Homeಕರೋನಾ ತಲ್ಲಣಆದಿತ್ಯನಾಥ್ ಕುರಿತ ಪೋಸ್ಟ್ ಕಾರ್ಡ್‌ ಸುಳ್ಳು ಬಯಲು; ವಾಸ್ತವದಲ್ಲಿ ಇದು ಉಲ್ಟಾ ಕೇಸು | ನವೀನ್...

ಆದಿತ್ಯನಾಥ್ ಕುರಿತ ಪೋಸ್ಟ್ ಕಾರ್ಡ್‌ ಸುಳ್ಳು ಬಯಲು; ವಾಸ್ತವದಲ್ಲಿ ಇದು ಉಲ್ಟಾ ಕೇಸು | ನವೀನ್ ಸೂರಿಂಜೆ

- Advertisement -
- Advertisement -

“ಮಹಾರಾಷ್ಟ್ರದ ಮುಖ್ಯಮಂತ್ರಿ ಆಕ್ಸಿಜನ್ ಪೂರೈಸುವಂತೆ ಪ್ರಧಾನಿಗೆ ಕೇಳಿಕೊಂಡರು. ದೆಹಲಿ ಮುಖ್ಯಮಂತ್ರಿ ಪ್ರಧಾನಿಯನ್ನು ಕೈಮುಗಿದು ಕೇಳಿಕೊಂಡರು. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗರೂ ಕೇಳಿಕೊಂಡರು. ಅದರೆ ಉತ್ತರ ಪ್ರದೇಶ ಸಂತ ಕಾವಿಧಾರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರ ಎಂಟರಿಂದ ಹತ್ತು ಆಕ್ಸಿಜನ್ ಘಟಕಗಳನ್ನೇ ಸ್ಥಾಪಿಸಿದರು” ಎಂದು ಪೋಸ್ಟ್ ಕಾರ್ಡ್ ಮಹೇಂದ್ರ ಹೆಗಡೆ ಪೋಸ್ಟರ್ ಮಾಡಿದ್ದಾರೆ. ಅನಕ್ಷರಸ್ಥ ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಅದನ್ನು ವ್ಯಾಪಕವಾಗಿ ಹಂಚುತ್ತಿದ್ದಾರೆ. ಆದರೆ ವಾಸ್ತವ ಬೇರೆಯೇ ಇದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಕ್ಸಿಜನ್ ಕೊಡಿ ಎಂದು ಕೇಂದ್ರವನ್ನು ಕೇಳದೇ ಇದ್ದರೆ ಅವರಂತಹ ಬೇಜವಾಬ್ದಾರಿ, ಅಮಾನವೀಯ, ಕ್ರೂರಿ ಮುಖ್ಯಮಂತ್ರಿ ಇನ್ನೊಬ್ಬರು ಇರಲು ಸಾಧ್ಯವಿಲ್ಲ. ಯಾಕೆಂದರೆ ದೇಶದ ಉಳಿದ ಭಾಗಗಳಿಗಿಂತ ಉತ್ತರ ಪ್ರದೇಶದ ಆಸ್ಪತ್ರೆಗಳ ಸ್ಥಿತಿ ಚಿಂತಾಜನಕವಾಗಿದೆ. ಎರಡು ಆಸ್ಪತ್ರೆಗಳಂತೂ ಉತ್ತರ ಪ್ರದೇಶದ ಸಿಎಂ ಕಾರ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ನೋಟಿಸ್ ಬೋರ್ಡಿನಲ್ಲಿ ನೋಟಿಸ್ ಅಂಟಿಸಿದೆ ಎಂದರೆ ವೈದ್ಯರ ಸಮೂಹ ಯಾವ ಪರಿ ಯೋಗಿ ಆದಿತ್ಯನಾಥ್ ಕಾರ್ಯನಿರ್ವಹಣೆಯ ಬಗ್ಗೆ ಅಸಮಾದಾನ ಹೊಂದಿದೆ ಎಂಬುದನ್ನು ಊಹಿಸಬಹುದು.

ಇದನ್ನೂ ಓದಿ: ಪಿಎಂ-ಸಿಎಂ ಸಭೆ ಟಿವಿಯಲ್ಲಿ ಪ್ರಸಾರ: ಆಕ್ಷೇಪಿಸಿದ ಮೋದಿ, ವಿಷಾದಿಸಿದ ಕೇಜ್ರಿವಾಲ್!

ಲಕ್ನೋದ ಮಯೋ ಆಸ್ಪತ್ರೆ ಮತ್ತು ಮೇಕ್ ವೆಲ್ ಆಸ್ಪತ್ರೆ ಒಂದೋ ಅಕ್ಸಿಜನ್ ಸಿಲಿಂಡರ್ ನೀಡಿ, ಇಲ್ಲಾಂದ್ರೆ ಕೊರೊನಾ ರೋಗಿಗಳನ್ನು ನಮ್ಮ ಆಸ್ಪತ್ರೆಯಿಂದ ಸ್ಥಳಾಂತರಿಸಿ ಎಂದು ನೋಟಿಸ್ ನೀಡಿದೆ.

ಮಾಯೊ ವೈದ್ಯಕೀಯ ಕೇಂದ್ರ ಮತ್ತು ಮೇಕ್‌ವೆಲ್ ಆಸ್ಪತ್ರೆಯಲ್ಲಿನ 160 ಕೊರೊದನಾ ರೋಗಿಗಳು ಆಮ್ಲಜನಕದ ಬೆಂಬಲದಿಂದ ಬದುಕಿದ್ದಾರೆ. ಆದರೆ ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ರೋಗಿಗಳನ್ನು ಕರೆದೊಯ್ಯುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ರೋಗಿಗಳ ಮನೆಯವರಿಗೆ ಸೂಚಿಸಿದೆ.

ಆಸ್ಪತ್ರೆಯ ಗೋಡೆಯಲ್ಲಿ ಅಂಟಿಸಲಾಗಿರುವ ಅಧಿಕೃತ ನೋಟಿಸಿನಲ್ಲಿ “ಉತ್ತರ ಪ್ರದೇಶ ಸಿಎಂ ಮತ್ತು ಕೇಂದ್ರ ಸರ್ಕಾರಕ್ಕೆ ಪದೇ ಪದೇ ವಿನಂತಿಸಿದ ನಂತರವೂ ನಮಗೆ ಸಾಕಷ್ಟು ಆಮ್ಲಜನಕ ಪೂರೈಕೆ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ದಯವಿಟ್ಟು ರೋಗಿಗಳನ್ನು ಇಲ್ಲಿಂದ ವಾಪಸ್ ಕರೆದೊಯ್ಯಿರಿ ಎಂದು ನಾವು ಆಮ್ಲಜನಕ ಬೆಂಬಲದಲ್ಲಿರುವ ರೋಗಿಗಳ ಕುಟುಂಬ ಸದಸ್ಯರನ್ನು ವಿನಂತಿಸುತ್ತಿದ್ದೇವೆ. ಅನಾನುಕೂಲತೆಗಾಗಿ ನಾವು ತುಂಬಾ ವಿಷಾದಿಸುತ್ತೇವೆ” ಎಂದು ಬರೆಯಲಾಗಿದೆ.

ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ: ಶನಿವಾರ ಮತ್ತು ಭಾನುವಾರ ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ

ಲಖನೌ ಮುಖ್ಯ ವೈದ್ಯಕೀಯ ಅಧಿಕಾರಿಗಳು ಮುಖ್ಯಮಂತ್ರಿ ಆದಿತ್ಯನಾಥ್ ಕಚೇರಿಗೆ ಬರೆದ ಪತ್ರದಲ್ಲಿ, “ಲಕ್ನೋದ ಗೋಯೋ ನಗರದ, ಮೇಯೊ ಕೇಂದ್ರವು ಆಮ್ಲಜನಕದ ಪೂರೈಕೆಯ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಇದು ಕೊರೊನಾ ರೋಗಿಯ ಚಿಕಿತ್ಸೆಗೆ ತೀವ್ರವಾಗಿ ಅಡ್ಡಿಪಡಿಸುತ್ತಿದೆ ಎಂದು ನಿಮ್ಮ ಗಮನಕ್ಕೆ ತರಲಾಗಿದೆ. ನಮ್ಮ ಪ್ರಯತ್ನಗಳ ಹೊರತಾಗಿಯೂ, ಲಕ್ನೋದಲ್ಲಿ ಎಲ್ಲಿಯೂ ಆಮ್ಲಜನಕ ಲಭ್ಯವಿಲ್ಲದ ಕಾರಣ ಅಸಹಾಯಕರಾಗಿದ್ದೇವೆ. ಸರ್ಕಾರಿ ಆರೋಗ್ಯ ಕೇಂದ್ರದ ನಮ್ಮ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳನ್ನು ತುರ್ತು ಸ್ಥಳಾಂತರಿಸಲು / ವರ್ಗಾಯಿಸಲು ವ್ಯವಸ್ಥೆ ಮಾಡುವಂತೆ CMO ಗೆ ವಿನಂತಿಸಿದೆ” ಎಂದು ಬರೆಯಲಾಗಿದೆ. ಅದರ ಅರ್ಥ ಲಕ್ನೋದ ಯಾವ ಸರಕಾರಿ ಆಸ್ಪತ್ರೆಯಲ್ಲೂ ಆಕ್ಸಿಜನ್ ಇಲ್ಲದಾಗಿದೆ.

“ಕಳೆದ ಒಂದು ವಾರದಿಂದ ನಾವು ಆಮ್ಲಜನಕದ ಪೂರೈಕೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇಂದು, ನಮ್ಮ ವಾಹನಗಳು ಏಳು ಗಂಟೆಗಳ ಕಾಲ ಸರಬರಾಜುದಾರರ ಬಳಿ ನಿಂತಿದ್ದಾವೆ. ಆದರೂ ಒಂದೇ ಒಂದು ಸಿಲಿಂಡರ್ ನಮಗೆ ಸಿಕ್ಕಿಲ್ಲ. ಕೊನೆಗೆ ದಾರಿಯಿಲ್ಲದೆ, ನಾವು ಈ ನೋಟಿಸ್ ಅನ್ನು ಅಂಟಿಸಬೇಕಾಯಿತು” ಎಂದು ಗೋಮತಿ ನಗರದ ಮೇಕ್‌ವೆಲ್ ಆಸ್ಪತ್ರೆಯ ಮಾಲೀಕ ವಿನಯ್ ಪ್ರತಾಪ್ ಸಿಂಗ್ ಹೇಳುತ್ತಾರೆ.

ಲಕ್ನೋದ ಎಲ್ಲಾ ಆಸ್ಪತ್ರೆಯ ವಾಹನಗಳನ್ನು ವಿವಿಧ ಆಮ್ಲಜನಕ ಪೂರೈಕೆದಾರರು ಮತ್ತು ಏಜೆನ್ಸಿಗಳ ಎದುರು ನಿಲ್ಲಿಸಲಾಗಿದೆ. ಈ ಮಧ್ಯೆ ವಜೀರ್‌ಗಂಜ್‌ನ ಆಲ್ಮೈಟಿ ಆಸ್ಪತ್ರೆಗೆ ದಾಖಲಾದ 50 ವರ್ಷದ ಮಹಿಳೆ ಆಮ್ಲಜನಕದ ಕೊರತೆಯಿಂದಾಗಿ ಬುಧವಾರ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಆಕ್ಸಿಜನ್, ಐಸಿಯು ಕೊರತೆಯಿಂದ ಉಂಟಾಗುವ ಸಾವುಗಳಿಗೆ ಕೇಂದ್ರವೇ ಹೊಣೆ- ರಾಹುಲ್ ಗಾಂಧಿ

“ಕಳೆದ ಕೆಲವು ದಿನಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಆಸ್ಪತ್ರೆಯಲ್ಲಿ ಕನಿಷ್ಠ 10-15 ಜನರು ಸಾವನ್ನಪ್ಪಿದ್ದಾರೆ. ಕಳೆದ 10 ದಿನಗಳಿಂದ, ನನ್ನ ಚಿಕ್ಕಮ್ಮ ವೆಂಟಿಲೇಟರ್ ಬೆಂಬಲದಲ್ಲಿದ್ದರು. ನಾನು ವೈದ್ಯನಾಗಿರುವುದರಿಂದ ನಾನು ಸ್ವಂತವಾಗಿ ಆಮ್ಲಜನಕವನ್ನು ವ್ಯವಸ್ಥೆ ಮಾಡುತ್ತಿದ್ದೆ. ಆದರೆ ಇಂದು ಅದೂ ಸಾಧ್ಯವಾಗದೇ ನನ್ನ ಚಿಕ್ಕಮ್ಮ ಬಲಿಯಾದರು. ನನ್ನ ಚಿಕ್ಕಮ್ಮನನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಕಳೆದ ರಾತ್ರಿ ನಮಗೆ ತಿಳಿಸಲಾಯಿತು” ಎಂದು ರೋಗಿಯ ಸಂಬಂಧಿಕರೇ ಆಗಿರುವ ವೈದ್ಯರೇ ಅಳುತ್ತಾರೆ.

ಉತ್ತರ ಪ್ರದೇಶದ ಎಲ್ಲಾ ಆಕ್ಸಿಜನ್ ಪೂರೈಕೆದಾರ ಏಜೆನ್ಸಿಗಳ ಎದುರು ಆಕ್ಸಿಜನ್ ಗಾಗಿ ವಾಹನಗಳು ಸಾಲುಗಟ್ಟಿ ನಿಂತಿದೆ. ಆಕ್ಸಿಜನ್ ಇಲ್ಲದೇ ಇರುವುದರಿಂದ ಐಸಿಯುನಲ್ಲಿರುವ ರೋಗಿಗಳನ್ನು ಹೊರ ಹಾಕುವ ನೋಟಿಸನ್ನು ಬಹಿರಂಗವಾಗಿ ಪ್ರದರ್ಶನ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲೂ ಆಕ್ಸಿಜನ್ ಕೊರತೆ ಇದ್ದು ಎಲ್ಲಾ ರೋಗಿಗಳ ಸ್ಥಳಾಂತರಕ್ಕೆ ಸರ್ಕಾರಿ ಮುಖ್ಯ ವೈದ್ಯಾಧಿಕಾರಿಗಳು ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದಿದ್ದಾರೆ.

ಮುಖ್ಯವೈದ್ಯಾಧಿಕಾರಿ ಪತ್ರ ಮತ್ತು ಖಾಸಗಿ ಆಸ್ಪತ್ರೆಯ ನೋಟಿಸ್ ನೋಡಿದ ಯಾವ ಮನುಷ್ಯನೂ ಮುಖ್ಯಮಂತ್ರಿ ಹುದ್ದೆಯಲ್ಲಿ ಒಂದು ಕ್ಷಣವೂ ಮುಂದುವರೆಯಲಾರ. ಆದರೆ ಸಂತ, ಕಾವಿಧಾರಿ ಯೋಗಿ ಆದಿತ್ಯನಾಥ್ ಮಾತ್ರ ಮಹೇಶ್ ವಿಕ್ರಂ ಹೆಗಡೆ ಹೇಳಿದಂತೆ ಕೇಂದ್ರ ಸರ್ಕಾರದ ಬಳಿಯೂ ಆಕ್ಸಿಜನ್ ಕೇಳದೇ ತಾನು ಮನುಷ್ಯನಲ್ಲ ಎಂಬುದನ್ನು ಸಾಭೀತು ಮಾಡಿದ್ದಾರೆ.

(ಆಧಾರ : ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಯುಪಿ ಎಡಿಶನ್)

ಇದನ್ನೂ ಓದಿ: ಮೋದಿ ಸರ್ಕಾರದ ಹೊಸ ಸಂಸತ್ ಕಟ್ಟಡ ಸೆಂಟ್ರಲ್ ವಿಸ್ತಾ – ಒಂದು ಧ್ವಂಸ ಕಾರ್ಯಾಚರಣೆಯಷ್ಟೇ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...