ಹಾಸನ ಲೈಂಗಿಕ ಪ್ರಕರಣದಲ್ಲಿ ಅತ್ಯಾಚಾರ ಸಂತ್ರಸ್ತರೊಬ್ಬರ ಒಳ ಉಡುಪುಗಳ ಬಗ್ಗೆ ನಡೆಸಿದ್ದ ವಿಶ್ಲೇಷಣೆಯಲ್ಲಿ ಪ್ರಕರಣದ ಆರೋಪಿ ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಡಿಎನ್‌ಎ ಪತ್ತೆಯಾಗಿದೆ ಎಂದು ವರದಿಯಾಗಿದೆ. ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ವರ್ಷದ ಆರಂಭದಲ್ಲಿ ಸೆಪ್ಟೆಂಬರ್ 9 ರಂದು ಪ್ರಕರಣದ ಆರೋಪಪಟ್ಟಿ ಸಲ್ಲಿಸಿತ್ತು. ಅತ್ಯಾಚಾರ ಸಂತ್ರಸ್ತೆಯ
ಪ್ರಜ್ವಲ್ ರೇವಣ್ಣನ ಕುಟುಂಬದ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ಸಂತ್ರಸ್ತ ಮಹಿಳೆಯ ವಿರೋಧದ ನಡುವೆಯು ಆರೋಪಿ ಅವರನ್ನು ಅತ್ಯಾಚಾರ ಮಾಡುವ ವಿಡಿಯೊವನ್ನು ಎಸ್‌ಐಟಿ ಆರೋಪಪಟ್ಟಿಯಲ್ಲಿ ಸಲ್ಲಿಸಿದೆ. ಅದಾಗ್ಯೂ, ಈ ವಿಡಿಯೊದಲ್ಲಿ ಆರೋಪಿಯ ಮುಖ ಕಾಣಿಸುತ್ತಿಲ್ಲವಾದ್ದರಿಂದ ವಿಡಿಯೋದಲ್ಲಿರುವ ವ್ಯಕ್ತಿ ಪ್ರಜ್ವಲ್ ರೇವಣ್ಣನೇ ಆಗಿದ್ದಾನೆ ಎಂಬ ಫೊರೆನ್ಸಿಕ್ ವರದಿಯನ್ನು ಆರೋಪಪಟ್ಟಿ ಒಳಗೊಂಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಡಿಎನ್‌ಎ ವಿಶ್ಲೇಷಣೆಯ ವರದಿಗಾಗಿ ಕಾಯಲಾಗುತ್ತಿದೆ ಮತ್ತು ವರದಿ ಬಂದ ನಂತರ ಎಸ್‌ಐಟಿ ಪೂರಕ ಆರೋಪಪಟ್ಟಿ ಸಲ್ಲಿಸಲಿದೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿತ್ತು. ಡಿಎನ್‌ಎ ವಿಶ್ಲೇಷಣೆ ವರದಿಯನ್ನು ಇತ್ತೀಚೆಗೆ ಎಸ್‌ಐಟಿಗೆ ಸಲ್ಲಿಸಲಾಗಿದ್ದು, ವೀಡಿಯೊದಲ್ಲಿ ಸಂತ್ರಸ್ತೆ ಧರಿಸಿರುವ ಪೆಟಿಕೋಟ್‌ನಲ್ಲಿ ಪ್ರಜ್ವಲ್ ರೇವಣ್ಣ ಮತ್ತು ಸಂತ್ರಸ್ತೆಯ ಡಿಎನ್‌ಎ ಪತ್ತೆಯಾಗಿದೆ ಎಂದು ವರದಿ ಸೂಚಿಸುತ್ತದೆ.
“ಅತ್ಯಾಚಾರದಿಂದ ಆಘಾತಕ್ಕೊಳಗಾದ ಮಹಿಳೆ, ತನ್ನ ಕೆಲವು ಸೀರೆಗಳು ಮತ್ತು ಪೆಟಿಕೋಟ್‌ನಂತಹ ಒಳ ಉಡುಪುಗಳನ್ನು ಅವರು ವಾಸಿಸುತ್ತಿದ್ದ ಔಟ್‌ಹೌಸ್‌ನ ವಾರ್ಡ್‌ರೋಬ್‌ನಲ್ಲಿ ಇಟ್ಟುಕೊಂಡಿದ್ದರು. ನಂತರ ಸ್ಥಳದಿಂದ ಓಡಿಹೋಗಿದ್ದರು. ಈ ಬಟ್ಟೆಗಳನ್ನು ಒಗೆದಿರಲಿಲ್ಲ” ಎಂದು ಎಸ್‌ಐಟಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ನಾವು ಈ ಬಟ್ಟೆಗಳನ್ನು ಔಟ್‌ಹೌಸ್‌ನಲ್ಲಿ ಕಂಡುಕೊಂಡಿದ್ದೇವೆ. ಅತ್ಯಾಚಾರದ ವಿಡಿಯೊದಲ್ಲಿ ಮಹಿಳೆ ಧರಿಸಿರುವ ಪೆಟಿಕೋಟ್‌ಗೆ ಹೊಂದಿಕೆಯಾಗುವ ಒಂದು ಪೆಟಿಕೋಟ್ ಇದರಲ್ಲಿ ಇದ್ದು, ಅದರನ್ನು ಡಿಎನ್‌ಎ ವಿಶ್ಲೇಷಣೆಗಾಗಿ ನಾವು ಬಟ್ಟೆಗಳನ್ನು ಕಳುಹಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ಮಹಿಳೆಯ ಒಳ ಉಡುಪುಗಳ ಮೇಲೆ ಪ್ರಜ್ವಲ್ ರೇವಣ್ಣ ಡಿಎನ್‌ಎ ಪತ್ತೆಯಾಗಿರುವುದು ಲೈಂಗಿಕ ದೌರ್ಜನ್ಯಕ್ಕೆ ಮತ್ತಷ್ಟು ಫೋರೆನ್ಸಿಕ್ ಸಾಕ್ಷಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜ್ವಲ್ ರೇವಣ್ಣ ಅವರ ಪೋಷಕರಾದ ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ ಮತ್ತು ಭವಾನಿ ರೇವಣ್ಣ ಅವರ ಮಗನ ವಿರುದ್ಧ ಸಾಕ್ಷಿ ಹೇಳದಂತೆ ತಡೆಯಲು ಈ ಸಂತ್ರಸ್ತೆಯನ್ನು ಅಪಹರಿಸಲಾಗಿದೆ ಎಂದು ಕೂಡಾ ಆರೋಪಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆಯ
ದೂರಿನ ನಂತರ ಮಹಿಳೆಯನ್ನು ಎಸ್‌ಐಟಿ ರಕ್ಷಿಸಿತ್ತು ಎಂದು ವರದಿಯಾಗಿದೆ. ಈ ಅಪಹರಣ ಪ್ರಕರಣದಲ್ಲಿ ಹೆಚ್.ಡಿ. ರೇವಣ್ಣ ಹಾಗೂ ಭವಾನಿ ರೇವಣ್ಣ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸೇರಿದ ಎಂಟು ಮಂದಿ ಕಾಂಗ್ರೆಸ್ ಶಾಸಕರ ಅನರ್ಹತೆ ಅರ್ಜಿ ತಿರಸ್ಕರಿಸಿದ ಸ್ಪೀಕರ್
ಬಿಜೆಪಿ ಸೇರಿದ ಎಂಟು ಮಂದಿ ಕಾಂಗ್ರೆಸ್ ಶಾಸಕರ ಅನರ್ಹತೆ ಅರ್ಜಿ ತಿರಸ್ಕರಿಸಿದ ಸ್ಪೀಕರ್


