ಅಕ್ರಮ ಬೆಟ್ಟಿಂಗ್, ಜೂಜಾಟ ಮತ್ತು ಕ್ಯಾಸಿನೊ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿ ಸಾರ್ವಜನಿಕರಿಗೆ ಆರ್ಥಿಕ ನಷ್ಟವನ್ನುಂಟು ಮಾಡಿದ ಆರೋಪದ ಮೇಲೆ ಟಾಲಿವುಡ್ ನಟರು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಸೇರಿದಂತೆ 25 ಜನರ ವಿರುದ್ಧ ಭಾನುವಾರ ತೆಲಂಗಾಣದ ಸೈಬರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಎಫ್‌ಐಆರ್‌ನಲ್ಲಿ ಹೆಸರಿಸಲಾದ 25 ಜನರಲ್ಲಿ ಪ್ರಮುಖ ನಟರಾದ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣೀತಾ ಮತ್ತು ನಿಧಿ ಅಗರ್ವಾಲ್ ಸೇರಿದ್ದಾರೆ.
ಆರೋಪಿ 1 ಮತ್ತು ಆರೋಪಿ 2 ಎಂದು ಹೆಸರಿಸಲಾದ ನಟರಾದ ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ಅವರು ಪಾಪ್-ಅಪ್ ಜಾಹೀರಾತುಗಳ ಮೂಲಕ ಜಂಗ್ಲೀ ರಮ್ಮಿಯನ್ನು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ವಿಜಯ್ ದೇವರಕೊಂಡ ಅವರು A23 ರಮ್ಮಿ, ಮಂಚು ಲಕ್ಷ್ಮಿ ಯೋಲೊ247, ಪ್ರಣೀತಾ ಫೇರ್‌ಪ್ಲೇ ಲೈವ್ ಮತ್ತು ನಿಧಿ ಅಗರ್ವಾಲ್ ಜೀತ್ ವಿನ್ ಅನ್ನು ಪಾಪ್-ಅಪ್ ಜಾಹೀರಾತುಗಳ ಮೂಲಕ ಪ್ರಚಾರ ಮಾಡಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾಗಿ ವರದಿ ಹೇಳಿದೆ.
“ಇದು ತನಿಖೆಯ ಆರಂಭ ಮಾತ್ರ. ಈ ಅಪ್ಲಿಕೇಶನ್‌ಗಳು ಯಾವುವು, ಇದರಲ್ಲಿ ಭಾಗಿಯಾಗಿರುವ ಜನರು ಯಾರು, ಈ ಅಪ್ಲಿಕೇಶನ್‌ಗಳ ಮೂಲ ಯಾವುದು ಮತ್ತು ಇತರ ಅಂಶಗಳನ್ನು ನಾವು ನೋಡುತ್ತೇವೆ. ಪ್ರಕರಣದ ಅರ್ಹತೆ ಮತ್ತು ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ, ನಾವು ಮುಂದುವರಿಯುತ್ತೇವೆ” ಎಂದು ಪೊಲೀಸ್ ಆಯುಕ್ತ ಅವಿನಾಶ್ ಮೊಹಂತಿ ಹೇಳಿದ್ದಾಗಿ indianexpress.com ವರದಿ ಮಾಡಿದೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) [ವಂಚನೆ], ಮತ್ತು 112 (ಸಣ್ಣ ಸಂಘಟಿತ ಅಪರಾಧ), 49 (ಪ್ರೇರಣೆ), ತೆಲಂಗಾಣ ರಾಜ್ಯ ಗೇಮಿಂಗ್ ಕಾಯ್ದೆ (ಟಿಎಸ್‌ಜಿಎ) ಸೆಕ್ಷನ್ 3,3(ಎ) ಮತ್ತು 4 (ಸಾಮಾನ್ಯ ಗೇಮಿಂಗ್ ಹೌಸ್); ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 66(ಡಿ) (ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ವಂಚಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿ ಹೇಳಿದೆ.
“ಈ ವೇದಿಕೆಗಳು ಸಾರ್ವಜನಿಕರನ್ನು, ವಿಶೇಷವಾಗಿ ಹಣದ ಅವಶ್ಯಕತೆಯಿರುವ ಜನರನ್ನು, ತಾವು ಕಷ್ಟಪಟ್ಟು ಸಂಪಾದಿಸಿದ ಮತ್ತು ಕುಟುಂಬದ ಹಣವನ್ನು ಅಪ್ಲಿಕೇಶನ್‌ಗಳು/ವೆಬ್‌ಸೈಟ್‌ಗಳಲ್ಲಿ ಹೂಡಿಕೆ ಮಾಡಲು ಮತ್ತು ನಿಧಾನವಾಗಿ ಅವುಗಳಿಗೆ ವ್ಯಸನಿಯಾಗಲು ಪ್ರೋತ್ಸಾಹಿಸುತ್ತಿವೆ. ಇದು ಸಂಪೂರ್ಣ ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತವೆ” ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಹಲವಾರು ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪಟ್ಟಿ ಮಾಡಿರುವ ಎಫ್‌ಐಆರ್, “ಮೇಲೆ ಉಲ್ಲೇಖಿಸಲಾದ ಎಲ್ಲಾ ಬೆಟ್ಟಿಂಗ್ ಅಪ್ಲಿಕೇಶನ್‌ಗಳು 1867ರ ಸಾರ್ವಜನಿಕ ಜೂಜು ಕಾಯ್ದೆ, ಜೂನು ಕಾನೂನುಗಳು ಮತ್ತು ನಿಬಂಧನೆಗಳ ನೇರ ಉಲ್ಲಂಘನೆಯಾಗಿದೆ. ಈ ವ್ಯಸನಕಾರಿ ಸುಲಭವಾಗಿ ಹಣ ಸಂಪಾದಿಸುವ ಕಾರ್ಯವಿಧಾನವನ್ನು ಪ್ರೋತ್ಸಾಹಿಸುವ ಮೂಲಕ ವ್ಯಕ್ತಿಗಳು ಮತ್ತು ಸಮಾಜಕ್ಕೆ ಹಾನಿಯನ್ನುಂಟುಮಾಡುತ್ತದೆ. ಇದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ” ಎಂದು ಹೇಳಿದೆ.
ದೂರುದಾರರ ಪ್ರಕಾರ, ಈ ವೇದಿಕೆಗಳಲ್ಲಿ ಸಾವಿರಾರು ಜನರು ಲಕ್ಷಾಂತರ ರೂಪಾಯಿಗಳನ್ನು ತೊಡಗಿಸಿದ್ದು, ವಿಶೇಷವಾಗಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿಸಿವೆ ಎಂದು ಹೇಳಿದ್ದಾಗಿ ವರದಿ ತಿಳಿಸಿದೆ.
ನಕ್ಸಲರ ವಿರುದ್ಧ ಮೋದಿ ಸರ್ಕಾರ ನಿರ್ದಯವಾಗಿ ಮುಂದುವರಿಯುತ್ತದೆ: ಅಮಿತ್ ಶಾ


