Homeಚಳವಳಿಪಂಜಾಬ್‌ ರೈತರ ಪ್ರತಿಭಟನೆ: ರ್‍ಯಾಲಿ ರದ್ದುಗೊಳಿಸಿ ವಾಪಸ್‌ ತೆರಳಿದ ಪ್ರಧಾನಿ ಮೋದಿ, ಭದ್ರತಾ ವೈಫಲ್ಯವೆಂದ ಒಕ್ಕೂಟ...

ಪಂಜಾಬ್‌ ರೈತರ ಪ್ರತಿಭಟನೆ: ರ್‍ಯಾಲಿ ರದ್ದುಗೊಳಿಸಿ ವಾಪಸ್‌ ತೆರಳಿದ ಪ್ರಧಾನಿ ಮೋದಿ, ಭದ್ರತಾ ವೈಫಲ್ಯವೆಂದ ಒಕ್ಕೂಟ ಸರ್ಕಾರ

- Advertisement -
- Advertisement -

ಪಂಜಾಬ್‌ ರೈತರು ಗೋ ಬ್ಯಾಕ್ ಮೋದಿ ಎಂಬ ಘೋಷಣೆಗಳೊಂದಿಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಕಾರಣಕ್ಕೆ ಫ್ಲೈ ಓವರ್‌ ಮೇಲೆಯೇ 15 ರಿಂದ 20 ನಿಮಿಷ ಕಾಲ ಅಲ್ಲಿ ಸಿಲುಕಿಕೊಂಡರು. ಬಳಿಕ ಫಿರೋಜ್‌ಪುರದ ರ್‍ಯಾಲಿಯನ್ನು ರದ್ದುಗೊಳಿಸಿ ದೆಹಲಿಗೆ ವಾಪಸ್ ತೆರಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಪಂಜಾಭ್ ಭೇಟಿಗೆ ಮೊದಲಿನಿಂದಲೂ ರೈತರು ವಿರೋಧ ವ್ಯಕ್ತಪಡಿಸಿದ್ದರು. ಎರಡು ವರ್ಷಗಳ ನಂತರ ರಾಜ್ಯಕ್ಕೆ ಇದು ಮೋದಿಯವರ ಮೊದಲ ಭೇಟಿಯಾಗಿತ್ತು.

ಪಾಕಿಸ್ತಾನದ ಗಡಿಯಲ್ಲಿರುವ ಫಿರೋಜ್‌ಪುರಕ್ಕೆ ಪ್ರಮುಖ ಧಾರ್ಮಿಕ ಕೇಂದ್ರಗಳು ಮತ್ತು ಮೂರು ಆರೋಗ್ಯ ಸಂಸ್ಥೆಗಳಿಗೆ ಹೋಗಲು ಸಹಾಯಕವಾಗುವ ಮೆಗಾ ರೋಡ್ ಕಾರಿಡಾರ್‌ಗಳು ಸೇರಿದಂತೆ 42,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲು ನಿರ್ಧರಿಸಲಾಗಿತ್ತು. ಈ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಯುಪಿ ಚುನಾವಣೆ: ಎಲ್ಲಾ ಚುನಾವಣಾ ರ್‍ಯಾಲಿಗಳನ್ನು ರದ್ದುಗೊಳಿಸಿದ ಕಾಂಗ್ರೆಸ್

ಮೋದಿ ಆಗಮನದ ಸುದ್ದಿಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ #GoBackModi #FarmersProtest ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗಲು ಶುರುವಾಗಿದ್ದವು.

ಪಂಜಾಬ್‌ನ ಫಿರೋಜ್‌ಪುರದಲ್ಲಿ ಇಂದು ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರ್‍ಯಾಲಿಯನ್ನು “ಕೆಲವು ಕಾರಣಗಳಿಗಾಗಿ” ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಜೊತೆಗೆ 15-20 ನಿಮಿಷ ಪ್ರಧಾನಿ ಮೋದಿ ಫ್ಲೈ ಓವರ್‌ ಮೇಲೆ ಅಷ್ಟು ಹೊತ್ತು ಸಿಲುಕಿಕೊಳ್ಳಲು ರಾಜ್ಯ ಸರ್ಕಾರದ ಭದ್ರತಾ ಲೋಪವೇ ಕಾರಣ ಎಂದು ಗೃಹ ಸಚಿವಾಲಯ ಆರೋಪಿಸಿದೆ.

ಪ್ರಧಾನಿ ನಂತರ ಭಾಷಣ ಮಾಡಲಿದ್ದ ರ್‍ಯಾಲಿಗೆ ಪಕ್ಷದ ಕಾರ್ಯಕರ್ತರನ್ನು ಕರೆದೊಯ್ಯುವ ಬಸ್‌ಗಳನ್ನು ಪಂಜಾಬ್ ಪೊಲೀಸರು ನಿಲ್ಲಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಭದ್ರತಾ ಲೋಪಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಚಿವಾಲಯವು ಪಂಜಾಬ್ ಸರ್ಕಾರವನ್ನು ಕೇಳಿದೆ ಎಂದು ಹೇಳಿಕೆ ತಿಳಿಸಿದೆ. ಬಳಿಕ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿದ ಭಟಿಂಡಾದ ಭೈಸಿಯಾನ ಏರ್‌ಫೋರ್ಸ್ ಸ್ಟೇಷನ್‌ಗೆ ಬಂದಿಳಿದ ಪ್ರಧಾನಿಯವರು ಶೀಘ್ರದಲ್ಲೇ ದೆಹಲಿಗೆ ತೆರಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಖಿಂಪುರ್‌ ಖೇರಿ ಹತ್ಯಾಕಾಂಡದ ಆರೋಪಿ ಆಶಿಶ್ ಮಿಶ್ರಾ ತಂದೆ ಸಚಿವ ಅಜಯ್ ಮಿಶ್ರಾ ತೇನಿಯನ್ನು ಸಂಪುಟದಿಂದ ವಜಾಗೊಳಿಸದೇ ಇರುವುದು, ರೈತರ ಮೇಲೆ ಎಫ್‌ಐಆರ್‌ ದಾಖಲಿಸಿರುವುದು, ಎಂಎಸ್‌ಪಿ ಕಾನೂನು ಶೀಘ್ರ ಜಾರಿ ಮಾಡದಿರುವುದು ಸೇರಿದಂತೆ ಹಲವು ಘಟನೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದಾರೆ.


ಇದನ್ನೂ ಓದಿ: ದ್ವೇಷ ಭಾಷಣ: ವಿವಾದಿತ ಕಾಳಿಚರಣ್ ಸ್ವಾಮಿಯನ್ನು ವಶಕ್ಕೆ ಪಡೆದ ಮಹಾರಾಷ್ಟ್ರ ಪೊಲೀಸರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಮ್ಮ ಹಳ್ಳಿಯಲ್ಲಿ ಒಂದು ಗಾಧೆ ಮಾತಿದೆ ” ಮಾಡಿದ್ದುಣ್ಣೋ ಮಾರಾಯ “” ನಾನು ಎನು ಮಾಡಿ ಇರ್ತಿನೋ ಅದನ್ನೆ ನಾಮು ಅನುಭವಿಸಬೇಕು ಇದೇ ಈ ಜಗದ ನಿಯಮ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಮಾದಕ ದ್ರವ್ಯ ಕಳ್ಳಸಾಗಣೆ, ಜುಗಾರಿ,  ಭಿಕ್ಷೆ ಬೇಡುವುದನ್ನು ‘ವೃತ್ತಿ’ ಎಂದು ಪಟ್ಟಿ ಮಾಡಿದ...

0
ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರಪ್ರದೇಶ ಸರಕಾರ ಮತ್ತೆ ಮುಜುಗರಕ್ಕೆ ಈಡಾಗಿದ್ದು, ಉತ್ತರಪ್ರದೇಶ ಪೊಲೀಸ್ ಮೊಬೈಲ್ ಅಪ್ಲಿಕೇಶನ್ UPCOPನಲ್ಲಿ ಬಾಡಿಗೆದಾರರ ಪರಿಶೀಲನೆಗಾಗಿ ವೃತ್ತಿ ಬಗ್ಗೆ ಪಟ್ಟಿ ಮಾಡಿದೆ. ಅವುಗಳಲ್ಲಿ 'ಮಾದಕ ದ್ರವ್ಯಗಳ ಕಳ್ಳಸಾಗಣೆ', 'ಜುಗಾರಿ',  ಮತ್ತು...