Homeಮುಖಪುಟಉಮ್ಮನ್ ಚಾಂಡಿ ಸಾರ್ವಜನಿಕ ಸೇವಕ ಪ್ರಶಸ್ತಿಗೆ ರಾಹುಲ್ ಗಾಂಧಿ ಆಯ್ಕೆ

ಉಮ್ಮನ್ ಚಾಂಡಿ ಸಾರ್ವಜನಿಕ ಸೇವಕ ಪ್ರಶಸ್ತಿಗೆ ರಾಹುಲ್ ಗಾಂಧಿ ಆಯ್ಕೆ

- Advertisement -
- Advertisement -

ಕಾಂಗ್ರೆಸ್ ಪಕ್ಷದ ಹಿರಿಯ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ದಿವಂಗತ ಉಮ್ಮನ್ ಚಾಂಡಿ ಅವರ ಸ್ಮರಣಾರ್ಥ ಸ್ಥಾಪಿಸಲಾದ ಮೊದಲ ‘ಉಮ್ಮನ್ ಚಾಂಡಿ ಸಾರ್ವಜನಿಕ ಸೇವಕ ಪ್ರಶಸ್ತಿ’ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ.

ಉಮ್ಮನ್ ಚಾಂಡಿ ಫೌಂಡೇಶನ್ ಇಂದು (ಜುಲೈ 21) ಚಾಂಡಿ ಮೊದಲ ಪುಣ್ಯತಿಥಿಯ ಮೂರು ದಿನಗಳ ನಂತರ ಪ್ರಶಸ್ತಿಯನ್ನು ಘೋಷಿಸಿದೆ. ಈ ಗೌರವವು 1 ಲಕ್ಷ ರೂಪಾಯಿಯ ನಗದು ಮತ್ತು ಹೆಸರಾಂತ ಕಲಾವಿದ, ಚಲನಚಿತ್ರ ನಿರ್ಮಾಪಕ ನೇಮೊಮ್ ಪುಷ್ಪರಾಜ್ ವಿನ್ಯಾಸಗೊಳಿಸಿದ ಶಿಲ್ಪವನ್ನು ಒಳಗೊಂಡಿದೆ.

ಭಾರತ್ ಜೋಡೋ ಯಾತ್ರೆ ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಕಂಡುಕೊಂಡ ರಾಷ್ಟ್ರೀಯ ನಾಯಕ ಗಾಂಧಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಂಸದ ಶಶಿ ತರೂರ್ ಅವರ ಅಧ್ಯಕ್ಷತೆಯ ಪರಿಣಿತ ತೀರ್ಪುಗಾರರ ಸಮಿತಿಯು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.

ಉಮ್ಮನ್ ಚಾಂಡಿ ಅವರ ಜೀವನ ದಣಿವರಿಯದ ಪದಕ್ಕೆ ಸಮಾನಾರ್ಥಕ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ (ಜುಲೈ 19) ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದಿವಂಗತ ಉಮ್ಮನ್ ಚಾಂಡಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಂಡರು. ಕಾಂಗ್ರೆಸ್ ನಾಯಕರ ಜೀವನವನ್ನು ದಣಿವರಿಯದ ಸಮಾನಾರ್ಥಕ ಎಂದು ಬಣ್ಣಿಸಿದರು.

“ರಾಜಕೀಯವಾಗಿ ಉಮ್ಮನ್‌ ಚಾಂಡಿ ಎದುರುಬದುರು ಇದ್ದಾಗಲೂ ಸೃಜನಾತ್ಮಕ ಪ್ರಸ್ತಾವನೆಗಳನ್ನು ಬೆಂಬಲಿಸುವ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ. ವಿದ್ಯಾರ್ಥಿ-ಯುವಜನ ಚಳವಳಿಗಳ ಮೂಲಕ ರಾಜಕೀಯ ಪ್ರವೇಶಿಸಿದ ಅವರು ಕೇರಳ, ಅದರಲ್ಲೂ ಪುತ್ತುಪ್ಪಳ್ಳಿಯೊಂದಿಗೆ ಆತ್ಮೀಯ ಸಂಬಂಧ ಇಟ್ಟುಕೊಂಡಿದ್ದರು. ಅದು ಅವರನ್ನು ವಿಭಿನ್ನವಾಗಿಸಿದೆ” ಎಂದು ವಿಜಯನ್ ಹೇಳಿದರು.

“ಸಾರ್ವಜನಿಕ ಸೇವೆಯು ಅವರ ಜೀವನದ ಅವಿಭಾಜ್ಯ ಅಂಗವಾಗಿದೆ. ಹೆಸರಾಂತ ಕವಿ ಕಡಮನಿಟ್ಟ ಅವರು ಉಮ್ಮನ್ ಚಾಂಡಿಯನ್ನು ಗಮನದಲ್ಲಿಟ್ಟುಕೊಂಡು ರಾಬರ್ಟ್ ಫ್ರಾಸ್ಟ್ ಅವರ ‘ಮೈಲ್ಸ್ ಟು ಗೋ ಬಿಫೋರ್ ಐ ಸ್ಲೀಪ್’ ಕವಿತೆಯನ್ನು ಮಲಯಾಳಂಗೆ ಅನುವಾದಿಸಿದಂತೆ ತೋರುತ್ತದೆ. ಅವರು ‘ದಣಿವಿಲ್ಲದ’ ಪದಕ್ಕೆ ಸಮಾನಾರ್ಥಕ” ಎಂದು ವಿಜಯನ್ ಹೇಳಿದರು.

ಇದನ್ನೂ ಓದಿ; ಸರ್ವಪಕ್ಷಗಳ ಸಭೆ: ಲೋಕಸಭೆ ಉಪಸಭಾಪತಿ ಸ್ಥಾನಕ್ಕೆ ಬೇಡಿಕೆ ಇಟ್ಟ ಕಾಂಗ್ರೆಸ್, ನೀಟ್ ವಿವಾದ ಪ್ರಸ್ತಾಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...