Homeಮುಖಪುಟರೈಲ್ ರೋಕೋ ಚಳವಳಿ: ನೂರಾರು ರೈತರ ವಿರುದ್ದ FIR ದಾಖಲಿಸಿದ ಹರಿಯಾಣ ಸರ್ಕಾರ

ರೈಲ್ ರೋಕೋ ಚಳವಳಿ: ನೂರಾರು ರೈತರ ವಿರುದ್ದ FIR ದಾಖಲಿಸಿದ ಹರಿಯಾಣ ಸರ್ಕಾರ

- Advertisement -
- Advertisement -

ಸೋಮವಾರ ನಡೆದ ಆರು ಗಂಟೆಗಳ ‘ರೈಲ್ ರೋಕೋ’ ಚಳವಳಿಯ ಭಾಗವಾಗಿ ರೈಲ್ವೆ ಹಳಿಗಳ ಮೇಲೆ ಕುಳಿತಿದ್ದ ಹರಿಯಾಣದ ಹಲವಾರು ರೈತರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರತಿಭಟನಾಕಾರರ ವಿರುದ್ಧ ರೈಲ್ವೆ ರಕ್ಷಣಾ ಪಡೆ ಪ್ರಕರಣಗಳನ್ನು ದಾಖಲಿಸಿದೆ ಎಂದು ರೈಲ್ವೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಪ್ರತಿಭಟನಾಕಾರ ವಿರುದ್ದ ರೈಲ್ವೇ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣ ದಾಖಲಾಗಿರುವ ಹಲವಾರು ಜನರಲ್ಲಿ ಹೆಚ್ಚಿನವರು ಅಪರಿಚಿತರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೋನಿಪತ್‌ನಲ್ಲಿ, ನಾಲ್ಕು ರೈತ ಸಂಘದ ಮುಖಂಡರು ಸೇರಿದಂತೆ 100-120 ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು TNIE ವರದಿ ಮಾಡಿದೆ.

ಇದನ್ನೂ ಓದಿ: ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿದ್ದು ನಿಜ, ಧರಣಿ ನಿಲ್ಲಿಸಲು 10 ಲಕ್ಷ ರೂ ಆಮಿಷವೊಡ್ಡಿದ್ದರು: ನಿಹಾಂಗ್ ಬಾಬಾ

ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿರುವ ಇತರ ಜನರು ಅಪರಿಚಿತರಾಗಿದ್ದು, ಅವರನ್ನು ಹೆಸರಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಹರ್ಯಾಣದ ಅಂಬಾಲದಲ್ಲಿಯೂ ರೈತರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಖಿಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಕ್ಕೂಟ ಸಚಿವ ಅಜಯ್ ಮಿಶ್ರಾರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಅವರನ್ನು ಬಂಧಿಸಲು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಆರು ಗಂಟೆಗಳ ‘ರೈಲ್ ರೋಕೋ’ ಚಳವಳಿಗೆ ಕರೆ ನೀಡಿತ್ತು. ಈ ಚಳವಳಿಯ ಭಾಗವಾಗಿ ಹರಿಯಾಣ ಸೇರಿದಂತೆ, ದೇಶದ ಇತರ ಭಾಗಗಳ ರೈತರು ಸೋಮವಾರ ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟಿಸಿದ್ದರು.

ರೈತರು ಎರಡೂ ರಾಜ್ಯಗಳಲ್ಲಿ ರೈಲುಗಳ ಸಂಚಾರವನ್ನು ಅಡ್ಡಿಪಡಿಸಿದ್ದರು. ಹರಿಯಾಣದಲ್ಲಿ ಪ್ರತಿಭಟನೆ ಶಾಂತಿಯುತವಾಗಿತ್ತು. ಪ್ರತಿಭಟನೆಯ ಪರಿಣಾಮವು ರಾಜ್ಯಾದ್ಯಂತ 47 ಸ್ಥಳಗಳಲ್ಲಿ ಕಂಡುಬಂದಿತ್ತು ಎಂದು ಹರಿಯಾಣ ಪೊಲೀಸ್ ವಕ್ತಾರರು ಹೇಳಿದ್ದರು.

ಇದನ್ನೂ ಓದಿ: ರೈತ ಹೋರಾಟ ನೆಲದಲ್ಲಿ ಹತ್ಯೆ: ಬಿಜೆಪಿ ಸಚಿವರೊಂದಿಗೆ ಆರೋಪಿತ ನಿಹಾಂಗ್ ಗುಂಪಿನ ಮುಖ್ಯಸ್ಥ ಸಭೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...