ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳ ಕನ್ನಡ ಅನುವಾದ ಮಾಡಿದ್ದು ಗೂಗಲ್ ಅಥವಾ ಎಐ ಅಲ್ಲ. ಭಾಷಾಂತರ ಇಲಾಖೆಯ ಭಾಷಾಂತರಕಾರರು ಮಾಡಿದ್ದು ಎಂದು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಹೇಳಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕೆಪಿಎಸ್‌ಸಿ ಕಾರ್ಯದರ್ಶಿ ರಾಕೇಶ್ ಕುಮಾರ್ “ಪ್ರಶ್ನೆಗಳ ಭಾಷಾಂತರ ಕಾರ್ಯವು ಆಯೋಗದ ಕಚೇರಿಯಲ್ಲಿಯೇ ಭಾಷಾಂತರ ಇಲಾಖೆಯಿಂದ ನಿಯೋಜಿಸಲ್ಪಟ್ಟ ಭಾಷಾಂತರಕಾರದಿಂದ ನಡೆಸಲಾಗಿದೆಯೇ ಹೊರತು, ಗೂಗಲ್ ಭಾಷಾಂತರ ಹಾಗೂ ಕೃತಕ ಬುದ್ದಿಮತ್ತೆಗಳನ್ನು ಬಳಸಿಲ್ಲ. ಕೆಪಿಎಸ್‌ಸಿ ನಿಯಮಗಳಲ್ಲೂ ಅದಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
— Secretary KPSC (@secretarykpsc) August 29, 2024
ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳಲ್ಲಿ ಅಥವಾ ಪ್ರಶ್ನೆಗಳ ಭಾಷಾಂತರದಲ್ಲಿ ತೀರಾ ಗೊಂದಲವುಂಟಾದಲ್ಲಿ ಆಯೋಗದಿಂದ ಪ್ರಕಟಿಸಿರುವ ಕೀ-ಉತ್ತರಗಳಿಗೆ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಬಹುದು. ಈ ಎಲ್ಲಾ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ವಿಷಯ ತಜ್ಞರುಗಳ ಸಮಿತಿಯ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಆಕ್ಷೇಪಣೆಗೆ ಸೆ.4ರವರೆಗೆ ಅವಕಾಶ : ಪೂರ್ವಭಾವಿ ಪರೀಕ್ಷೆಯ ಕೀ-ಉತ್ತರಗಳನ್ನು ಕೆಪಿಎಸ್‌ಸಿ ಬಿಡುಗಡೆ ಮಾಡಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ಸೆ.4ರವರೆಗೆ ಅವಕಾಶವಿದೆ. ಆಕ್ಷೇಪಣೆಗಳನ್ನು ಅಂದು ಸಂಜೆ 5.30ರೊಳಗೆ ಸಲ್ಲಿಸಲು ಆಯೋಗ ಸೂಚಿಸಿದೆ. ಆಕ್ಷೇಪಣೆ ಸಲ್ಲಿಸಲು ಪ್ರತಿ ಪ್ರಶ್ನೆಗೆ ರೂ.50 ಶುಲ್ಕ ನಿಗದಿ ಮಾಡಿದೆ.
ಇದನ್ನೂ ಓದಿ : ಶಾಸಕ ಯತ್ನಾಳ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ನಿರ್ದೇಶಿಸಿದ ಕೋರ್ಟ್



Sullina mele sullu heli kate kattuta edira neevella manushyare.