ಐಪಿಎಲ್ 15ನೇ ಆವೃತ್ತಿಯ ಲೀಗ್ ಹಂತ ಮುಕ್ತಾಯದ ಹಂತಕ್ಕೆ ಬಂದಿದೆ. 18 ಅಂಕ ಗಳಿಸಿರುವ ಗುಜರಾತ್ ಟೈಟನ್ಸ್ ಮತ್ತು ತಲಾ 17 ಅಂಕ ಗಳಿಸಿರುವ ಚನ್ನೈ ಮತ್ತು ಲಕ್ನೋ ತಂಡಗಳು ಈಗಾಗಲೇ ಪ್ಲೇಆಫ್ ಪ್ರವೇಶಿಸಿವೆ. ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಹೆಚ್ಚು ಸೋಲು ಕಂಡ ಪರಿಣಾಮ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿವೆ. ಹಾಗಾಗಿ ಉಳಿದ 1 ಪ್ಲೇಆಫ್ ಸ್ಥಾನಕ್ಕಾಗಿ 3 ತಂಡಗಳು ಪೈಪೋಟಿ ನಡೆಸುತ್ತಿವೆ. ಇನ್ನೊಂದು ಪಂದ್ಯ ಗೆದ್ದರೆ RCB ಪ್ಲೇಆಫ್ ಪ್ರವೇಶ ಸಾಧ್ಯ. ಆದರೆ ಮಳೆ ಬಂದು ಪಂದ್ಯ ರದ್ದಾದರೆ ಅಥವಾ ಆರ್‌ಸಿಬಿ ಕಡಿಮೆ ಅಂತರದಲ್ಲಿ ಸೋತರೂ ಮುಂಬೈ ಇಂಡಿಯನ್ಸ್ ತಂಡ ಕೂಡ ಸೋಲು ಕಂಡರೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಬಹುದು. ಬನ್ನಿ ಆರ್‌ಸಿಬಿ ಪ್ಲೇಆಫ್ ಸಾಧ್ಯತೆಗಳನ್ನು ನೋಡೋಣ.
12 ಪಂದ್ಯಗಳಿಂದ 7 ಜಯ ಮತ್ತು 6 ಸೋಲಿನೊಂದಿಗೆ 14 ಅಂಕ ಗಳಿಸಿರುವ RCB ಅಂಕ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದ್ದು, ಸತತ ನಾಲ್ಕನೇ ಬಾರಿಗೆ ಪ್ಲೇ ಆಫ್ ಪ್ರವೇಶಿಸಲು ಕಾದು ಕುಳಿತಿದೆ. ತಲಾ 14 ಅಂಕ ಪಡೆದಿರುವ ರಾಜಸ್ಥಾನ್ ರಾಯಲ್ಸ್ 5ನೇ, ಮುಂಬೈ 6ನೇ ಸ್ಥಾನದಲ್ಲಿವೆ. ಈ ಎಲ್ಲಾ ತಂಡಗಳಿಗೂ ಪ್ಲೇ ಆಫ್ ತಲುಪುವ ಅವಕಾಶವಿದೆ.

ಆರ್‌ಸಿಬಿ ಪ್ಲೇಆಫ್ ಸಾಧ್ಯತೆಗಳು ಹೀಗಿವೆ
ಆರ್‌ಸಿಬಿ ಮೇ 21 ರಂದು ಗುಜರಾತ್ ಟೈಟನ್ಸ್ ಎದುರು ಕೊನೆಯ ಪಂದ್ಯದಲ್ಲಿ ಸೆಣಸಲಿದೆ. ಆ ಪಂದ್ಯದಲ್ಲಿ ಗೆದ್ದರೆ 16 ಅಂಕಗಳೊಂದಿಗೆ ಸುಲಭವಾಗಿ ಪ್ಲೇ ಆಫ್ ತಲುಪಲಿದೆ. ಪಂದ್ಯ ಸೋತರೂ, ಸೋಲಿನ ಅಂತರ ಕಡಿಮೆ ಇದ್ದಲ್ಲಿ 14 ಅಂಕಗಳು ಮತ್ತು ಅದರ ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ ಪ್ರವೇಶ ಪಡೆಯಬಹುದು. ಆರ್‌ಸಿಬಿಯ ಸದ್ಯದ ನೆಟ್ ರನ್ ರೇಟ್ +0.180 ಇದೆ. ಆದರೆ ಆಗ ಮುಂಬೈ ಇಂಡಿಯನ್ಸ್ ತಂಡವು ಭಾನುವಾರ ನಡೆಯುವ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋಲಬೇಕಿದೆ. ಆಗ ಮುಂಬೈ ಸಹ 14 ಅಂಕ ಗಳಿಸಿರುತ್ತದೆ. ಆದರೆ ನೆಟ್ ರನ್ ರೇಟ್ (-0.128) ಆರ್‌ಸಿಬಿಗಿಂತ ಕಡಿಮೆ ಇರುವುದರಿಂದ ಆರ್‌ಸಿಬಿಗೆ ಅನುಕೂಲವಾಗುತ್ತದೆ. ಆದರೆ ಇತ್ತೀಚಿನ ಪಂದ್ಯಗಳಲ್ಲಿ ಸಾಂಘಿಕ ಪ್ರದರ್ಶನ ನೀಡುತ್ತಿರುವ ಮುಂಬೈ ತಂಡವು ಕೊನೆಯ ಸ್ಥಾನದಲ್ಲಿರುವ ಹೈದರಾಬಾದ್ ಎದುರು ಸೋಲುವುದು ಅಷ್ಟು ಸುಲಭವಲ್ಲ.
ಮಳೆ ಬಂದರೆ?
ಆರ್‌ಸಿಬಿ ಪಂದ್ಯಕ್ಕೆ ಮಳೆ ಬಂದು ಪಂದ್ಯ ರದ್ದಾದರೆ ಒಂದು ಅಂಕ ಸಿಗುತ್ತದೆ. ಆಗ ಆರ್‌ಸಿಬಿ 15 ಅಂಕ ಗಳಿಸಿರುತ್ತದೆ. ಆದರೆ ಅದಕ್ಕೂ ಮುನ್ನ ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಹೈದರಾಬಾದ್ ವಿರುದ್ಧ ಸೋಲಬೇಕಿದೆ. ಇಲ್ಲವಾದಲ್ಲಿ ಮುಂಬೈ ಪ್ಲೇ ಆಫ್ ಪ್ರವೇಶಿಸುತ್ತದೆ. ಆರ್‌ಸಿಬಿ ಟೂರ್ನಿಯಿಂದ ಹೊರ ಬೀಳುತ್ತದೆ.
ಒಂದು ವೇಳೆ ಮುಂಬೈ ಸೋತು, ಆರ್‌ಸಿಬಿ ಕೂಡ ದೊಡ್ಡ ಅಂತರದಲ್ಲಿ ಸೋತಲ್ಲಿ ಎರಡೂ ತಂಡಗಳು ಟೂರ್ನಿಯಿಂದ ಹೊರಬಿದ್ದು, 14 ಅಂಕ ಮತ್ತು +0.148 ನೆಟ್ ರನ್ ರೇಟ್ ಹೊಂದಿರುವ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ ಆಫ್ ಪ್ರವೇಶಿಸುತ್ತದೆ.
ಮೊದಲ ಕ್ವಾಲಿಫೈಯರ್ ಪಂದ್ಯ ಮೇ 23 ರಂದು ನಡೆದರೆ, ಎಲಿಮಿನೇಟರ್ ಪಂದ್ಯ 24 ರಂದು ನಡೆಯಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯ 26 ರಂದು ನಡೆದರೆ, ಫೈನಲ್ ಪಂದ್ಯ ಮೇ 28 ರಂದು ನಡೆಯಲಿದೆ.
ಇದನ್ನೂ ಓದಿ: ಕರಾವಳಿ: ಬೆಚ್ಚಿ ಬೀಳಿಸಿದ ಬುದ್ಧಿವಂತರ ಸೀಮೆಯ “ತಿರುಚು” ಫಲಿತಾಂಶ!


