ಪಂಜಾಬ್‌ನಲ್ಲಿ ನಡೆಯುತ್ತಿರುವ ಪಂಚಾಯತ್ ಚುನಾವಣೆಗಳಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ತನ್ನ ಆದೇಶದಲ್ಲಿ ನಿರಾಕರಿಸಿದ್ದು, ಮತದಾನದ ದಿನದಂದು ನ್ಯಾಯಾಲಯಗಳು ಚುನಾವಣೆಗೆ ತಡೆ ನೀಡಲು ಪ್ರಾರಂಭಿಸಿದರೆ ‘ಅವ್ಯವಸ್ಥೆ’ ಉಂಟಾಗಲಿದೆ ಎಂದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಮೇಲ್ಮನವಿಗಳ ಬ್ಯಾಚ್ ಅನ್ನು ವೀಕ್ಷಿಸಲು ನಿರಾಕರಿಸಿದ್ದಾರೆ. ಪಂಜಾಬ್
“ನಾವು ಈಗ ಅದಕ್ಕೆ ತಡೆಯೊಡ್ಡಲು ಹೇಗೆ ಸಾಧ್ಯ? ಈಗಾಗಲೆ ಚುನಾವಣೆಗಳು ಪ್ರಾರಂಭವಾಗಿರಬೇಕಿತ್ತು. ಒಂದು ವೇಳೆ ನಾವು ಈಗ ತಡೆ ನೀಡಿದರೆ ಸಂಪೂರ್ಣ ಅವ್ಯವಸ್ಥೆ ಉಂಟಾಗುತ್ತದೆ. ಚುನಾವಣೆಯನ್ನು ತಡೆಹಿಡಿಯುವುದು ಗಂಭೀರ ವಿಷಯ” ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪಂಚಾಯತ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಸಲ್ಲಿಕೆಯಾಗಿದ್ದ ಸುಮಾರು 800 ಅರ್ಜಿಗಳನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೋಮವಾರ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೂ ಒಳಗೊಂಡಿತ್ತು. “ಇದು ಅಸಾಮಾನ್ಯ ಪ್ರಜಾಪ್ರಭುತ್ವವಾಗಿದ್ದು, ನಾವು ಚುನಾವಣೆಗಳನ್ನು ಗೌರವಿಸುತ್ತೇವೆ. ಚುನಾವಣಾ ಅರ್ಜಿಯ ರೂಪದಲ್ಲಿ ಪರಿಹಾರಗಳಿವೆ” ಎಂದು ಸಿಜೆಐ ಹೇಳಿದ್ದಾರೆ.
“ನಾಳೆ ಯಾರಾದರೂ ಸಂಸತ್ತಿನ ಚುನಾವಣೆಯನ್ನು ಈ ರೀತಿ ತಡೆಯಲು ಬಯಸುತ್ತಾರೆ. ನಾವು ಈ ಅರ್ಜಿಗಳನ್ನು ಪಟ್ಟಿ ಮಾಡುತ್ತೇವೆ ಆದರೆ ಮಧ್ಯಂತರ ತಡೆ ನೀಡುವುದಿಲ್ಲ” ಎಂದು ಸಿಜೆಐ ಮಂಗಳವಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಚುನಾವಣೆಯ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾದ ಈ ಅರ್ಜಿಗಳು ಆರೋಪಿಸಿದೆ. ಈ ಹಿಂದೆ ಚುನಾವಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಹೈಕೋರ್ಟ್, ಪಂಚಾಯ್ತಿ ಚುನಾವಣೆಯ ವಿಡಿಯೋ ಚಿತ್ರೀಕರಣಕ್ಕೆ ಆದೇಶಿಸಿದೆ.
ಸುಪ್ರೀಂ ಕೋರ್ಟ್‌ನ ಪೀಠವು ಮತದಾನಕ್ಕೆ ತಡೆ ನೀಡದಿರು ಬಗ್ಗೆ ಒಲವು ವ್ಯಕ್ತಪಡಿಸಿದ್ದು, ನ್ಯಾಯಾಂಗ ಚುನಾವಣೆಗೆ ತಡೆ ನೀಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಹಾಗೆ ಮಾಡಿದರೆ ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗಲಿದೆ ಎಂದು ಹೇಳಿದೆ.
ಇದನ್ನೂಓದಿ: ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣದ ತನಿಖೆ ಅತ್ಯಂತ ಗಂಭೀರವಾಗಿ ನಡೆಯುತ್ತಿದೆ: ಸಿಬಿಐ
ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣದ ತನಿಖೆ ಅತ್ಯಂತ ಗಂಭೀರವಾಗಿ ನಡೆಯುತ್ತಿದೆ: ಸಿಬಿಐ


