Homeಮುಖಪುಟಹಿಂದೂ ಧರ್ಮದ ರಕ್ಷಣೆಗೆ 5 ಮಕ್ಕಳನ್ನು ಹೊಂದಿ - ಸರ್ಕಾರಿ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ನಾಯಕ

ಹಿಂದೂ ಧರ್ಮದ ರಕ್ಷಣೆಗೆ 5 ಮಕ್ಕಳನ್ನು ಹೊಂದಿ – ಸರ್ಕಾರಿ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ನಾಯಕ

- Advertisement -
- Advertisement -

ಮಧ್ಯಪ್ರದೇಶದ ರಾಜ್ಯ ಸಚಿವ ಸ್ಥಾನಮಾನವಿರುವ ಬ್ರಾಹ್ಮಣ ಜಾತಿಯ ನಾಯಕನೊಬ್ಬ ತನ್ನ ಜಾತಿಯ ನವವಿವಾಹಿತ ದಂಪತಿಗಳಿಗೆ ನಾಲ್ಕು ಮಕ್ಕಳನ್ನು ಹೆತ್ತು 1 ಲಕ್ಷ ರೂ.ಗಳನ್ನು ಪಡೆಯುವಂತೆ ಮನವಿ ಮಾಡಿದ ಒಂದು ತಿಂಗಳ ನಂತರ, ಅದೇ ರಾಜ್ಯದ ಮತ್ತೊಬ್ಬ ಜಾತಿಯ ನಾಯಕ ತನ್ನ ಸಮುದಾಯದ ನವವಿವಾಹಿತ ದಂಪತಿಗಳಿಗೆ ‘ಹಮ್ ದೋ ಹುಮಾರೆ ಪಾಂಚ್’ (ನಾವು ಇಬ್ಬರು ನಮ್ಮದು ಐದು) ಎಂಬ ಘೋಷಣೆಯನ್ನು ನೀಡಿದ್ದಾರೆ. ಹಿಂದೂ ಧರ್ಮದ

ಭಾನುವಾರ ನೈಋತ್ಯ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯಡಿಯಲ್ಲಿ ತಮ್ಮ ಮಾಝಿ-ಕಹಾರ್ ಜಾತಿಯ 201 ಆರ್ಥಿಕವಾಗಿ ದುರ್ಬಲ ದಂಪತಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ‘ಹಮ್ ದೋ ಹುಮಾರೆ ಪಾಂಚ್’ ಎಂಬ ಘೋಷಣೆಯನ್ನು ಮಾಡಿದ್ದಾರೆ. ಮಾಝಿ – ಕಹಾರ್ ಜಾತಿಯ ಖಾರ್ಗೋನ್ ಜಿಲ್ಲಾ ಅಧ್ಯಕ್ಷರಾಗಿರುವ ನರೇಂದ್ರ ವರ್ಮಾ, ಐದು ಮಕ್ಕಳಿಗೆ ಜನ್ಮ ನೀಡುವ ತಮ್ಮ ಜಾತಿಯ ಎಲ್ಲಾ ದಂಪತಿಗಳಿಗೆ 1 ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

ಪ್ರಮುಖ ವಿಚಾರ ಏನೆಂದರೆ, ವರ್ಮಾ ಘೋಷಣೆ ಮಾಡಿರುವ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದಲ್ಲಿ ಹೊಸದಾಗಿ ನೇಮಕಗೊಂಡ ಜಿಲ್ಲಾ ಬಿಜೆಪಿ ಅಧ್ಯಕ್ಷೆ ನಂದಾ ಬ್ರಹ್ಮಣೆ ಮತ್ತು ನಗರ ಪುರಸಭೆಯ ಅಧ್ಯಕ್ಷೆ ಛಾಯಾ ಜೋಶಿ ಸೇರಿದಂತೆ ಜಿಲ್ಲೆಯ ಹಿರಿಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

“1990 ರ ದಶಕದಿಂದ ರಾಜಕೀಯ ಪಕ್ಷಗಳು ‘ಹಮ್ ದೋ ಹುಮಾರೆ ದೋ’ ಮತ್ತು ‘ಶೇರ್ ಕಾ ಬಚ್ಚಾ ಏಕ್ ಹೈ ಅಚ್ಚಾ’ ಮುಂತಾದ ಘೋಷಣೆಗಳ ಮೂಲಕ ನಮ್ಮ ಸಂಪ್ರದಾಯಗಳನ್ನು ಹಾಳುಮಾಡುತ್ತಿದ್ದಾರೆ. ಇಂತಹ ಘೋಷಣೆಗಳನ್ನು ಅನುಸರಿಸುವ ಮೂಲಕ, ಮಾಝಿ-ಕಹಾರ್ ಜಾತಿ ಸೇರಿದಂತೆ ಇಡೀ ಹಿಂದೂ ಸಮುದಾಯವು ಭವಿಷ್ಯದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಾವು ನಮ್ಮ ಜಾತಿಗೆ ‘ಹಮ್ ದೋ ಹುಮಾರೆ ಪಾಂಚ್’ ಎಂಬ ಘೋಷಣೆಯನ್ನು ನೀಡುತ್ತಿದ್ದೇವೆ. ಈ ಘೋಷಣೆಯು ನಮ್ಮ ಆಚರಣೆಗಳು ಮುಂದುವರಿಯಲು ಸಹ ಸಹಾಯ ಮಾಡುತ್ತದೆ” ಎಂದು ವರ್ಮಾ ಹೊಸ ಖಾರ್ಗೋನ್ ಜಿಲ್ಲಾ ಬಿಜೆಪಿ ಮುಖ್ಯಸ್ಥ ನಂದ ಬ್ರಹ್ಮಣೆ ಅವರೊಂದಿಗೆ ಹೇಳಿದ್ದಾರೆ. ಹಿಂದೂ ಧರ್ಮದ

“ಹಿಂದೂ ಧರ್ಮ ಮತ್ತು ಇಡೀ ಸನಾತನ ಸಮಾಜವನ್ನು ರಕ್ಷಿಸಲು ಇಂತಹ ಘೋಷಣೆಗಳು ಅವಶ್ಯಕ. ನಮ್ಮ ಎಲ್ಲಾ ಮಹಾಪುರುಷರು (ಮಹಾನ್ ಪುರುಷರು) ತಮ್ಮ ಪೋಷಕರ ಐದನೇ, ಆರನೇ ಅಥವಾ ಏಳನೇ ಮಗುವಾಗಿದ್ದಾರೆ. ಸ್ವಾಮಿ ವಿವೇಕಾನಂದರು ಅವರ ಪೋಷಕರ ಐದನೇ ಮಗು. ಹಾಗಾದರೆ ನಮಗೆ ಕನಿಷ್ಠ ಐದು ಮಕ್ಕಳಿಲ್ಲದಿದ್ದರೆ ನಾವು ನಮ್ಮ ಮಹಾಪುರುಷರನ್ನು (ಮಹಾನ್ ಪುರುಷರು) ಎಲ್ಲಿಂದ ಪಡೆಯುತ್ತೇವೆ” ಎಂದು ವರ್ಮಾ ಕೇಳಿದ್ದಾರೆ.

ಇದಕ್ಕೂ ಮೊದಲು, ಜನವರಿ 12 ರಂದು, ಬ್ರಾಹ್ಮಣ ಜಾತಿ ನಾಯಕ ಮತ್ತು ರಾಜ್ಯ ಸರ್ಕಾರದ ಪರಶುರಾಮ ಕಲ್ಯಾಣ ಮಂಡಳಿಯ ಮುಖ್ಯಸ್ಥ ವಿಷ್ಣು ರಾಜೋರಿಯಾ ಅವರು ನವವಿವಾಹಿತ ಬ್ರಾಹ್ಮಣ ದಂಪತಿಗಳಿಗೆ “ನಾಲ್ಕು ಮಕ್ಕಳನ್ನು ಹೆತ್ತು 1 ಲಕ್ಷ ರೂ. ಬಹುಮಾನ ಪಡೆಯಿರಿ” ಎಂದು ಮನವಿ ಮಾಡಿದ್ದರು. ಜನವರಿ 12 ರಂದು ಇಂದೋರ್‌ನಲ್ಲಿ ನಡೆದ ಸನಧ್ಯ ಬ್ರಾಹ್ಮಣ ಸಮಾಜ ವಿವಾಹ ಪರಿಚಯ ಸಮ್ಮೇಳನದಲ್ಲಿ ರಾಜ್ಯ ಸಚಿವ ಸ್ಥಾನಮಾನ ಇರುವ ರಾಜೋರಿಯಾ ಅವರು ಈ ಮನವಿಯನ್ನು ಮಾಡಿದ್ದರು.

ದೇಶದಲ್ಲಿ ಹಿಂದೂಯೇತರ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ ಎಂದು ಹೇಳಿಕೊಂಡ ಅವರು, ಇಂದೋರ್‌ನಲ್ಲಿ ನಡೆದ ಬ್ರಾಹ್ಮಣರ ಸಭೆಯಲ್ಲಿ ಹಾಜರಿದ್ದ ಯುವಕರು ತಮ್ಮ ಮುಂಬರುವ ಪೀಳಿಗೆಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವಂತೆ ಅವರು ಒತ್ತಾಯಿಸಿದ್ದರು.

ಮಾರ್ಚ್ 2023 ರಲ್ಲಿ, ಹಿಂದೂ ರಾಷ್ಟ್ರ ಬೆಂಬಲಿತ ಧಾರ್ಮಿಕ ಬೋಧಕ ಧೀರೇಂದ್ರ ಕೃಷ್ಣ ಶಾಸ್ತ್ರಿ ‘ಬಾಗೇಶ್ವರ ಬಾಬಾ’ ಕೂಡ ಹಿಂದೂಗಳು ಕನಿಷ್ಠ ನಾಲ್ಕು ಮಕ್ಕಳನ್ನು ಹೊಂದಬೇಕೆಂದು ಮನವಿ ಮಾಡಿದ್ದರು. ಒತೆಗೆ ಈ ನಾಲ್ಕು ಮಕ್ಕಳಲ್ಲಿ ಇಬ್ಬರನ್ನು ರಾಷ್ಟ್ರ ಮತ್ತು ಭಗವಾನ್ ರಾಮನ ಸೇವೆಗಾಗಿ ಬಿಡಬೇಕು ಎಂದು ಹೇಳಿದ್ದರು.

ಅಲ್ಲದೆ, ಜುಲೈ 2024 ರಲ್ಲಿ, ಪಂಚಾಯತಿ ನಿರಂಜನಿ ಅಖಾಡದ ಮಹಾಮಂಡಲೇಶ್ವರ ಎಂಬ ಹಿಂದೂ ಧರ್ಮಗುರು ಸ್ವಾಮಿ ಪ್ರೇಮಾನಂದ ಮಹಾರಾಜ್ ಅವರು ಪ್ರತಿಯೊಬ್ಬ ಹಿಂದೂ ಮಹಿಳೆಯೂ ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಬೇಕೆಂದು ಕೇಳಿಕೊಂಡಿದ್ದರು.

ಇದನ್ನೂಓದಿ:  ಕೇರಳ | ನಿರಂತರ ರ‍್ಯಾಗಿಂಗ್‌ನಿಂದ ಮನನೊಂದು ಆತ್ಮಹತ್ಯೆಗೆ ಶರಣಾದ 15 ವರ್ಷದ ಬಾಲಕ

ಕೇರಳ| ನಿರಂತರ ರ‍್ಯಾಗಿಂಗ್‌ನಿಂದ ಮನನೊಂದು ಆತ್ಮಹತ್ಯೆಗೆ ಶರಣಾದ 15 ವರ್ಷದ ಬಾಲಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...