ಪಂಜಾಬ್ ವಕ್ಫ್ ಮಂಡಳಿಯು ರಾಜ್ಯಾದ್ಯಂತ ಒಟ್ಟು 36,625.83 ಎಕರೆ ಭೂಮಿಯನ್ನು ಹೊಂದಿದೆ, ಆದರೆ ಈ ಭೂಮಿಯಲ್ಲಿ 14,000 ಎಕರೆಗೂ ಹೆಚ್ಚು ಭೂಮಿ ಪ್ರಸ್ತುತ ಅಕ್ರಮ ಒತ್ತುವರಿಯಾಗಿದೆ ಎಂದು TNIE ವರದಿ ಮಾಡಿದೆ. ಈ ಅತಿಕ್ರಮಣಗಳ ಕುರಿತು ನಡೆಯುತ್ತಿರುವ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅದು ಹೇಳಿದೆ.
ಮಂಡಳಿಯ ಅಂಕಿ ಅಂಶಗಳ ಪ್ರಕಾರ ಪಂಜಾಬ್ ವಕ್ಫ್ ಮಂಡಳಿಯು ಒಟ್ಟು 75,965 ನೋಂದಾಯಿತ ಆಸ್ತಿಗಳನ್ನು ಮತ್ತು 25,403 ನೋಂದಾಯಿತ ವಕ್ಫ್ ಎಸ್ಟೇಟ್‌ಗಳನ್ನು ಹೊಂದಿದೆ ಎಂದು ಹೇಳುತ್ತದೆ. ಮಂಡಳಿಯು ರಾಜ್ಯಾದ್ಯಂತ 36,625.83 ಎಕರೆ ಭೂಮಿಯನ್ನು ಹೊಂದಿದ್ದು, ಸರಿಸುಮಾರು 14,085.004 ಎಕರೆ ಅಥವಾ 38.46% ರಷ್ಟು ಪ್ರಸ್ತುತ ಅಕ್ರಮ ಒತ್ತುವರಿಯಾಗಿದೆ. ಉಳಿದ 61.45% ಭೂಮಿಯನ್ನು ಅದರ ಉದ್ದೇಶಿತ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ 18 ಪ್ರಕರಣಗಳು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ 462 ಪ್ರಕರಣಗಳು, ವಿವಿಧ ನ್ಯಾಯಾಲಯಗಳಲ್ಲಿ ಘೋಷಣೆ, ಸ್ವಾಧೀನ ಅಥವಾ ಹೊರಹಾಕುವಿಕೆಗೆ ಸಂಬಂಧಿಸಿದಂತೆ 1,157 ಸಿವಿಲ್ ಮೊಕದ್ದಮೆಗಳು ಐದು ವಕ್ಫ್ ನ್ಯಾಯಮಂಡಳಿಗಳ ಮುಂದೆ ಬಾಕಿ ಉಳಿದಿವೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ವಕ್ಫ್ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಲತೀಫ್ ಅಹ್ಮದ್ ಥಿಂಡ್, “ಪಂಜಾಬ್‌ನಲ್ಲಿ ಒಟ್ಟು ವಕ್ಫ್ ಮಂಡಳಿಯ ಆಸ್ತಿಗಳ ಸಂಖ್ಯೆ 75,965. ಪ್ರಮುಖ ಸಮಸ್ಯೆಯೆಂದರೆ ರಾಜ್ಯಾದ್ಯಂತ ಅಕ್ರಮ ಅತಿಕ್ರಮಣಗಳಾಗಿವೆ. ಗರಿಷ್ಠ ಅತಿಕ್ರಮಣಗಳು ಬಟಿಂಡಾದಲ್ಲಿದ್ದು, ನಂತರ ಲುಧಿಯಾನ, ಅಮೃತಸರ, ಜಲಂಧರ್ ಮತ್ತು ಪಟಿಯಾಲದಲ್ಲಿವೆ. ಅನೇಕ ಪ್ರಕರಣಗಳಲ್ಲಿ, ಅಕ್ರಮ ಅತಿಕ್ರಮಣಕಾರರು 1947 ರಿಂದ ಈ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇತರ ಹಲವು ಪ್ರಕರಣಗಳಲ್ಲಿ ಮಂಡಳಿಯೊಂದಿಗೆ ಮಾಡಲಾದ ಗುತ್ತಿಗೆ ಮುಗಿದಿದ್ದರೂ, ಅವರು ಆಸ್ತಿಯನ್ನು ತೆರವು ಮಾಡಿಲ್ಲ ಅಥವಾ ಅದರನ್ನು ವಾಪಾಸು ಮಾಡಿಲ್ಲ” ಎಂದು ಹೇಳಿದ್ದಾರೆ.
“ಪ್ರಭಾವಿ ವ್ಯಕ್ತಿಗಳು ಸೇರಿದಂತೆ ಸಾಮಾನ್ಯ ವ್ಯಕ್ತಿಗಳು ಕೂಡಾ ವಕ್ಫ್ ಮಂಡಳಿಯ ಆಸ್ತಿಗಳನ್ನು ಅತಿಕ್ರಮಿಸಿದ್ದಾರೆ. ಪಟಿಯಾಲ ಬಳಿಯ ಸಮನಾದಲ್ಲಿ ಅನೇಕ ಗುಡಿಸಲುಗಳಿದ್ದು, ಆ ಜನರು ಖಾಲಿ ಮಾಡಲು ನಿರಾಕರಿಸುತ್ತಿದ್ದಾರೆ. ಇದರಲ್ಲಿ ಇತರ ಧರ್ಮದ ಜನರು ಕೂಡಾ ಅತಿಕ್ರಮಣ ಮಾಡಿದ್ದಾರೆ. ಜೊತೆಗೆ ಮುಸ್ಲಿಮರು ಕೂಡಾ ಕೆಲವು ಸಂದರ್ಭಗಳಲ್ಲಿ ಮಂಡಳಿಯ ಆಸ್ತಿಗಳನ್ನು ಅಕ್ರಮವಾಗಿ ಅತಿಕ್ರಮಣ ಮಾಡಿದ್ದಾರೆ,” ಎಂದು ಅವರು ಹೇಳಿದ್ದಾರೆ.
“ನಾವು ಕಾನೂನಿನ ಸರಿಯಾದ ಕಾರ್ಯವಿಧಾನವನ್ನು ಅನುಸರಿಸುತ್ತೇವೆ. ಪ್ರಕರಣಗಳು ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ನಡೆಯುತ್ತಿವೆ. ತಿದ್ದುಪಡಿ ಬರುವುದರಿಂದ ಈ ಪ್ರಕ್ರಿಯೆಯು ಮತ್ತಷ್ಟು ಕಷ್ಟಕರವಾಗುತ್ತದೆ.” ಅವರು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹೈದರಾಬಾದ್ ವಿವಿ ‘ಕಾಂಚ ಗಚಿಬೌಲಿ’ ಅರಣ್ಯ ನಾಶ ವಿವಾದ: ಮರಗಳ ತೆರವಿಗೆ ಸುಪ್ರೀಂ ಕೋರ್ಟ್ ತಡೆ
ಹೈದರಾಬಾದ್ ವಿವಿ ‘ಕಾಂಚ ಗಚಿಬೌಲಿ’ ಅರಣ್ಯ ನಾಶ ವಿವಾದ: ಮರಗಳ ತೆರವಿಗೆ ಸುಪ್ರೀಂ ಕೋರ್ಟ್ ತಡೆ

