Homeಮುಖಪುಟ‘ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ, ಅವು ಪ್ರತಿದಿನ ಜನರನ್ನು ಕಚ್ಚುತ್ತಿವೆ’: ಸಂಸದೆ ರೇಣುಕಾ ಚೌಧರಿ

‘ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ, ಅವು ಪ್ರತಿದಿನ ಜನರನ್ನು ಕಚ್ಚುತ್ತಿವೆ’: ಸಂಸದೆ ರೇಣುಕಾ ಚೌಧರಿ

- Advertisement -
- Advertisement -

ನವದೆಹಲಿ: ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಸೋಮವಾರ ಸಂಸತ್ತಿನ ಆವರಣಕ್ಕೆ ನಾಯಿಯೊಂದನ್ನು ಕರೆತಂದಿದ್ದು, ಕೆಲವು ಸಂಸದರು ಬೀದಿನಾಯಿಯನ್ನು ಕರೆತಂದಿದ್ದಾರೆ ಎಂದು ಆಕ್ಷೇಪಿಸಿದ್ದಾರೆ, ಮಾಧ್ಯಮಗಳ ಎದಿರು ಈ ಆಕ್ಷೇಪಣೆಗಳನ್ನು ತಳ್ಳಿಹಾಕಿರುವ ರೇಣುಕಾ ಚೌಧರಿ ‘ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ, ಅವು ಪ್ರತಿದಿನ ಜನರನ್ನು ಕಚ್ಚುತ್ತಿವೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ರಸ್ತೆಯಲ್ಲಿ ಸ್ಕೂಟರ್-ಕಾರು ಡಿಕ್ಕಿ ಹೊಡೆದಿದ್ದರಿಂದ ಗಾಯಗೊಂಡಿದ್ದ ನಾಯಿಮರಿಯನ್ನು ಗಮನಿಸಿದ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ, ಅದನ್ನು ತಮ್ಮ ಕಾರಿನಲ್ಲಿ ಸಂಸತ್ತಿಗೆ ಕರೆ ತಂದಿದ್ದಾರೆ. ಸ್ವಲ್ಪ ಸಮಯದ ಆ ನಾಯಿಮರಿ ಕಾಂಗ್ರೆಸ್ ಸಂಸದೆ ಕಾರಿನಿಂದ ಇಳಿದು ಹೊರಟುಹೋಗಿದೆ. ಈ ವಿಚಾರವನ್ನು ಹಲವು ಸಂಸದರು ಆಕ್ಷೇಪಿಸಿದ್ದಾರೆ. ಇದರಿಂದ ಕೋಪಗೊಂಡ ರೇಣುಕಾ ಚೌಧರಿ “ಏನಾದರೂ ಕಾನೂನು ಇದೆಯೇ? ನಾನು ದಾರಿಯಲ್ಲಿ ಹೋಗುತ್ತಿದ್ದೆ. ಕಾರು ಡಿಕ್ಕಿಯಿಂದ ಗಾಯಗೊಂಡಿದ್ದ ಈ ಪುಟ್ಟ ನಾಯಿಮರಿ ರಸ್ತೆಯಲ್ಲಿ ಅಲೆದಾಡುತ್ತಿತ್ತು. ಅದು ಮತ್ತೊಂದು ವಾಹನದ ಚಕ್ರಕ್ಕೆ ಸಿಲುಕಬಹುದು ಎಂದು ನಾನು ಅದನ್ನು ಎತ್ತಿಕೊಂಡು, ಕಾರಿನಲ್ಲಿ ಇರಿಸಿ, ಸಂಸತ್ತಿಗೆ ಕರೆತಂದೆ. ಕಾರು ಹೊರಟುಹೋಯಿತು ಆದರೆ ನಾಯಿಯೂ ಹಾಗೆಯೇ ಇತ್ತು” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಈ ವೇಳೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ(ಎನ್‌ಡಿಎ) ಯಾವುದೇ ಸಂಸದರನ್ನು ಹೆಸರಿಸದೆ, ಆಡಳಿತ ಪಕ್ಷವನ್ನು ಟೀಕಿಸಿದ ಚೌಧರಿ, “ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ” ಮತ್ತು ಅದರ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದಿದ್ದಾರೆ.

“ಕಚ್ಚುವ ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ. ಅವು ಸರ್ಕಾರವನ್ನು ನಡೆಸುತ್ತವೆ. ನಾವು ಮೂಕ ಪ್ರಾಣಿಯನ್ನು ನೋಡಿಕೊಳ್ಳುತ್ತೇವೆ ಮತ್ತು ಇದು ದೊಡ್ಡ ವಿಷಯ ಮತ್ತು ಚರ್ಚೆಯ ವಿಷಯವಾಗಿದೆ. ಸರ್ಕಾರಕ್ಕೆ ಬೇರೆ ಕೆಲಸವಿಲ್ಲವೇ? ನಾನು ನಾಯಿಯನ್ನು ಮನೆಗೆ ಕಳುಹಿಸಿ ಮನೆಯಲ್ಲಿಯೇ ಇಟ್ಟುಕೊಳ್ಳಲು ಹೇಳಿದೆ… ಸಂಸತ್ತಿನಲ್ಲಿ ಕುಳಿತು ಪ್ರತಿದಿನ ನಮ್ಮನ್ನು ಕಚ್ಚುವವರ ಬಗ್ಗೆ ನಾವು ಮಾತನಾಡುವುದಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ವಿಶೇಷವಾಗಿ ಲೋಕಸಭೆಯಲ್ಲಿ, ದೇಶಾದ್ಯಂತ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಪದೇ ಪದೇ ಸರ್ಕಾರದ ಘೋಷಣೆಗಳನ್ನು ಕೂಗಿದರು ಮತ್ತು ಪ್ರತಿಭಟನೆ ನಡೆಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನರೇಗಾ ಹೆಸರು ಬದಲಾವಣೆಯು ರಾಜ್ಯಗಳ ಸ್ವಾಯತ್ತತೆ, ಅಂಚಿನ ಸಮುದಾಯಗಳ ಹಕ್ಕಿನ ಮೇಲೆ ನೇರ ದಾಳಿ: ರಾಹುಲ್

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಹೆಸರು ಬದಲಾವಣೆಯು ರಾಜ್ಯಗಳ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದೆ. ಅಂಚಿನ ಸಮುದಾಯಗಳ ಹಕ್ಕಿನ ಮೇಲೆ ನೇರವಾಗಿ ದಾಳಿ ಮಾಡಲಾಗುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ...

‘2025ರಲ್ಲಿ ಗಾಜಾ ಪತ್ರಕರ್ತರಿಗೆ ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳವಾಯಿತು’: ಪ್ಯಾಲೆಸ್ಟೀನಿಯನ್ ಪತ್ರಕರ್ತರ ಒಕ್ಕೂಟ

ಪ್ಯಾಲೆಸ್ಟೀನಿಯನ್ ಪತ್ರಕರ್ತರ ವಿರುದ್ಧ ಇಸ್ರೇಲ್‌ನ ವ್ಯವಸ್ಥಿತ ಹಿಂಸಾಚಾರ ಅಭಿಯಾನವು ಅಕ್ಟೋಬರ್ 2023 ರಿಂದ ನಡೆಯುತ್ತಿದೆ, ಇದು 2025 ರಲ್ಲಿ ಅತ್ಯಂತ ಮಾರಕ ಸ್ಥಿತಿಗೆ ತಲುಪಿತು. ಡಜನ್‌ಗಟ್ಟಲೆ ಮಾಧ್ಯಮ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ದಾಳಿ...

ಗಡಿ ಘರ್ಷಣೆ ಕೊನೆಗೊಳಿಸಿದ ಥೈಲ್ಯಾಂಡ್ ಮತ್ತು ಕಾಂಬೋಡಿಯಾ: ತಕ್ಷಣದ ಕದನ ವಿರಾಮಕ್ಕೆ ಎರಡು ದೇಶಗಳ ಒಪ್ಪಿಗೆ

ಥೈಲ್ಯಾಂಡ್ ಮತ್ತು ಕಾಂಬೋಡಿಯಾಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ, ಇದು ಇತ್ತೀಚಿನ ಗಡಿ ಘರ್ಷಣೆಗಳ ನಂತರದ ಉದ್ವಿಗ್ನತೆಯನ್ನು ಕಡಿಮೆ ಮಾಡುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.  ಶನಿವಾರ ಎರಡೂ ದೇಶಗಳ ರಕ್ಷಣಾ ಸಚಿವರು ಸಹಿ ಮಾಡಿದ...

‘ಬಡವರ ಹೊಟ್ಟೆಗೆ ಒದ್ದ ನಂತರ, ಮೋದಿ ಸರ್ಕಾರ ಅವರ ಬೆನ್ನಿಗೆ ಚೂರಿ ಹಾಕಿದೆ’: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಯುಪಿಎಯ ದೂರದೃಷ್ಟಿಯ ಕಾರ್ಯಕ್ರಮವಾದ ಎಂಜಿಎನ್‌ಆರ್‌ಇಜಿಎಯನ್ನು ರದ್ದುಗೊಳಿಸುವ ಮೂಲಕ ಅವರು "ಬಡವರ ಹೊಟ್ಟೆಗೆ...

ಕರ್ನಾಟಕದ ವಿಚಾರದಲ್ಲಿ ಪಿಣರಾಯಿ ವಿಜಯನ್ ಹಸ್ತಕ್ಷೇಪ ಮಾಡಬಾರದು: ಡಿಸಿಎಂ ಡಿ.ಕೆ. ಶಿವಕುಮಾರ್

"ಕೋಗಿಲು ಬಡಾವಣೆಯಲ್ಲಿ ಅಕ್ರಮ ಒತ್ತುವರಿ ಪ್ರದೇಶ ನೆಲಸಮಗೊಳಿಸಿರುವ ಪ್ರಕರಣದಲ್ಲಿ ಸತ್ಯಾಸತ್ಯತೆ ಅರಿಯದೇ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕರ್ನಾಟಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು" ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು...

ಮಧ್ಯಪ್ರದೇಶ| ಬಿಜೆಪಿ ನಾಯಕಿ ಮಗನ ಮೇಲೆ ಅತ್ಯಾಚಾರ ಆರೋಪ; ವಿಷ ಸೇವಿಸಿದ ಸಂತ್ರಸ್ತೆ ಸ್ಥಿತಿ ಗಂಭೀರ

ಮಧ್ಯಪ್ರದೇಶದ ಶಿವಪುರಿ ನಗರ ಸಭೆಯ ಅಧ್ಯಕ್ಷೆ ಮತ್ತು ಬಿಜೆಪಿ ನಾಯಕಿ ಗಾಯತ್ರಿ ಶರ್ಮಾ ಅವರ ಪುತ್ರ ರಜತ್ ಶರ್ಮಾ ವಿರುದ್ಧ ಏಪ್ರಿಲ್ 30 ರಂದು ಎಫ್‌ಐಆರ್ ದಾಖಲಿಸಿದ್ದ ಮಹಿಳೆಯ ಆರೋಗ್ಯ ಹದಗೆಟ್ಟ ನಂತರ...

ದೆಹಲಿಯಲ್ಲಿ ಹೊಸ ವರ್ಷಕ್ಕೂ ಮುನ್ನ ಬೃಹತ್ ಕಾರ್ಯಾಚರಣೆ: 285 ಜನರ ಬಂಧನ, ಶಸ್ತ್ರಾಸ್ತ್ರಗಳು ಮತ್ತು ಮಾದಕ ವಸ್ತುಗಳ ವಶ

ದೆಹಲಿ ಹೊಸ ವರ್ಷಾಚರಣೆಗೆ ಸಜ್ಜಾಗುತ್ತಿದ್ದಂತೆ, ಹಬ್ಬದ ದಟ್ಟಣೆಯಲ್ಲಿ ಅಪರಾಧಗಳನ್ನು ತಡೆಗಟ್ಟುವ ಪ್ರಯತ್ನದಲ್ಲಿ, ಪೊಲೀಸರು ರಾಷ್ಟ್ರ ರಾಜಧಾನಿಯಾದ್ಯಂತ ರಾತ್ರಿಯಿಡೀ ವಿಸ್ತೃತ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ನೂರಾರು ಆರೋಪಿಗಳನ್ನು ಬಂಧಿಸಿದ್ದು, ಅಕ್ರಮ ಶಸ್ತ್ರಾಸ್ತ್ರಗಳು, ಮಾದಕ...

ಅತ್ಯಾಚಾರಿ ಸೆಂಗಾರ್‌ ಜೀವಾವಧಿ ಶಿಕ್ಷೆ ಅಮಾನತು; ದೆಹಲಿ ಹೈಕೋರ್ಟ್ ಮುಂದೆ ಸಂತ್ರಸ್ತೆ ತಾಯಿ ಪ್ರತಿಭಟನೆ

ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ನ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ದೆಹಲಿ ಹೈಕೋರ್ಟ್ ಹೊರಗೆ ಶುಕ್ರವಾರ (ಡಿ.26) ಪ್ರತಿಭಟನೆ ನಡೆಸಲಾಯಿತು. ಸೆಂಗಾರ್‌ಗೆ ನಿಡುರವ ಜಾಮೀನು ತಿರಸ್ಕರಿಸಬೇಕೆಂದು...

‘ಉತ್ತರ ಪ್ರದೇಶದ ಗಾಳಿ ಕರ್ನಾಟಕಕ್ಕೂ ಬೀಸಿದೆ, ಬುಲ್ಡೋಜರ್ ನೀತಿ ಇಲ್ಲೂ ಜಾರಿ ಮಾಡುವ ಕೆಲಸ ನಡೆಯುತ್ತಿದೆ: ಪಿಣರಾಯಿ ವಿಜಯನ್ ಟೀಕೆ

ಬೆಂಗಳೂರು: ಕರ್ನಾಟಕ ಸರ್ಕಾರಕ್ಕೂ ಉತ್ತರ ಪ್ರದೇಶ ಸರ್ಕಾರದ ಗಾಳಿ ಬಿಸಿದೆ. ಅಲ್ಲಿನ ಬುಲ್ಡೋಜರ್ ನೀತಿಯನ್ನು ಇಲ್ಲೂ ತರುವ ಕೆಲಸ ನಡೆಯುತ್ತಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರ್ನಾಟಕದ ಕಾಂಗ್ರೆಸ್​​​ ಸರ್ಕಾರದ ವಿರುದ್ಧ...

ಡೆಹ್ರಾಡೂನ್‌ನಲ್ಲಿ ಜನಾಂಗೀಯ ದಾಳಿ; ಚಾಕು ಇರಿತಕ್ಕೆ ಒಳಗಾಗಿದ್ದ ತ್ರಿಪುರ ವಿದ್ಯಾರ್ಥಿ ಸಾವು

ಜನಾಂಗೀಯ ನಿಂದನೆಯಿಂದ ಪ್ರಾರಂಭವಾಯಿತು ಎನ್ನಲಾದ ಜಗಳವು ಹಿಂಸಾತ್ಮಕ ಪ್ರತಿಭಟನೆಗೆ ತಿರುಗಿದ್ದು, ಚಾಕು ಇರಿತದ ನಂತರ ತ್ರಿಪುರದ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಉತ್ತರಾಖಂಡ್ ಆಸ್ಪತ್ರೆಯಲ್ಲಿ ಎರಡು ವಾರಗಳಿಗೂ ಹೆಚ್ಚು ಕಾಲ ಚಿಕಿತ್ಸೆ ಪಡೆಯುತ್ತಿದ್ದ...