ಆರ್ಥಿಕ ಕುಸಿತವನ್ನು ತಡೆಯುವುದಕ್ಕಾಗಿ 1.76 ಲಕ್ಷ ಕೋಟಿ ರೂ ಹೆಚ್ಚುವರಿ ಮೀಸಲು ಹಣವನ್ನು ಸರ್ಕಾರಕ್ಕೆ ವರ್ಗಾಯಿಸಲು ಆರ್‌ಬಿಐ ಅನುಮತಿ ನೀಡಿದೆ. ಇದಕ್ಕೆ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದಾರೆ.
“ತಮ್ಮ ಸ್ವಯಂಕೃತ ಆರ್ಥಿಕ ವಿಪತ್ತನ್ನು ಹೇಗೆ ಪರಿಹರಿಸುವುದು ಎಂಬುದರ ಬಗ್ಗೆ ಪ್ರಧಾನಮಂತ್ರಿ ಮತ್ತು ಆರ್ಥಿಕ ಸಚಿವರಿಗೆ ಯಾವುದೇ ಸುಳಿವು ಸಿಗುತ್ತಿಲ್ಲ.”
“ಆರ್‌ಬಿಐನಿಂದ ಹಣ ಕದಿಯುವುದರಿಂದ ಯಾವುದೇ ಪ್ರಯೋಜನವಿಲ್ಲ – ಇದು ಔಷಧಾಲಯದಿಂದ ಬ್ಯಾಂಡ್-ಏಡ್ ಅನ್ನು ಕದಿಯುವುದು ಮತ್ತು ಗುಂಡೇಟಿನ ಗಾಯದ ಮೇಲೆ ಅಂಟಿಸುವುದರಂತೆ ಆಗಿದೆ” ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
PM & FM are clueless about how to solve their self created economic disaster.
Stealing from RBI won’t work – it’s like stealing a Band-Aid from the dispensary & sticking it on a gunshot wound. #RBILooted https://t.co/P7vEzWvTY3
— Rahul Gandhi (@RahulGandhi) August 27, 2019
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಆಗಸ್ಟ್ 26 ರ ಸೋಮವಾರ 1.76 ಲಕ್ಷ ಕೋಟಿ ರೂ.ಗಳನ್ನು ಲಾಭಾಂಶ ಮತ್ತು ಹೆಚ್ಚುವರಿ ಮೀಸಲು ಹಣವನ್ನು ಸರ್ಕಾರಕ್ಕೆ ವರ್ಗಾಯಿಸಲು ನಿರ್ಧರಿಸಿದೆ.
ಹೆಚ್ಚುವರಿ ಮೀಸಲುಗಳನ್ನು ಸರ್ಕಾರಕ್ಕೆ ವರ್ಗಾಯಿಸುವ ಕುರಿತು ಆರ್‌ಬಿಐ ಮಂಡಳಿಯು ತನ್ನ ಮಾಜಿ ಗವರ್ನರ್ ಬಿಮಲ್ ಜಲನ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸನ್ನು ಅಂಗೀಕರಿಸಿದೆ.
2018-19ನೇ ಸಾಲಿನ 1,23,414 ಕೋಟಿ ರೂ.ಗಳ ಹೆಚ್ಚುವರಿ ಮತ್ತು ಪರಿಷ್ಕೃತ ಆರ್ಥಿಕ ಬಂಡವಾಳ ಚೌಕಟ್ಟಿನ ಪ್ರಕಾರ ಗುರುತಿಸಲಾದ 52,637 ಕೋಟಿ ರೂ. (ಇಸಿಎಫ್) ಇರಲಿದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.


