ಗುಜರಾತ್‌ನಲ್ಲಿ ಹತ್ತು ಅನಾಮಧೇಯ ಪಕ್ಷಗಳು’ ಅಪರೂಪಕ್ಕೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರೂ, ಐದು ವರ್ಷಗಳಲ್ಲಿ 4,300 ಕೋಟಿ ರೂಪಾಯಿ ದೇಣಿಗೆ ಪಡೆದಿವೆ ಎಂಬ ವರದಿಗೆ ಪ್ರತಿಕ್ರಿಯಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ (ಆ.27) ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
2019-20ರಿಂದ 2023-24ರವರೆಗೆ ಹತ್ತು ರಾಜಕೀಯ ಪಕ್ಷಗಳು ಹಣ ಪಡೆದಿವೆ ಎಂದು ದೈನಿಕ್ ಭಾಸ್ಕರ್ ಮಂಗಳವಾರ (ಆ.26) ವರದಿ ಮಾಡಿತ್ತು.
ಈ ಅವಧಿಯಲ್ಲಿ 2019 ಮತ್ತು 2024ರಲ್ಲಿ ಎರಡು ಲೋಕಸಭಾ ಚುನಾವಣೆಗಳು ಮತ್ತು 2022ರಲ್ಲಿ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ನಡೆದಿವೆ. ಈ ಚುನಾವಣೆಗಳಲ್ಲಿ ಹತ್ತು ಪಕ್ಷಗಳು ಕೇವಲ 43 ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿದ್ದವು, ಅವರು ಒಟ್ಟು 54,069 ಮತಗಳನ್ನು ಮಾತ್ರ ಗಳಿಸಿದ್ದರು ಎಂದು ಪತ್ರಿಕೆಯ ವರದಿ ಹೇಳಿದೆ.
ಇದಲ್ಲದೆ, ಈ ಪಕ್ಷಗಳು ಕೇವಲ 39.02 ಲಕ್ಷ ರೂ.ಗಳನ್ನು ಚುನಾವಣೆಗಳಿಗೆ ವೆಚ್ಚ ಮಾಡಿವೆ. ಆದರೆ, ಆಡಿಟ್ ವರದಿಯಲ್ಲಿ 3,500 ಕೋಟಿ ರೂ.ಗಳ ವೆಚ್ಚವನ್ನು ತೋರಿಸಿವೆ ಎಂದು ದೈನಿಕ್ ಭಾಸ್ಕರ್ ವಿವರಿಸಿದೆ.
ಲೋಕಶಾಹಿ ಸತ್ತಾ ಪಕ್ಷ, ಭಾರತೀಯ ರಾಷ್ಟ್ರೀಯ ಜನತಾ ದಳ, ಸ್ವತಂತ್ರ ಅಭಿವ್ಯಕ್ತಿ ಪಕ್ಷ, ನ್ಯೂ ಇಂಡಿಯಾ ಯುನೈಟೆಡ್ ಪಾರ್ಟಿ, ಸತ್ಯವಾದಿ ರಕ್ಷಕ ಪಕ್ಷ, ಭಾರತೀಯ ಜನಪರಿಷದ್, ಸೌರಾಷ್ಟ್ರ ಜನತಾ ಪಕ್ಷ, ಜನ್ ಮನ್ ಪಾರ್ಟಿ, ಮಾನವಾಧಿಕಾರ ರಾಷ್ಟ್ರೀಯ ಪಕ್ಷ ಮತ್ತು ಗರೀಬ್ ಕಲ್ಯಾಣ್ ಪಕ್ಷ ಹತ್ತು ಅನಾಮಧೇಯ ಪಕ್ಷಗಳು ಎಂದು ವರದಿ ತಿಳಿಸಿದೆ.
ಈ ಪಕ್ಷಗಳು ಸಾವಿರಾರು ಕೋಟಿ ರೂಪಾಯಿಗಳನ್ನು ಹೇಗೆ ಸಂಪಾದಿಸಿದವು ಮತ್ತು ಆ ಹಣ ಎಲ್ಲಿಗೆ ಹೋಯಿತು ಎಂದು ರಾಹುಲ್ ಗಾಂಧಿಯವರು ಬುಧವಾರ ಪ್ರಶ್ನಿಸಿದ್ದಾರೆ.
“ಚುನಾವಣಾ ಆಯೋಗವು ಈ ಬಗ್ಗೆ ತನಿಖೆ ನಡೆಸುತ್ತದೆಯೇ?..ಇಲ್ಲಾ ಇಲ್ಲಿಯೂ ಅಫಿಡವಿಟ್ ಕೇಳುತ್ತದೆಯೇ? ಅಥವಾ ಈ ಡೇಟಾವನ್ನು ಮರೆಮಾಚಲು ಸಾಧ್ಯವಾಗುವಂತೆ ಕಾನೂನುಗಳನ್ನು ಬದಲಾಯಿಸುತ್ತದೆಯೇ?” ಎಂದು ರಾಹುಲ್ ಗಾಂಧಿ ಎಕ್ಸ್ ಪೋಸ್ಟ್‌ನಲ್ಲಿ ಕೇಳಿದ್ದಾರೆ.
गुजरात में कुछ ऐसी अनाम पार्टियां हैं जिनका नाम किसी ने नहीं सुना – लेकिन 4300 करोड़ का चंदा मिला!
इन पार्टियों ने बहुत ही कम मौकों पर चुनाव लड़ा है, या उनपर खर्च किया है।
ये हजारों करोड़ आए कहां से? चला कौन रहा है इन्हें? और पैसा गया कहां?
क्या चुनाव आयोग जांच करेगा – या फिर… pic.twitter.com/CuP9elwPaY
— Rahul Gandhi (@RahulGandhi) August 27, 2025
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬ ರಾಹುಲ್ ಗಾಂಧಿಯವರ ಆರೋಪಕ್ಕೆ ಚುನಾವಣಾ ಆಯೋಗ ಅಫಿಡವಿಟ್ ಕೇಳಿದೆ. ಅದನ್ನು ಉಲ್ಲೇಖಿಸಿ ಆಯೋಗಕ್ಕೆ ರಾಹುಲ್ ಗಾಂಧಿ ಕುಟುಕಿದ್ದಾರೆ.
ನಾವು ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಆರು ತಿಂಗಳು ಪರಿಶೀಲಿಸಿದ್ದೇವೆ. ಈ ವೇಳೆ 1,00,250 ಹೆಸರುಗಳಲ್ಲಿ ವ್ಯತ್ಯಾಸಗಳು ಕಂಡುಬಂದಿವೆ ಎಂದು ರಾಹುಲ್ ಗಾಂಧಿ ಹೇಳಿಕೊಂಡಿದ್ದರು. ಚುನಾವಣಾ ಆಯೋಗವು ಬಿಜೆಪಿ ಜೊತೆ ಕೈ ಜೋಡಿಸಿದೆ ಎಂಬುವುದಕ್ಕೆ ಇದು ಸಾಕ್ಷಿ ಎಂದು ಆರೋಪಿಸಿದ್ದರು.
ರಾಹುಲ್ ಗಾಂಧಿಯವರ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು, ರಾಹುಲ್ ಗಾಂಧಿಯ ತನ್ನ ಆರೋಪಕ್ಕೆ ಅಫಿಡವಿಟ್ ಸಲ್ಲಿಸಬೇಕು, ಇಲ್ಲದಿದ್ದರೆ ದೇಶದ ಕ್ಷಮೆಯಾಚಿಸಬೇಕು ಎಂದಿದ್ದರು.
ಅನುಕೂಲಕರ ಆದೇಶ ಪಡೆಯಲು ನ್ಯಾಯಾಧೀಶರನ್ನು ಸಂಪರ್ಕಿಸಿದ ಆರೋಪ: ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್


