Homeಅಂಕಣಗಳುಕಳೆದುಹೋದ ದಿನಗಳುಕಳೆದು ಹೋದ ದಿನಗಳು ಭಾಗ 2, ಅಧ್ಯಾಯ -1: ನಿಮಗೂ, ನನಗೂ ಸಂಬಳ ಕೊಡುವುದು ಈ...

ಕಳೆದು ಹೋದ ದಿನಗಳು ಭಾಗ 2, ಅಧ್ಯಾಯ -1: ನಿಮಗೂ, ನನಗೂ ಸಂಬಳ ಕೊಡುವುದು ಈ ಕಾಫಿ ಗಿಡ ಎನ್ನುತ್ತಿದ್ದ ರವೀಂದ್ರನಾಥರು

ಮ್ಯಾನೇಜ್‌ಮೆಂಟಿನ ವಿಚಾರ ಬಂದಾಗ ಅವರು ಯಾವಾಗಲೂ, ಯೋಜನೆ (Planning) ಆಯವ್ಯಯ (Budget) ಮತ್ತು ಐದು Mಗಳು ಬಹಳ ಮುಖ್ಯ ಎಂದು ವಿವರಿಸುವರು.

- Advertisement -
- Advertisement -

ಗಣಪಯ್ಯನವರ ನಂತರ ಹಾರ್ಲೆ ಗುಂಪಿನ ಎಲ್ಲ ವ್ಯವಹಾರಗಳನ್ನು ಸಹಜವಾಗಿಯೇ ರವೀಂದ್ರನಾಥರು ವಹಿಸಿಕೊಂಡರು. ಮೊದಲು ಹಾರ್ಲೆ ಗುಂಪಿನಲ್ಲಿದ್ದ ಬಾವಲಿಮೂಲೆ ಎಸ್ಟೇಟ್ ಗಣಪಯ್ಯನವರ ಕಾಲದಲ್ಲೇ ಮಾರಾಟವಾಗಿ ಹೋಗಿತ್ತು. ಆದರೆ ನಂತರದ ವರ್ಷಗಳಲ್ಲಿ ದೇವಾಲಕೆರೆಯ ಬೈರಳ್ಳಿ ಗ್ರಾಮದ ಆಶೀರ್ವಾದ್ ಎಸ್ಟೇಟ್ ಹಾಗೂ ಸಕಲೇಶಪುರದ ಪಕ್ಕದ ದೊಡ್ಡನಾಗರ ಎಸ್ಟೇಟ್ ಹಾರ್ಲೆ ಮ್ಯಾನೇಜ್ ಮೆಂಟಿಗೆ ಒಳಪಟ್ಟಿದ್ದವು. ಈ ಎರಡೂ ತೋಟಗಳ ಮಾಲಿಕರು ಉದ್ಯಮಿಗಳಾಗಿದ್ದು ಬೆಂಗಳೂರಿನಲ್ಲಿ ಇರುತ್ತಿದ್ದರು.

ಹಾರ್ಲೆ ಎಸ್ಟೇಟಿನಲ್ಲಿದ್ದ ಮಿಡ್ಲ್‌ಟನ್ ಕಟ್ಟಿಸಿದ ಬಂಗಲೆ ಶಿಥಿಲವಾಗಿದ್ದು ಗಣಪಯ್ಯನವರು ಇದ್ದಾಗಲೇ ಹಳೆಯ ಬಂಗಲೆಯ ಪಕ್ಕದಲ್ಲೇ ಹೊಸ ಮನೆಯೊಂದನ್ನು ಕಟ್ಟಿದ್ದರು. ಆದರೆ ಅವರು ಮಾತ್ರ ಹಳೆ ಮನೆಯಲ್ಲೇ ವಾಸವಿದ್ದರು. ಹೊಸ ಮನೆ ಅತಿಥಿಗೃಹದಂತೆ ಇತ್ತು. ರವೀಂದ್ರನಾಥರು ಹಾರ್ಲೆಯ ಹೊಸಮನೆಗೆ ವಾಸಕ್ಕೆ ಬಂದಿದ್ದರೂ, ಅವರ ತಾಯಿ ದೇವಮ್ಮನವರು ಕೊನೆಯವರೆಗೂ ಹಳೆಯ ಮನೆಯಲ್ಲೇ ಇದ್ದರು.

ಎಸ್ಟೇಟ್ ಆಫೀಸ್ ನಲ್ಲಿ ರವೀಂದ್ರನಾಥ್

ಆಗ ಹಾರ್ಲೆ ಗುಂಪಿನ ಎಲ್ಲ ಹಣಕಾಸು ವ್ಯವಹಾರವೂ ಮೈಸೂರು ಬ್ಯಾಂಕಿನಲ್ಲೇ ನಡೆಯುತ್ತಿತ್ತು. ಬ್ಯಾಂಕಿನ ಸಿಬ್ಬಂದಿಯೇ ಕೆಲವು ಸಲ “ಹಾರ್ಲೆ ವ್ಯವಹಾರಕ್ಕೇ ಒಂದು ಬ್ರಾಂಚ್ ಬೇಕು” ಎಂದು ಹೇಳುವಷ್ಟು ಅಲ್ಲಿ ಹಾರ್ಲೆ ಸಮೂಹದ ಹಣಕಾಸು ವ್ಯವಹಾರವಿತ್ತು. ಈ ಮಾತನ್ನು ಕೇಳಿದ ಗಣಪಯ್ಯ ಬ್ಯಾಂಕಿನ ಅಧಿಕಾರಿಗಳಲ್ಲಿ ಹಾಗಾದರೆ ನಮ್ಮಲ್ಲೇ ಒಂದು ಶಾಖೆ ಮಾಡಿ ಎಂದರು.

ಆಗ ಇದ್ದ ಬ್ಯಾಂಕ್ ಮ್ಯಾನೇಜರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಒಂದು ಶಾಖೆ ಹಾರ್ಲೆಯಲ್ಲೇ ಪ್ರಾರಂಭಿಸಿದರೆ ಒಳ್ಳೆಯದೆಂದು ಯೋಚಿಸಿ ಗಣಪಯ್ಯನವರಲ್ಲಿ, ನೀವೊಂದು ಕಟ್ಟಡವನ್ನು ಕಟ್ಟಿಸಿ ಕೊಟ್ಟರೆ ಹಾರ್ಲೆಯಲ್ಲೇ ಬ್ಯಾಂಕಿನ ಶಾಖೆ ಪ್ರಾರಂಭಿಸುತ್ತೇವೆ ಎಂದರು. ಅದರಂತೆ ಗಣಪಯ್ಯನವರು ಹಾರ್ಲೆ ಬಂಗಲೆ ಗೇಟಿನ ಪಕ್ಕದಲ್ಲೇ ಬ್ಯಾಂಕಿನ ಶಾಖೆಯ ಅಗತ್ಯಗಳಿಗೆ ಅನುಕೂಲವಿರುವಂತಹ ಒಂದು ಕಟ್ಟಡವನ್ನು ಕಟ್ಟಿಸಿದರು. ಮೊದಲಿನ ಯೋಜನೆಯಂತೆ ಅಲ್ಲಿ ಬ್ಯಾಂಕಿನ ಶಾಖೆ ಪ್ರಾರಂಭವಾಗಬೇಕಿತ್ತು. ಅಲ್ಲಿ ಶಾಖೆ ತೆರೆದಿದ್ದರೆ ಹಾರ್ಲೆ ಎಸ್ಟೇಟಿನ ವ್ಯವಹಾರ ಮಾತ್ರವಲ್ಲದೆ ಸುತ್ತಲಿನ, ಕುಂಬರಡಿ, ನಡಹಳ್ಳಿ, ಮಲ್ಲೇಗದ್ದೆ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ಅನುಕೂಲವಾಗುತ್ತಿತ್ತು. ಕಟ್ಟಡ ಪೂರ್ತಿಯಾಗುವುದರೊಳಗೆ ಸಕಲೇಶಪುರದ ಶಾಖೆಯ ಮ್ಯಾನೇಜರ್ ಅವರು ವರ್ಗವಾಗಿ ಹೊಸಬರು ಬಂದಿದ್ದರಿಂದ ಆ ಯೋಜನೆ ಮುಂದಕ್ಕೆ ಹೋಯಿತು. ಹೊಸ ಮ್ಯಾನೇಜರ್ ಕಾರಣಾಂತರದಿಂದ ಅದೇ ಶಾಖೆಯನ್ನು ಹಾರ್ಲೆಯ ಬದಲಿಗೆ ಕಾಡುಮನೆ ಟೀ ಎಸ್ಟೇಟಿನಲ್ಲಿ ಪ್ರಾರಂಭಿಸಿದರು. ಹಾರ್ಲೆಯ ಕಟ್ಟಡ ಹಾಗೇ ಉಳಿಯಿತು.

ಕಾಡುಮನೆ ಟೀ ಎಸ್ಟೇಟ್

ರವೀಂದ್ರನಾಥರು ಹಾರ್ಲೆ ತೋಟಗಳ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ, ಆಡಳಿತದಲ್ಲಿ ಆಧುನಿಕತೆಯನ್ನೂ ಜೊತೆಗೆ ಇನ್ನೂ ಹೆಚ್ಚು ಪಾರದರ್ಶಕತೆಯನ್ನೂ ತರಲು ಪ್ರಯತ್ನಿಸಿದರು. ಮುಖ್ಯವಾಗಿ ಎಲ್ಲ ಕೆಲಸಗಾರರಲ್ಲೂ ವಿಶ್ವಾಸವನ್ನು ಹೆಚ್ಚಿಸುವ ಮತ್ತು ಅವರು ಯಾವಾಗ ಕೇಳಿದರೂ ಅವರಿಗೆ ಸಂಬಂಧಪಟ್ಟ ಎಲ್ಲ ಲೆಕ್ಕ ಪತ್ರಗಳ ವಿವರವೂ ಸಂಪೂರ್ಣವಾಗಿ ಮತ್ತು ಸುಲಭವಾಗಿ ಸಿಗುವಂತೆ ಮಾಡಿದರು.

ಮೈಸೂರು ಬ್ಯಾಂಕ್ ಶಾಖೆಗಾಗಿ ಗಣಪಯ್ಯ ಕಟ್ಟಿಸಿದ ಕಟ್ಟಡ

ಬ್ಯಾಂಕಿಗೆಂದು ಕಟ್ಟಿದ್ದ ಕಟ್ಟಡದ ಮಹಡಿಯಲ್ಲಿ ಹಾರ್ಲೆ ಎಸ್ಟೇಟ್ ಮ್ಯಾನೇಜ್‌ಮೆಂಟ್‌ನ ಕಛೇರಿ ಪ್ರಾರಂಭವಾಯಿತು. ಎಲ್ಲ ನೌಕರರಿಗೂ ಅಲ್ಲೇ ಕುಳಿತು ಕೆಲಸಮಾಡಲು ಲೆಕ್ಕ ಪತ್ರ ವ್ಯವಹಾರಗಳನ್ನು ಇಡಲು ವಿಶಾಲವಾದ ವ್ಯವಸ್ಥೆ ಇತ್ತು.

1988ರ ವೇಳೆಗೆ ಹಾರ್ಲೆ ಎಸ್ಟೇಟಿಗೆ ಲೆಕ್ಕ ಪತ್ರಗಳ ವ್ಯವಸ್ಥೆಗೆಂದು ಕಂಪ್ಯೂಟರ್ ಬಂತು. ಇಂದಿನ ಕಂಪ್ಯೂಟರ್ ಗಳಿಗೆ ಹೋಲಿಸಿದರೆ ಅದು ಗಾತ್ರದಲ್ಲಿ ದೊಡ್ಡದು, ಆದರೆ ಕಾರ್ಯಕ್ಷಮತೆ ಬಹಳ ಕಡಿಮೆಯೆಂದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆಗ ಲೋಟಸ್ 123ಯಲ್ಲಿ ಎಸ್ಟೇಟಿನ ಎಲ್ಲ ಲೆಕ್ಕ ಪತ್ರಗಳನ್ನು ಅಳವಡಿಸಲಾಯಿತು. ತೋಟದಲ್ಲಿ ಯಾರಿಗೂ ಕಂಪ್ಯೂಟರಿನ ಯಾವ ಜ್ಞಾನವೂ ಇರಲಿಲ್ಲ. ಬೆಂಗಳೂರಿನಿಂದ ಕೆಲವರು ಬಂದು ನೌಕರರಿಗೆ ಮುಖ್ಯವಾಗಿ ಕಛೇರಿ ನಿರ್ವಹಣೆ ಮಾಡುತ್ತಿದ್ದ ಕಮಲಾ ಭಟ್ ಅವರಿಗೆ ಕಂಪ್ಯೂಟರ್ ಬಳಕೆಯನ್ನು ಹೇಳಿಕೊಡುತ್ತಿದ್ದರು. ಪ್ರಾರಂಭದಲ್ಲಿ ಅವರಿಗೂ ಬಹಳ ಕಷ್ಟವಾಗುತ್ತಿತ್ತು. ನಂತರ ಅಭ್ಯಾಸವಾಯಿತು.

ರವೀಂದ್ರನಾಥರೇ ಮೊದಲು ಎಲ್ಲವನ್ನೂ ಅಭ್ಯಾಸ ಮಾಡಿದರು. ಪುಸ್ತಕಗಳನ್ನಿಟ್ಟುಕೊಂಡು ಗಂಟೆಗಟ್ಟಲೆ ಕುಳಿತು ತಾವೇ ಅರ್ಥಮಾಡಿಕೊಂಡು ತೋಟದ ಲೆಕ್ಕ ಪತ್ರಗಳಿಗೆ ಬೇಕಾದ ರೀತಿಯಲ್ಲಿ ಎಲ್ಲವನ್ನೂ ರೂಪಿಸಿ ನಂತರ ಬೇರೆಯವರಿಗೆ ಹೇಳಿಕೊಡುತ್ತಾ ಬಂದರು. ಕೆಲವು ಸಮಯ ಕಳೆಯುವಷ್ಟರಲ್ಲಿ ಹಾರ್ಲೆ ಗುಂಪಿನ ಎಲ್ಲ ಲೆಕ್ಕಪತ್ರಗಳೂ ಕಂಪ್ಯೂಟರ್‌ನಲ್ಲಿ ನಡೆಯಲಾರಂಭಿಸಿದವು.

ಆಗಲೇ ತೋಟಕ್ಕೆ ಡಿಷ್ ಆಂಟೆನಾ ಬಂತು. ಆಗ ಸುಮಾರು ಹದಿನಾರು ಅಡಿ ಅಗಲದ ದೊಡ್ಡ ಡಿಷ್. ಆಗ ನಾಲ್ಕೈದು ಚಾನಲ್‌ಗಳು ಮಾತ್ರ ದೊರೆಯುತ್ತಿದ್ದವು. ಬಂಗಲೆಯ ಪಕ್ಕದ ವಿಶಾಲವಾದ ಸ್ಥಳದಲ್ಲಿ ಒಂದು ಟಿವಿಯನ್ನೂ ತಂದು ಸ್ಥಾಪಿಸಿದರು. ಅದು ತೋಟದ ಎಲ್ಲ ಕಾರ್ಮಿಕರ ವೀಕ್ಷಣೆಗೆ. ಪ್ರತಿದಿನ ಸಂಜೆ ಅಲ್ಲಿ ಜನರು ಕಿಕ್ಕಿರಿದು ಸೇರುತ್ತಿದ್ದರು. ಕ್ರಿಕೆಟ್ ಪಂದ್ಯಗಳಿದ್ದಾಗ ಕೆಲವು ಸಲ ರವೀಂದ್ರನಾಥರೂ ಬಂದು ಹುಡುಗರೊಡನೆ ಅಲ್ಲೇ ಕ್ರಿಕೆಟ್ ಪಂದ್ಯ ನೋಡುತ್ತ ಕೂರುವರು.

ರವೀಂದ್ರನಾಥರ ಭೇಟಿಯಾದಾಗಲೆಲ್ಲ ಹೊಸ ವಿಚಾರಗಳು ಚರ್ಚೆಗೆ ಬರುವುವು. ಅದು ವೇದ ಉಪನಿಷತ್ ಇರಲಿ, ಆಧುನಿಕ ವಿಜ್ಞಾನವಾಗಿರಲಿ, ಸಾಮಾಜಿಕ ವಿಷಯವಾಗಿರಲಿ ತಾಳ್ಮೆಯಿಂದ ತಿಳಿಸುವರು. ತಮಗೆ ತಿಳಿಯದ್ದನ್ನು ಯಾರು ಹೇಳಿದರೂ ಕೇಳಿಸಿಕೊಳ್ಳುವರು.

ಪರಸ್ಪರ ಮಾತುಕತೆಯಲ್ಲಿ ಅವರು ಅತ್ಯುತ್ತಮ ಬೋಧಕರು.

ಈ ಮುಂದಿನ ವಿಚಾರಗಳು ಅರ್ಥಶಾಸ್ತ್ರದ, ಅಥವಾ ಬಿಸಿನೆಸ್ ಮ್ಯಾನೇಜ್ಮೆಂಟಿನ ವಿದ್ಯಾರ್ಥಿಗಳಿಗೆ ತಿಳಿದ ವಿಷಯಗಳೇ ಆಗಿವೆ. ಆದರೆ ಇಂತಹ ವಿಚಾರಗಳೂ ಎಲ್ಲರಿಗೂ ತಿಳಿದಿರಬೇಕು ಆಗ ಕೃಷಿಯಾಗಲೀ, ಉದ್ಯಮವಾಗಲೀ ಎಲ್ಲವೂ ಸುಗಮವಾಗಿ ನಡೆಯಲು ಸಹಕಾರಿಯಾಗುತ್ತದೆ ಎಂದು ಹೇಳುವರು. ಇಂತಹ ವಿಷಯಗಳನ್ನು ತೋಟದ ನೌಕರರಿಗೂ ವಿವರಿಸುವರು.

ಮ್ಯಾನೇಜ್‌ಮೆಂಟಿನ ವಿಚಾರ ಬಂದಾಗ ಅವರು ಯಾವಾಗಲೂ, ಯೋಜನೆ (Planning) ಆಯವ್ಯಯ (Budget) ಮತ್ತು ಐದು Mಗಳು ಬಹಳ ಮುಖ್ಯ ಎಂದು ವಿವರಿಸುವರು.

ಒಂದು ತೋಟ ಮಾಡುವುದಿರಬಹುದು, ಇತರೆ ಯಾವುದೇ ಇರಬಹುದು. ಮೊದಲು ಯೋಜನೆ ಸರಿಯಾಗಿ ಮಾಡಬೇಕು, ನಂತರ ಆಯವ್ಯಯವನ್ನು ರೂಪಿಸಬೇಕು. ಇದರಿಂದ ನಮ್ಮ ಹಣಕಾಸಿನ ಅಗತ್ಯ ಮತ್ತು ನಮ್ಮ ಸಾಮರ್ಥ್ಯ ಅರಿವಾಗುತ್ತದೆ.

ನಂತರದ್ದೇ ಐದು Mಗಳು ಅವು ಯಾವುವೆಂದರೆ Money, Material, Machinery, Minute and Man.

ಇವುಗಳಲ್ಲಿ ಮೊದಲ ನಾಲ್ಕು Money, ಹಣಕಾಸು, Material, ಬೇಕಾಗುವ ವಸ್ತುಗಳು, Machinery-ಯಂತ್ರ ಮತ್ತು ಉಪಕರಣಗಳು ಮತ್ತು Minute – ನಿಮಿಷ, ಅಂದರೆ ಯಾವ ಸಮಯದಲ್ಲಿ? ಎಂದು. ಇವು ನಾಲ್ಕು  ಬಜೆಟ್‌ನಲ್ಲಿ ನಮಗೆ ತಿಳಿಯುತ್ತದೆ. ಮತ್ತು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬೇಕಾಗುತ್ತದೆ.

ಆದರೆ ನಂತರದ್ದು Man ಇದು ಮಾನವ ಸಂಪನ್ಮೂಲ, ಅಂದರೆ ಆಡಳಿತಗಾರರರು, ಕೆಲಸಗಾರರು ಮಾತ್ರವಲ್ಲ ಸುತ್ತಲಿನ ಸಮಾಜ ಕೂಡಾ ಆಗಿದೆ. ಇದು ಬಹಳ ಮುಖ್ಯವಾದ ಮತ್ತು ಅಷ್ಟೇ ಸಂಕೀರ್ಣವಾದ ವಿಚಾರ, ನೀನು ಈ ಮಾನವ ಸಂಪನ್ಮೂಲವನ್ನು ಗಳಿಸುವುದು ಮತ್ತು ನಿರ್ವಹಿಸುವುದು ಕಲಿತರೆ ಮಾತ್ರ ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯ. ಇದೊಂದು ಕಲೆಯೂ ಹೌದು  ಮಾನವತೆಯೂ ಹೌದು ಎನ್ನುವರು.

ಇದಕ್ಕೆ ಬೇಕಾದಂತೆ ಕಂಪ್ಯೂಟರಿನಲ್ಲಿ ಹಲವು ಪ್ರೋಗ್ರಾಂಗಳನ್ನೂ ಅವರೇ ರೂಪಿಸಿದರು. ನಂತರದ ದಿನಗಳಲ್ಲಿ ನನ್ನ ಎಲ್ಲ ಕೆಲಸಗಳಲ್ಲಿಯೂ ಈ ಪಾಠಗಳು ನೆರವಿಗೆ ಬಂದವು.

ನೆಡಲು ಸಿದ್ಧವಾದ ಗಿಡಗಳು

ರವೀಂದ್ರನಾಥರು ತೋಟ ಕಾರ್ಮಿಕರ ಜೊತೆ ಮೊದಲಿನಿಂದಲೂ ಹೆಚ್ಚು ಒಡನಾಟ ಇದ್ದವರೇ. ಈಗ ಅದು ಇನ್ನೂ ಹೆಚ್ಚಾಯಿತು. ಪ್ರತಿದಿನ ಸಂಜೆ ಕೆಲಸದ ನಂತರ ಬಂಗಲೆಯ ಎದುರಿನ ಕಾಫಿ ಕಣದಲ್ಲೇ ಯವಕರೊಂದಿಗೆ ಸೇರಿ ಅವರೂ ವಾಲಿಬಾಲ್ ಆಡುವರು, ಇತರ ಆಟೋಟಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವರು. ಹಿಂದಿನಿಂದಲೂ ನಡೆದು ಬಂದಿದ್ದ ಗಣಪತಿ ಉತ್ಸವ, ದೀಪಾವಳಿ ಮಾತ್ರವಲ್ಲ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ,  ಗಣರಾಜ್ಯದಿನಗಳ ಆಚರಣೆಗಳೂ ಇನ್ನಷ್ಟು ವಿಜೃಂಬಣೆಯಿಂದ ಆಗತೊಡಗಿದವು. ಈ ಉತ್ಸವಗಳಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಟೋಟಗಳ ಸ್ಪರ್ಧೆ ಅವುಗಳಿಗೆ ಬಹುಮಾನ ಇದ್ದೇ ಇರುತ್ತಿತ್ತು. ಇವೆಲ್ಲದರ ಜೊತೆಯಲ್ಲಿ ವರ್ಷದಲ್ಲಿ ಅತಿ ಹೆಚ್ಚು ದಿನ ಕೆಲಸಮಾಡಿದ ಕೆಲಸಗಾರರಿಗೂ ಬಹುಮಾನ ನೀಡುವುದನ್ನು ಪ್ರಾರಂಭಿಸಿದರು. ಈ ಬಹುಮಾನಗಳಂತೂ ಹೆಚ್ಚಾಗಿ ಮಹಿಳೆಯರ ಪಾಲಾಗುತ್ತಿತ್ತು.

ಕೆಲಸದ ವೇಳೆ ತೋಟಕ್ಕೆ ಹೋದಾಗಲೂ ಕೆಲಸಗಾರರ ಜೊತೆ ಮಾತಾಡುತ್ತ,

“ನಿಮಗೆ ಸಂಬಳ ಕೊಡುವವರು ಯಾರು?” ಎಂದು ಕೇಳುತ್ತಿದ್ದರು.

ಆಗ ಕೆಲಸಗಾರರು ಸಹಜವಾಗಿಯೇ “ನೀವು” ಎನ್ನುತ್ತಿದ್ದರು.

ಆಗ ರವೀಂದ್ರನಾಥರು “ನಾನಲ್ಲ ನಾನು ಬ್ಯಾಂಕಿನಿಂದ ನೋಟು ತಂದು ನಿಮಗೆ ಕೊಡುತ್ತಿದ್ದೇನೆ ಅಷ್ಟೆ, ನಿಮಗೆ ಸಂಬಳ ಕೊಡುವುದು ಈ ಕಾಫಿ ಗಿಡ, ನಿಮಗೂ- ನನಗೂ ಇಲ್ಲಿರುವ ಎಲ್ಲರಿಗೂ ಅಷ್ಟೇ ಇದೇ ಸಂಬಳ ಕೊಡುವುದು” ಎನ್ನುವರು. ಆ ಮಾತನ್ನು ಆಗ ಬಹಳ ಜನರು ಹಗುರವಾಗಿ ಮತ್ತು ಏನೋ ಹೇಳುತ್ತಿದ್ದಾರೆ ಎನ್ನುವ ಭಾವನೆಯಲ್ಲಿ ತೆಗೆದುಕೊಂಡವರಿದ್ದರು. ಆದರೆ ನಮ್ಮ ಮಾತುಗಳು ಪ್ರಾಮಾಣಿಕತೆಯಿಂದ ಕೂಡಿದ್ದಲ್ಲಿ ಜನ ನಿಧಾನವಾಗಿ ಅದನ್ನು ಸ್ವೀಕರಿಸಬಲ್ಲರು ಎಂಬುದು ನಂತರದ ವರ್ಷಗಳಲ್ಲಿ ಅನುಭವಕ್ಕೆ ಬಂತು. ಅದನ್ನು ಮುಂದೆ ಬರೆಯುತ್ತೇನೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು 33 – ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...