ಕನ್ನಡದ ಪ್ರತಿಭಾವಂತ ನಟ ಪುನೀತ್ ರಾಜ್‌ಕುಮಾರ್‌ರವರಿಗೆ (45) ಕೊನೆಯುಸಿದಿರುವುದರಿಂದ ಕನ್ನಡ ನಾಡು ದುಃಖದ ಮಡಿಲಲ್ಲಿ ಮುಳುಗಿದೆ. ಲಕ್ಷಾಂತರ ಅಭಿಮಾನಿಗಳು ಕಣ್ಣೀರು ಹರಿಸಿದ್ದಾರೆ. ನಾಡಿನ ಗಣ್ಯರು ಕಂಬಿನಿ ಮಿಡಿದಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಮೊದಲು ಗಣ್ಯರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಂತರ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಇಂದು ಸಂಜೆಯಿಂದ ನಾಳೆಯವರೆಗೆ ಅವಕಾಶ ನೀಡಲಾಗಿದೆ.
ಕನ್ನಡದ ಖ್ಯಾತನಟ ಶ್ರೀ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದು ನಾನು ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ. ಕನ್ನಡಿಗರ ಮೆಚ್ಚಿನ ನಟ ಅಪ್ಪು ನಿಧನದಿಂದ ಕನ್ನಡ ಹಾಗೂ ಕರ್ನಾಟಕಕ್ಕೆ ಅಪಾರ ನಷ್ಟ ವಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ, ಅಭಿಮಾನಿಗಳಿಗೆ ಈ ನೋವನ್ನು ಸಹಿಸುವ ಶಕ್ತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಕನ್ನಡದ ಪ್ರತಿಭಾವಂತ ಯುವ ನಟ ಪುನೀತ್ ರಾಜಕುಮಾರ್
ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ.ನಟನಾ ಕೌಶಲದ ಜೊತೆ ಸರಳ-ಸಜ್ಜನಿಕೆಯ ನಡವಳಿಕೆಯಿಂದಲೂ ಕನ್ನಡಿಗರ ಮನೆ ಮಗನಂತಿದ್ದ ಪುನೀತ್ ಸಾವು ತುಂಬಿಬಾರದ ನಷ್ಟ.
1/2#ಪುನೀತ್ರಾಜ್ಕುಮಾರ್ pic.twitter.com/ly2hLUI1M2— Siddaramaiah (@siddaramaiah) October 29, 2021
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ಕನ್ನಡದ ಪ್ರತಿಭಾವಂತ ಯುವ ನಟ ಪುನೀತ್ ರಾಜಕುಮಾರ್ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ನಟನಾ ಕೌಶಲದ ಜೊತೆ ಸರಳ-ಸಜ್ಜನಿಕೆಯ ನಡವಳಿಕೆಯಿಂದಲೂ ಕನ್ನಡಿಗರ ಮನೆ ಮಗನಂತಿದ್ದ ಪುನೀತ್ ಸಾವು ತುಂಬಿಬಾರದ ನಷ್ಟ. ರಾಜ್ ಕುಮಾರ್ ಕಾಲದಿಂದಲೂ ಅವರ ಕುಟುಂಬದ ಜೊತೆಯಲ್ಲಿ ಆತ್ಮೀಯ ಸಂಬಂಧ ಹೊಂದಿದ್ದ ನನ್ನ ಪಾಲಿಗೆ ಪುನೀತ್ ಸಾವು ಮನೆ ಸದಸ್ಯನೊಬ್ಬನನ್ನು ಕಳೆದುಕೊಂಡ ಶೋಕ. ಪುನೀತ್ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಕನ್ನಡದ ಅತ್ಯಂತ ಪ್ರೀತಿಯ ಕಲಾವಿದ ಶ್ರೀ ಪುನೀತ್ ರಾಜಕುಮಾರ್ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ. ಅವರ ಕುಟುಂಬ, ಅಪಾರ ಅಭಿಮಾನಿ ಬಳಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಕನ್ನಡದ ಅತ್ಯಂತ ಪ್ರೀತಿಯ ಕಲಾವಿದ ಶ್ರೀ ಪುನೀತ್ ರಾಜಕುಮಾರ್ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ. ಅವರ ಕುಟುಂಬ, ಅಪಾರ ಅಭಿಮಾನಿ ಬಳಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/qtuKk3SCH0
— H D Devegowda (@H_D_Devegowda) October 29, 2021
ಮಲೆಯಾಳಂ ಚಿತ್ರನಟ ಪೃಥ್ವಿರಾಜ್ ಸುಕುಮಾರನ್ ಟ್ವೀಟ್ ಮಾಡಿ, “ತುಂಬಾ ನೋವುಂಟುಮಾಡುವ ಸುದ್ದಿ. ಚಿರಶಾಂತಿಯಲ್ಲಿರು ಸೂಪರ್ ಸ್ಟಾರ್. ಕುಟುಂಬ, ಸ್ನೇಹಿತರು ಮತ್ತು ಲಕ್ಷಾಂತರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ” ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
This hurts so much! Rest in peace superstar! May the family, friends and the millions of fans have the strength to tide through this sorrow! #PuneethRajkumar ? pic.twitter.com/45EltouKWw
— Prithviraj Sukumaran (@PrithviOfficial) October 29, 2021
“ಪದಗಳಲ್ಲಿ ವ್ಯಕ್ತಪಡಿಸಲಾಗದಷ್ಟು ನೋವುಂಟು ಮಾಡುತ್ತಿದೆ ಪುನೀತ್” ಎಂದು ಬಹುಭಾಷಾ ನಟಿ ಪಾರ್ವತಿ ತಿರುವೊತ್ತು ನೋವು ವ್ಯಕ್ತಪಡಿಸಿದ್ದಾರೆ.
It aches beyond words could ever express. Puneeth ? #PuneethRajkumar pic.twitter.com/t3sSeOh52W
— Parvathy Thiruvothu (@parvatweets) October 29, 2021
ತಮಿಳು ಚಿತ್ರನಟ ಜೀವ ಟ್ವೀಟ್ ಮಾಡಿ, “ಆಘಾತಕಾರಿ! ನಂಬಲು ಸಾಧ್ಯವಿಲ್ಲ! ಜೀವನವು ಅನಿರೀಕ್ಷಿತವಾಗಿದೆ, RIP” ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
“ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಸ್ನೇಹ ಜೀವ, ವಿನಮ್ರ ಮನಸ್ಸಿನ ಅವರ ನಿಧನವು ಭಾರತೀಯ ಚಿತ್ರರಂಗಕ್ಕೆ ದೊಡ್ಡ ಹೊಡೆತವಾಗಿದೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಓಂ ಶಾಂತಿ” ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ನುಡಿನಮನ ಸಲ್ಲಿಸಿದ್ದಾರೆ.
Saddened to hear about the passing away of #PuneethRajkumar . Warm , and humble, his passing away is a great blow to Indian cinema. May his soul attain sadgati. Om Shanti. pic.twitter.com/YywkotiWqC
— Virender Sehwag (@virendersehwag) October 29, 2021
ಕರುಣಾಮಯಿ ಮತ್ತು ಪ್ರೀತಿಯ ನಟರಾದ ಸಜ್ಜನರಲ್ಲಿ ಒಬ್ಬರಾದ ಪುನೀತ್ ರಾಜ್ ಕುಮಾರ್ ಇನ್ನಿಲ್ಲ. ಈ ಭರಿಸಲಾಗದ ನಷ್ಟವನ್ನು ಭರಿಸುವ ಶಕ್ತಿಯನ್ನು ಪುನೀತ್ ಅವರ ಕುಟುಂಬಕ್ಕೆ, ಸ್ನೇಹಿತರಿಗೆ ಮತ್ತು ಅವರ ಅಭಿಮಾನಿಗಳ ಸಾಗರಕ್ಕೆ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬಹುಭಾಷ ನಟ ದುಲ್ಖರ್ ಸಲ್ಮಾನ್ ಪ್ರಾರ್ಥಿಸಿದ್ದಾರೆ.
??? One of the kindest and warmest Actors/gentlemen. Praying to the almighty to give Puneeth Sirs family, friends and his ocean of fans the strength to cope with this irreplaceable loss. #RIP #PuneethRajKumar #Gentleman #actor #loss #cannotunderstand #soyoung pic.twitter.com/U8RyOJdFMu
— dulquer salmaan (@dulQuer) October 29, 2021
ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಚಿತ್ರನಟರಾದ ಚಿರಂಜೀವಿ, ಪ್ರಕಾಶ್ ರಾಜ್ ಆರ್ಯ ನಿರ್ದೇಶಕರಾದ ವಿಘ್ನೇಶ್ ಶಿವನ್, ನಟಿಯರಾದ ಶ್ರದ್ಧಾ ಶ್ರೀನಾಥ್, ತಮನ್ನಾ ಭಾಟಿಯ ಸೇರಿದಂತೆ ನೂರಾರು ಜನರು ನುಡಿನಮನ ಸಲ್ಲಿಸಿದ್ದಾರೆ.
Ahh Noooo .. Gone too soon my dear Appu. I’m shattered .. Heart broken .. not fair #BlackFriday #PuneethRajkumar
— Prakash Raj (@prakashraaj) October 29, 2021
This is so heart breaking.. RIP #PuneethRajkumar pic.twitter.com/Wh6QNRXT4B
— Arya (@arya_offl) October 29, 2021
Shocked, saddened and in loss of words. ?#PuneethRajkumar pic.twitter.com/I6thuUN8K1
— Tamannaah Bhatia (@tamannaahspeaks) October 29, 2021
Shocked and deeply saddened on the passing of #PuneethRajkumar the film industry has lost a gem. One of the finest human being I’ve met. So vibrant and humble.Gone too soon. Condolences to his family, friends and innumerable fans. ??
— Anil Kumble (@anilkumble1074) October 29, 2021
At a loss for words. Shaking with sadness and anger. We lost our prince. My condolences to the family and fans. RIP Appu sir. There will never be another like you. pic.twitter.com/6wz3H2WLCv
— Shraddha Srinath (@ShraddhaSrinath) October 29, 2021
This can’t be true! Devastated to hear this. #PuneethRajkumar
A humble superstar, so young, at the pinnacle of his life simply left the world. My deepest heartfelt condolences to his family, friends and fans. Om Shanti.— Shreya Ghoshal (@shreyaghoshal) October 29, 2021
Apart from the shocking tragedy that @PuneethRajkumar ‘s sudden death is, it is also a scary and terrifying eye opening truth that any of us can die anytime ??? So it is best to live life on a fast forward mode , while we are still alive???
— Ram Gopal Varma (@RGVzoomin) October 29, 2021
ಇದನ್ನೂ ಓದಿ: ಕನ್ನಡಿಗರ ರಾಜಕುಮಾರ, ಪ್ರೀತಿಯ ’ಅಪ್ಪು’ ನಡೆದು ಬಂದ ಹಾದಿ


