ರಾಜಸ್ಥಾನದ ವಾಲ್ಡ್ ಸಿಟಿಯಲ್ಲಿರುವ ಜುಮಾ ಮಸೀದಿಯ ಹೊರಗೆ ಬಿಜೆಪಿಯ ಶಾಸಕನೊಬ್ಬ ಗುಂಪುಕಟ್ಟಿ ಘೋಷಣೆ ಕೂಗಿರುವ ಘಟನೆ ಶುಕ್ರವಾರ ನಡೆದಿದೆ. ದುಷ್ಕರ್ಮಿ ಗುಂಪಿನ ನೇತೃತ್ವ ವಹಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಜೈಪುರದ ಪೊಲೀಸರು ಶಾಸಕನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ರಾಜಸ್ಥಾನ
ಬಿಜೆಪಿ ಶಾಸಕ ಬಲ್ಮುಕುಂದ್ ಆಚಾರ್ಯ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ. ಅದಾಗ್ಯೂ, ನಂತರ ಶಾಸಕ ಆಚಾರ್ಯ ಅವರು ಘಟನೆಗೆ ವಿಷಾದ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ಇನ್ನು ಮುಂದೆ ಮಸೀದಿಗಳಿಗೆ ಪ್ರವೇಶಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಆಚಾರ್ಯ, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತ ದುಷ್ಕರ್ಮಿಗಳೊಂದಿಗೆ ಆಕ್ರಮಣಕಾರಿ ಘೋಷಣೆಗಳನ್ನು ಕೂಗಿದ್ದು, ಕೇಸರಿ ಧ್ವಜಗಳು ಮತ್ತು ಟಾರ್ಚ್‌ಗಳನ್ನು ಹಿಡಿದು ಮಸೀದಿ ಆವರಣದಲ್ಲಿ ಪೋಸ್ಟರ್‌ಗಳನ್ನು ಹಾಕಿದ್ದರು ಎಂದು ಆರೋಪಿಸಲಾಗಿದೆ.
ಜುಮಾ ಮಸೀದಿ ಸಮಿತಿಯ ಸದಸ್ಯ ಹಫೀಜ್ ಮನ್ಸೂರ್ ಅಲಿ ಖಾನ್, ಆಚಾರ್ಯ ರಾತ್ರಿ 8:30 ರ ಸುಮಾರಿಗೆ ಆವರಣಕ್ಕೆ ಪ್ರವೇಶಿಸಿ, ಗೇಟ್‌ನಲ್ಲಿ “ಪಾಕಿಸ್ತಾನ ಮುರ್ದಾಬಾದ್” ಪೋಸ್ಟರ್ ಅನ್ನು ಇರಿಸಿ “ಜೈ ಶ್ರೀ ರಾಮ್” ಎಂದು ಕೂಗಿದರು ಎಂದು ಹೇಳಿದ್ದಾರೆ. ಘಟನೆ ಭದ್ರತಾ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಇದರಿಂದಾಗಿ ಮಸೀದಿ ಪಕ್ಕದ ಬಾಡಿ ಚೌಪರ್ ಪ್ರದೇಶದ ಉದ್ವಿಗ್ನಗೊಂಡಿದೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಶಾಸಕರಾದ ರಫೀಕ್ ಖಾನ್ ಮತ್ತು ಅಮೀನ್ ಕಾಗ್ಜಿ, ಪೊಲೀಸ್ ಆಯುಕ್ತ ಬಿಜು ಜಾರ್ಜ್ ಜೋಸೆಫ್ ಅವರೊಂದಿಗೆ ಮಧ್ಯಪ್ರವೇಶಿಸಿ ಪರಿಸ್ಥಿತಿ ಉಲ್ಬಣಗೊಳ್ಳದಂತೆ ತಡೆಯುವ ಪ್ರಯತ್ನ ನಡೆಸಿದ್ದಾರೆ ಎಂದು ವರದಿಯಾಗಿದೆ.
ಜುಮಾ ಮಸೀದಿ ಸಮಿತಿಯ ದೂರಿನ ಮೇರೆಗೆ ಪೊಲೀಸರು ಬಿಜೆಪಿ ಶಾಸಕ ಆಚಾರ್ಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 298 (ಪೂಜಾ ಸ್ಥಳವನ್ನು ಅಪವಿತ್ರಗೊಳಿಸುವುದು), 300 (ಧಾರ್ಮಿಕ ಸಭೆಗೆ ತೊಂದರೆ ನೀಡುವುದು), 302 (ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ಪದಗಳನ್ನು ಉಚ್ಚರಿಸುವುದು) ಮತ್ತು 351 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
“ಶುಕ್ರವಾರ ರಾತ್ರಿಯ ಪರಿಸ್ಥಿತಿ ಅತ್ಯಂತ ಉದ್ವಿಗ್ನವಾಗಿತ್ತು. ನಾವು ಸಾಕಷ್ಟು ಕಷ್ಟಪಟ್ಟು ಜನಸಮೂಹವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ.” ಎಂದು ಮನಕ್ ಚೌಕ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಗುರು ಭೂಪೇಂದ್ರ ಸಿಂಗ್ ಹೇಳಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಶಾಸಕರಾದ ಕಾಗ್ಜಿ ಮತ್ತು ಖಾನ್ ಅವರು ಬಿಜೆಪಿ ಶಾಸಕ ಆಚಾರ್ಯ ಅವರ ನಡೆಗಳು ಮುಸ್ಲಿಮರನ್ನು ತೀವ್ರವಾಗಿ ನೋಯಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಅದಾಗ್ಯೂ, ಬಿಜೆಪಿ ತನ್ನ ಶಾಸಕನ ನಡೆಯಿಂದ ಅಂತರ ಕಾಪಾಡಿಕೊಂಡಿದೆ. ಪಕ್ಷದ ರಾಜ್ಯ ಅಧ್ಯಕ್ಷ ಮದನ್ ರಾಥೋಡ್ ಪ್ರತಿಕ್ರಿಯಿಸಿ, “ನಾನು ಬಲ್ಮುಕುಂದ್ ಆಚಾರ್ಯ ಅವರೊಂದಿಗೆ ಮಾತನಾಡಿದೆ. ಅವರು ಪಹಲ್ಗಾಮ್ ಘಟನೆಯ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದರು. ಮಸೀದಿಗೆ ತಲುಪಿದ ಜನಸಮೂಹವನ್ನು ಶಾಂತಗೊಳಿಸಲು ತಾನು ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿಕೊಂಡರು” ಎಂದು ಹೇಳಿದ್ದಾರೆ.
“ಆದಾಗ್ಯೂ, ಯಾರೂ ಮಸೀದಿಗೆ ಪ್ರವೇಶಿಸಬಾರದು ಎಂದು ನಾನು ಅವರಿಗೆ ದೃಢವಾಗಿ ಹೇಳಿದೆ. ಅಂತಹ ಕ್ರಮಗಳು ಕೋಮು ವಿಭಜನೆಗಳನ್ನು ಸೃಷ್ಟಿಸುತ್ತವೆ. ನಾವು ರಾಷ್ಟ್ರವಿರೋಧಿ ಶಕ್ತಿಗಳ ವಿರುದ್ಧ ಒಗ್ಗಟ್ಟಿನಿಂದ ಇರಬೇಕು, ಮುಗ್ಧ ನಾಗರಿಕರನ್ನು ಗುರಿಯಾಗಿಸಬಾರದು. ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ.” ಎಂದು ಹೇಳಿದ್ದಾರೆ.
ಹವಾ ಮಹಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಆಚಾರ್ಯ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಅವರು ಈ ಹಿಂದೆ ಮಾಂಸ ಸೇವನೆ, ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ, ಶಾಲೆಗೆ ಹಿಜಾಬ್ ಧರಿಸಿದ ಹುಡುಗಿಯರು ವಿರುದ್ಧ ಪ್ರೊಪಗಾಂಡ ಹರಡಿದ್ದರು. ಅಲ್ಲದೆ, ಜೈಪುರದಿಂದ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನಿರಾಶ್ರಿತರನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದರು. ಅವರು ಹಥೋಜ್ ಧಾಮ್ ದೇವಾಲಯದ ಮುಖ್ಯ ಅರ್ಚಕ ಕೂಡಾ ಆಗಿದ್ದಾರೆ. ರಾಜಸ್ಥಾನ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸಂಘ ಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟಕ್ಕೆ ಬರಲೇ ಇಲ್ಲ, ಈಗ ದೇಶಭಕ್ತಿ ಬಗ್ಗೆ ಮಾತಾಡ್ತಾರೆ: ಸಿಎಂ ವ್ಯಂಗ್ಯ
ಸಂಘ ಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟಕ್ಕೆ ಬರಲೇ ಇಲ್ಲ, ಈಗ ದೇಶಭಕ್ತಿ ಬಗ್ಗೆ ಮಾತಾಡ್ತಾರೆ: ಸಿಎಂ ವ್ಯಂಗ್ಯ


CM has correctly told. Sangha Parivar has not supported Independence Movement.In fact they have supported Britishers. Now they are making false propaganda.