ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ನೆರೆಯ ಹರಿಯಾಣಕ್ಕೆ ತನ್ನ ಕಡೆಯಿಂದ “ಒಂದು ಹನಿ ನೀರನ್ನು ಸಹ” ಬಿಡುವುದಿಲ್ಲ ಎಂದು ನಿರ್ಣಯ ಕೈಗೊಂಡಿದೆ ಎಂದು ದಿ ಹಿಂದೂ ವರದಿ ಮಾಡಿದೆ. ನೀರು ಹಂಚಿಕೆಗೆ ಸಂಬಂಧಿಸಿದಂತೆ ಎರಡು ರಾಜ್ಯಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಇದು ಪಂಜಾಬ್ ಈ ತೀರ್ಮಾನ ಮಾಡಿದೆ. ಹರಿಯಾಣಕ್ಕೆ ಒಂದು ಹನಿ
ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿಯ ಮೂಲಕ ಬಿಜೆಪಿ ಪಕ್ಷವೂ ಪಂಜಾಬ್‌ನ ಹಕ್ಕುಗಳನ್ನು “ಕಿತ್ತುಕೊಳ್ಳಲು” ಪ್ರಯತ್ನಿಸುತ್ತಿದೆ ಎಂದು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವ ಬರಿಂದರ್ ಕುಮಾರ್ ಗೋಯಲ್ ಮಂಡಿಸಿದ ನಿರ್ಣಯದ ವೇಳೆ ಆರೋಪಿಸಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿದೆ.
ಭಾಕ್ರಾ ನಂಗಲ್ ಮತ್ತು ಭಾಕ್ರಾ ಬಿಯಾಸ್ ಯೋಜನೆಗಳ ಆಡಳಿತ ಮತ್ತು ನಿರ್ವಹಣೆಯನ್ನು ಅದರ ಮಂಡಳಿಯು ಮಾಡುತ್ತದೆ. ಇದು ಪಂಜಾಬ್, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ದೆಹಲಿ ಮತ್ತು ಚಂಡೀಗಢಕ್ಕೆ ನೀರು ಮತ್ತು ವಿದ್ಯುತ್ ಸರಬರಾಜನ್ನು ನಿಯಂತ್ರಿಸುತ್ತದೆ.
ಭಾಕ್ರಾ ನಂಗಲ್ ಯೋಜನೆಯು ಸತ್ಲೆಜ್ ನದಿಯ ಮೇಲೆ ಎರಡು ಅಣೆಕಟ್ಟುಗಳನ್ನು ಒಳಗೊಂಡಿದೆ. ಹಿಮಾಚಲ ಪ್ರದೇಶದ ಭಾಕ್ರಾ ಅಣೆಕಟ್ಟು ಮತ್ತು ಪಂಜಾಬ್‌ನ ನಂಗಲ್ ಅಣೆಕಟ್ಟು ಇದರಲ್ಲಿ ಸೇರಿವೆ. ಬಿಯಾಸ್ ಯೋಜನೆಯು ಬಿಯಾಸ್-ಸತ್ಲೆಜ್ ಲಿಂಕ್ ಕಾಲುವೆ ಮತ್ತು ಬಿಯಾಸ್ ಅಣೆಕಟ್ಟುಗಳನ್ನು ಒಳಗೊಂಡಿರುವ ಬಹುಪಯೋಗಿ ನದಿ ಕಣಿವೆ ಯೋಜನೆಯಾಗಿದೆ.
ಭಾಕ್ರಾ ನಂಗಲ್‌ನಿಂದ ನೀರು ಬಿಡುಗಡೆ ಮಾಡುವಂತೆ ಹರಿಯಾಣ ಸಲ್ಲಿಸಿದ ಮನವಿಯ ಮೇಲೆ ಪ್ರಸ್ತುತ ಗದ್ದಲ ಭುಗಿಲೆದ್ದಿದ್ದು, ಇದನ್ನು ಪಂಜಾಬ್ ವಿರೋಧಿಸಿದೆ. ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿಯು ನೀರಿನ ವಿತರಣೆಯ ಕುರಿತು ತೆಗೆದುಕೊಂಡ ನಿರ್ಧಾರಗಳನ್ನು ಪಂಜಾಬ್ ಸರ್ಕಾರ ಇನ್ನು ಮುಂದೆ ಸ್ವೀಕರಿಸುವುದಿಲ್ಲ ಎಂದು ನಿರ್ಣಯದಲ್ಲಿ ಹೇಳಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಪಂಜಾಬ್‌ನ ನೀರನ್ನು ಮಂಡಳಿಯು ವರ್ಷಗಳಿಂದ ಇತರ ರಾಜ್ಯಗಳಿಗೆ ತಿರುಗಿಸುತ್ತಿತ್ತು ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ವಿಧಾನಸಭೆಯಲ್ಲಿ ಹೇಳಿಕೊಂಡಿದ್ದಾರೆ. “ಈಗ ಬಿಜೆಪಿ ಸರ್ಕಾರವು ತನ್ನ ರಾಜಕೀಯ ಹಿತಾಸಕ್ತಿಗಳಿಗಾಗಿ ಈ ಮಂಡಳಿಯನ್ನು ಬಳಸಲು ಪ್ರಾರಂಭಿಸಿದೆ” ಎಂದು ಅವರು ಹೇಳಿದ್ದಾರೆ.
“ಪಂಜಾಬ್‌ನೊಂದಿಗೆ ಸಮಾಲೋಚಿಸದೆ, ಮಧ್ಯರಾತ್ರಿಯಲ್ಲಿ ಸಭೆಗಳನ್ನು ಕರೆಯಲಾಗುತ್ತಿದೆ ಮತ್ತು ಇತರ ರಾಜ್ಯಗಳ ಒತ್ತಡದ ಮೇರೆಗೆ ಪಂಜಾಬ್‌ನ ನ್ಯಾಯಯುತ ಪಾಲನ್ನು ಕಸಿದುಕೊಳ್ಳಲಾಗುತ್ತಿದೆ.” ಎಂದು ಅವರು ಹೇಳಿದ್ದಾರೆ.
ಈ ನಡೆಯನ್ನು “ಅಸಂವಿಧಾನಿಕ” ಮತ್ತು “ಕಾನೂನುಬಾಹಿರ” ಎಂದು ಕರೆದ ಮುಖ್ಯಮಂತ್ರಿ, ಪಂಜಾಬ್‌ನ ನೀರನ್ನು ಹರಿಯಾಣಕ್ಕೆ ಬಲವಂತವಾಗಿ ತಿರುಗಿಸಲು ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ ಸಭೆಗಳನ್ನು ಕರೆಯಲಾಗುತ್ತಿದೆ ಎಂದು ಹೇಳಿದ್ದಾರೆ. ಮಾರ್ಚ್ 31 ರ ವೇಳೆಗೆ ಹರಿಯಾಣ ತನ್ನ ವಾರ್ಷಿಕ ಹಂಚಿಕೆಯ ನೀರನ್ನು ಈಗಾಗಲೇ ಬಳಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಸಟ್ಲೆಜ್ ಮತ್ತು ಬಿಯಾಸ್ ನದಿಗಳ ನೀರು ಸಂಪೂರ್ಣವಾಗಿ ಪಂಜಾಬ್‌ಗೆ ಸೇರಿತ್ತು ಎಂದು ಸಿಎಂ ಹೇಳಿದ್ದು, “ಈಗ ನಾವು ಈ ನೀರನ್ನು ಸಂಪೂರ್ಣವಾಗಿ ನಮಗಾಗಿ ಬಳಸುತ್ತೇವೆ” ಎಂದು ಅವರು ಹೇಳಿದ್ದಾರೆ. ಅಣೆಕಟ್ಟು ಸುರಕ್ಷತಾ ಕಾಯ್ದೆಯನ್ನು ಪಂಜಾಬ್ ಮತ್ತು ಅದರ ಹಕ್ಕುಗಳ ಮೇಲಿನ “ಗಂಭೀರ ದಾಳಿ” ಎಂದು ಇದೇ ವೇಳೆ ಸಿಎಂ ಕರೆದಿದ್ದಾರೆ.
ಈ ಕಾಯ್ದೆಯು ಅಣೆಕಟ್ಟುಗಳ ಕಣ್ಗಾವಲು, ಪರಿಶೀಲನೆ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಒಂದು ಚೌಕಟ್ಟನ್ನು ಒದಗಿಸುತ್ತದೆ. “ಈ ಸದನವು 2021 ರ ಅಣೆಕಟ್ಟು ಸುರಕ್ಷತಾ ಕಾಯ್ದೆಯನ್ನು ಪಂಜಾಬ್‌ನ ಹಕ್ಕುಗಳ ಮೇಲಿನ ದಾಳಿ ಎಂದು ಪರಿಗಣಿಸುತ್ತದೆ” ಎಂದು ನಿರ್ಣಯವು ಹೇಳಿದೆ ಎಂದು ದಿ ಹಿಂದೂ ವರದಿ ಮಾಡಿದೆ.
“ಅಣೆಕಟ್ಟು ಸಂಪೂರ್ಣವಾಗಿ ರಾಜ್ಯದ ಗಡಿಯೊಳಗೆ ಇದ್ದರೂ ಸಹ, ರಾಜ್ಯಗಳ ನದಿಗಳು ಮತ್ತು ಅಣೆಕಟ್ಟುಗಳನ್ನು ನೇರವಾಗಿ ನಿಯಂತ್ರಿಸಲು ಕೇಂದ್ರ ಸರ್ಕಾರಕ್ಕೆ ಈ ಕಾನೂನು ಸಂಪೂರ್ಣ ಅಧಿಕಾರ ನೀಡುತ್ತದೆ. ಈ ಕಾಯ್ದೆಯು ದೇಶದ ಫೆಡರಲ್ ರಚನೆಗೆ ವಿರುದ್ಧವಾಗಿದ್ದು, ಪಂಜಾಬ್‌ನಂತಹ ರಾಜ್ಯಗಳ ನೀರಿನ ಮೇಲಿನ ಸಾರ್ವಭೌಮ ಹಕ್ಕನ್ನು ದುರ್ಬಲಗೊಳಿಸಿದೆ” ಎಂದು ನಿರ್ಣಯ ಹೇಳಿದೆ.
“ಆದ್ದರಿಂದ, ಈ ಸದನವು ಕೇಂದ್ರ ಸರ್ಕಾರದಿಂದ ಅಣೆಕಟ್ಟು ಸುರಕ್ಷತಾ ಕಾಯ್ದೆಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತದೆ. ಪಂಜಾಬ್ ಸರ್ಕಾರವು ಈ ಕಾಯ್ದೆಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ” ಎಂದು ನಿರ್ಣಯವು ಹೇಳಿದೆ.
ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪರ್ತಾಪ್ ಸಿಂಗ್ ಬಾಜ್ವಾ ಕೂಡ ಈ ನಿರ್ಣಯವನ್ನು ಬೆಂಬಲಿಸಿದ್ದಾರೆ. “ಒಂದು ಹನಿ ನೀರು ಕೂಡ ಬಿಡಲು ಇಲ್ಲ” ಎಂದು ಕಾಂಗ್ರೆಸ್ ನಾಯಕಿ ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ. ಹರಿಯಾಣಕ್ಕೆ ಒಂದು ಹನಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ತಮಿಳುನಾಡು| ಎರಡು ಸಮುದಾಯಗಳ ನಡುವೆ ಘರ್ಷಣೆ: ದಲಿತ ಕುಟುಂಬದ ಗುಡಿಸಲಿಗೆ ಬೆಂಕಿ
ತಮಿಳುನಾಡು| ಎರಡು ಸಮುದಾಯಗಳ ನಡುವೆ ಘರ್ಷಣೆ: ದಲಿತ ಕುಟುಂಬದ ಗುಡಿಸಲಿಗೆ ಬೆಂಕಿ

