ಮಯನ್ಮಾರ್

ಮಯನ್ಮಾರ್‌‌ನಲ್ಲಿ ಆಡಳಿತವನ್ನು ಸೇನೆಯು ಕ್ಷಿಪ್ರಕ್ರಾಂತಿ ಮೂಲಕ ವಶಪಡೆದುಕೊಂಡಿದ್ದು, ಇದನ್ನು ವಿರೋಧಿಸಿ ಸಾವಿರಾರು ಪ್ರತಿಭಟನಾಕಾರರು ಮಯನ್ಮಾರ್‌‌ನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಬುಧವಾರ ಕೂಡಾ ಮುಂದುವರೆದಿದೆ.

ರಾಷ್ಟ್ರದ ಅತಿದೊಡ್ಡ ನಗರವಾದ ಯಾಂಗೊನ್‌ನಲ್ಲಿ ಪ್ರತಿಭಟನಾಕಾರರು ಒಟ್ಟುಗೂಡಿದ್ದು, ಅಲ್ಲಿ ವಾಹನಗಳನ್ನು ಅಡ್ಡಯಿಟ್ಟು ಸೈನ್ಯವು ಚಲಿಸದಂತೆ ತಡೆದ್ದಾರೆ. ಯಾಂಗೋನ್‌‌ನಲ್ಲಿ ಸೈನ್ಯವನ್ನು ನೇಮಿಸಲಾಗಿದ್ದು ಪರಿಸ್ಥಿತಿಯು ಹಿಂಸೆಗೆ ತಿರುಗುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಟಾಮ್ ಆಂಡ್ಯ್ರೂಸ್ ಎಚ್ಚರಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಮಯನ್ಮಾರ್‌‌ ಮೇಲೆ ಹಿಡಿತ ಸಾಧಿಸಿದ ಸೇನೆ; ಆಂಗ್ ಸಾನ್ ಸೂಕಿ ಬಂಧನ

“ಮಯನ್ಮಾರ್‌‌ನಲ್ಲಿ ಫೆಬ್ರವರಿ 1 ರಂದು ದೇಶದ ಆಡಳಿತವನ್ನು ವಶಕ್ಕೆ ಪಡೆದಾಗ ನಡೆದ ಹಿಂಸಾಚಾರಕ್ಕಿಂತ ಬುಧವಾರದಂದು ಹೆಚ್ಚಿನ ಪ್ರಮಾಣದಲ್ಲಿ ಹಿಂಸಾಚಾರದ ಸಾಧ್ಯತೆಯಿದೆ. ಈ ಹಿಂದಿನ ಸೈನ್ಯದ ಕ್ಷಿಪ್ರಕ್ರಾಂತಿಯಲ್ಲೂ ಕೊಲೆಗಳು, ನಾಪತ್ತೆ ಪ್ರಕರಣಗಳು, ಬಂಧನಗಳು ನಡೆಯುತ್ತಿದ್ದವು” ಎಂದು ಆಂಡ್ರ್ಯೂಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಯಾನ್ಮಾರ್‌‌‌ ಕುರಿತು ವಿಶ್ವಸಂಸ್ಥೆಯ ವಿಶೇಷ ರಾಯಭಾರಿ ಕಳವಳಗಳನ್ನು ವ್ಯಕ್ತಪಡಿಸಿದ್ದು, “ದೇಶದಲ್ಲಿ ಸುಮಾರು 21 ಜನಾಂಗೀಯ ಸಶಸ್ತ್ರ ಸಂಘಟನೆಗಳು ಸೈನ್ಯದ ಕ್ಷಿಪ್ರಕ್ರಾಂತಿಗೆ ವಿರುದ್ಧವಾಗಿವೆ ಎಂಬುದನ್ನು ನಾವು ಮರೆಯಬಾರದು. ಆದ್ದರಿಂದ ಹಿಂಸಾಚಾರದ ಸಾಧ್ಯತೆಗಳು ತುಂಬಾ ಹೆಚ್ಚಿವೆ… ಇದು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಕೊನೆಗೊಳ್ಳಬಹುದು” ಎಂದು ವಿಶ್ವಸಂಸ್ಥೆಯ ವಿಶೇಷ ರಾಯಭಾರಿ ಕ್ರಿಸ್ಟೀನ್ ಸ್ಕ್ರಾನರ್ ಬರ್ಗೆನರ್ ತಿಳಿಸಿದ್ದಾರೆ.

ಇದನ್ನೂ ಓದಿ: ಪೆರೋನಿಸಂ & ಮಿಲಿಟರಿ ಸರ್ವಾಧಿಕಾರ ಆಳುವ ವರ್ಗ ಮತ್ತು ಮಿಲಿಟರಿ

ಸಾಮಾಜಿಕ ಕಾರ್ಯಕರ್ತರು ಸೇನೆಯ ಕ್ಷಿಪ್ರಕ್ರಾಂತಿಯನ್ನು ವಿರೋಧಿಸಿದ್ದು, ಸೇನೆಗೆ ನಾವು ಹೆದರುವುದಿಲ್ಲ ಎಂದು ಹೇಳಿದ್ದಾರೆ. ಸಾಮಾಜಿಕ ಕಾರ್ಯಕರ್ತರಾದ ಫ್ಯೂ ಫ್ಯೂ ಥಾ, “ನಾವು ಹಲವು ವರ್ಷಗಳಿಂದ ಮಿಲಿಟರಿ ನಿಯಂತ್ರಣದಲ್ಲಿದ್ದೆವು, ಈ ಸಮಯದಲ್ಲಿ ನಾವು ಅವುಗಳನ್ನು ಮುಗಿಸಲೇಬೇಕು. ನಮಗೆ ನಿಜವಾದ ಪ್ರಜಾಪ್ರಭುತ್ವ ಬೇಕು. ನಮ್ಮ ದೇಶವನ್ನು ಆಳಲು ಮಿಲಿಟರಿಗೆ ನಾವು ಇನ್ನು ಮುಂದೆ ಬಿಡುವುದಿಲ್ಲ” ಎಂದು ಹೇಳಿದ್ದಾರೆ.

ಇಂಟರ್ನೆಟ್ ತಡೆ ಮುಂದುವರಿಕೆಯ ನಡುವೆಯು ಹೋರಾಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆಗಳಿಗೆ ಕರೆ ನೀಡಿದ್ದಾರೆ.‌ “ನಾವು ಸಾಮೂಹಿಕವಾಗಿ ರ್‍ಯಾಲಿ ನಡೆಸೋಣ, ಯುವಕರ ಮತ್ತು ನಮ್ಮ ದೇಶದ ಭವಿಷ್ಯವನ್ನು ನಾಶಪಡಿಸಿದ ಮಿಲಿಟರಿ ಸರ್ಕಾರದ ವಿರುದ್ಧ ನಮ್ಮ ಬಲವನ್ನು ತೋರಿಸೋಣ” ಎಂದು ಬಂಧಿತ ನಾಯಕಿ ಆಂಗ್ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ವಕ್ತಾರ ಕೈ ಟೋ ಮಂಗಳವಾರ ತಡರಾತ್ರಿ ತಮ್ಮ ಫೇಸ್‌ಬುಕ್‌ ಪೇಜ್‌‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಸರ್ವಾಧಿಕಾರಿ ಹಿಟ್ಲರ್ ಮತ್ತು ಆತನ ಬಗೆಗಿನ ಗಮನ ಸೆಳೆದ ವ್ಯಂಗ್ಯಚಿತ್ರಗಳು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here