ಸರ್ಕಾರಿ ಹಾಗೂ ಖಾಸಗಿ ವಲಯದ ಸುಮಾರು 14 ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಭಾರಿ ಮೊತ್ತದ ದಂಡ ವಿಧಿಸಿದೆ. ಈ ಬ್ಯಾಂಕುಗಳು ಆರ್‌ಬಿಐ ನೀಡಿದಂತಹ ನಿಮಯಗಳನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ದಂಡಗಳನ್ನು ವಿಧಿಸಲಾಗಿದೆ.
ಆರ್‌ಬಿಐ ನೀಡಿದಂತಹ ಒಂದಕ್ಕಿಂತ ಹೆಚ್ಚಿನ ನಿಯಮಾವಳಿಗಳನ್ನು ಈ ಬ್ಯಾಂಕುಗಳು ಉಲ್ಲಂಘಿಸಿದ್ದು, ಹಾಗಾಗಿ ಸುಮಾರು 0.5 ಕೋಟಿ ರೂಪಾಯಿಯಿಂದ 2 ಕೋಟಿವರೆಗೆ ದಂಡವನ್ನು ಹಾಕಲಾಗಿದೆ. ಇತ್ತೀಚೆಗೆ ಆರ್‌ಬಿಐ ಕಂಪನಿಗಳ ಅಕೌಂಟ್‌ಗಳನ್ನು ಪರಿಶೀಲಿಸಿದಾಗ ಬ್ಯಾಂಕುಗಳು ಬ್ಯಾಂಕಿನ ನಿಯಂತ್ರಣ ಕಾಯ್ದೆ 1949 ರ ನಿಬಂಧನೆಗಳನ್ನು ಮತ್ತು ನಿಯಮಾವಳಿಗಳನ್ನು ಗಾಳಿಗೆ ತೂರಿ ಅವುಗಳನ್ನು ಉಲ್ಲಂಘಿಸಿದ್ದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ರಿಲಯನ್ಸ್ ಫೈನಾನ್ಸ್‌ಗಳಿಂದ ಬ್ಯಾಂಕಿಂಗ್ ಫ್ರಾಡ್- ಕರ್ನಾಟಕ ಬ್ಯಾಂಕ್‌ಗೆ ವಂಚನೆ
ಆರ್‌ಬಿಐ ಈ ಎಲ್ಲಾ ಬ್ಯಾಂಕುಗಳಿಗೆ ದಂಡ ವಿಧಿಸಿ ನೋಟಿಸ್‌ಗಳನ್ನು ಕಳುಹಿಸಿದ್ದಾರೆ. ದಂಡ ವಿಧಿಸಲಾಗಿರುವಂತಹ ಬ್ಯಾಂಕುಗಳಿಂದ ಬರುವಂತಹ ಪ್ರತ್ಯುತ್ತರಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಆರ್‌ಬಿಐ ಹೇಳಿದ್ದು, ಜೊತೆಗೆ 14 ಬ್ಯಾಂಕುಗಳ ಮೇಲೆ ದಂಡವನ್ನು ವಿಧಿಸುವ ಅಗತ್ಯವಿದೆ ಎಂದು ಅದು ತಿಳಿಸಿದೆ.
ಬ್ಯಾಂಕ್ ಆಫ್ ಬರೋಡಾ ಮೇಲೆ 2 ಕೋಟಿ ರೂಪಾಯಿ ದಂಡವನ್ನು ವಿಧಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೇಲೆ ಅತೀ ಕಡಿಮೆ (0.5 ಕೋಟಿ) ರೂಪಾಯಿ ದಂಡವನ್ನು ವಿಧಿಸಿದೆ. ಇನ್ನುಳಿದಂತಹ 12 ಬ್ಯಾಂಕುಗಳ ಮೇಲೆ ಸಮನಾಗಿ 1 ಕೋಟಿ ರೂಪಾಯಿ ದಂಡವನ್ನು ಆರ್‌ಬಿಐ ವಿಧಿಸಿದೆ.
ಇದನ್ನೂ ಓದಿ: ದುಡ್ಡು ಕಟ್ಟಲಾಗದಿದ್ದರೆ ಸತ್ತೋಗಿ; ಕೊರೊನಾ ಸಮಯದಲ್ಲೂ ರಕ್ತ ಹೀರುತ್ತಿರುವ ಫೈನಾನ್ಸ್‌ಗಳು
ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಸಾಲವನ್ನು ನೀಡುವುದರಲ್ಲಿ ಆರ್‌ಬಿಐ ತಿಳಿಸಿದ ನಿಯಮಗಳನ್ನು ಪಾಲಿಸದಿರುವುದರಿಂದ ಮತ್ತು ಇನ್ನಿತರೆ ಕಾರಣಗಳಲ್ಲಿ ಬ್ಯಾಂಕುಗಳು ನಿಯಮಗಳನ್ನು ಪಾಲಿಸದೆ ಇರುವುದರಿಂದ ಈ ಬ್ಯಾಂಕುಗಳ ಮೇಲೆ ಭಾರಿ ಮೊತ್ತದ ದಂಡವನ್ನು ವಿಧಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಬಂಧನ್ ಬ್ಯಾಂಕ್ ಲಿಮಿಟೆಡ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕ್ರೆಡಿಟ್ ಸುಸೇ ಏಜಿ, ಇಂಡಿಯನ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಲಿಮಿಟೆಡ್, ಕರ್ನಾಟಕ ಬ್ಯಾಂಕ್ ಲಿಮಿಟೆಡ್, ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ದ ಜಮ್ಮು ಆಂಡ್ ಕಾಶ್ಮೀರ್ ಬ್ಯಾಂಕ್ ಲಿಮಿಟೆಡ್ ಮತ್ತು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಈ ಪಟ್ಟಿಯಲ್ಲಿ ಸೇರಿದೆ.
ಇದನ್ನೂ ಓದಿ: ಕೊರೊನಾ ಕಾಲದಲ್ಲಿಯೂ ಬಡ್ಡಿಗೆ ಬಡ್ಡಿ ಸೇರಿಸಿ ಹಣ ವಸೂಲಿ: ಮುತ್ತೂಟ್ ಫೈನಾನ್ಸ್‌ನಿಂದ ಗ್ರಾಹಕರಿಗೆ ಕಿರುಕುಳ ಆರೋಪ


