ದೇಶದಲ್ಲಿ ಕಪ್ಪು ಫಂಗಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಮತ್ತೆ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಅವರ ಮೂರು ಪ್ರಶ್ನೆಗಳಿಗೆ ಕೇಂದ್ರ ಸರ್ಕಾರದಿಂದ ಉತ್ತರವನ್ನು ಕೋರಿದ್ದಾರೆ.
ಕಪ್ಪು ಫಂಗಸ್ ಬಗ್ಗೆ ಅವರು ಟ್ವಿಟರ್‌ನಲ್ಲಿ ಕೇಂದ್ರದೊಂದಿಗೆ ಪ್ರಶ್ನೆ ಕೇಳಿದ್ದು, ಸಾಂಕ್ರಮಿಕದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಸೋನಿಯಾ ಗಾಂಧಿಯ ಎಡಿಟೆಡ್ ಚಿತ್ರವನ್ನು ಹಂಚುತ್ತಿರುವ ಬಿಜೆಪಿ
“ಒಂದನೆಯದಾಗಿ ಸೋಂಕಿಗೆ ಬಳಸುವ ಆಂಫೊಟೆರಿಸಿನ್ ಬಿ ಔಷಧದ ಕೊರತೆಗೆ ಸರ್ಕಾರ ಏನು ಮಾಡುತ್ತಿದೆ. ಎರಡನೆಯದ್ದು ಈ ಔಷಧಿಯನ್ನು ರೋಗಿಗಳಿಗೆ ತಲುಪಿಸುವ ವಿಧಾನವೇನು? ಮೂರನೆಯದಾಗಿ, ಚಿಕಿತ್ಸೆ ನೀಡುವ ಬದಲು ಮೋದಿ ಸರ್ಕಾರವು ಜನತೆಯನ್ನು ಔಪಚಾರಿಕತೆಗೆ ಯಾಕೆ ಸಿಲುಕಿಸುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.
Black fungus महामारी के बारे में केंद्र सरकार स्पष्ट करे-
1. Amphotericin B दवाई की कमी के लिए क्या किया जा रहा है?
2. मरीज़ को ये दवा दिलाने की क्या प्रक्रिया है?
3. इलाज देने की बजाय मोदी सरकार जनता को औपचारिकताओं में क्यों फँसा रही है?
— Rahul Gandhi (@RahulGandhi) June 1, 2021
ಇಷ್ಟೇ ಅಲ್ಲದೆ ನಿರುದ್ಯೋಗ ಹೆಚ್ಚಳ ಮತ್ತು ಜಿಡಿಪಿ ಇಳಿಕೆಯ ಬಗ್ಗೆಯು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರುದ್ಯೋಗ ಹಚ್ಚಳದ ಚಾರ್ಟ್ ಅನ್ನು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಅವರು “ಪ್ರಧಾನ ಮಂತ್ರಿಯ ‘ಹಾಲ್ ಆಫ್ ಶೇಮ್’, ಕನಿಷ್ಠ ಜಿಡಿಪಿ ಮತ್ತು ಗರಿಷ್ಠ ನಿರುದ್ಯೋಗ” ಎಂದು ಅವರು ಹೇಳಿದ್ದಾರೆ.
PM’s hall of shame-
Minimum GDP
Maximum Unemployment. pic.twitter.com/9jQOCSaWgh— Rahul Gandhi (@RahulGandhi) June 1, 2021
ದೇಶಾದ್ಯಂತ ಕೊರೊನಾ ಸೋಂಕು ಪ್ರಚೋದಿತ ಕಪ್ಪು ಫಂಗಸ್ ಪ್ರಕರಣವು ಗಮನಾರ್ಹವಾಗಿ ಹೆಚ್ಚಳಗೊಂಡಿದೆ, ಫಂಗಸ್‌ನಿಂದ ಸಾವಿನ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾದೆ. ಕರ್ನಾಟಕದಲ್ಲಿ ಇದುವರೆಗೆ 1,250 ಪ್ರಕರಣಗಳು ಪತ್ತೆಯಾಗಿದ್ದು, 39 ಸಂಬಂಧಿತ ಸಾವುಗಳು ವರದಿಯಾಗಿವೆ. ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಸೋಂಕಿನಿಂದ 39 ಜನರು ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಶುಕ್ರವಾರ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ಒಟ್ಟು 147 ಕಪ್ಪು ಫಂಗಸ್ ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ: ದೀದಿ V/s ಮೋದಿ: ಬಿಜೆಪಿಯಿಂದ ಟಿಎಂಸಿಗೆ ಮತ್ತೆ ವಾಪಸಾಗಲು ಬಯಸುತ್ತಿರುವ ನಾಯಕರು


