Homeಮುಖಪುಟಕಪ್ಪು ಫಂಗಸ್‌‌ ಬಗ್ಗೆ ಕೇಂದ್ರಕ್ಕೆ 3 ಪ್ರಶ್ನೆಗಳನ್ನು ಕೇಳಿದ ರಾಹುಲ್ ಗಾಂಧಿ

ಕಪ್ಪು ಫಂಗಸ್‌‌ ಬಗ್ಗೆ ಕೇಂದ್ರಕ್ಕೆ 3 ಪ್ರಶ್ನೆಗಳನ್ನು ಕೇಳಿದ ರಾಹುಲ್ ಗಾಂಧಿ

- Advertisement -
- Advertisement -

ದೇಶದಲ್ಲಿ ಕಪ್ಪು ಫಂಗಸ್‌‌ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಮತ್ತೆ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಅವರ ಮೂರು ಪ್ರಶ್ನೆಗಳಿಗೆ ಕೇಂದ್ರ ಸರ್ಕಾರದಿಂದ ಉತ್ತರವನ್ನು ಕೋರಿದ್ದಾರೆ.

ಕಪ್ಪು ಫಂಗಸ್‌‌ ಬಗ್ಗೆ ಅವರು ಟ್ವಿಟರ್‌ನಲ್ಲಿ ಕೇಂದ್ರದೊಂದಿಗೆ ಪ್ರಶ್ನೆ ಕೇಳಿದ್ದು, ಸಾಂಕ್ರಮಿಕದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಸೋನಿಯಾ ಗಾಂಧಿಯ ಎಡಿಟೆಡ್‌‌ ಚಿತ್ರವನ್ನು ಹಂಚುತ್ತಿರುವ ಬಿಜೆಪಿ

“ಒಂದನೆಯದಾಗಿ ಸೋಂಕಿಗೆ ಬಳಸುವ ಆಂಫೊಟೆರಿಸಿನ್ ಬಿ ಔಷಧದ ಕೊರತೆಗೆ ಸರ್ಕಾರ ಏನು ಮಾಡುತ್ತಿದೆ. ಎರಡನೆಯದ್ದು ಈ ಔಷಧಿಯನ್ನು ರೋಗಿಗಳಿಗೆ ತಲುಪಿಸುವ ವಿಧಾನವೇನು? ಮೂರನೆಯದಾಗಿ, ಚಿಕಿತ್ಸೆ ನೀಡುವ ಬದಲು ಮೋದಿ ಸರ್ಕಾರವು ಜನತೆಯನ್ನು ಔಪಚಾರಿಕತೆಗೆ ಯಾಕೆ ಸಿಲುಕಿಸುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.

ಇಷ್ಟೇ ಅಲ್ಲದೆ ನಿರುದ್ಯೋಗ ಹೆಚ್ಚಳ ಮತ್ತು ಜಿಡಿಪಿ ಇಳಿಕೆಯ ಬಗ್ಗೆಯು ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರುದ್ಯೋಗ ಹಚ್ಚಳದ ಚಾರ್ಟ್ ಅನ್ನು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಅವರು “ಪ್ರಧಾನ ಮಂತ್ರಿಯ ‘ಹಾಲ್‌ ಆಫ್‌ ಶೇಮ್‌’, ಕನಿಷ್ಠ ಜಿಡಿಪಿ ಮತ್ತು ಗರಿಷ್ಠ ನಿರುದ್ಯೋಗ” ಎಂದು ಅವರು ಹೇಳಿದ್ದಾರೆ.

ದೇಶಾದ್ಯಂತ ಕೊರೊನಾ ಸೋಂಕು ಪ್ರಚೋದಿತ ಕಪ್ಪು ಫಂಗಸ್‌ ಪ್ರಕರಣವು ಗಮನಾರ್ಹವಾಗಿ ಹೆಚ್ಚಳಗೊಂಡಿದೆ, ಫಂಗಸ್‌ನಿಂದ ಸಾವಿನ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾದೆ. ಕರ್ನಾಟಕದಲ್ಲಿ ಇದುವರೆಗೆ 1,250 ಪ್ರಕರಣಗಳು ಪತ್ತೆಯಾಗಿದ್ದು, 39 ಸಂಬಂಧಿತ ಸಾವುಗಳು ವರದಿಯಾಗಿವೆ. ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಸೋಂಕಿನಿಂದ 39 ಜನರು ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಶುಕ್ರವಾರ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ಒಟ್ಟು 147 ಕಪ್ಪು ಫಂಗಸ್‌ ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: ದೀದಿ V/s ಮೋದಿ: ಬಿಜೆಪಿಯಿಂದ ಟಿಎಂಸಿಗೆ ಮತ್ತೆ ವಾಪಸಾಗಲು ಬಯಸುತ್ತಿರುವ ನಾಯಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫ್ರಾನ್ಸ್‌ನಲ್ಲಿ ಭುಗಿಲೆದ್ದ ಜನಾಕ್ರೋಶ: ಬೆಲೆ ಏರಿಕೆ ಹಾಗೂ ಸಾರ್ವಜನಿಕ ಸೇವೆಗಳ ಕಡಿತ ವಿರೋಧಿಸಿ ಬೃಹತ್ ಪ್ರತಿಭಟನೆ; ಹಿಂಸಾಚಾರದಲ್ಲಿ 1,800ಕ್ಕೂ ಅಧಿಕ ಮಂದಿ ವಶ!

ಜೀವನ ವೆಚ್ಚದ ಭಾರಿ ಏರಿಕೆ, ಕುಸಿದುಬೀಳುತ್ತಿರುವ ಶಾಲಾ-ಕಾಲೇಜುಗಳ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೇವೆಗಳ ಕಡಿತವನ್ನು ಖಂಡಿಸಿ ಫ್ರಾನ್ಸ್‌ನಾದ್ಯಂತ ಶನಿವಾರ ಲಕ್ಷಾಂತರ ಜನರು ರಸ್ತೆಗಿಳಿದು ನಡೆಸಿದ ಬೃಹತ್ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿದ್ಯಾರ್ಥಿ...

ಪ.ಬಂಗಾಳ : ದುರ್ಗಾ ಪೂಜೆಗಳಲ್ಲಿ ಎಡಪಕ್ಷಗಳ ಪುಸ್ತಕ ಮಳಿಗೆಗಳ ಮೇಲೆ ದಾಳಿ

ಶನಿವಾರ (ಅಕ್ಟೋಬರ್ 17) ಸಂಜೆ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್‌ನ (ಕೆಎಂಸಿ) ತಂಡವೊಂದು ನಾಲ್ಕು ದಿನಗಳ ಹಿಂದೆ ಜಾದವ್‌ಪುರದಲ್ಲಿ ಸ್ಥಾಪಿಸಲಾಗಿದ್ದ ಪುಸ್ತಕ ಮಳಿಗೆಯನ್ನು ಧ್ವಂಸಗೊಳಿಸಲು ಆಗಮಿಸಿದಾಗ, ಕೇಂದ್ರ ಸಶಸ್ತ್ರ ಪಡೆಗಳು ಮತ್ತು ಪೊಲೀಸರು ಆ...

ಎಸ್‌ಐಆರ್ ಗೊಂದಲ: ರದ್ದಾಗಿರುವ ಮತದಾರರನ್ನು ಮರಳಿ ಸೇರಿಸಲು ‘ಫಾರ್ಮ್ 6’ ತಿದ್ದುಪಡಿಗೆ ಮಹಾರಾಷ್ಟ್ರ ಪ್ರಸ್ತಾಪ; ಜೈಲು ಶಿಕ್ಷೆಯ ಭೀತಿಯಲ್ಲಿ ಜನರು!

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ ಹೆಸರು ರದ್ದಾಗಿರುವ ಹಳೆಯ ಮತದಾರರನ್ನು ಮರಳಿ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಯಲ್ಲಿ ಭಾರಿ ಆಡಳಿತಾತ್ಮಕ ಮತ್ತು ಕಾನೂನು ತೊಡಕು ಎದುರಾಗಿದೆ. ಎಸ್‌ಐಆರ್ ಪರಿಷ್ಕರಣೆಯಲ್ಲಿ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ : ಬೆಂಗಳೂರಿನ ಟೌನ್‌ಹಾಲ್ ಬಳಿ ಪ್ರತಿಭಟಿಸಿದವರ ಬಂಧನ, ಬಿಡುಗಡೆ

ಶನಿವಾರ (ಅಕ್ಟೋಬರ್ 17) ಬೆಂಗಳೂರಿನ ಟೌನ್ ಹಾಲ್ ಬಳಿ ಮತದಾರರ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ಪ್ರಕ್ರಿಯೆಯ ವಿರುದ್ಧ ಪ್ರತಿಭಟನೆ ನಡೆಸಿದ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ...

ಆಂಧ್ರದಲ್ಲಿ ಮುಂದುವರಿದ ಟಿಡಿಪಿ-ವೈಎಸ್‌ಆರ್‌ಸಿಪಿ ಸಂಘರ್ಷ : ಪರಿಸ್ಥಿತಿ ಹತೋಟಿಗೆ ತರಲು ಗಾಳಿಯಲ್ಲಿ ಗುಂಡು ಹಾರಿಸಿದ ಕಡಪಾ ಪೊಲೀಸರು

ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಶನಿವಾರ (ಅಕ್ಟೋಬರ್ 17) ಆಂಧ್ರ ಪ್ರದೇಶದಲ್ಲಿ ರಾಜಕೀಯ ಸಂಘರ್ಷಗಳು ಮುಂದುವರಿದಿವೆ. ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್‌ಸಿಪಿ) ಭದ್ರಕೋಟೆಯಾಗಿರುವ ವೈಎಸ್ಆರ್ ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿ...

ಮಧ್ಯಪ್ರದೇಶ: ದೇವಸ್ಥಾನದ ಬಳಿ ಭಕ್ತರ ಮೇಲೆ ಹರಿದ ಲಾರಿ; 14 ಸಾವು, ಹಲವರಿಗೆ ಗಂಭೀರ ಗಾಯ

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಶೀತಲಾ ಮಾತಾ ದೇವಸ್ಥಾನದ ಬಳಿ ನವರಾತ್ರಿ ಉತ್ಸವದ ಸಂಭ್ರಮದಲ್ಲಿದ್ದ ಭಕ್ತಾದಿಗಳ ಮೇಲೆ ಅತಿವೇಗವಾಗಿ ಬಂದ ಲಾರಿಯೊಂದು ನುಗ್ಗಿದ ಪರಿಣಾಮ ಕನಿಷ್ಠ 14 ಜನರು ದಾರುಣವಾಗಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ...

ಕೋಲ್ಕತ್ತಾ ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ಕಾಲ್ತುಳಿತ : ಮೃತರ ಸಂಖ್ಯೆ 19ಕ್ಕೆ ಏರಿಕೆ; ಏಳು ಮಂದಿಯ ಬಂಧನ

ಕೋಲ್ಕತ್ತಾದ ಸಮುದಾಯ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಶನಿವಾರ (ಅ.17) ಸಂಜೆ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಸುಮಾರು 25 ಮಂದಿ ಗಾಯಗೊಂಡಿದ್ದು, ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ...

ಯುಎಪಿಎ ಕಾಯಿದೆಯಡಿ ಆರೋಪ ಹೊರಿಸಿದ ಮಾತ್ರಕ್ಕೆ ವಿದೇಶ ಪ್ರಯಾಣದ ಹಕ್ಕು ಕಸಿಯಲಾಗದು: ನತಾಶಾ ನರ್ವಾಲ್‌ಗೆ ದೆಹಲಿ ಹೈಕೋರ್ಟ್ ಅಭಯ

ಒಬ್ಬ ವ್ಯಕ್ತಿಯ ವಿರುದ್ಧ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ’ (UAPA) ಯಂತಹ ಕಠಿಣ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬ ಒಂದೇ ಕಾರಣಕ್ಕೆ, ಅವರ ವಿದೇಶ ಪ್ರಯಾಣದ ಮೂಲಭೂತ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲು...

ದೆಹಲಿ | ತಿರಂಗಾ ರ‍್ಯಾಲಿ ವೇಳೆ ಬಂಧಿತರಾಗಿದ್ದ ಅಭಿಜಿತ್ ದೀಪ್ಕೆಗೆ ‍‍ಜಾಮೀನು : ಪೊಲೀಸ್ ಕಸ್ಟಡಿಯಿಂದ ಬಿಡುಗಡೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಶನಿವಾರ (ಅಕ್ಟೋಬರ್ 17) ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ದೆಹಲಿಯ ಮಂದಿರ್ ಮಾರ್ಗ್ ಠಾಣೆ ಪೊಲೀಸರ ಕಸ್ಟಡಿಯಿಂದ ಬಿಡುಗಡೆಯಾಗಿದ್ದಾರೆ ಎಂದು...

ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ಇಂಟರ್‌ನೆಟ್ ಬಳಕೆ ಮೂಲಭೂತ ಹಕ್ಕು : ಸುಪ್ರೀಂ ಕೋರ್ಟ್

ಮಹತ್ವದ ತೀರ್ಪಿನಲ್ಲಿ, ಸಂವಿಧಾನದ 21 ಮತ್ತು 19(1)(ಎ) ವಿಧಿಗಳ ಅಡಿಯಲ್ಲಿ ಇಂಟರ್‌ನೆಟ್ ಪಡೆಯುವ ಮತ್ತು ಬಳಸುವ ಹಕ್ಕನ್ನು ಸುಪ್ರೀಂ ಕೋರ್ಟ್ 'ಮೂಲಭೂತ ಹಕ್ಕು' ಎಂದು ಘೋಷಿಸಿದೆ. ಮಕ್ಕಳು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಈ...