ಮಹಿಳಾ ನಟಿಯೊಬ್ಬರ ದೂರಿನ ಮೇರೆಗೆ ಆಡಳಿತಾರೂಢ ಸಿಪಿಐ(ಎಂ)ನ ಶಾಸಕ ಹಾಗೂ ನಟ ಎಂ ಮುಖೇಶ್ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ಔಪಚಾರಿಕವಾಗಿ ಬಂಧಿಸಿದೆ ಎಂದು ವರದಿಯಾಗಿದೆ. ”ಶಾಸಕರನ್ನು ಬಂಧಿಸಲಾಗಿದ್ದು, ಅವರ ವೈದ್ಯಕೀಯ ಪರೀಕ್ಷೆ ಮತ್ತು ಸಾಮರ್ಥ್ಯ ಪರೀಕ್ಷೆಯನ್ನು ನಡೆಸಲಾಯಿತು. ಈ ತಿಂಗಳ ಆರಂಭದಲ್ಲಿ ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಯಿತು” ಎಂದು ಅವರ ವಕೀಲರು ದೃಢಪಡಿಸಿದ್ದಾರೆ. ಅತ್ಯಾಚಾರ ಪ್ರಕರಣ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನಟನ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅವರನ್ನು ವಿಚಾರಣೆಗೆ ಕರೆದ ನಂತರ ಅವರ ಬಂಧನವನ್ನು ದಾಖಲಿಸಲಾಗಿದೆ. ಬೆಳಗ್ಗೆ 9.45ಕ್ಕೆ ಕೊಚ್ಚಿಯ ಕರಾವಳಿ ಪೊಲೀಸ್ ಹೆಡ್‌ಕ್ವಾರ್ಟರ್‌ನಲ್ಲಿರುವ ಎಸ್‌ಐಟಿ ಎದುರು ಮುಕೇಶ್ ಹಾಜರಿದ್ದು, ಮೂರೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ತಿರುಪತಿ ದೇವಸ್ಥಾನಕ್ಕೆ ತುಪ್ಪ ಪೂರೈಸಿದ್ದು ಪಾಕಿಸ್ತಾನಿ ಮುಸ್ಲಿಮರೆ?
ಮುಖೇಶ್ ವಿರುದ್ಧ ಎರಡು ಪ್ರಕರಣಗಳನ್ನು ವಡಕ್ಕಂಚೇರಿ ಪೊಲೀಸರು ಮತ್ತು ಇನ್ನೊಂದು ಮರಡು ಪೊಲೀಸರು ದಾಖಲಿಸಿದ್ದಾರೆ. ಎರ್ನಾಕುಲಂ ಜಿಲ್ಲೆ ಮತ್ತು ಸೆಷನ್ಸ್ ನ್ಯಾಯಾಲಯ ಸೆಪ್ಟಂಬರ್ 5 ರಂದು ಮುಕೇಶ್ ವಿರುದ್ಧ ಮಹಿಳಾ ನಟಿ ಮಾಡಿದ್ದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡಿತ್ತು.
ಮಹಿಳೆಯ ಆರೋಪದ ನಂತರ, ಮುಖೇಶ್ ವಿರುದ್ಧ ಐಪಿಸಿಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅದರೆ ನಟ ಮುಖೇಶ್ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ದೂರುದಾರ ಮಹಿಳೆಯ ಬ್ಲ್ಯಾಕ್‌ಮೇಲ್ ಪ್ರಯತ್ನಗಳಿಗೆ ಮಣಿಯಲು ನಿರಾಕರಿಸಿದ ಪರಿಣಾಮವೇ ಈ ಆರೋಪಗಳು ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ಬದ್ಲಾಪುರ್ ಲೈಂಗಿಕ ದೌರ್ಜನ್ಯ ಆರೋಪಿ ಎನ್‌ಕೌಂಟರ್ ಪ್ರಕರಣ; ಪೊಲೀಸರ ಮೇಲೆ ಕುಟುಂಬಸ್ಥರಿಂದ ಗಂಭೀರ ಆರೋಪ
ನ್ಯಾಯಮೂರ್ತಿ ಕೆ ಹೇಮಾ ಸಮಿತಿಯ ವರದಿಯಲ್ಲಿ ಬಹಿರಂಗಗೊಂಡಿರುವ ವಿವಿಧ ನಿರ್ದೇಶಕರು ಮತ್ತು ನಟರ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ನಂತರ ಹಲವಾರು ‘ಗಣ್ಯ’ ಮಲಯಾಳಂ ಚಿತ್ರರಂಗದ ವ್ಯಕ್ತಿಗಳ ವಿರುದ್ಧ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
2017 ರಲ್ಲಿ ನಟಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ನಂತರ ಕೇರಳ ಸರ್ಕಾರವು ಸಮಿತಿಯನ್ನು ರಚಿಸಿತ್ತು. ಸಮಿತಿಯ ವರದಿಯು ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರಿಗೆ ಕಿರುಕುಳ ಮತ್ತು ಶೋಷಣೆಯ ನಿದರ್ಶನಗಳನ್ನು ಎತ್ತಿ ತೋರಿಸಿದೆ. ಹಲವಾರು ನಟರು ಮತ್ತು ನಿರ್ದೇಶಕರನ್ನು ಒಳಗೊಂಡ ಲೈಂಗಿಕ ಕಿರುಕುಳ ಮತ್ತು ಶೋಷಣೆಯ ಈ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಅದರ ತನಿಖೆಗಾಗಿ ಏಳು ಸದಸ್ಯರ ವಿಶೇಷ ತನಿಖಾ ತಂಡವನ್ನು ಆಗಸ್ಟ್ 25 ರಂದು ರಾಜ್ಯ ಸರ್ಕಾರವು ಘೋಷಿಸಿತು.
ಕೇರಳ ಹೈಕೋರ್ಟ್ ಮಂಗಳವಾರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಮಲಯಾಳಂ ನಟ ಸಿದ್ದಿಕ್ ಅವರನ್ನು ಬಂಧಿಸಲು ಪೊಲೀಸರು ಲುಕ್‌ಔಟ್ ಸುತ್ತೋಲೆ ಹೊರಡಿಸಿ ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ. ಯುವ ನಟಿಯೊಬ್ಬರು ಸಿದ್ದಿಕ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ನಟ ದೇಶದಿಂದ ಪಲಾಯನ ಮಾಡುವುದನ್ನು ತಡೆಯಲು ವಿಮಾನ ನಿಲ್ದಾಣಗಳಲ್ಲಿ ಲುಕ್‌ಔಟ್ ಸುತ್ತೋಲೆ ಹೊರಡಿಸಲಾಗಿದೆ. ಅತ್ಯಾಚಾರ ಪ್ರಕರಣ
ವಿಡಿಯೊ ನೋಡಿ: ರೈತರ ಕರೆ ಮೇರೆಗೆ ಜಿಯೋ ಇಂದ ಪೋರ್ಟ್ ಆದವರೊಂದಿಗೆ ಜಿಯೋ ಕಂಪೆನಿಯವರ ಸ್ವಾರಸ್ಯಕರ ಸಂಭಾಷಣೆ ಕೇಳಿ. JioCustomerCare
ಇದನ್ನೂನೋಡಿ: ಸಿದ್ದರಾಮಯ್ಯ ವರ್ಸಸ್ ಸೋಮಣ್ಣ: ವರುಣಾ ಕ್ಷೇತ್ರದ ಮತದಾರರ ಮನದ ಮಾತು. ಅತ್ಯಾಚಾರ ಪ್ರಕರಣ ಅತ್ಯಾಚಾರ ಪ್ರಕರಣ


