ರಣಥಂಬೋರ್ ರಾಷ್ಟ್ರೀಯ ಉದ್ಯಾನವನ (ಆರ್‌ಎನ್‌ಪಿ) ದಲ್ಲಿ ಇರುವ 75 ಹುಲಿಗಳಲ್ಲಿ 25 ಹುಲಿಗಳು ಕಳೆದ ವರ್ಷ ನಾಪತ್ತೆಯಾಗಿವೆ ಎಂದು ರಾಜಸ್ಥಾನದ ಮುಖ್ಯ ವನ್ಯಜೀವಿ ವಾರ್ಡನ್ ಪವನ್ ಕುಮಾರ್ ಉಪಾಧ್ಯಾಯ ಸೋಮವಾರ ಉದ್ಯಾನವನದ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಒಂದು ವರ್ಷದಲ್ಲಿ ಇಷ್ಟೊಂದು ಅಧಿಕ ಸಂಖ್ಯೆಯ ಹುಲಿಗಳು ನಾಪತ್ತೆಯಾಗಿರುವ ಬಗ್ಗೆ ಅಧಿಕೃತವಾಗಿ ವರದಿಯಾಗಿರುವುದು ಇದೇ ಮೊದಲು. ಈ ಹಿಂದೆ, ಜನವರಿ 2019 ಮತ್ತು ಜನವರಿ 2022 ರ ನಡುವೆ ರಣಥಂಬೋರ್‌ನಿಂದ 13 ಹುಲಿಗಳು ನಾಪತ್ತೆಯಾಗಿದ್ದವು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಹುಲಿಗಳು ನಾಪತ್ತೆಯಾದ ಹಿನ್ನಲೆ ಸೋಮವಾರದಂದು ವನ್ಯಜೀವಿ ಇಲಾಖೆಯು ನಾಪತ್ತೆಯಾದ ಹುಲಿಗಳ ತನಿಖೆಗಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಿದೆ. ಈ ತಂಡವು ಮೇಲ್ವಿಚಾರಣಾ ದಾಖಲೆಗಳನ್ನು ಪರಿಶೀಲಿಸುತ್ತದೆ ಮತ್ತು ಉದ್ಯಾನವನದ ಅಧಿಕಾರಿಗಳಿಂದ ಯಾವುದೇ ಲೋಪ ಕಂಡುಬಂದಲ್ಲಿ ಕ್ರಮಕ್ಕೆ ಶಿಫಾರಸು ಮಾಡುತ್ತದೆ.
ತಂಡವು ಈ ವರ್ಷದ ಮೇ 17 ರಿಂದ ಸೆಪ್ಟೆಂಬರ್ 30 ರ ನಡುವೆ ಕಾಣಿಸಿಕೊಳ್ಳದ 14 ಹುಲಿಗಳ ಪತ್ತೆಗೆ ಮುಖ್ಯವಾಗಿ ಗಮನಹರಿಸಲಾಗಿದೆ ಎಂದು ವರದಿ ಹೇಳಿವೆ. ನವೆಂಬರ್ 4 ರಂದು ಹೊರಡಿಸಲಾದ ಅಧಿಕೃತ ಆದೇಶದಲ್ಲಿ, “ರಣಥಂಬೋರ್‌ನ ಮೇಲ್ವಿಚಾರಣಾ ಮೌಲ್ಯಮಾಪನಗಳಿಂದ ನಾಪತ್ತೆಯಾದ ಹುಲಿಗಳ ವರದಿಗಳಿದ್ದು, ಉದ್ಯಾನದ ಕ್ಷೇತ್ರ ನಿರ್ದೇಶಕರಿಗೆ ಹಲವು ಬಾರಿ ನೋಟಿಸ್ ಕಳುಹಿಸಿದ್ದರೂ ಯಾವುದೇ ಮಹತ್ವದ ಸುಧಾರಣೆ ಕಂಡುಬಂದಿಲ್ಲ” ಎಂದು ಹೇಳಿದೆ.
ಅಕ್ಟೋಬರ್ 14, 2024 ರ ವರದಿಯ ಪ್ರಕಾರ, 11 ಹುಲಿಗಳು ಒಂದು ವರ್ಷದಿಂದ ಪತ್ತೆಯಾಗಿಲ್ಲ, ಮತ್ತೆ 14 ಹುಲಿಗಳು ನಾಪತ್ತೆಯಾಗಿರುವ ಪುರಾವೆಗಳು ಇವೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ರಣಥಂಬೋರ್‌ನಲ್ಲಿ ನಾಪತ್ತೆಯಾದ ಹುಲಿಗಳ ಬಗ್ಗೆ ತನಿಖೆ ನಡೆಸಲು ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮುಖ್ಯ ವನ್ಯಜೀವಿ ವಾರ್ಡನ್ ಪವನ್ ಕುಮಾರ್ ಉಪಾಧ್ಯಾಯ ಮಾತನಾಡಿ, ಸಮಿತಿಯು ಎರಡು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಹೇಳಿದ್ದಾರೆ. “ಇತ್ತೀಚೆಗೆ, ನಾನು ಸಾಪ್ತಾಹಿಕ ನಿಗಾ ವರದಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ, ಈ ಹುಲಿಗಳು ಟ್ರ್ಯಾಪ್ ಕ್ಯಾಮೆರಾದಲ್ಲಿ ದಾಖಲಾಗಿಲ್ಲ. ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ಉದ್ಯಾನವನದ ಮೇಲಿನ ಒತ್ತಡವನ್ನು ಸರಾಗಗೊಳಿಸುವ ಪ್ರಯತ್ನವಾಗಿ ಬಫರ್ ವಲಯದಿಂದ ಗ್ರಾಮಗಳನ್ನು ಸ್ಥಳಾಂತರಿಸುವುದು ಕೂಡಾ ಒಳಗೊಂಡಿವೆ. ಆದರೆ ಇದರ ಪ್ರಗತಿಯು ನಿಧಾನವಾಗಿದ್ದು, ಕೊನೆಯ ಸ್ಥಳಾಂತರವು 2016 ರಲ್ಲಿ ನಡೆಯಿತು.
ಹುಲಿಗಳ ಸಂಖ್ಯೆಯು ಮಿತಿಮೀರಿದ ಕಾರಣ ರಣಥಂಬೋರ್ ಸವಾಲುಗಳನ್ನು ಎದುರಿಸುತ್ತಿದೆ ಎಂದು ಉದ್ಯಾನದ ಅಧಿಕಾರಿಗಳು ಹೇಳಿದ್ದಾರೆ. ಹುಲಿಗಳು ಪ್ರದೇಶಗಳಿಗಾಗಿ ಕಾದಾಟ ಮಾಡುವುದರಿಂದ ಈ ಸಮಸ್ಯೆ ಉಲ್ಭಣಿಸಿದೆ. 75 ಹುಲಿಗಳು — ಇದರಲ್ಲಿ ಯುವ ಮತ್ತು ಮರಿ ಹುಲಿಗಳು ಒಳಗೊಂಡಿದೆ — ಉದ್ಯಾನದ 900 ಚದರ ಕಿಲೋಮೀಟರ್‌ಗಳಲ್ಲಿ ವಾಸಿಸಲು ಮತ್ತು ತಮ್ಮ ಪ್ರದೇಶಗಳ ಗಡಿಯನ್ನು ಗುರುಸಿಕೊಳ್ಳಲು ಹೆಣಗಾಡುತ್ತಿವೆ ಎಂದು ವರದಿಯಾಗಿದೆ.
ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (2006-2014) ಅಧ್ಯಯನದ ಪ್ರಕಾರ, ಪ್ರಸ್ತುತ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 40 ವಯಸ್ಕ ಹುಲಿಗಳನ್ನು ಮಾತ್ರ ಸುರಕ್ಷಿತವಾಗಿ ಇರಿಸಬಹುದಾಗಿದೆ.
ಇದನ್ನೂ ಓದಿ: ಹಿಜಾಬ್ ಚಾಲೆಂಜ್ ವಿಡಿಯೋ : ಮುಸ್ಲಿಂ ಯುವಕನ ಮೇಲೆ ‘ಸೈಬರ್ ಭಯೋತ್ಪಾದನೆ’ ಪ್ರಕರಣ ದಾಖಲಿಸಿ ಜೈಲಿಗಟ್ಟಿದ ಪೊಲೀಸರು
ಹಿಜಾಬ್ ಚಾಲೆಂಜ್ ವಿಡಿಯೋ : ಮುಸ್ಲಿಂ ಯುವಕನ ಮೇಲೆ ‘ಸೈಬರ್ ಭಯೋತ್ಪಾದನೆ’ ಪ್ರಕರಣ ದಾಖಲಿಸಿ ಜೈಲಿಗಟ್ಟಿದ ಪೊಲೀಸರು


