Homeಮುಖಪುಟಯುಪಿ: 2 ನೇ ತರಗತಿ ಬಾಲಕನನ್ನು ಶಾಲಾ ಕಟ್ಟಡದ ಮೇಲಿಂದ ತಲೆ ಕೆಳಗಾಗಿಸಿ ನೇತಾಡಿಸಿದ ಶಿಕ್ಷಕ

ಯುಪಿ: 2 ನೇ ತರಗತಿ ಬಾಲಕನನ್ನು ಶಾಲಾ ಕಟ್ಟಡದ ಮೇಲಿಂದ ತಲೆ ಕೆಳಗಾಗಿಸಿ ನೇತಾಡಿಸಿದ ಶಿಕ್ಷಕ

- Advertisement -
- Advertisement -

ಮುಖ್ಯೋಪಾಧ್ಯಾಯನೊಬ್ಬ ಎರಡನೇ ತರಗತಿಯ ಬಾಲಕನ ಕಾಲನ್ನು ಹಿಡಿದು ಶಾಲಾ ಕಟ್ಟಡದ ಮೇಲಿನಿಂದ ನೇತಾಡಿಸಿದ ಚಿತ್ರವೊಂದು ಉತ್ತರಪ್ರದೇಶದ ಮಿರ್ಜಾಪುರದಿಂದ ಹೊರಹೊಮ್ಮಿದೆ. ಈ ಆಘಾತಕಾರಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಕೃತ್ಯ ಎಸಗಿದ ಶಿಕ್ಷಕ ಮನೋಜ್ ವಿಶ್ವಕರ್ಮನನ್ನು ಬಂಧಿಸಲಾಗಿದೆ.

ಗುರುವಾರ ಊಟದ ವಿರಾಮದ ಸಮಯದಲ್ಲಿ ಆಟವಾಡುತ್ತಿದ್ದಾಗ ಎರಡನೇ ತರಗತಿ ವಿದ್ಯಾರ್ಥಿ ಸೋನು ಯಾದವ್‌ ಮತ್ತೊಬ್ಬ ವಿದ್ಯಾರ್ಥಿಯನ್ನು ಕಚ್ಚಿದ್ದರು. ಇದಕ್ಕಾಗಿ ಮನೋಜ್ ವಿಶ್ವಕರ್ಮ, ಸೋನು ಯಾದವ್ ಅವರ ಕಾಲಿನಿಂದ ಹಿಡಿದು ತಲೆಕೆಳಗಾಗಿ ಕಟ್ಟಡದ ಮೇಲಿನಿಂದ ನೇತಾಡಿಸಿದ್ದಾನೆ.

ಇದನ್ನೂ ಓದಿ: ತಮ್ಮ ವಿರುದ್ಧದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ: ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮನವಿ

ಅಲ್ಲದೆ ಕಚ್ಚಿದ್ದಕ್ಕಾಗಿ ಕ್ಷಮೆ ಕೇಳದಿದ್ದರೆ ಕಟ್ಟಡದ ಮೇಲಿನಿಂದ ಬೀಳಿಸುವುದಾಗಿ ಮುಖ್ಯೋಪಾಧ್ಯಾಯ ಬೆದರಿಸಿದ್ದಾನೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಈ ವೇಳೆ ಮಕ್ಕಳ ಗುಂಪು ಜಮಾಯಿಸಿದ್ದು, ಅಲ್ಲದೆ ಸೋನು ಜೋರಾಗಿ ಅತ್ತು ಕಿರುಚಾಡಿದ್ದರಿಂದ ಮುಖ್ಯೋಪಾಧ್ಯಾಯ ಕೆಳಗಡೆ ಇಳಿಸಿದ್ದಾನೆ.

ಇದನ್ನೂ ಓದಿ: ಕನ್ನಡಿಗರ ರಾಜಕುಮಾರ, ಪ್ರೀತಿಯ ’ಅಪ್ಪು’ ನಡೆದು ಬಂದ ಹಾದಿ

“ಮುಖ್ಯೋಪಾಧ್ಯಾಯ ಹಾಗೆ ಮಾಡಬಾರದಿತ್ತು. ಆದರೆ ಅವರು ‘ಪ್ರೀತಿ’ಯಿಂದ ಅದನ್ನು ಮಾಡಿದ್ದಾರೆ ಆದ್ದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ” ಎಂದು ಬಾಲಕನ ತಂದೆ ರಂಜಿತ್ ಯಾದವ್ ಹೇಳಿದ್ದಾರೆ ಎಂದು ಎನ್‌ಡಿಟಿವಿ ಹೇಳಿದೆ.

ಮುಖ್ಯೋಪಾಧ್ಯಾಯ ಮನೋಜ್ ವಿಶ್ವಕರ್ಮ‌ನನ್ನು ಬಾಲನ್ಯಾಯ ಕಾಯಿದೆಯ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ.

“ಸೋನು ತುಂಬಾ ಕಿಡಿಗೇಡಿ…ಮಕ್ಕಳಿಗೆ ಮತ್ತು ಶಿಕ್ಷಕರಿಗೂ ಆತ ಕಚ್ಚುತ್ತಿದ್ದ. ಸೋನುವಿನ ತಂದೆ ನಮ್ಮೊಂದಿಗೆ ಆತನನ್ನು ತಿದ್ದುವಂತೆ ಕೇಳಿಕೊಂಡಿದ್ದರು. ಆದ್ದರಿಂದ ನಾವು ಅವನನ್ನು ಹೆದರಿಸಲು ಪ್ರಯತ್ನಿಸಿದ್ದೇವೆ. ಭಯಪಡಿಸುವುದಕ್ಕಾಗಿ ಮೇಲಿನ ಮಹಡಿಯಿಂದ ತಲೆಕೆಳಗಾಗಿ ನೇತಾಡಿಸಲಾಯಿತು” ಎಂದು  ಹಾಕಲಾಯಿತು,” ಎಂದು ಬಂಧನಕ್ಕೆ ಒಳಗಾರಿರುವ ಮನೋಜ್ ವಿಶ್ವಕರ್ಮ ಹೇಳಿದ್ದಾನೆ.

ಇದನ್ನೂ ಓದಿ: ದಾಸ್ತಾನಿದ್ದರೂ ಶಾಲಾ ಮಕ್ಕಳಿಗೆ ಸಾರವರ್ಧಿತ ಊಟ ನೀಡದ ರಾಜ್ಯ ಸರ್ಕಾರಗಳು: ಕೇಂದ್ರ ಶಿಕ್ಷಣ ಸಚಿವಾಲಯ ಅಸಮಾಧಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ನವೀಕರಿಸಿದ ಅಂಕಿ ಅಂಶ: 4 ಹಂತಗಳಲ್ಲಿ 1.07 ಕೋಟಿ ಮತಗಳಲ್ಲಿ ವ್ಯತ್ಯಾಸ!

0
2024ರ ಲೋಕಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳ ಮತದಾನದ ಪ್ರತಿ ರಾತ್ರಿ ಚುನಾವಣಾ ಆಯೋಗ ನೀಡಿದ ಮತದಾನದ ಅಂಕಿ-ಅಂಶಗಳನ್ನು ವಿಶ್ಲೇಷಣೆ ಮಾಡಿದಾಗ ಮೊದಲ ನಾಲ್ಕು ಹಂತಗಳಲ್ಲಿ ಸುಮಾರು 1.07 ಕೋಟಿ ಮತಗಳ ವ್ಯತ್ಯಾಸವನ್ನು...