ಪಂಜಾಬ್‌ನ ಫಜಿಲ್ಕಾ ಜಿಲ್ಲೆಯ ಜಲಾಲಾಬಾದ್‌ನಲ್ಲಿ ಶಿರೋಮಣಿ ಅಕಾಲಿದಳ (ಎಸ್‌ಎಡಿ) ಸದಸ್ಯರೊಂದಿಗೆ ಶನಿವಾರ ನಡೆದ ಘರ್ಷಣೆಯ ಸಂದರ್ಭದಲ್ಲಿ ಗುಂಡಿನ ದಾಳಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಆಪ್ ಅಭ್ಯರ್ಥಿಯಾಗಿರುವ ಮನದೀಪ್ ಸಿಂಗ್ ಬ್ರಾರ್ ಅವರ ಎದೆಗೆ ಗುಂಡು ತಗುಲಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.ಪಂಜಾಬ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಚುನಾವಣೆ ಸಂಬಂಧ ಸಭೆ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಲೂಧಿಯಾನ ಆಸ್ಪತ್ರೆಯಲ್ಲಿ ಆಪ್ ನಾಯಕನನ್ನು ಭೇಟಿ ಮಾಡಿದ ಪಂಜಾಬ್‌ನ ಪಂಚಾಯತ್ ರಾಜ್ ಸಚಿವ ತರುಣ್‌ಪ್ರೀತ್ ಸಿಂಗ್ ಸೌಂಧ್, “ಮನದೀಪ್ ಬ್ರಾರ್ ಅವರು ಸರಪಂಚ್ ಚುನಾವಣೆಗೆ ಸ್ಪರ್ಧಿಸಿದ್ದರು, ಅವರು ನಾಮಪತ್ರ ಸಲ್ಲಿಸಲು ಬಿಡಿಪಿಒ ಕಚೇರಿಗೆ ಹೋದಾಗ, ಅಕಾಲಿದಳಕ್ಕೆ ಸೇರಿದ ವ್ಯಕ್ತಿ ಅವರ ಪರವಾನಿಗೆ ಹೊಂದಿದ ಬಂದೂಕಿನಿಂದ ಅವರಿಗೆ ಶೂಟ್ ಮಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಮತ್ತು ಇದು ಅತ್ಯಂತ ನಾಚಿಕೆಗೇಡಿನ ಘಟನೆಯಾಗಿದೆ” ಎಂದು ಹೇಳಿದ್ದಾರೆ.ಪಂಜಾಬ್
ಇದನ್ನೂಓದಿ: ಮಣಿಪುರ | ಉಖ್ರುಲ್ ಹಿಂಸಾಚಾರದ ವೇಳೆ ಲೂಟಿಯಾದ 80% ಬಂದೂಕುಗಳು ಮತ್ತೆ ಪೊಲೀಸರ ವಶಕ್ಕೆ
ಪಂಜಾಬ್‌ನಲ್ಲಿ ಅಕಾಲಿದಳ ಮತ್ತು ಕಾಂಗ್ರೆಸ್ ಶಾಂತಿಯ ವಾತಾವರಣವನ್ನು ಬಯಸುವುದಿಲ್ಲ ಮತ್ತು ಪಂಚಾಯತ್ ಚುನಾವಣೆಯಲ್ಲಿ ಎಎಪಿಯನ್ನು ಬೆಂಬಲಿಸುವ ಯಾರನ್ನಾದರೂ ಹೆದರಿಸುತ್ತಿವೆ ಎಂದು ಸಚಿವರು ಆರೋಪಿಸಿದ್ದಾರೆ. ಗುಂಡಿನ ದಾಳಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಆಪ್‌ನ ಜಲಾಲಾಬಾದ್ ಶಾಸಕ ಜಗದೀಪ್ ಕಾಂಬೋಜ್ ಗೋಲ್ಡಿ, ಆರೋಪಿಗಳು ಪಂಚಾಯತ್ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದು, ಇದನ್ನು ವಿರೋಧಿಸಿದ ಆಪ್ ಅಭ್ಯರ್ಥಿಯ ಮೇಲೆ ಗುಂಡಿನ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.
“ವಿರೋಧಿ ಪಕ್ಷದ ವ್ಯಕ್ತಿಯೊಬ್ಬರು ಪಂಚಾಯತ್ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಈ ವಿಷಯವು ಪಂಚಾಯತ್‌ನಲ್ಲಿ ಆಕ್ಷೇಪಿಸಲ್ಪಟ್ಟಿದ್ದು, ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಇದನ್ನು ಉಲ್ಲೇಖಿಸಿ ನಮ್ಮ ನಾಯಕರು ಅಕಾಲಿದಳದ ಅಭ್ಯರ್ಥಿಯ ನಾಮಪತ್ರಕ್ಕೆ ಆಕ್ಷೇಪಣೆಯನ್ನು ಎತ್ತಿದರು. ಅವರು ಅಲ್ಲಿಂದ ಹೊರಬಂದಾಗ ‘ನಮ್ಮ ನಾಮಪತ್ರವನ್ನು ಪ್ರಶ್ನಿಸಲು ನೀವು ಯಾರು?’ ಪ್ರಶ್ನಿಸಿ, ಅವರ ಮೇಲೆ ಗುಂಡು ಹಾರಿಸಿದರು, ”ಎಂದು ಶಾಸಕ ಹೇಳಿದ್ದಾರೆ.
ಘಟನೆಯ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಪಂಜಾಬ್‌ನಾದ್ಯಂತ 13,229 ಗ್ರಾಮ ಪಂಚಾಯಿತಿಗಳಿಗೆ ಅಕ್ಟೋಬರ್ 15 ರಂದು ಚುನಾವಣೆ ನಡೆಯಲಿದೆ.
ವಿಡಿಯೊ ನೋಡಿ: ‘ಭೂಮಿ- ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶ’ದ ಕುರಿತು ಸಂಘಟಕರ ಮಾತುಗಳು


