Homeಮುಖಪುಟಪಿಎಂ-ಸಿಎಂ ಸಭೆ ಟಿವಿಯಲ್ಲಿ ಪ್ರಸಾರ: ಆಕ್ಷೇಪಿಸಿದ ಮೋದಿ, ವಿಷಾದಿಸಿದ ಕೇಜ್ರಿವಾಲ್!

ಪಿಎಂ-ಸಿಎಂ ಸಭೆ ಟಿವಿಯಲ್ಲಿ ಪ್ರಸಾರ: ಆಕ್ಷೇಪಿಸಿದ ಮೋದಿ, ವಿಷಾದಿಸಿದ ಕೇಜ್ರಿವಾಲ್!

’ಸಂವಾದವನ್ನು ನೇರ ಹಂಚಿಕೊಳ್ಳಬಾರದು ಎಂದು ಕೇಂದ್ರ ಸರ್ಕಾರದಿಂದ ಯಾವುದೇ ಲಿಖಿತ ಅಥವಾ ಮೌಖಿಕ ಸೂಚನೆ ಬಂದಿರಲಿಲ್ಲ’- ಸಿಎಂ ಕಚೇರಿ

- Advertisement -
- Advertisement -

ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕದ ಎರಡನೇ ಅಲೆಯಿಂದ ಭೀಕರವಾಗಿ ಹಾನಿಗೊಳಗಾಗಿರುವ 11 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಭೆ ನಡೆಸಿದ್ದಾರೆ. ಆದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗಿನ ಚರ್ಚೆಯು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ದೆಹಲಿಯಲ್ಲಿ ಉಂಟಾಗಿರುವ ಆಮ್ಲಜನಕದ ಬಿಕ್ಕಟ್ಟಿನ ಬಗ್ಗೆ ಅರವಿಂದ್ ಕೇಜ್ರಿವಾಲ್ ಮಾತನಾಡುತ್ತಿದ್ದಂತೆ ಅದರ ನೇರ ಪ್ರಸಾರ ಎಲ್ಲ ಟೆಲಿವಿಷನ್‌ಗಳಲ್ಲಿ ಪ್ರಸಾರವಾಗಿದೆ. ಆಂತರಿಕ ಸಭೆ ನೇರ ಪ್ರಸಾರವಾಗುವುದನ್ನು ಪ್ರಧಾನಿ ನರೇಂದ್ರ ಮೋದಿ ಆಕ್ಷೇಪಿಸಿದ್ದಾರೆ, ಇದಕ್ಕೆ ಅರವಿಂದ್ ಕೇಜ್ರಿವಾಲ್ ವಿಷಾದ ವ್ಯಕ್ತಪಡಿಸಿದ್ದಾರೆ.

ಆದರೆ, ಅರವಿಂದ್ ಕೇಜ್ರಿವಾಲ್ ನಿಯಮಗಳನ್ನು ಮೀರಿದ್ದಾರೆ ಎಂದು ಆರೋಪಿಸಿ ಹಲವು ಬಿಜೆಪಿಗರು ಅವರನ್ನ ಟೀಕಿಸಿದ್ದಾರೆ. ಆಂತರಿಕವಾಗಿ ನಡೆಯಬೇಕಿದ್ದ ಸಭೆಯನ್ನು ಟಿವಿಗಳಲ್ಲಿ ಪ್ರಸಾರ ಮಾಡಿರುವುದರ ಹಿಂದೆ ರಾಜಕೀಯ ಕಾರಣವಿದೆ ಎಂದಿದ್ದಾರೆ.

ಇದನ್ನೂ ಓದಿ: ದೆಹಲಿ ಸರ್ಕಾರ ಆಮ್ಲಜನಕವನ್ನು ಕದಿಯುತ್ತಿದೆ: ಹರಿಯಾಣ ಆರೋಗ್ಯ ಸಚಿವ ಆರೋಪ

ರಾಜಕೀಯಕ್ಕಾಗಿ ಇಷ್ಟು ಕೇಳಮಟ್ಟಕ್ಕೆ ಇಳಿಯಬಹುದೇ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಟ್ವೀಟ್ ಮಾಡಿದ್ದಾರೆ.

 

ದೆಹಲಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ದೊಡ್ಡ ದುರಂತ ಸಂಭವಿಸಬಹುದು. ನಗರಕ್ಕೆ ಪ್ರವೇಶಿಸದಂತೆ ಆಮ್ಲಜನಕ ಟ್ಯಾಂಕರ್‌ಗಳನ್ನು ನಿಲ್ಲಿಸಲಾಗುತ್ತಿದೆ. ದಯವಿಟ್ಟು ಸಹಾಯ ಮಾಡಿ ಎಂದು ಅರವಿಂದ್ ಕೇಜ್ರಿವಾಲ್ ಕೈ ಮುಗಿದು ಕೇಳಿಕೊಂಡಿದ್ದಾರೆ.

“ದೆಹಲಿಯಲ್ಲಿ ಆಮ್ಲಜನಕ ಉತ್ಪಾದಿಸುವ ಸ್ಥಾವರವಿಲ್ಲದಿದ್ದರೆ ದೆಹಲಿಯ ಜನರಿಗೆ ಆಮ್ಲಜನಕ ಸಿಗುವುದಿಲ್ಲವೇ? ದೆಹಲಿಗೆ ಮೀಸಲಾದ ಆಮ್ಲಜನಕ ಟ್ಯಾಂಕರ್‌ಗಳಿಗೆ ಬೇರೆ ರಾಜ್ಯಗಳಲ್ಲಿ ತಡೆಯೊಡ್ಡಿದಾಗ, ನಾನು ಕೇಂದ್ರ ಸರ್ಕಾರದಲ್ಲಿ ಯಾರೊಂದಿಗೆ ಮಾತನಾಡಬೇಕು ಎಂದು ದಯವಿಟ್ಟು ಸೂಚಿಸಿ” ಎಂದು ಪ್ರಶ್ನಿಸಿದ್ದಾರೆ.

ದೆಹಲಿಯ ಆಮ್ಲಜನಕದ ಕೊರತೆಯನ್ನು ಪರಿಹರಿಸಲು ಪಶ್ಚಿಮ ಬಂಗಾಳ ಮತ್ತು ಒಡಿಶಾದಿಂದ ಆಮ್ಲಜನಕದ ವಿಮಾನ ಹಾರಾಟಕ್ಕೆ ಅನುಕೂಲವಾಗುವಂತೆ ಪ್ರಧಾನಿ ಮೋದಿ ಅವರನ್ನು ಕೇಜ್ರಿವಾಲ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಆಮ್ಲಜನಕದ ವಾಹನಗಳ ಸಂಚಾರಕ್ಕೆ ಬ್ಯಾರಿಕೇಡ್ ಹಾಕಿ ಅಡ್ಡಿ ಪಡಿಸಿರುವುದು ಸರ್ಕಾರ, ರೈತರಲ್ಲ- ರೈತ ಸಂಘಟನೆ

ಈ ಸಂವಹನವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲು ಉದ್ದೇಶಿಸಿರಲಿಲ್ಲ. ಕೇಜ್ರಿವಾಲ್ ಇಂತಹ ಮಟ್ಟಕ್ಕೆ ಇಳಿಯುತ್ತಿದ್ದಾರೆ ಎಂದು ಸರ್ಕಾರದ ಮೂಲಗಳು ಆರೋಪಿಸಿವೆ.

“ಮೊದಲ ಬಾರಿಗೆ, ಮುಖ್ಯಮಂತ್ರಿಗಳೊಂದಿಗಿನ ಪ್ರಧಾನಮಂತ್ರಿಯವರ ಖಾಸಗಿ ಸಂಭಾಷಣೆಗಳನ್ನು ಪ್ರಸಾರ ಮಾಡಲಾಗುತ್ತಿದೆ. ಕೇಜ್ರಿವಾಲ್ ಅವರ ಸಂಪೂರ್ಣ ಭಾಷಣವು ಯಾವುದೇ ಪರಿಹಾರಕ್ಕಾಗಿ ಅಲ್ಲ, ಆದರೆ ರಾಜಕೀಯವನ್ನು ಮಾಡುವುದು ಮತ್ತು ಜವಾಬ್ದಾರಿಯಿಂದ ತಪ್ಪಿಸುವುದಕ್ಕೆ ಮಾಡಿದ್ದಾರೆ” ಎಂದು ಮೂಲಗಳು ತಿಳಿಸಿವೆ.

“ಇಂದು, ಮುಖ್ಯಮಂತ್ರಿಯವರ ಮಾತುಗಳನ್ನು ನೇರಪ್ರಸಾರ ಮಾಡಲಾಗಿದೆ. ಏಕೆಂದರೆ ಈ ಸಂವಾದವನ್ನು ನೇರ ಹಂಚಿಕೊಳ್ಳಬಾರದು ಎಂದು ಕೇಂದ್ರ ಸರ್ಕಾರದಿಂದ ಯಾವುದೇ ಲಿಖಿತ ಅಥವಾ ಮೌಖಿಕ ಸೂಚನೆ ಬಂದಿರಲಿಲ್ಲ. ಸಭೆಯಲ್ಲಿ ಯಾವುದೇ ಗೌಪ್ಯ ಮಾಹಿತಿಯಿಲ್ಲದ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ನೇರವಾಗಿ ಹಂಚಿಕೊಳ್ಳುವಂತಹ ಪರಸ್ಪರ ಕ್ರಿಯೆಗಳು ನಡೆದಿವೆ. ಆದರೂ, ಯಾವುದಾದರೂ ಅನಾನುಕೂಲತೆ ಉಂಟಾಗಿದ್ದರೇ ನಾವು ವಿಷಾದಿಸುತ್ತೇವೆ” ಎಂದು ದೆಹಲಿ ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದೆ.


ಇದನ್ನೂ ಓದಿ: ಭಿಕ್ಷೆ ಬೇಡಿ, ಸಾಲ ತನ್ನಿ ಇಲ್ಲವೇ ಕದ್ದುಕೊಂಡು ಬನ್ನಿ: ಆಮ್ಲಜನಕ ವಿಷಯವಾಗಿ ಕೇಂದ್ರದ ವಿರುದ್ಧ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇಲ್ಲಿಯವರೆಗೆ ಪತ್ರಿಕಾ ಗೋಷ್ಥಿ ಕರೆದು ವರದಿಗಾರರನ್ನೇ ಎದುರಿಸಿದ ಭಾರತದ ಪ್ರಪ್ರಥಮ ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಕೇಜ್ರಿವಾಲ್‌ ಜೊತೆಯ ಮಾತುಕತೆಯ ನೇರ ಪ್ರಸಾರ ಮುಜುಗುರ ಉಂಟುಮಾಡಿರುವುದು ಆಶ್ಚರ್ಯಕರವಲ್ಲ, ಸಹಜವಾದದ್ದು. ವರದಿಗಾರರನ್ನೇ ಎದುರಿಸಿ ಉತ್ತರಿಸಲಾಗದ ಪ್ರಧಾನಿ ಮುಖ್ಯಮಂತ್ರಿಯನ್ನು ಎದುರಿಸಬಲ್ಲ ಎದೆಗಾರಿಕೆ (52″ ಈಗ ಕುಗ್ಗಿರಬೇಕು) ಎಲ್ಲಿದೆ ಹೇಳಿ?

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...