ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ರಸ್ತೆಗಳಿಗೆ ಮುಳ್ಳಿನ ಸರಳುಗಳನ್ನು ನೆಡುವುದು, ಕಾಂಕ್ರೀಟ್ ಗೋಡೆಗಳನ್ನು ಕಟ್ಟುವುದು, ಮುಳ್ಳು ತಂತಿ ಬೇಲಿ ಮತ್ತು ದೊಡ್ಡ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಸರ್ಕಾರದ ಈ ದಮನ ಕ್ರಮಕ್ಕೆ ಪ್ರಪಂಚಾದ್ಯಂತ ಟೀಕೆ ವ್ಯಕ್ತವಾಗಿತ್ತು. ಗಾಜಿಪುರ್ ಗಡಿಯಲ್ಲಿ ಮುಳ್ಳುಬೇಲಿ ಹಾಕಿದ್ದ ಜಾಗದಲ್ಲಿಯೇ ರೈತನಾಯಕ ರಾಕೇಶ್ ಟಿಕಾಯತ್ ಹೂವಿನ ಗಿಡವೊಂದನ್ನು ನೆಡುವ ಮೂಲಕ ಗಮನ ಸೆಳೆದಿದ್ದಾರೆ.
ಸುಕ್ರವಾರ ಸಂಜೆ ಟ್ರ್ಯಾಕ್ಟರ್‌ನಲ್ಲಿ ಮಣ್ಣು ಸುರಿಸಿ, ಗುದ್ದಲಿ ಕೈಗೆತ್ತಿಕೊಂಡ ರಾಕೇಶ್ ಟಿಕಾಯತ್ ಹೂವಿನ ಗಿಡಗಳನ್ನು ನೆಡುವ ಮೂಲಕ ನಾವು ಕೃಷಿಕರು ನಮಗೆ ಅನ್ನ ಮತ್ತು ಪ್ರೀತಿ ಬೆಳೆಯುವುದಷ್ಟೇ ಗೊತ್ತು ಎಂಬ ಸಂದೇಶ ಸಾರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು ಇದು ರೈತರ ಸಂಸ್ಕೃತಿ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೆಯಾಗುತ್ತಿದೆ.
1/2#FarmersProtest#RepealAntiFarmerActs#விவசாயிகள்போராட்டம்
This was sent to me just now from #Ghazipur.
पुलीस कि किलों के पास किसान लगाऐंगे फुल राकैश टिकैत ने चलाया फावडा़
We will grow flowers next to the forts put up by the police. Rakesh #Tikait used the shovel. pic.twitter.com/7XuY5mcxkE
— Himakiran (@anugula) February 5, 2021
ಸರ್ಕಾರದ ಇಂಟೆರ್ನೆಟ್ ಕಡಿತ, ಮುಳ್ಳು ಸರಳುಗಳ ನೆಡುವಿಕೆಗೆ ಎಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗಿದೆ. ಪಾಪ್ ತಾರೆ ರಿಹಾನ್ನ, ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್, ವಕೀಲೆ ಮೀನಾ ಹ್ಯಾರಿಸ್, ಬಾಲಿವುಡ್ ನಟಿಯರಾದ ತಾಪ್ಸಿ ಪನ್ನು, ಸ್ವರ ಭಾಸ್ಕರ್, ಫರಾನ್ ಅಲಿ ಖಾನ್ ಮೊದಲಾದವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
#RakeshTikait replaces bed of nails with flowers#ITPhotoBlog pic.twitter.com/sBsv09UIyF
— IndiaToday (@IndiaToday) February 5, 2021
ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಈ ಕ್ರಮವನ್ನು ಕಟುಶಬ್ದಗಳಲ್ಲಿ ಖಂಡಿಸಿವೆ. ಆದರೆ ಜನವರಿ 26 ರ ತರಹದ ಮತ್ತೊಂದು ಹಿಂಸಾಚಾರವನ್ನು ತಡೆಗಟ್ಟಲು ಇದು ಅಗತ್ಯ ಎಂದು ಕೇಂದ್ರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
ಫೆಬ್ರವರಿ 02 ರಂದು ಸಹ ದೆಹಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದ ಜಾಗದಲ್ಲಿಯೇ ರಾಕೇಶ್ ಟಿಕಾಯತ್ ಕುಳಿತು ಊಟ ಮಾಡುವ ಮೂಲಕ ತಮ್ಮ ಪ್ರತಿರೋಧ ತೋರಿದ್ದರು.
WATCH: Farmer leader Rakesh Tikait sits down to have his lunch near the barricades put up by police. pic.twitter.com/TXBlM1WFPz
— Prashant Kumar (@scribe_prashant) February 2, 2021
ಇದನ್ನೂ ಓದಿ: ‘ನನಗಿಂತಲೂ ನೊಂದವರಿದ್ದಾರೆ, ಜೈಲೊಳಗಿನ ರೈತರ ಕುರಿತು ವರದಿ ಮಾಡುವೆ’: ಮಂದೀಪ್ ಪುನಿಯಾ


