ಐದು ದಿನಗಳ ಅಂತರದಲ್ಲಿ ಎರಡು ಮಾರಣಾಂತಿಕ ಸ್ಫೋಟಗಳು ತಮಿಳುನಾಡಿನ ಪಟಾಕಿ ಕಾರ್ಖಾನೆಗಳಲ್ಲಿ ಸಂಭವಿಸಿದ್ದು ಒಟ್ಟು ಆರು ಮಂದಿ ಕಾರ್ಮಿಕರು ಸಾವಿಗೀಡಾಗಿದ್ದಾರೆ. ವಿರುದುನಗರ ಜಿಲ್ಲೆಯ ಸತ್ತೂರು ಬಳಿ ಬುಧವಾರ ಬೆಳಿಗ್ಗೆ ಎರಡನೇ ಘಟನೆ ನಡೆದಿದೆ.

ಸ್ಫೋಟದಲ್ಲಿ ಗಾಯಗೊಂಡ ಇಬ್ಬರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಬ್ಬರೂ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಇತ್ತೀಚಿಗೆ ಅವಘಡ ಸಂಭವಿಸಿದ ಸ್ಥಳದ ವಿಡಿಯೊಗಳು ಸ್ಫೋಟದ ಚಿತ್ರಗಳನ್ನು ತೋರಿಸುತ್ತವೆ. ಪೊಲೀಸರು, ರಕ್ಷಣಾ ಸಿಬ್ಬಂದಿ ಮತ್ತು ನಿವಾಸಿಗಳು ಸ್ಥಳದಲ್ಲಿ ನಿಂತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಸ್ಥಳದಲ್ಲಿ ಅವಶೇಷಗಳು ಛಿದ್ರವಾಗಿ ಬಿದ್ದಿರುವುದನ್ನು ಕಾಣಬಹುದು.

ಜನವರಿ 1, 2022ರಂದು, ತಮಿಳುನಾಡಿನ ಶಿವಕಾಶಿಯ ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿತ್ತು. ನಾಲ್ವರು ಕಾರ್ಮಿಕರು ಕೊನೆಯುಸಿರೆಳೆದರು. ಎಂಟು ಮಂದಿ ಗಾಯಗೊಂಡರು. ರಾಸಾಯನಿಕ ಮಿಶ್ರಣದ ಸಾಮಾನ್ಯ ಪ್ರಕ್ರಿಯೆ ನಡೆಯುತ್ತಿರುವಾಗ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.

ಪಟಾಕಿ ಘಟಕಗಳಲ್ಲಿ ಸ್ಫೋಟಿಸುವ ಘಟನೆಗಳು ಹೆಚ್ಚಾಗುತ್ತಿವೆ. ವರ್ಷಕ್ಕೆ ಹಲವು ಬಾರಿ ಸ್ಫೋಟದ ವರದಿಗಳಾಗುತ್ತಿವೆ. ಅಂತಹ ಘಟಕಗಳನ್ನು ನಿಯಂತ್ರಿಸಬೇಕು, ಅಧಿಕಾರಿಗಳು ಪರಿಶೀಲಿಸಬೇಕು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಎಂದು ನ್ಯಾಯಾಲಯಗಳ ಕಠಿಣ ಎಚ್ಚರಿಕೆಗಳ ಹೊರತಾಗಿಯೂ ದುರ್ಘಟನೆಗಳು ವರದಿಯಾಗುತ್ತಲೇ ಇವೆ.


ಇದನ್ನೂ ಓದಿರಿ: ಮೈಸೂರು ರಂಗಾಯಣಕ್ಕೆ ಬಂದು ಮಕ್ಕಳಿಗೆ ‘ಕೈತುತ್ತು’ ನೀಡಿದ್ದರು ಅನಾಥ ಮಕ್ಕಳ ತಾಯಿ ‘ಸಪ್ಕಾಲ್‌’

LEAVE A REPLY

Please enter your comment!
Please enter your name here