Homeಕರ್ನಾಟಕವರುಣನ ನಡುವೆಯೇ ರಾಹುಲ್ ಭಾಷಣ; ‘ಮೆಚ್ಚುಗೆಯ ಮಳೆ’ ಸುರಿಸಿದ ಜನತೆ

ವರುಣನ ನಡುವೆಯೇ ರಾಹುಲ್ ಭಾಷಣ; ‘ಮೆಚ್ಚುಗೆಯ ಮಳೆ’ ಸುರಿಸಿದ ಜನತೆ

- Advertisement -
- Advertisement -

ಭಾರತ ಐಕ್ಯತೆ ಯಾತ್ರೆಯ ಭಾಗವಾಗಿ ರಾಹುಲ್ ಗಾಂಧಿಯವರು ಸುರಿವ ಮಳೆಯ ನಡುವೆಯೇ ಮೈಸೂರಿನಲ್ಲಿ ಭಾಷಣ ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ರಾಹುಲ್‌ ಗಾಂಧಿಯವರ ಬದ್ಧತೆ ಇದು ಎಂದು ಹೊಗಳುತ್ತಿದ್ದಾರೆ.

ರಾಜ್ಯದಲ್ಲಿ ಮೂರನೇ ದಿನದ ಭಾರತ್‌ ಜೋಡೋ ಯಾತ್ರೆ ಮೈಸೂರು ಬಂಡಿಪಾಳ್ಯ ಸರ್ಕಲ್ ತಲುಪುತ್ತಿದ್ದಂತೆ ರಭಸವಾಗಿ ಮಳೆ ಸುರಿಯತೊಡಗಿತು. ಮಳೆ ಲೆಕ್ಕಿಸದೇ ರಾಹುಲ್‌ ಗಾಂಧಿ ಅವರು ಸಾರ್ವಜನಿಕ ಸಮಾವೇಶದಲ್ಲಿ ನೆರಿದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ, ಭಾನುವಾರದ ಯಾತ್ರೆಗೆ ವಿರಾಮ ನೀಡಿದರು.

ಆಗಮಿಸಿದ್ದ ಸಾವಿರಾರು ಜನ ಮಳೆಯಲ್ಲೇ ತೋಯಿಸಿಕೊಂಡು ರಾಹುಲ್‌ ಭಾಷಣಕ್ಕೆ ಕಿವಿಗೊಟ್ಟರು. ಕಾಂಗ್ರೆಸ್‌ ನಾಯಕರು ಕೂಡ ರಾಹುಲ್‌ ಜೊತೆಯಲ್ಲೇ ಮಳೆಯಲ್ಲಿ ಭಾಷಣ ಕೇಳಿದರು. ಸದ್ಯ ರಾಹುಲ್‌ ಗಾಂಧಿ ಅವರ ಮಳೆಯ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಮಳೆ ನಡುವೆಯೇ ಮಾತು ಆರಂಭಿಸಿದ ರಾಹುಲ್‌, “ರಾಷ್ಟ್ರದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಜನರ ನಡುವೆ ದ್ವೇಷವನ್ನು‌ ಹೆಚ್ಚಿಸುತ್ತಿದೆ. ದೇಶದಲ್ಲಿ ಪ್ರೀತಿ, ಸಹನೆ ಮೂಡಿಸಲು ಭಾರತ್‌ ಜೋಡೋ ಯಾತ್ರೆ ಕೈಗೊಂಡಿದ್ದೇವೆ” ಎಂದು ತಿಳಿಸಿದರು.

“ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಕುರಿತು ಪ್ರಧಾನಿ ಮೋದಿ ಅವರಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ. ಅನೇಕ ಶಾಲಾ ಸಂಘಟನೆಗಳು 40 ಪರ್ಸೆಂಟ್‌ ಕಮಿಷನ್‌ ಕುರಿತು ಸರ್ಕಾರದ ಬಗ್ಗೆ ಆರೋಪ ಮಾಡಿವೆ. ಮೋದಿಯವರು ಮಾತ್ರ ಈ ಬಗ್ಗೆ ತುಟಿ ಬಿಚ್ಚಿಲ್ಲ” ಎಂದು ಟೀಕಿಸಿದರು.

ಪ್ರತಿ ದಿನ ಯುವಕರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಬೆಲೆ ಏರಿಕೆ ಸಮಸ್ಯೆ ಬಡಜನರನ್ನು ಕಾಡುತ್ತಿದೆ. ದೇಶದ ಸಮಸ್ಯೆಗಳಿಗೆ ಕಿವಿಯಾಗಲು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ಯಾತ್ರೆ ನಡೆಯಲಿದೆ. ಬಿಜೆಪಿಯವರು ಎಷ್ಟೇ ಕುತಂತ್ರ ಮಾಡಿದರೂ ಯಾವುದೇ ಕಾರಣಕ್ಕೂ ಯಾತ್ರೆ ಮಧ್ಯದಲ್ಲಿ ನಿಲ್ಲುವುದಿಲ್ಲ” ಎಂದರು.

ಮೆಚ್ಚುಗೆಯ ಮಳೆ ಸುರಿಸಿದ ಜನತೆ

“ಜನ ನಾಯಕನಿಗಿರಬೇಕಾದ ಬದ್ದತೆ ಇದು. ಇದೇ ನಿಮ್ಮನ್ನು ಮತ್ತಷ್ಟು ಹತ್ತಿರಕ್ಕೆ ಸೆಳೆಯುತ್ತದೆ” ಎಂದು ಪದ್ಮಾ ರೇಖಾ ಎನ್ನುವವರು ಪೋಸ್ಟ್ ಮಾಡಿದ್ದಾರೆ.

“ರಾಜಕೀಯ ಏನಾಗುತ್ತೊ ಏನಾಗಲ್ವೊ ಗೊತ್ತಿಲ್ಲ. I’m sure, ಈ ರಾಹುಲ್ ಗಾಂಧಿ ಐಕ್ಯತಾ ಯಾತ್ರೆ ಮುಗಿಸುವುದರೊಳಗೆ ಕಿಂದರಿಜೋಗಿಯಂತೆ ದೇಶದುದ್ದಗಲಕ್ಕೂ ಕೋಟ್ಯಾಂತರ ಅಭಿಮಾನಿಗಳನ್ನು, ನಿಜವಾದ ದೇಶಪ್ರೇಮಿಗಳನ್ನು ಜೊತೆಯಲ್ಲಿ ಸೇರಿಸಿಕೊಳ್ಳುತ್ತಾರೆ! ಮನುಷ್ಯನಿಗೆ ಏನಾದರೂ ಸಾಧಿಸಲು ಬೇಕಿರುವುದು true commitment. ಅದು ಇವರಿಗಿದೆ. ಸ್ಪಷ್ಟತೆಯಿದೆ. ಬರೆದಿಟ್ಟುಕೊಳ್ಳಿ, ದೇಶವನ್ನು ಕಟ್ಟಿಯೇ ಕಟ್ಟುತ್ತಾರೆ” ಎಂದು ಲೇಖಕಿ ಪಲ್ಲವಿ ಇಡೂರು ಪೋಸ್ಟ್‌ ಮಾಡಿದ್ದಾರೆ.

“ಮಳೆ, ಚಳಿ, ಬಿಸಿಲು ಗಾಳಿ… ಯಾವುದಕ್ಕೂ ನಿಲ್ಲದು ಈ ಚೈತ್ರಯಾತ್ರೆ. ಮೈಸೂರಿನಲ್ಲಿ ಮಳೆಯಲ್ಲೂ ರಾಹುಲ್ ಗಾಂಧಿ ಅವರ ಭಾಷಣ” ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೊಗಳಿದ್ದಾರೆ.

“ಕಾಲ ಬದಲಾಗಲಿದೆ, ಬರವಳಿದು ಪ್ರೀತಿಯ ಮಳೆ ಸುರಿಯಲಿದೆ. ನಳನಳಿಸಲಿದೆ ಭಾರತ. ಸೃಷ್ಟಿಯಾಗಲಿದೆ ಇತಿಹಾಸ” ಎಂದು ಬರಹಗಾರ ರಾ.ಚಿಂತನ್ ಅಭಿಪ್ರಾಯಪಟ್ಟಿದ್ದಾರೆ.

“ಮೂರನೇ ದಿನದ ಭಾರತ ಐಕ್ಯತಾ ಯಾತ್ರೆ ಅಭೂತಪೂರ್ವ ಜನಬೆಂಬಲದೊಂದಿಗೆ ಮಳೆ ಗಾಳಿ ಚಳಿ ಅಂಜದೆ ಮುರಿದ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವನ್ನು ರಾಹುಲ್ ಗಾಂಧಿಯವರು ಮುನ್ನಡೆಸುತ್ತಿದ್ದಾರೆ” ಎಂದು ಅಭಿಲಾಷ್ ರೆಡ್ಡಿ ಬರೆದುಕೊಂಡಿದ್ದಾರೆ.

“ಇಚ್ಚಾಶಕ್ತಿ ಇರುವ ನಾಯಕ ಯಾವ ಅಡ್ಡಿಗೂ ಅಂಜಿ ಓಡುವುದಿಲ್ಲ. ಭಾರತ್‌ ಜೋಡೋ ಯಾತ್ರೆ ವೇದಿಕೆ ಕಾರ್ಯಕ್ರಮದ ನಡುವೆ ಧಾರಾಕಾರ ಮಳೆ, ಜನರಿರುವ ಮಳೆ ನನಗೂ ಇರಲಿ ಎಂಬ ಧೀಮಂತಿಕೆಯ ಗುಣ ರಾಹುಲ್‌ಗಾಂಧಿ ಅವರದ್ದು. ಮಳೆಗೆ ಅಂಜದೆ ಕುರ್ಚಿಗಳನ್ನೇ ಛತ್ರಿಗಳನ್ನಾಗಿಸಿ ಭಾಷಣ ಆಲಿಸಿದ ಜನರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೆ ಇಲ್ಲ” ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.

“ಜಾತಿ ಧರ್ಮಗಳಿಂದ ಬೇರ್ಪಡಿಸಿರುವ ಕೋಮುವಾದಿಗಳಿಂದ ರಕ್ಷಿಸಲು ಮಳೆ ಬಿಸಿಲು ಗಾಳಿ ಎನ್ನದೆ ದೇಶಕ್ಕಾಗಿ ಹೋರಾಟ ಮಾಡುತ್ತಿರುವ ರಾಹುಲ್ ಗಾಂಧಿಯವರ ಹೋರಾಟಕ್ಕೆ ಜಯವಾಗಲಿ” ಎಂದು ನಾರಾಯಣಸ್ವಾಮಿ ಎಂ. ಎಂಬವರು ಟ್ವೀಟ್ ಮಾಡಿದ್ದಾರೆ.

“ಜೀವ ಭಯ ಇದೆ ಅಂತ ಕಾರ್ಯಕ್ರಮ ರದ್ದು ಮಾಡಿ ಓಡಿ ಹೋದ ವ್ಯಕ್ತಿಗೂ ಜೀವದ ಭಯವನ್ನೇ ತೊರೆದು ಬಿಸಿಲು ಮಳೆ ಎನ್ನದೆ ಜನರೆಡೆಗೆ ದೇಶದ ಐಕ್ಯತೆಗೆ ಯಾತ್ರಿಸುತ್ತಿರುವ ಈ ವ್ಯಕ್ತಿಗೂ ಅಜಗಜಾಂತರ” ಎಂದು ಸುನಿಲ್ ಕುಬೇರ ಎಂಬವರು ಟ್ವೀಟ್ ಮಾಡಿದ್ದಾರೆ.

ಹೀಗೆ ಹಲವಾರು ಜನರು ಮೆಚ್ಚುಗೆ ಸೂಚಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...