ಸ್ನೇಹಿತೆಯ ವಿವಾಹಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇಪಾಳಕ್ಕೆ ಭೇಟಿ ನೀಡಿದ್ದನ್ನೂ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ವಿವಾದವನ್ನಾಗಿಸಿದ್ದು, ಕಾಂಗ್ರೆಸ್ ಖಡಕ್ ಪ್ರತಿಕ್ರಿಯೆ ನೀಡಿದೆ.
ಮಂಗಳವಾರ ಬಿಜೆಪಿ ಮುಖಂಡರು ಹಾಗೂ ಬೆಂಬಲಿಗರು ಟ್ವೀಟ್‌ಗಳ ಸುರಿಮಳೆ ಸುರಿಸಿದ್ದು, ರಾಹುಲ್ ಗಾಂಧಿ ಪಬ್‌ನಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.
“ಸ್ನೇಹಿತೆಯ ಮದುವೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಆಪ್ತ ಹಾಗೂ ನೆರೆಯ ರಾಷ್ಟ್ರಕ್ಕೆ ಭೇಟಿ ನೀಡುವುದು ಅಪರಾಧವಲ್ಲ” ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. “ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿಯ ವಿವಾಹಕ್ಕೆ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಠಾತ್ ಭೇಟಿ ನೀಡಿದ್ದಕ್ಕಿಂತ ಇದು ತುಂಬಾ ದೊಡ್ಡ ವಿಷಯವೇನಲ್ಲ” ಎಂದು ಕಾಂಗ್ರೆಸ್ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ರಾಹುಲ್ ಗಾಂಧಿ ಅವರು ನವಾಜ್ ಷರೀಫ್ ಅವರೊಂದಿಗೆ ಕೇಕ್ ಕತ್ತರಿಸಲು ಪ್ರಧಾನಿ ಮೋದಿಯಂತೆ ಆಹ್ವಾನಿತ ಅತಿಥಿಯಾಗಿ ಪಾಕಿಸ್ತಾನಕ್ಕೆ ಹೋಗಿಲ್ಲ. ಪಠಾಣ್‌ಕೋಟ್‌ನಲ್ಲಿ ಏನಾಗುತ್ತದೆ ಎಂದು ನಮಗೆ ತಿಳಿದಿದೆ” ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
“ಸ್ನೇಹಿತೆಯ ವಿವಾಹದಲ್ಲಿ ಪಾಲ್ಗೊಳ್ಳಲು ನೆರೆಯ ಆಪ್ತ ದೇಶವಾದ ನೇಪಾಳಕ್ಕೆ ರಾಹುಲ್ ಗಾಂಧಿ ಹೋಗಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಇದು ನಮ್ಮ ಸಂಸ್ಕೃತಿಯ ವಿಷಯ. ಇದು ಅಪರಾಧವಲ್ಲ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಮದುವೆಯಲ್ಲಿ ಪಾಲ್ಗೊಳ್ಳುವುದು ಅಪರಾಧ ಎಂದು ಪ್ರಧಾನಿ ಮತ್ತು ಬಿಜೆಪಿ ಶೀಘ್ರದಲ್ಲೇ ನಿರ್ಧರಿಸಬಹುದು” ಎಂದು ಕುಟುಕಿದ್ದಾರೆ.
ಬಿಜೆಪಿ ಮುಖಂಡ ಅಮಿತ್ ಮಾಳವಿಯಾ ಮಾಡಿರುವ ಟ್ವೀಟ್‌ಗೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
Rahul Gandhi was at a nightclub when Mumbai was under seize. He is at a nightclub at a time when his party is exploding. He is consistent.
Interestingly, soon after the Congress refused to outsource their presidency, hit jobs have begun on their Prime Ministerial candidate… pic.twitter.com/dW9t07YkzC
— Amit Malviya (@amitmalviya) May 3, 2022
ನೇಪಾಳದ ಕಠ್ಮಂಡುವಿಗೆ ಸೋಮವಾರ ರಾಹುಲ್ ಭೇಟಿ ನೀಡಿರುವುದಾಗಿ ‘ದಿ ಕಠ್ಮಂಡು ಪೋಸ್ಟ್’ ಸುದ್ದಿ ಜಾಲತಾಣ ವರದಿ ಮಾಡಿದೆ.
“ರಾಹುಲ್ ಅವರು ಸೋಮವಾರ ಸಂಜೆ 4:40ರ ವೇಳೆಗೆ ವಿಸ್ತಾರಾ ಏರ್‌ಲೈನ್ಸ್ ವಿಮಾನದಲ್ಲಿ ಕಠ್ಮಂಡುವಿಗೆ ಬಂದಿಳಿದರು. ಇವರೊಂದಿಗೆ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಇತರ ಮೂವರು ಇದ್ದರು” ಎಂದು ಭದ್ರತಾ ಮೂಲಗಳು ಖಚಿತಪಡಿಸಿರುವುದಾಗಿ ವರದಿ ಹೇಳಿದೆ.
ರಾಹುಲ್ ಗಾಂಧಿ ಮತ್ತು ಅವರ ಸ್ನೇಹಿತರು ನೇಪಾಳದ ನಕ್ಸಲ್‌ನ ಕಠ್ಮಂಡು ಮ್ಯಾರಿಯಟ್ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಅವರು ತಮ್ಮ ನೇಪಾಳಿ ಸ್ನೇಹಿತೆ, ಸಿಎನ್‌ಎನ್ ಮಾಧ್ಯಮದ ಮಾಜಿ ಪತ್ರಕರ್ತೆ ಸುಮ್ನಿಮಾ ಉದಾಸ್ ಅವರ ವಿವಾಹದಲ್ಲಿ ಪಾಲ್ಗೊಳ್ಳಲು ಕಠ್ಮಂಡುವಿಗೆ ತೆರಳಿದ್ದಾರೆ.
ಮ್ಯಾನ್ಮಾರ್‌ಗೆ ನೇಪಾಳಿ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಸುಮ್ನಿಮಾ ಅವರ ತಂದೆ ಭೀಮ್ ಉದಾಸ್, “ನನ್ನ ಮಗಳ ಮದುವೆಗೆ ಹಾಜರಾಗಲು ನಾವು ರಾಹುಲ್ ಅವರಿಗೆ ಆಹ್ವಾನವನ್ನು ನೀಡಿದ್ದೇವೆ” ಎಂದು ತಿಳಿಸಿದ್ದಾರೆ.
ಸಿಎನ್‌ಎನ್ ವರದಿಗಾರ್ತಿಯಾಗಿದ್ದ ಸುಮ್ನಿಮಾ ಅವರು ನಿಮಾ ಮಾರ್ಟಿನ್ ಶೆರ್ಪಾ ಅವರನ್ನು ವಿವಾಹವಾಗಲಿದ್ದಾರೆ. ಸುಮ್ನಿಮಾ ಅವರೀಗ ‘ದಿ ಲುಂಬಿನಿ ಮ್ಯೂಸಿಯಂ’ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.
ಇದನ್ನೂ ಓದಿರಿ: ರಾಜಸ್ಥಾನ: ಧಾರ್ಮಿಕ ಧ್ವಜಗಳ ಹೆಸರಲ್ಲಿ ಘರ್ಷಣೆ; ಇಂಟರ್‌ನೆಟ್ ಸ್ಥಗಿತ
ಮಂಗಳವಾರದಂದು ವಿವಾಹ ಕಾರ್ಯಕ್ರಮವನ್ನು ಆಯೋಜಿಸಿದ್ದು, ಬೌದ್ದದಲ್ಲಿರುವ ಹಯಾತ್ ರೀಜೆನ್ಸಿ ಹೋಟೆಲ್‌ನಲ್ಲಿ ಮೇ 5 ರಂದು ಆರತಕ್ಷತೆ ನಡೆಯಲಿದೆ ಎಂದು ವಧುವಿನ ತಂದೆ ಭೀಮ್ ಅವರು ಕಠ್ಮಂಡು ಪೋಸ್ಟ್‌ಗೆ ತಿಳಿಸಿದ್ದಾರೆ.
ಕೆಲವು ಭಾರತೀಯ ವಿವಿಐಪಿಗಳು ಮದುವೆಯಲ್ಲಿ ಪಾಲ್ಗೊಳ್ಳಲು ಕಠ್ಮಂಡುವಿಗೆ ಆಗಮಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.




ಆ ಮಾಳವಿಯಾನಿಗೆ ಮಾಡಲು ಕೆಲಸವಿಲ್ಲಾ… ಇದನ್ನ ಮಾಡಿದ್ದಾನೆ… ಇಲ್ಲಿ ಅಶ್ವತ್ತನಾರಾಯಣ ಎಷ್ಟು ನುಂಗ್ಯಾನ ಅನ್ನೋದರ ಬಗ್ಗೆ ಮಾಳವೀಯಾ ಮುಕ್ಳ್ಯಾಗ ಧಮ್ ಇದ್ದ್ರ ಮಾತನಾಡಲಿ….