ರಾಜಸ್ಥಾನದ ಅಲ್ವಾರ್‌ನಲ್ಲಿರುವ ರಾಮ ಮಂದಿರಕ್ಕೆ ಕಾಂಗ್ರೆಸ್ ನಾಯಕ ಟಿಕರಾಮ್ ಜೂಲಿ ಅವರು ಭೇಟಿ ನೀಡಿದ ನಂತರ ಆ ಮಂದಿರವನ್ನು ಗಂಗಾ ನೀರನ್ನು ಸಿಂಪಡಿಸಿ ಪ್ರಧಾನಿ ಮೋದಿ ಅವರ ಆಪ್ತ ವ್ಯಕ್ತಿ, ಬಿಜೆಪಿ ನಾಯಕ ಜ್ಞಾನದೇವ್ ಅಹುಜಾ ಅವರು ‘ಶುದ್ದೀಕರಣ’ ಮಾಡಿ ಅಸ್ಪೃಶ್ಯತೆ ಆಚರಿಸಿರುವ ಅಘಾತಕಾರಿ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದು ಬಿಜೆಪಿಯ “ದಲಿತ ವಿರೋಧಿ ಮನಸ್ಥಿತಿ”ಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ರಾಮಮಂದಿರಕ್ಕೆ
ದೇಶವು ನಡೆಯುತ್ತಿರುವುದು ಬಹುಜನರನ್ನು ಎರಡನೇ ದರ್ಜೆಯ ನಾಗರಿಕರು ಎಂದು ಪರಿಗಣಿಸುವ ‘ಮನುಸ್ಮೃತಿ’ಯಿಂದಲ್ಲ, ಬದಲಾಗಿ ಸಂವಿಧಾನ ಮತ್ತು ಅದರ ಆದರ್ಶಗಳಿಂದ ಎಂದು ರಾಹುಲ್ ಗಾಂಧಿ ಅವರು ಪ್ರತಿಪಾದಿಸಿದ್ದಾರೆ.
ಮಂಗಳವಾರ ಘಟನೆಯ ವಿಡಿಯೊವನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯನ್ನು “ದಲಿತ ವಿರೋಧಿ” ಎಂದು ಹೇಳಿತ್ತು. ಅಲ್ವಾರ್‌ನಲ್ಲಿರುವ ರಾಮ ಮಂದಿರಕ್ಕೆ ಪಕ್ಷದ ನಾಯಕರೊಬ್ಬರು ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಬಿಜೆಪಿ ಅದನ್ನು ಶುದ್ದೀಕರಣ ಮಾಡಿದ್ದು, ಇದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿತ್ತು.
ಘಟನೆಯನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, “ಬಿಜೆಪಿಯ ದಲಿತ ವಿರೋಧಿ ಮತ್ತು ಮನುವಾದಿ ಚಿಂತನೆಗೆ ಮತ್ತೊಂದು ಉದಾಹರಣೆ! ಬಿಜೆಪಿ ನಿರಂತರವಾಗಿ ದಲಿತರನ್ನು ಅವಮಾನಿಸುತ್ತಿದೆ ಮತ್ತು ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ. ಅದಕ್ಕಾಗಿಯೇ ಸಂವಿಧಾನವನ್ನು ಗೌರವಿಸುವುದು ಮಾತ್ರವಲ್ಲದೆ ಅದನ್ನು ರಕ್ಷಿಸುವುದು ಸಹ ಮುಖ್ಯವಾಗಿದೆ.” ಎಂದು ಹೇಳಿದ್ದಾರೆ.
ಮೋದಿ ಅವರೇ, ದೇಶವು ಸಂವಿಧಾನ ಮತ್ತು ಅದರ ಆದರ್ಶಗಳಿಂದ ನಡೆಸಲಾಗುತ್ತದೆಯೆ ಹೊರತು, ಬಹುಜನರನ್ನು ಎರಡನೇ ದರ್ಜೆಯ ಪ್ರಜೆಗಳೆಂದು ಪರಿಗಣಿಸುವ ಮನುಸ್ಮೃತಿಯ ಮೂಲಕ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
बीजेपी की दलित विरोधी और मनुवादी सोच का एक और उदाहरण!
बीजेपी लगातार दलितों को अपमानित और संविधान पर आक्रमण करती आ रही है।
इसलिए संविधान का सिर्फ सम्मान नहीं, उसकी सुरक्षा भी ज़रूरी है।
मोदी जी, देश संविधान और उसके आदर्शों से चलेगा, मनुस्मृति से नहीं जो बहुजनों को दूसरे दर्जे… https://t.co/ruEXJgPMcf
— Rahul Gandhi (@RahulGandhi) April 9, 2025
ಜೂಲಿ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಕಾಂಗ್ರೆಸ್ ನಾಯಕರು ಜ್ಞಾನದೇವ್ ಅಹುಜಾ ಅವರ ಕೃತ್ಯವನ್ನು ದಲಿತರಿಗೆ ಮಾಡಿದ ಅವಮಾನ ಎಂದು ಕರೆದಿದ್ದಾರೆ, ಆದರೆ ಬಿಜೆಪಿ ನಾಯಕ ಈ ಆರೋಪವನ್ನು ನಿರಾಕರಿಸಿದ್ದಾರೆ.
ಆದಾಗ್ಯೂ, ತಾನು ಈ ಕೃತ್ಯವನ್ನು ಯಾವುದೇ ಜಾತಿ ದೃಷ್ಟಿಕೋನದಿಂದ ಮಾಡಿಲ್ಲ ಎಂದು ಅಹುಜಾ ಹೇಳಿದ್ದಾರೆ. ತಮ್ಮ ಕ್ರಮವನ್ನು ಸಮರ್ಥಿಸಿಕೊಂಡ ಅವರು, ಕಾಂಗ್ರೆಸ್ ನಾಯಕ ಟೀಕಾ ರಾಮ್ ಅವರಿಗೆ ಅಂತಹ ಸಮಾರಂಭಗಳಲ್ಲಿ ಭಾಗವಹಿಸಲು “ಯಾವುದೇ ನೈತಿಕ ಅಧಿಕಾರ” ಇಲ್ಲ ಎಂದು ಹೇಳಿದ್ದಾರೆ. ಯಾಕೆಂದರೆ ಅವರ ಪಕ್ಷದ ನಾಯಕತ್ವವು ರಾಮನ ಅಸ್ತಿತ್ವವನ್ನು ಪ್ರಶ್ನಿಸಿತ್ತು ಮತ್ತು ಕಳೆದ ವರ್ಷ ಅಯೋಧ್ಯೆಯಲ್ಲಿ ನಡೆದ ಸಮಾರಂಭವನ್ನು “ಬಹಿಷ್ಕರಿಸಿತ್ತು” ಎಂದು ಹೇಳಿದೆ.
ಅಲ್ವಾರ್‌ನ ವಸತಿ ಸಮಾಜದಲ್ಲಿರುವ ರಾಮ ಮಂದರದಲ್ಲಿ ಭಾನುವಾರ ರಾಮ ನವಮಿಯಂದು ಸಮಾರಂಭ ನಡೆದಿತ್ತು, ಅಂದು ಜೂಲಿ ಹಾಜರಿದ್ದರು. ಅದಾಗ್ಯೂ, ಬಿಜೆಪಿ ನಾಯಕ ಅಹುಜಾ ಮಂದಿರದ ಶುದ್ದೀಕರಣ ಮಾಡಿದ್ದಾರೆ. “ನಾನು ಇಂದು ಅಲ್ಲಿಗೆ ಹೋಗಿ ದೇವಾಲಯದ ಆವರಣವನ್ನು ಶುದ್ಧೀಕರಿಸಲು ಗಂಗಾಜಲವನ್ನು ಸಿಂಪಡಿಸಿದೆ” ಎಂದು ಅವರು ಅಲ್ವಾರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ರಾಮಮಂದಿರಕ್ಕೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಅಮೆರಿಕದ ‘ಸುಂಕ ಹೇರಿಕೆ’ಯನ್ನು ಜೊತೆಯಾಗಿ ಎದುರಿಸೋಣ: ಭಾರತಕ್ಕೆ ಚೀನಾ ಕರೆ
ಅಮೆರಿಕದ ‘ಸುಂಕ ಹೇರಿಕೆ’ಯನ್ನು ಜೊತೆಯಾಗಿ ಎದುರಿಸೋಣ: ಭಾರತಕ್ಕೆ ಚೀನಾ ಕರೆ

