ನಮ್ಮ ‘ಯುದ್ಧದಾಹಿ’ ಚಾನೆಲ್‍ಗಳು ಇನ್ನೂ ಬಾಲಾಕೋಟ್ ಮಂಪರಿನಿಂದ ಹೊರಬಂದಿಲ್ಲ, ಮುಂದಿನ ಚುನಾವಣೆವರೆಗೂ ಅವು ಆಗಾಗ ಬಾಲಾಕೋಟ್ ದಾಳಿಯ ವಿಸ್ಮೃತಿಗೆ ಒಳಗಾಗುತ್ತಲೇ ವೀಕ್ಷಕರನ್ನು ವಂಚಿಸಲಿವೆ. ಎರಡು-ಮೂರು ದಿನಗಳಿಂದ ಬಹುಪಾಲು ಇಂಗ್ಲಿಷ್, ಹಿಂದಿ ನ್ಯೂಸ್ ಚಾನೆಲ್‍ಗಳು ಮತ್ತು ಅವುಗಳ ಪ್ರಾದೇಶಿಕ ಆವೃತ್ತಿಗಳು ವೀಕ್ಷಕರನ್ನು ಪೆದ್ದು ಮಾಡಲು ಹೋಗಿ ತಾವೇ ಮೂರ್ಖರಾದ ಪ್ರಸಂಗ ನಡೆದುದೆ.
ಮಿಥ್ಯ: ರಿಪಬ್ಲಿಕ್ ಟಿವಿ, ಟೈಮ್ಸ್ ನೌ, ಝೀ ಹಿಂದಿ ನ್ಯೂಸ್, ಎಬಿಪಿ ನ್ಯೂಸ್, ಇಂಡಿಯಾ ಟುಡೇ ಇತ್ಯಾದಿ ಚಾನೆಲ್‍ಗಳ ಜೊತೆಗೆ ಕೆಲವು ಪ್ರಾದೇಶಿಕ ಚಾನೆಲ್‍ಗಳು ಮತ್ತು ಪತ್ರಿಕೆಗಳು ತಮ್ಮ ವೀಕ್ಷಕರು ಮತ್ತು ಓದುಗರ ಮೇಲೆ ಈ ‘ಫೇಕ್ ದಾಳಿ’ ನಡೆಸಿದವು. ಅವು ಭಾರತೀಯ ವಾಯುಸೇನೆ ಬಿಡಿಗಡೆ ಮಾಡಿದ್ದ ವಿಡಿಯೋ ಒಂದನ್ನು ತೋರಿಸಿ ಅದು ಬಾಲಾಕೋಟ್ ದಾಳಿಯ ರಿಯಲ್ ಫುಟೇಜ್ ಎಂದವು.
ಕೆಲವು ಚಾನೆಲ್‍ಗಳಂತೂ ‘ಪ್ರೂಫ್ ಬೇಕಾ ಪ್ರೂಫ್? ಇಲ್ಲಿದೆ ನೋಡಿ’ ಎಂದವು. ಪಂಜಾಬ್ ಕೇಸರಿ ಮತ್ತು ಗುಜರಾತ್ ಸಮಾಚಾರ್ ಪತ್ರಿಕೆಗಳು ಪುಟಗಟ್ಟಲೇ ಬರೆದವು.
IAF releases Balakot video, Major Gaurav Arya calls it a positive move https://t.co/pS7EPFlQEv
— Republic (@republic) October 4, 2019
‘ಐಎಎಫ್‍ನಿಂದ ಬಾಲಾಕೋಟ್ ದಾಳಿಯ ಪ್ರೂಫ್’ ಎಂದು ತೋರಿಸಿದ ರಿಪಬ್ಲಿಕ್ ಟಿವಿಯು ತನ್ನ ಡಿಫೆನ್ಸ್ ಸಲಹೆಗಾರ ಮೇಜರ್ ಗೌರವ್ ಆರ್ಯ ಅವರಿಂದ ‘ಪ್ರಮೋಷನಲ್’ ಮಾತು ಹೇಳಿಸಿತು. ‘ಸೇನೆಯು ಇಂತಹ ವಿಡಿಯೋಗಳನ್ನು ಮಾಡಿ ಪ್ರಸಾರ ಮಾಡಬೇಕು. ಸಾಮಾಜಿಕ ಜಾಲತಾಣ ಕ್ರಿಯಾಶೀಲವಾಗಿರುವ ಈ ಕಾಲದಲ್ಲಿ ಇಂತಹ ವಿಡಿಯೋಗಳ ಮೂಲಕ ಜನರಲ್ಲಿ ದೇಶದ ಕುರಿತು ಹೆಮ್ಮೆ ಹುಟ್ಟಿಸಬಹುದು,,, ನಾನು ಈ ವಿಡಿಯೋ ನೋಡಿಲ್ಲ, ಆದರೆ ಅದರ ಕಂಟೆಂಟ್ ಗೊತ್ತು’ ಅಂದರು! ಆರಂಭದಲ್ಲಿಯೇ ಇದು ಪ್ರಮೋಷನಲ್ ವಿಡಿಯೋ ಎಂದು ಫ್ಲಾಷ್ ಮಾಡಿದ ಚಾನೆಲ್ ನಂತರ ಇದು ರಿಯಲ್ ಅಟ್ಯಾಕ್ ಎಂಬಂತೆ ವಿವರಣೆ ನೀಡುತ್ತ ಹೋಗುತ್ತದೆ!. ಝೀ ನ್ಯೂಸ್ ಅಂತೂ ಬಾಲಾಕೋಟ್ ದಾಳಿ ಯಶಸ್ವಿಯಾಗಿಲ್ಲ ಎನ್ನುವವರಿಗೆ ಇಲ್ಲಿದೆ ತಕ್ಕ ಉತ್ತರ ಅಂದಿತು.
बालाकोट में एयर स्ट्राइक का पहला VIDEO जारी, वायुसेना की फिल्म में हमले के सबूत#AirStrike #Balakot @IAF_MCC https://t.co/3wcum52tyM
— Zee News Hindi (@ZeeNewsHindi) October 4, 2019
ಸತ್ಯ: ಅಸಲಿಗೆ ಯಾವುದೇ ದಾಳಿಯ ವಿಡಿಯೋಗಳನ್ನು ಸೇನೆ ಬಿಡುಗಡೆ ಮಾಡುವುದಿಲ್ಲ. ಅದು ಅಕ್ಟೋಬರ್ 4ರಂದು ಬಿಡುಗಡೆ ಮಾಡಿದ್ದು ಬಾಲಾಕೋಟ್ ದಾಳಿ ಹೇಗೆ ಯೋಜಿತವಾಗಿತು ಎಂದು ತೋರಿಸುವ ಪ್ರಮೋಷನಲ್ ( ರೆಪ್ರೆಸೆಂಟೆಟಿವ್ ವಿಡಿಯೋ ಅಂದರೆ ಪ್ರಾತಿನಿಧಿಕ ವಿಡಿಯೋ) ವಿಡಿಯೋವನ್ನಷ್ಟೇ. ಆದರೆ ಬಹುಪಾಲು ಚಾನೆಲ್‍ಗಳು ಬಾಲಾಕೋಟ್ ದಾಳಿಯ ರಿಯಲ್ ಫೂಟೇಜ್ ಎಂದೆಲ್ಲ ಬೊಬ್ಬೆ ಹೊಡೆದವು.
Video shown ahead of Air Chief PC talking about Balakot strikes. Its a promotional video. Air Chief has also clarified in the PC, "no shots of Balakot strikes in the video" pic.twitter.com/urhni4CFFJ
— Sidhant Sibal (@sidhant) October 4, 2019
ಮೋದಿಗೆ, ಬಿಜೆಪಿಗೆ ಲಾಭ ಆಗುವುದಾದರೆ ಎಲ್ಲವನ್ನೂ ಬಿಟ್ಟು ಬೆತ್ತಲಾಗುವ ಮಾಧ್ಯಮಗಳ ಈ ವರ್ತನೆಯೇನು ಹೊಸದಲ್ಲ. ಆದರೆ, ಬಾಲಾಕೋಟ್ ದಾಳಿ ಯಶಸ್ವಿಯಾಯಿತೇ ಎಂಬ ಬಗ್ಗೆ ಸೇನೆಯೇ ಇನ್ನೂ ಉತ್ತರಿಸಿಲ್ಲ. ಆದರೆ ಮೋದಿ ಮೀಡಿಯಾಗಳ ಪಾಲಿಗೆ ಬಾಲಾಕೋಟ್ ವಿಷಯ ಪ್ರಚಾರದ ವಸ್ತು ಅಷ್ಟೇ
WION ಟಿವಿಯ ಸಿದಾಂತ್ ಸಿಬಲ್ ಟ್ವೀಟ್ ಮಾಡಿ, ಪತ್ರಿಕಾಗೋಷ್ಠಿಯಲ್ಲಿ ಎಲ್ಲೂ ಇದು ರಿಯಲ್ ಫುಟೇಜ್ ಎಂದು ಹೇಳಿಲ್ಲ. ವಾಯುಸೇನಾ ಮುಖ್ಯಸ್ಥರೇ ದಾಳಿಯ ರಿಯಲ್ ಫುಟೇಜ್ ಇಲ್ಲ, ಇದು ಪ್ರಮೋಷನಲ್ ವಿಡಿಯೋ ಮಾತ್ರ ಎಂದು ಹೇಳಿದ್ದರು’ ಎಂದು ವಿವರಿಸಿದರು. ಬಿಬಿಸಿಯ ಜುಗಲ್ ಪುರೋಹಿತ್ ಕೂಡ ಇಂಥದ್ದೇ ಟ್ವೀಟ್ ಮಾಡಿದರು. ಕೊನೆಗೆ ಎಎನ್‍ಐ ಕೂಡ ತಪ್ಪು ತಿದ್ದಿಕೊಂಡು ಇದು ಪ್ರಮೋಷನಲ್ ವಿಡಿಯೋ ಅಂದಿತು…..
Everyone, pls calm down. The IAF didn't release a 'Balakot video'. A promotional film being shown at the start of his press conference was misreported. Air Chiefs words, "All that had to be released has been released. This is NOT that footage".
— Jugal R Purohit (@jugalrp) October 4, 2019
ಒಟ್ಟಿನಲ್ಲಿ ಸತ್ಯ ಮುಚ್ಚಿಟ್ಟು ಟಿಆರ್‍ಪಿ ಹೆಚ್ಚಿಸಿಕೊಂಡ ಮಾಧ್ಯಮಗಳಿಗೆ, ಅದಕ್ಕಿಂತ ಹೆಚ್ಚಾಗಿ ಮೋದಿ ಭಜನೆ ಮಾಡಿದ ತೃಪ್ತಿ ಇರಬಹುದೇನೋ?
ಇವತ್ತಿಗೂ ಬಾಲಾಕೋಟ್ ದಾಳಿ ಯಶಸ್ವಿಯಾಗಿದೆಯೋ ಇಲ್ಲವೋ ಎಂಬ ಬಗ್ಗೆ ಸೇನೆಯೇ ಸರಿಯಾದ ಉತ್ತರ ನೀಡಿಲ್ಲ! ಅಂಥದ್ದರಲ್ಲಿ ಅದು ಪ್ರಮೋಷನಲ್ ವಿಡಿಯೋ ಬಿಡುಗಡೆ ಮಾಡುವ ಅಗತ್ಯವಿತ್ತೇ? ಅಥವಾ ಆ ವಿಡಿಯೋವನ್ನು ರಿಯಲ್ ಎಂದು ಮೋದಿ-ಮೀಡಿಯಾ ತೋರಿಸಲಿ ಎಂದು ಅದು ಕೂಡ ಆಶಿಸಿತ್ತೇ ಎಂಬ ಪ್ರಶ್ನೆ ಏಳುವುದು ಸಹಜ ಅಲ್ಲವೇ?
(ಆಧಾರ: ಆಲ್ಟ್ ನ್ಯೂಸ್)



ಥೂ ಮೋದಿ ಮುಂದೆ ಬೆತ್ತಲಾದ ಕೆಲವು ಮಾಧ್ಯಮಗಳು..