ಫೆಬ್ರವರಿ 15ರಂದು ನವದೆಹಲಿ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದ ಸಾವು-ನೋವುಗಳ ವಿಡಿಯೊಗಳನ್ನು ಹೊಂದಿರುವ 285 ಸಾಮಾಜಿಕ ಮಾಧ್ಯಮ ಲಿಂಕ್‌ಗಳನ್ನು ತೆಗೆದು ಹಾಕುವಂತೆ ರೈಲ್ವೆ ಸಚಿವಾಲಯ ಎಕ್ಸ್‌ಗೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಸಾವು-ನೋವುಗಳ ವಿಡಿಯೋಗಳನ್ನು ಹಂಚಿಕೊಳ್ಳುವುದು ನೈತಿಕ ಮಾನದಂಡಗಳಿಗೆ ಮಾತ್ರ ವಿರುದ್ಧವಾಗಿಲ್ಲ, ಅದು ಎಕ್ಸ್‌ನ ನೀತಿಗೆ ವಿರುದ್ಧವಾಗಿದೆ. ಏಕೆಂದರೆ ಇಂತಹ ವಿಡಿಯೊಗಳನ್ನು ಹಂಚಿಕೊಳ್ಳುವುದರಿಂದ ಅನಗತ್ಯವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ. ಇಂತಹ ವಿಷಯಗಳು ಭಾರತೀಯ ರೈಲ್ವೆಯ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಫೆಬ್ರವರಿ 17 ರಂದು ಕಳುಹಿಸಿರುವ ನೋಟಿಸ್‌ನಲ್ಲಿ ರೈಲ್ವೆ ಸಚಿವಾಲಯ ಹೇಳಿದ್ದು, 36 ಗಂಟೆಗಳಲ್ಲಿ ವಿಡಿಯೋ ಲಿಂಕ್‌ಗಳನ್ನು ತೆಗೆದು ಹಾಕುವಂತೆ ಸೂಚಿಸಿದೆ.
ಮೃತ ವ್ಯಕ್ತಿಗಳನ್ನು ತೋರಿಸಿದ, ಕಾಲ್ತುಳಿತ ಸಂಭವಿಸಿದ ನಂತರದ ರೈಲ್ವೆ ನಿಲ್ದಾಣದ ದೃಶ್ಯ ಹೊಂದಿರುವ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವುದೂ ಸೇರಿದಂತೆ ಹಲವು ವಿಡಿಯೋಗಳನ್ನು ತೆಗೆದು ಹಾಕುವಂತೆ ರೈಲ್ವೆ ಸಚಿವಾಲಯ ನೋಟಿಸ್‌ನಲ್ಲಿ ಸೂಚಿಸಿದೆ ಎಂದು ವರದಿಯಾಗಿದೆ.
ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ನೋಟಿಸ್ ಕಳುಹಿಸಿ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ಸೂಚಿಸಿರುವುದು ಇದು ಎರಡನೇ ಬಾರಿಯಾಗಿದೆ. ಕಳೆದ ಜನವರಿಯಲ್ಲಿ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ಗೆ ನೋಟಿಸ್ ನೀಡಿದ್ದ ಸರ್ಕಾರ, ಅನಗತ್ಯವಾಗಿ ಕಾನೂನು ಮತ್ತು ಸುವ್ಯವಸ್ಥೆ ಹದೆಗಡೆಸುವ, ದಾರಿತಪ್ಪಿಸುವ ಮತ್ತು ಸೂಕ್ಷ್ಮ/ಪ್ರಚೋದನಕಾರಿ ಮಾಹಿತಿಯನ್ನು ಒಳಗೊಂಡಿರುವ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ಸೂಚಿಸಿತ್ತು.
ನೋಟಿಸ್‌ನಲ್ಲಿ ಒಂದು ಯೂಟ್ಯೂಬ್ ವಿಡಿಯೊ, ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಮತ್ತು ಎರಡು ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಪಟ್ಟಿ ಮಾಡಲಾಗಿತ್ತು. ಈ ನೋಟಿಸ್ ನಿರ್ದಿಷ್ಟ ಘಟನೆಗೆ ಸಂಬಂಧಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿಗಳು ಹೇಳಿವೆ.
ಡಿಸೆಂಬರ್‌ನಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ನೇರ ತೆಗೆದು ಹಾಕುವ ಅಧಿಕಾರವನ್ನು ಪಡೆದ ನಂತರ ಮೊದಲ ಬಾರಿಗೆ ಪ್ರಮುಖ ವಿಷಯವೊಂದಕ್ಕೆ ಸಂಬಂಧಿಸಿದಂತೆ ನೋಟಿಸ್ ನಿಡಲಾಗಿದೆ.
ದ್ವೇಷ ಭಾಷಣದ ವೀಡಿಯೊ ಹಂಚಿಕೆ: ಬಿಜೆಪಿಯ ಶಾಸಕ ರಾಜಾ ಸಿಂಗ್ ನ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ತಗೆದುಹಾಕಿದ ಮೆಟಾ


