ಕೇಂದ್ರ ಸರ್ಕಾರ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯ ವಿರುದ್ಧ ವಾಗ್ದಾಳಿ ಮಾಡಿದ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, “ರಾಹುಲ್ ಗಾಂಧಿಗೆ ಬೆಲ್ಲವನ್ನು ಹೇಗೆ ತಯಾರಿಸುತ್ತಾರೆ ಎಂಬುದೂ ಗೊತ್ತಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಶಿವರಾಜ್ ಸಿಂಗ್ ಮಾತನಾಡಿರುವ ವೀಡಿಯೋವೊಂದನ್ನು ಎಎನ್‌ಐ ಟ್ವೀಟಿ ಮಾಡಿದ್ದು, ಅದರಲ್ಲಿ “ರಾಹುಲ್ ಗಾಂಧಿಗೆ ಕೃಷಿಯ ಬಗ್ಗೆ ಏನಾದರೂ ತಿಳಿದಿದೆಯೇ? ಬೆಲ್ಲವನ್ನು ಕಬ್ಬಿನಿಂದ ತಯಾರಿಸಲಾಗಿದೆಯೇ ಅಥವಾ ಯಂತ್ರದಿಂದ ಹೊರಬರುತ್ತದೆಯೆ ಎಂಬುದೂ ಅವರಿಗೆ ತಿಳಿದಿಲ್ಲ. ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವ ಜನರು ರೈತರ ಆಂದೋಲನಕ್ಕೆ ಪ್ರವೇಶಿಸಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟವನ್ನು ಬೆಂಬಲಿಸಿ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಸಿಖ್ ಪಾದ್ರಿ!
Does Rahul Gandhi know anything about farming?…He doesn't know whether jaggery is made from sugarcane or comes out of machine…People working against nation's interests have entered farmers' agitation: MP CM Shivraj Singh Chouhan at a gathering in Jabalpur, Madhya Pradesh pic.twitter.com/mmuP7xO9aA
— ANI (@ANI) December 16, 2020
ಇದನ್ನೂ ಓದಿ: ಕೇರಳದ ಜನರು ಮೋದಿಯ ಕಲ್ಯಾಣ ಕ್ರಮಗಳನ್ನು ಒಪ್ಪಿಕೊಂಡಿದ್ದಾರೆ: ರಾಜ್ಯ ಬಿಜೆಪಿ ಮುಖಂಡ
ಕಳೆದ ಮೂರು ವಾರಗಳಿಂದ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಅನೇಕ ವಿರೋಧ ಪಕ್ಷಗಳು ಬೆಂಬಲ ಸೂಚಿಸಿದ್ದವು. ಕಳೆದ ತಿಂಗಳು ಪಂಜಾಬಿನ ರೈತರು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಟ್ರ್ಯಾಕ್ಟರ್ ರ್ಯಾಲಿಯನ್ನು ಕೈಗೊಂಡಿದ್ದರು.
ಮೊದಲಿನಿಂದಲೂ ರೈತರ ಪ್ರತಿಭಟನೆಗೆ ವಿರೋಧ ಪಕ್ಷಗಳು ಪ್ರಚೋದನೆ ನೀಡುತ್ತಿವೆ ಎಂದು ಆಡಳಿತಾರೂಢ ಬಿಜೆಪಿ ನಾಯಕರು ಆರೋಪಿಸುತ್ತಲೇ ಇದ್ದಾರೆ.
ಇದನ್ನೂ ಓದಿ: ಸಮಯ ವ್ಯರ್ಥ ಎಂದು ರಕ್ಷಣಾ ಸಂಸದೀಯ ಸಮಿತಿ ಸಭೆಯಿಂದ ಹೊರನಡೆದ ರಾಹುಲ್


