲ್ಲಂಘಿಸಿದ್ದು ಅವರ ಶಾಸಕ ಸ್ಥಾನದಿಂದ ಪದಚ್ಯುತಗೊಳಿಸಿ

4.ಯತ್ನಾಳ್ ಮಾತನಾಡಿದ ಅಪಾಯಕಾರಿ ಮಾತುಗಳ ಹೊಣೆ ಹೊತ್ತು, ಗೃಹಮಂತ್ರಿ ರಾಜೀನಾಮೆ ನೀಡಬೇಕು.

5.ಹೀಗೆಯೆ ಬೇಕಾಬಿಟ್ಟಿ ಮಾತಾನಾಡುತ್ತಿರುವ, ಬಿಜೆಪಿ ಪಕ್ಷದ ಅನೇಕ ಪದಾಧಿಕಾರಿಗಳು ಮತ್ತು ಇನ್ನಿತರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.

6. ಶ್ರೀ ದೊರೆಸ್ವಾಮಿಯವರು, ನಮ್ಮೆಲ್ಲರಿಗೂ ಮಾರ್ಗದರ್ಶಕರೂ ನಮ್ಮ ಸ್ಫೂರ್ತಿಯ ಸೆಲೆಯೂ ಆಗಿದ್ದಾರೆ. ಆದ್ದರಿಂದ, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತು ಸರ್ಕಾರ ಕ್ರಮ ಜರುಗಿಸುವವರೆಗೆ ರಾಜ್ಯದ ಎಲ್ಲ ಜನಪರ ಸಂಘಟನೆಗಳು, ಚಿಂತಕರು, ಗಾಂಧಿವಾದಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಜವಾಬ್ದಾರಿಯುಳ್ಳ ನಾಗರೀಕರ ಒಗ್ಗಟ್ಟಿನ ಹೋರಾಟ ಈ ನಿಟ್ಟಿನಲ್ಲಿ ನಿರಂತರವಾಗಿ ನಡೆಯಲಿದೆ.

ನಮ್ಮ ದೊರೆಸ್ವಾಮಿ, ನಮ್ಮ ಹೆಮ್ಮೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...