ಕೇಂದ್ರ ಸಚಿವ ಸಂಪುಟವು ಬುಧವಾರದಂದು 2025-26ರ ಮಾರುಕಟ್ಟೆ ಋತುವಿನಲ್ಲಿ ಕಚ್ಚಾ ಸೆಣಬಿಗೆ ಕ್ವಿಂಟಲ್‌ಗೆ 5,650 ರೂ.ಗಳ ಕನಿಷ್ಠ ಬೆಂಬಲ ಬೆಲೆಯನ್ನು ಅನುಮೋದಿಸಿದೆ. ಇದು ಈ ಹಿಂದಿನ ಕನಿಷ್ಠ ಬೆಂಬಲ ಬೆಲೆಗಿಂತ 6% ದಷ್ಟು ಅಥವಾ 315 ರೂ.ಗಳ ಹೆಚ್ಚಳವಾಗಿದೆ ಎಂದು ವರದಿ ಹೇಳಿವೆ. ಕಚ್ಚಾ ಸೆಣಬು
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (CCEA)ಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ. ಹೊಸ ಕನಿಷ್ಠ ಬೆಂಬಲ ಬೆಲೆಗಳು (MSP) ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ 66.8%ದಷ್ಟು ಆದಾಯವನ್ನು ಖಚಿತಪಡಿಸುತ್ತವೆ ಮತ್ತು ಬೆಳೆಗಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಸಚಿವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸರ್ಕಾರವು 2014-15ರಲ್ಲಿ ಕ್ವಿಂಟಲ್‌ಗೆ ರೂ. 2,400 ರಿಂದ 2025-26ರ ಮಾರುಕಟ್ಟೆ ಋತುವಿನಲ್ಲಿ ಕ್ವಿಂಟಲ್‌ಗೆ ರೂ. 5,650 ಕ್ಕೆ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ, ಇದು 2.35 ಪಟ್ಟು ಹೆಚ್ಚಾಗಿದೆ. ಸೆಣಬಿನ ರೈತರಲ್ಲಿ 82% ರಷ್ಟು ಜನರು ಪಶ್ಚಿಮ ಬಂಗಾಳಕ್ಕೆ ಸೇರಿದವರಾಗಿದ್ದರೆ, ಅಸ್ಸಾಂ ಮತ್ತು ಬಿಹಾರಗಳು ಸೆಣಬು ಉತ್ಪಾದನೆಯಲ್ಲಿ ತಲಾ 9% ರಷ್ಟು ಪಾಲನ್ನು ಹೊಂದಿವೆ. ಕಚ್ಚಾ ಸೆಣಬು
2025-26 ರ ಮಾರುಕಟ್ಟೆ ಋತುವಿಗಾಗಿ ಕಚ್ಚಾ ಸೆಣಬಿನ ಅನುಮೋದಿತ ಕನಿಷ್ಠ ಬೆಂಬಲ ಬೆಲೆ (MSP) ಸರ್ಕಾರವು 2018-19 ರ ಬಜೆಟ್‌ನಲ್ಲಿ ಘೋಷಿಸಿದಂತೆ ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು MSP ಅನ್ನು ನಿಗದಿಪಡಿಸುವ ತತ್ವಕ್ಕೆ ಅನುಗುಣವಾಗಿದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ.
40 ಲಕ್ಷ ಕೃಷಿ ಕುಟುಂಬಗಳ ಜೀವನೋಪಾಯವು ನೇರವಾಗಿ ಅಥವಾ ಪರೋಕ್ಷವಾಗಿ ಸೆಣಬು ಉದ್ಯಮವನ್ನು ಅವಲಂಬಿಸಿದೆದ್ದು, ಸುಮಾರು 4 ಲಕ್ಷ ಕಾರ್ಮಿಕರು ಸೆಣಬು ಗಿರಣಿಗಳಲ್ಲಿ ನೇರ ಉದ್ಯೋಗವನ್ನು ಪಡೆಯುತ್ತಾರೆ ಮತ್ತು ಸೆಣಬಿನ ವ್ಯಾಪಾರ ಮಾಡುತ್ತಾರೆ. ಕಳೆದ ವರ್ಷ 1.7 ಲಕ್ಷ ರೈತರಿಂದ ಸೆಣಬನ್ನು ಖರೀದಿಸಲಾಗಿದೆ.
ಬೆಲೆ ಬೆಂಬಲ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಭಾರತೀಯ ಸೆಣಬು ನಿಗಮ (ಜೆಸಿಐ) ಕೇಂದ್ರ ಸರ್ಕಾರದ ನೋಡಲ್ ಏಜೆನ್ಸಿಯಾಗಿ ಮುಂದುವರಿಯುತ್ತದೆ ಮತ್ತು ಅಂತಹ ಕಾರ್ಯಾಚರಣೆಗಳಲ್ಲಿ ಉಂಟಾದ ನಷ್ಟಗಳು, ಯಾವುದಾದರೂ ಇದ್ದರೆ, ಕೇಂದ್ರ ಸರ್ಕಾರದಿಂದ ಸಂಪೂರ್ಣವಾಗಿ ಮರುಪಾವತಿಸಲ್ಪಡುತ್ತವೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂಓದಿ: ಜಮ್ಮು ಕಾಶ್ಮೀರ | ನಿಗೂಢ ಕಾಯಿಲೆಗೆ 17 ಜನರು ಬಲಿ; ಕಂಟೈನ್ಮೆಂಟ್ ವಲಯ ರಚನೆ
ಜಮ್ಮು ಕಾಶ್ಮೀರ | ನಿಗೂಢ ಕಾಯಿಲೆಗೆ 17 ಜನರು ಬಲಿ; ಕಂಟೈನ್ಮೆಂಟ್ ವಲಯ ರಚನೆ


