Homeಕರ್ನಾಟಕನಮ್ಮದು ರಾಷ್ಟ್ರೀಯ ಪಕ್ಷ, ಹಾಗಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ನನಗಿಲ್ಲ: ಸಿಎಂ ಯಡಿಯೂರಪ್ಪ!

ನಮ್ಮದು ರಾಷ್ಟ್ರೀಯ ಪಕ್ಷ, ಹಾಗಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ನನಗಿಲ್ಲ: ಸಿಎಂ ಯಡಿಯೂರಪ್ಪ!

ನಮ್ಮ ಸಮಾಜದ ಕನಸನ್ನು ಯಡಿಯೂರಪ್ಪನವರು ನುಚ್ಚುನೂರು ಮಾಡಿದ್ದಾರೆ. ನಮ್ಮ ಸಮಾಜದ ಮತವನ್ನು ಪಡೆದು ಉನ್ನತ ಹುದ್ದೆಗೇರಿದ ಅವರು ಕೂಡಲೇ ರಾಜೀನಾಮೆ ಕೊಡಬೇಕು - ಬಸವ ಜಯಮೃತ್ಯುಂಜಯ ಸ್ವಾಮೀಜಿ

- Advertisement -
- Advertisement -

“ತೀರ್ಮಾನ ಕೈಗೊಳ್ಳುವ ಅಧಿಕಾರ ನನಗಿಲ್ಲ, ಯಾವುದೇ ಸೂಚನೆಯನ್ನಾದರೂ ಕೇಂದ್ರವೇ ನೀಡಬೇಕು” ಮುಖ್ಯಮಂತ್ರಿ ಯಡಿಯೂರಪ್ಪ ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಹೇಳಿದ್ದಾರೆ. ಪಂಚಮಸಾಲಿ ಮೀಸಲಾಗತಿಗೆ ಆಗ್ರಹಿಸಿದ ಶಾಸಕ ಬಸನಗೌಡ ಯತ್ನಾಳ್ ಅವರಿಗೆ ಉತ್ತರಿಸಿದ ಯಡಿಯೂರಪ್ಪ, ನನಗೆ ಆ ಅಧಿಕಾರ ಇಲ್ಲ ಎಂದು ಹೇಳಿದ್ದಾರೆ.

“ನಮ್ಮದು ಪ್ರಾದೇಶಿಕ ಪಕ್ಷ ಅಲ್ಲ, ರಾಷ್ಟ್ರೀಯ ಪಕ್ಷ. ಯಾವುದೇ ಸಮಸ್ಯೆ ಇದ್ದರೂ ಕೇಂದ್ರದಲ್ಲಿ ಪ್ರಧಾನಿಯವರ ಮತ್ತು ಉಳಿದವರ ಸಲಹೆ ತೆಗೆದುಕೊಂಡೇ ತೀರ್ಮಾನ ತೆಗೆದುಕೊಳ್ಳಬೇಕು. ಇದಾವುದಕ್ಕೂ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ನನಗಿಲ್ಲ. ಕರ್ನಾಟಕದಲ್ಲಿ 25 ಸಂಸದರಿದ್ದಾರೆ. ಯಾರು ಬೇಕೋ ಕರೆದುಕೊಂಡು ಹೋಗಿ ಕೇಂದ್ರದ ನಾಯಕರನ್ನ ಭೇಟಿ ಮಾಡಿ. ನಾನಂತು ಇಲ್ಲಿ ಕುಳಿತು ಯಾವುದೇ ಸಮಸ್ಯೆಗೆ ಪರಿಹಾರ ಕೊಡುವ ಸ್ಥಿತಿಯಲ್ಲಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತೇನೆ” ಎಂದು ಯಡಿಯೂರಪ್ಪ ಹೇಳಿದ್ದಾರೆ.

ಈ ಸಂಭಾಷಣೆಯನ್ನು ಈ ವಿಡಿಯೋದ 1 ಗಂಟೆ 31 ನಿಮಿಷದ ನಂತರ ಕೇಳಬಹದು.

ಹಲವು ದಿನಗಳಿಂದ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 2 ಎ ವರ್ಗಕ್ಕೆ ಸೇರಿಸಬೇಕು ಎಂದು ಕೂಗು ಕೇಳಿಬರುತ್ತಿದೆ. ಇದರ ಪ್ರಮುಖ ನಾಯಕರಾಗಿದ್ದ ಬಸನಗೌಡ ಯತ್ನಾಳ್ ಪಟ್ಟಬಿಡದೇ ಅಧಿವೇಶನದಲ್ಲಿ ಮುಖ್ಯಮಂತ್ರಿಯವರು ಸ್ವಷ್ಟನೆ ಕೊಡಲೇಬೇಕು ಎಂದು ಒತ್ತಾಯಿಸಿದರು. ಆದರೆ ಯಡಿಯೂರಪ್ಪನವರು ಹೈಕಮಾಂಡ್ ಕಡೆ ಕೈತೋರಿಸಿ ಜಾರಿಕೊಂಡರು.

ಇದರ ಬಗ್ಗೆ ಆಕ್ರೋಶಗೊಂಡ ಯತ್ನಾಳ್, ಇದು ನಮ್ಮ ಸಮುದಾಯವನ್ನು ಮುಗಿಸಲು ಮಾಡಿರುವ ಕುತಂತ್ರ ಎಂದು ಆರೋಪಿಸಿದರು. ಜೊತೆಗೆ ಯಡಿಯೂರಪ್ಪನವರ ಖಡಕ್ ಹೇಳಿಕೆಗೆ ರಾಜ್ಯದಲ್ಲಿಯೂ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ಮುಂಬರುವ ಉಪಚುನಾವಣೆಗಳಲ್ಲಿಯೂ ಗೆಲ್ಲುವುದಷ್ಟೇ ಅಲ್ಲ…! – ಸಿದ್ದುಗೆ ಸವಾಲ್ ಹಾಕಿದ ಬಿಎಸ್‌ವೈ

ಪಂಚಮಸಾಲಿ ಹೋರಾಟದ ಮುಂಚೂಣಿಯಲ್ಲಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಪ್ರತಿಕ್ರಿಯಿಸಿ, “ನಮ್ಮ ಸಮಾಜದ ಕನಸನ್ನು ಯಡಿಯೂರಪ್ಪನವರು ನುಚ್ಚುನೂರು ಮಾಡಿದ್ದಾರೆ. ನಮ್ಮ ಸಮಾಜದ ಮತವನ್ನು ಪಡೆದು ಉನ್ನತ ಹುದ್ದೆಗೇರಿದ ಮುಖ್ಯಮಂತ್ರಿಯವರು ಕೂಡಲೇ ರಾಜೀನಾಮೆ ಕೊಡಬೇಕು” ಎಂದು ಆಗ್ರಹಿಸಿದ್ದರು. ಈ ವೀಡಿಯೋವನ್ನು ಇಲ್ಲಿ ನೋಡಬಹುದು.

ಇದೆಲ್ಲ ನಡೆದ ನಂತರ ರಾತ್ರೋರಾತ್ರಿ ಪತ್ರಿಕಾ ಹೇಳಿಕೆ ನೀಡಿದ ಯಡಿಯೂರಪ್ಪ, “ಪಂಚಮಸಾಲಿ ಸಮುದಾಯದ ಸಮಗ್ರ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು” ಎಂದು ಆದೇಶ ನೀಡಿದ್ದಾರೆ.

ಇದನ್ನೂ ಓದಿ: ‘ಅಧಿಕಾರಸ್ಥರು ರೈತರ ಶಾಂತಿಯುತ ಪ್ರತಿಭಟನೆಯನ್ನು ಗೌರವಿಸಬೇಕು’: ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗ

ಯಡಿಯೂರಪ್ಪನವರು ಸದನದಲ್ಲಿ ನನಗೆ ಅಧಿಕಾರ ಇಲ್ಲ ಎಂದು ಹೇಳಿರುವ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಹಲವು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಂತೋಣಿ ಜಾನ್ ಟಂಬುವವರು ಟ್ವೀಟ್ ಮಾಡಿ, “ನಿಮ್ಮ ಬಳಿ ಅಧಿಕಾರ ಇಲ್ಲ ಅಂತಾದರೆ, ಅಧಿಕಾರ ಕೊಡಿ ಅಧಿಕಾರ ಕೊಡಿ ಅಂತ ಜನರ ಮುಂದೆ (ಚುನಾವಣೆಯ ಹೊತ್ತಲ್ಲಿ) ಕೇಳಿಕೊಂಡದ್ದು ಯಾಕೆ!? ಇನ್ನು ಮುಂದೆ ಮುಖ್ಯಮಂತ್ರಿಗಳ ಪ್ರತಿಮೆ ವಿಧಾನ ಮಂಡಲದಲ್ಲಿ ಸ್ಥಾಪಿಸಿ ಆಡಳಿತ ನಡೆಸಬಹುದಲ್ಲ!? ರಾಜ್ಯದ ಹಿತ ಕಾಪಾಡುವ ಅಧಿಕಾರ ಇಲ್ಲದ ನೀವು ರಾಜೀನಾಮೆ ನೀಡುವ ಮೂಲಕವಾದರೂ ಕರ್ನಾಟಕದ ಹಿತ ಕಾಪಾಡಿ” ಎಂದು ಒತ್ತಾಯಿಸಿದ್ದಾರೆ.

ಚೇತನ್ ಶೆಟ್ಟಿ ಸಕಲೇಶಪುರ ಟ್ವೀಟ್ ಮಾಡಿ, “ಇವರು ನಮ್ಮ ಕರ್ನಾಟಕದ ಮುಖ್ಯಮಂತ್ರಿ ಆಗೋಕೆ ನಾಲಾಯಕ್. ಅವರ ಪಕ್ಷದವರೇ ಕೇಳೋ ಒಂದು ಬೇಡಿಕೆ ಈಡೇರಿಸೋಕೆ ಆಗದೆ ಇರೋರು ನಮ್ಮಂಥ ಸಾಮಾನ್ಯ ಜನರ ಸಮಸ್ಯೆಗೆ ಪರಿಹಾರ ಕೊಡ್ತಾರ. ಬರಿ ಕೇಂದ್ರದವರು ಹೇಳ್ದಂಗೆ ಮಾಡೋಕೆ ಇವರೇ ಬೇಕಾ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೀಗೆ ಇನ್ನೂ ಹಲವರು, ಯಡಿಯೂರಪ್ಪನವರೇ ತಾನು ರಬ್ಬರ್ ಸ್ಟ್ಯಾಂಪ್ ಎಂದು ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ

(ನಾನುಗೌರಿ.ಕಾಂ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ)


ಇದನ್ನೂ ಓದಿ: ದೆಹಲಿ ಗಡಿಯಲ್ಲಿ 50,000 ಪೊಲೀಸರ ನಿಯೋಜನೆ – ಸಂಯಮ ಕಾಪಾಡಿ ಎಂದ ವಿಶ್ವಸಂಸ್ಥೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮುಖ್ಯಮಂತ್ರಿ ಸ್ಥಾನವನ್ನು ಒಬ್ಬ ಗುಮಾಸ್ತನ ಮಟ್ಟಕ್ಕೆ ಇಳಿಸಿದ ಮಹಾನ್ ರಾಜಕಾರಣಿ.

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...