Homeಚಳವಳಿತಮಿಳುನಾಡಿನಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸ: ಎಲ್ಲೆಡೆ ತೀವ್ರ ಖಂಡನೆ

ತಮಿಳುನಾಡಿನಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸ: ಎಲ್ಲೆಡೆ ತೀವ್ರ ಖಂಡನೆ

ಸಹಸ್ರಮಾನದ ಅತ್ಯಂತ ಬೌದ್ಧಿಕ ವ್ಯಕ್ತಿ ಅಂಬೇಡ್ಕರ್ ಆಗಿದ್ದಾರೆ. ಕೆಲ ಮೂರ್ಖ ಜನರು ಅವರ ಪ್ರತಿಮೆಯನ್ನು ಕೆಡವಿದರು ಆದರೆ ಎಂದಿಗೂ ಅವರ ಉನ್ನತತೆ ಮತ್ತು ಸಿದ್ಧಾಂತವನ್ನು ಮುಟ್ಟಲಾರರು

- Advertisement -
- Advertisement -

ತಮಿಳುನಾಡಿನ ವೇದಾರಣ್ಯಪುರಂ ಎಂಬಲ್ಲಿ ಹಾಡುಹಗಲೇ ಮತೀಯವಾದಿ, ಜಾತಿವಾದಿ ದುಷ್ಕರ್ಮಿಗಳ ಗುಂಪೊಂದು ಅಂಬೇಡ್ಕರ್ ಪ್ರತಿಮೆಯನ್ನು ಭಗ್ನಗೊಳಿಸಿರುವ, ಆ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದೆ. ಅಲ್ಲದೇ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಕೃತ್ಯಕ್ಕೆ ರಾಷ್ಟ್ರಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ.

ಪ್ರತಿ ಬಾರಿಯೂ ಈ ರೀತಿಯ ಘಟನೆ ಸಂಭವಿಸಿದಾಗ, ನಾವು ಡಾ. ಅಂಬೇಡ್ಕರ್ ಅವರ ಮುನ್ನೋಟವನ್ನೇ ಕೊಲ್ಲುತ್ತಿದ್ದೇವೆ. ಇದು ಕೇವಲ ಅವರ ಪ್ರತಿಮೆಯ ಮೇಲಿನ ಆಕ್ರಮಣವಲ್ಲ, ಜಾತಿ, ವರ್ಗ ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲಾ ಪುರುಷರು ಮತ್ತು ಮಹಿಳೆಯರು ಸಮಾನರು ಎಂಬ ಅವರ ತತ್ವಗಳ ಮೇಲಿನ ಆಕ್ರಮಣವಾಗಿದೆ ಎಂದು ದಲಿತ ಹೋರಾಟಗಾರ, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬೇಸರ ವ್ಯಕ್ತಪಡಿಸಿದ್ದಾರೆ.

ಎಂಎನ್ಎಂ ಪಕ್ಷದ ಮುಖ್ಯಸ್ಥ ಮತ್ತು ಚಿತ್ರನಟ ಕಮಲ್ ಹಾಸನ್ ರವರು “ದೇಶವನ್ನು ವಿಭಜಿಸುವ ಮತ್ತು ಯಾಜಮಾನ್ಯ ಸ್ಥಾಪಿಸುವ ಶಕ್ತಿಗಳು  ಈ ಘಟನೆಗೆ ಕಾರಣವಾಗಿದ್ದಾರೆ” ಎಂದು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ದೆಹಲಿಯ ನಂತರ, ಈಗ ತಮಿಳುನಾಡಿನಲ್ಲಿ ದಲಿತ ಭಾವನೆಗಳಿಗೆ ಧಕ್ಕೆಯಾಗಿದೆ. ರಾಷ್ಟ್ರ ವಿರೋಧಿ ಗೂಂಡಾಗಳು ಅಂಬೇಡ್ಕರ್ ಪ್ರತಿಮೆಯನ್ನು ಕೆಡವಿದ್ದಾರೆ. ಇದು ನಾವು ಬೆಳೆದ ಭಾರತವಲ್ಲ. ದಯವಿಟ್ಟು ನಮ್ಮ ಸಹೋದರ ಮತ್ತು ಸಹೋದರಿಯರ ಮೇಲಿನ ದ್ವೇಷದ ಅಪರಾಧವನ್ನು ನಿಲ್ಲಿಸಿ ಎಂದು ಎನ್.ಎಸ್.ಯು.ಐ ನ ರಾಷ್ಟ್ರೀಯ ಕಾರ್ಯದರ್ಶಿ ವರ್ಧನ್ ಯಾದವ್ ಮನವಿ ಮಾಡಿದ್ದಾರೆ.

ಒಬ್ಬ ಅಂಬೇಡ್ಕರ್ ಅವರನ್ನು ಅವಮಾನಿಸಿದರೆ, ಸಾವಿರ ಅಂಬೇಡ್ಕರ್ ರವರು ಹುಟ್ಟಿಬರಲಿದ್ದಾರೆ ಎಂದು ವಂಚಿತ್ ಬಹುಜನ್ ಅಘಾಡಿಯ ಟ್ವಿಟ್ಟರ್ ಅಕೌಂಟ್ ನಿಂದ ಟ್ವೀಟ್ ಮಾಡಲಾಗಿದೆ. ಇದೇ ಘೋಷಣೆಯನ್ನು ಸಾವಿರಾರು ಜನರು ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.

ಸಹಸ್ರಮಾನದ ಅತ್ಯಂತ ಬೌದ್ಧಿಕ ವ್ಯಕ್ತಿ ಅಂಬೇಡ್ಕರ್ ಆಗಿದ್ದಾರೆ. ಕೆಲ ಮೂರ್ಖ ಜನರು ಅವರ ಪ್ರತಿಮೆಯನ್ನು ಕೆಡವಿದರು ಆದರೆ ಎಂದಿಗೂ ಅವರ ಉನ್ನತತೆ ಮತ್ತು ಸಿದ್ಧಾಂತವನ್ನು ಮುಟ್ಟಲಾರರು ಎಂದು ಸರ್ವೇಶ್ ಬಾಬು ಎಂಬುವವರು ಟ್ವೀಟ್ ಮಾಡಿದ್ದಾರೆ.

ಘಟನೆಯ ಸ್ಥಳದಲ್ಲಿ ನಿನ್ನೆಯೇ ಅಂಬೇಡ್ಕರ್ ಪ್ರತಿಮೆಯ ಮರುನಿರ್ಮಾಣ ಮಾಡುವ ಕಾರ್ಯ ಮುಗಿದಿದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

7 COMMENTS

  1. ಅಂಬೇಡ್ಕರ್ ಅವರ ಆದರ್ಶಗಳನ್ನು ತತ್ವಗಳನ್ನು. ಅವರು ವಿದ್ಯಾ. ಪದವಿ ಕಲಿತಷ್ಠು. ಆ ಮುರ್ಖ ರಿಗೆ. ಓದಲಿಕಾಗಲ್ಲ. ಅವರ ಜ್ಞಾನ ಮತ್ತು ವ್ಯಕ್ತಿತ್ವ ಹಾಗೆ ಆ ಮುರ್ಖ ರಿಗೆ ಬೆಳೆಯಲ್ಲಿ ಕ್ಕಾಗಲ್ಲ.

    • ಅಂಬೇಡ್ಕರ್ ಈ ದೇಶದ ನಿಜವಾದ ದೇವರು.
      ದೇವರ ಮೂರ್ತಿಯನ್ನು ಕೆಡಿಸುವವರು ಸುಟ್ಟುಹೋಗುತಾರೆ. ಜೈಭೀಮ್

  2. ನಾವು ಬಹಜನರು ಸುಮ್ಮನೆ ಇದ್ದೇವೆ ಎಂದರೆ ಅದಕ್ಕೆ ಒಂದು ಅರ್ಥ ಇದೆ ಯಾಕೆಂದರೆ ನಮ್ಮ ಒಳಗೆ ಬುದ್ಧ,ಬಸವ,ಅಂಬೇಡ್ಕರ್ ರವರ ಶಾಂತಿ ನೆಲೆಸಿದೆ ಹಾಗಾಗಿ ಅದನ್ನು ಬಿಟ್ಟು ನಿಂತರೆ ನಮ್ಮ ದೇಶದಲ್ಲಿ ರಕ್ತದೋಕುಳಿ ಆಗುತ್ತೆ. ನಮೋ ಬುದ್ಧಾಯಾ.

  3. ಅಜ್ಞಾನದ ಅವಿವೇಕಿಗಳು
    ಬೀದಿಯಲ್ಲಿ ಹುಟ್ಟಿದ ಬಿಕಾರಿ ಮಕ್ಳೇ…
    ನೀವು ಅಂಬೇಡ್ಕರ್ ರವರ ಮೂರ್ತಿಗೆ ಅವಮಾನ ಮಾಡಿರಬಹುದು, ಆದ್ರೆ ಅವರ ಸಮತೆಯ ರಾಜ್ಯದ ನಿರ್ಮಾಣದ ಕಲ್ಪನೆ ಚಿಂತನೆಗಳು ವಿಚಾರಕ್ಕಲ್ಲ.ನೀವು ಏನುಮಾಡಿದರೂ,ಅದು ನಿಮ್ಮ ಅಂತ್ಯದ ವನವಾಸ
    ಈ ದೇಶದಲ್ಲಿ ಸಾವಿರಾರೂ ಅಂಬೇಡ್ಕರ್ ರವರು ಇದ್ದಾರೆ ಅವ್ರು ನಿಮ್ಮನ್ನು ಸುಮ್ನೆ ಬಿಡಲ್ಲ

  4. ಅಂಬೇಡ್ಕರ್ ಅವರ ಆದರ್ಶಗಳನ್ನು ತತ್ವಗಳನ್ನು. ಅವರು ವಿದ್ಯಾ. ಪದವಿ ಕಲಿತಷ್ಠು. ಆ ಮುರ್ಖ ರಿಗೆ. ಓದಲಿಕಾಗಲ್ಲ. ಅವರ ಜ್ಞಾನ ಮತ್ತು ವ್ಯಕ್ತಿತ್ವ ಹಾಗೆ ಆ ಮುರ್ಖ ರಿಗೆ ಬೆಳೆಯಲ್ಲಿ ಕ್ಕಾಗಲ್ಲ. ನಾವು ಬಹಜನರು ಸುಮ್ಮನೆ ಇದ್ದೇವೆ ಎಂದರೆ ಅದಕ್ಕೆ ಒಂದು ಅರ್ಥ ಇದೆ ಯಾಕೆಂದರೆ ನಮ್ಮ ಒಳಗೆ ಬುದ್ಧ,ಬಸವ,ಅಂಬೇಡ್ಕರ್ ರವರ ಶಾಂತಿ ನೆಲೆಸಿದೆ ಹಾಗಾಗಿ ಅದನ್ನು ಬಿಟ್ಟು ನಿಂತರೆ ನಮ್ಮ ದೇಶದಲ್ಲಿ ರಕ್ತದೋಕುಳಿ ಆಗುತ್ತೆ.
    ಜೈಭೀಮ್

  5. ನಮ್ಮ ಬಹುಜನರಲ್ಲಿ ಕಡಿಮೆ ಇದ್ದ ಜಾಗೃತಿ, ನಮ್ಮತನವನ್ನು ನೀವೇ ಎಚ್ಚರಿಸುತ್ತಿದ್ದೀರಿ… ಇದು ಒಳ್ಳೆಯ ಲಕ್ಷಣವೆ.. ಆದರೆ ಸಂವಿಧಾನ ವಿರೋಧಿಗಳಿಗೆ ಮತ್ತು ಅಸಮಾನತೆಯ ಪ್ರತಿಪಾದಕರಿಗೆ ಪಾಠ ಕಲಿಸುವ ಹಾಗೆ ನೀವೆ ಮಾಡ್ತಿದ್ದೀರ…
    *ಶಾಂತಿ ಪಾಲನೆಯಲ್ಲಿ ಬುದ್ಧನ ತಾಳ್ಮೆ ಇದೆ ಆದರೆ ಅಶೋಕನ ಶೌರ್ಯ ನಮ್ಮಲ್ಲಿ ಇನ್ನೂ ಹಾಗೇ ಇದೆ…* ಅಂದು ಅಶೋಕ್ ಬಿಸಾಡಿದ ಕತ್ತಿ ತೆಗೆದುಕೊಂಡರೆ ಆಗೋದು ಎರಡೇ…
    ಎರಡನೆ ಕಳಿಂಗ ಯುದ್ಧ ಅಥವಾ ಎರಡನೇ ಕೊರೆಗಾಂವ್ ಯುದ್ಧ… ಆಯ್ಕೆ ನಿಮ್ಮದೆ…

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...