Homeಮುಖಪುಟಎರಡು ವಾರಗಳಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಿ | ಟಿಎಂಸಿ ಸಂಸದ ಸಾಕೇತ್ ಗೋಖಲೆಗೆ ದೆಹಲಿ ಹೈಕೋರ್ಟ್...

ಎರಡು ವಾರಗಳಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಿ | ಟಿಎಂಸಿ ಸಂಸದ ಸಾಕೇತ್ ಗೋಖಲೆಗೆ ದೆಹಲಿ ಹೈಕೋರ್ಟ್ ಆದೇಶ

- Advertisement -
- Advertisement -

ಮಾಜಿ ರಾಜತಾಂತ್ರಿಕ ಅಧಿಕಾರಿ ಲಕ್ಷ್ಮಿ ಪುರಿ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ, ಎರಡು ವಾರಗಳಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ದೆಹಲಿ ಹೈಕೋರ್ಟ್ ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಅವರಿಗೆ ಆದೇಶಿಸಿದೆ.

ಜುಲೈ 2024 ರಲ್ಲಿ, ಗೋಖಲೆ ಅವರು ಪುರಿ ಅವರ ಬಗ್ಗೆ “ತಪ್ಪು ಮತ್ತು ಸುಳ್ಳು” ಆರೋಪಗಳನ್ನು ಮಾಡಿದ್ದಾರೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಪುರಿ ಅವರು ಸ್ವಿಟ್ಜರ್ಲೆಂಡ್‌ನಲ್ಲಿ ಅಕ್ರಮ ಆಸ್ತಿಯನ್ನು ಖರೀದಿಸಿದ್ದಾರೆ ಎಂಬ ಗೋಖಲೆ ಅವರ ಹೇಳಿಕೆಗಳು ಸೇರಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಗೋಖಲೆ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಬಗ್ಗೆ ಅಸಮಾಧನ ವ್ಯಕ್ತಪಡಿಸಿದ್ದ ಪುರಿ, ಅವರ ಹೇಳಿಕೆ  “ಮಾನನಷ್ಟಕರ, ದುರುದ್ದೇಶಪೂರಿತ ಮತ್ತು ಸುಳ್ಳು ಮಾಹಿತಿಯನ್ನು ಆಧರಿಸಿವೆ” ಎಂದು ಆರೋಪಿಸಿ ಅವರ ವಿರುದ್ಧ ಮೊಕದ್ದಮೆ ಹೂಡಿದ್ದರು.

ಪ್ರಮುಖ ಇಂಗ್ಲಿಷ್ ದಿನಪತ್ರಿಕೆ ಮತ್ತು ಅವರ ಎಕ್ಸ್‌ ಹ್ಯಾಂಡಲ್‌ನಲ್ಲಿ ಗೋಖಲೆ ಕ್ಷಮೆಯಾಚಿಸಬೇಕು ಎಂದು ತನ್ನ ತೀರ್ಪಿನಲ್ಲಿ ನ್ಯಾಯಾಲಯವು ಆದೇಶಿಸಿದ್ದು, ಅವರಿಗೆ 50 ಲಕ್ಷ ರೂ. ಪರಿಹಾರವನ್ನು ಪಾವತಿಸಲು ಸಹ ಸೂಚಿಸಿದೆ.

ಜುಲೈ 2024ರ ಈ ಆದೇಶವನ್ನು ಹಿಂಪಡೆಯಬೇಕು ಎಂದು ಗೋಖಲೆ ಆಗ್ರಹಿದ್ದು, ತನ್ನ ವಕೀಲರು ಹಾಜರಾಗುವುದನ್ನು ನಿಲ್ಲಿಸಿದ ನಂತರ ವಿಚಾರಣೆಯನ್ನು ಪಕ್ಷಪಾತಿಯಾಗಿ ಅಥವಾ ಅವರ ಅನುಪಸ್ಥಿತಿಯಲ್ಲಿ ನೀಡಲಾಗಿದೆ ಎಂದು ವಾದಿಸಿದ್ದರು.

ಈ ಮಧ್ಯೆ, ಪುರಿ ಅವರು ಆದೇಶವನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು. ಆದೇಶವನ್ನು ಪಾಲಿಸದಿದ್ದಕ್ಕಾಗಿ ಅವರು ಗೋಖಲೆ ವಿರುದ್ಧ ನ್ಯಾಯಾಲಯ ನಿಂದನೆಯ ಪ್ರಕರಣವನ್ನೂ ಹೂಡಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ, ಗೋಖಲೆ ಅವರ ವಕೀಲರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಇತ್ಯರ್ಥವಾಗುವವರೆಗೆ ಮುಚ್ಚಿದ ಲಕೋಟೆಯಲ್ಲಿ ಕ್ಷಮೆಯಾಚನೆ ಸಲ್ಲಿಸುವುದಾಗಿ ಪ್ರಸ್ತಾಪಿಸಿದ್ದರು. ಆದಾಗ್ಯೂ, ನ್ಯಾಯಮೂರ್ತಿ ಅನೀಶ್ ದಯಾಳ್ ಮೇ 9 ರಂದು ವಿನಂತಿಯನ್ನು ವಜಾಗೊಳಿಸಿ, ಎರಡು ವಾರಗಳಲ್ಲಿ ಸಾರ್ವಜನಿಕ ಕ್ಷಮೆಯಾಚಿಸುವಂತೆ ಗೋಖಲೆ ಅವರಿಗೆ ಆದೇಶಿಸಿದ್ದಾರೆ. ಈ ಆದೇಶವನ್ನು ಗುರುವಾರ ಹೈಕೋರ್ಟ್ಬ ಹಿರಂಗಪಡಿಸಿದೆ.

“ಪ್ರತಿವಾದಿ [ಗೋಖಲೆ] ಸುಮ್ಮನೆ ತಡಮಾಡಿದ್ದು, ವಿಳಂಬ ಮಾಡುತ್ತಿದ್ದಾರೆ. ಇನ್ನೂ ತೀರ್ಪನ್ನು ಪಾಲಿಸಿಲ್ಲ” ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ಮೇ 2 ರಂದು, 50 ಲಕ್ಷ ರೂ. ಪಾವತಿಸುವಂತೆ ನಿರ್ದೇಶಿಸಿದ ತನ್ನ ಆದೇಶವನ್ನು ಹಿಂಪಡೆಯಲು ನ್ಯಾಯಾಲಯ ನಿರಾಕರಿಸಿದೆ.

ಗೋಖಲೆ ಅವರು 50 ಲಕ್ಷ ರೂ. ಪರಿಹಾರವಾಗಿ ಠೇವಣಿ ಇಡುವ ಆದೇಶವನ್ನು ಪಾಲಿಸಲು ವಿಫಲವಾದ ಕಾರಣ ಅವರ ಮಾಸಿಕ ವೇತನ ರೂ. 1.9 ಲಕ್ಷವನ್ನು ಪ್ರತಿ ತಿಂಗಳು ಮುಟ್ಟುಗೋಲು ಹಾಕಿಕೊಳ್ಳುವಂತೆ ಹೈಕೋರ್ಟ್ ಏಪ್ರಿಲ್ 24 ರಂದು ನಿರ್ದೇಶಿಸಿತ್ತು.

ವಿಶ್ವಸಂಸ್ಥೆಯ ಮಾಜಿ ಸಹಾಯಕ ಮಹಾಕಾರ್ಯದರ್ಶಿ ಮತ್ತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪತ್ನಿ ಪುರಿ 2021 ರಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಜಿನೀವಾದಲ್ಲಿನ ಅಪಾರ್ಟ್ಮೆಂಟ್ ಕುರಿತು ಗೋಖಲೆ ಅವರು ನೀಡಿದ್ದ ಹೇಳಿಕೆಯು “ಅಜಾಗರೂಕ ಮತ್ತು ಸುಳ್ಳು ಆರೋಪಗಳಿಂದ” ಕೂಡಿದ್ದು, ಅದು ತನ್ನ ಖ್ಯಾತಿಗೆ ಕಳಂಕ ತಂದಿದೆ ಎಂದು ಅವರು ವಾದಿಸಿದ್ದರು.

ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನಕ್ಕೆ ನಿಯೋಜನೆಗೊಂಡ ಭಾರತೀಯ ವಿದೇಶಾಂಗ ಸೇವೆಯ ಮಾಜಿ ಅಧಿಕಾರಿಯಾಗಿರುವ ಪುರಿ ತಮ್ಮ ಆದಾಯದ ಮೇಲೆ ಆಸ್ತಿಯನ್ನು ಮಾಡುತ್ತಿದ್ದಾರೆ ಎಂದು ಗೋಖಲೆ ಪ್ರಶ್ನಿಸಿದ್ದರು. ಅವರು ತಮ್ಮ ಪೋಸ್ಟ್‌ಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಟ್ಯಾಗ್ ಮಾಡಿ, ಈ ವಿಷಯದಲ್ಲಿ ಜಾರಿ ನಿರ್ದೇಶನಾಲಯದ ತನಿಖೆಗೆ ಕರೆ ನೀಡಿದ್ದರು.

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ತೆಲಂಗಾಣ| ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದ ತೊಳೆದ ಸ್ಥಳೀಯ ಮಹಿಳೆಯರು; ವಿಡಿಯೋ ವೈರಲ್

ತೆಲಂಗಾಣ| ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದ ತೊಳೆದ ಸ್ಥಳೀಯ ಮಹಿಳೆಯರು; ವಿಡಿಯೋ ವೈರಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -