ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ಮೂಲಕ ಜನರ ಮತದಾನದ ಹಕ್ಕಿನ ಮೇಲೆ ನಡೆದ ದಾಳಿಯನ್ನು ಎತ್ತಿ ತೋರಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಯಾತ್ರೆ ಆರಂಭಿಸಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಶನಿವಾರ ತಿಳಿಸಿದ್ದಾರೆ.
ಪಾಟ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೆಪ್ಟೆಂಬರ್ 1 ರಂದು ಪಾಟ್ನಾದಲ್ಲಿ ನಡೆಯುವ ರ್ಯಾಲಿಯಲ್ಲಿ ‘ಮತ ಅಧಿಕಾರ ಯಾತ್ರೆ’ ಮುಕ್ತಾಯಗೊಳ್ಳುವವರೆಗೆ ಹದಿನೈದು ದಿನಗಳ ಕಾಲ ರಾಜ್ಯದಲ್ಲಿರುತ್ತಾರೆ ಎಂದು ಹೇಳಿದರು.
“ನಾಳೆ, ರಾಹುಲ್ ಗಾಂಧಿಯವರು ಸಸಾರಂನಿಂದ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯವಿರುವ ಎಲ್ಲ ಅನುಮತಿಯನ್ನು ಪಡೆಯಲಾಗಿದೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಯಾತ್ರೆಯು ಇಂಡಿಯಾ ಬಣದ ಪರವಾಗಿ ಚುನವನಾ ವೇಗವನ್ನು ಸೃಷ್ಟಿಸುತ್ತದೆ” ಎಂದು ರಾಜ್ಯಸಭಾ ಸಂಸದರು ಹೇಳಿದರು.
ಆಗಸ್ಟ್ 20, 25 ಮತ್ತು 31 ರಂದು ಮೂರು ವಿರಾಮ ದಿನಗಳು ಸೇರಿದಂತೆ ರಾಜ್ಯದ 25 ಜಿಲ್ಲೆಗಳನ್ನು ಒಳಗೊಂಡ ಯಾತ್ರೆಯನ್ನು ಮುನ್ನಡೆಸಲು ರಾಹುಲ್ ಗಾಂಧಿ ಸುಮಾರು 15 ದಿನಗಳ ಕಾಲ ಬಿಹಾರದಲ್ಲಿ ಉಳಿಯುವ ಸಾಧ್ಯತೆಯಿದೆ ಎಂದು ಪ್ರಶ್ನೆಗೆ ಉತ್ತರಿಸಿದ ಅವರು ಹೇಳಿದರು.
“ಸಸಾರಾಮ್‌ನಲ್ಲಿ, ರಾಹುಲ್ ಗಾಂಧಿ ಅವರೊಂದಿಗೆ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಮೂರು ಎಡ ಪಕ್ಷಗಳು ಸೇರಿದಂತೆ ನಮ್ಮ ಇತರ ಮೈತ್ರಿಕೂಟದ ಪಾಲುದಾರರು ಸೇರುವ ಸಾಧ್ಯತೆಯಿದೆ. ಸೆಪ್ಟೆಂಬರ್ 1 ರಂದು ಪಾಟ್ನಾದಲ್ಲಿ ನಡೆಯುವ ಅಂತಿಮ ರ್ಯಾಲಿಗೆ, ಸಾಧ್ಯವಾದಷ್ಟು ಸಮಾನ ಮನಸ್ಕ ಪಕ್ಷಗಳ ನಾಯಕರನ್ನು ಕರೆತರಲು ನಾವು ಪ್ರಯತ್ನಿಸುತ್ತೇವೆ” ಎಂದು ಸಿಂಗ್ ಹೇಳಿದರು.
ಬಿಹಾರ| ಮದ್ಯ ಕಳ್ಳಸಾಗಣೆದಾರರ ದಾಳಿಗೆ ಗೃಹರಕ್ಷಕ ದಳದ ಸಿಬ್ಬಂದಿ ಸಾವು, ಪೊಲೀಸ್ ಕಾನ್‌ಸ್ಟೆಬಲ್‌ಗೆ ಗಾಯ


