Homeಮುಖಪುಟಇತ್ತೀಚಿನ ಭಾರತ-ಚೈನಾ ಗಡಿ ಘರ್ಷಣೆಗಳು: ಗಡಿ ನಿರ್ಧರಿಸಲು ಭಾರತವು ಚೌಕಾಶಿ ಮಾತುಕತೆಗೆ ತಯಾರಾಗಬೇಕು

ಇತ್ತೀಚಿನ ಭಾರತ-ಚೈನಾ ಗಡಿ ಘರ್ಷಣೆಗಳು: ಗಡಿ ನಿರ್ಧರಿಸಲು ಭಾರತವು ಚೌಕಾಶಿ ಮಾತುಕತೆಗೆ ತಯಾರಾಗಬೇಕು

ಜೂನ್ 15ರ ಘರ್ಷಣೆ ವರದಿಯಾದ ನಂತರ ಚೈನಾದ ಮೇಲೆ ವ್ಯಾಪಾರ ನಿರ್ಬಂಧ ಹೇರುವ ಜಿಂಗೋಯಿಸಂನ್ನು ಭಾರತದಲ್ಲಿ ಏಳಿಸಲಾಗಿದೆ. ಚೈನಾದಿಂದ ಯಾವ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕು, ಯಾವುದನ್ನು ಮಾಡಿಕೊಳ್ಳಬಾರದು ಎಂದು ನಿರ್ಧರಿಸುವುದು ಭಾರತದ ಹಕ್ಕು. ನತದೃಷ್ಟವಶಾತ್ ಭಾರತ ಸರ್ಕಾರಗಳು ಆ ಹಕ್ಕುಗಳನ್ನು ಚಲಾಯಿಸಲಿಲ್ಲ

- Advertisement -
- Advertisement -

ಇತ್ತೀಚಿನ ಕೆಲವು ದಿನಗಳಿಂದ ಭಾರತ-ಚೈನಾ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದೆ. ಎರಡೂ ದೇಶಗಳೂ ತಮ್ಮ ತೋಳ್ಬಲ ಪ್ರದರ್ಶಿಸಲು ಹೆಚ್ಚಿನ ಸೈನಿಕರನ್ನು ಗಡಿಯ ಸಮೀಪ ರವಾನಿಸಿವೆ. ಜೂನ್ 15 ರ ರಾತ್ರಿ ಎರಡೂ ರಾಷ್ಟ್ರಗಳ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ ಕನಿಷ್ಠ 20 ಸೈನಿಕರು ಮೃತಪಟ್ಟಿರುವುದನ್ನು ಭಾರತ ಸರ್ಕಾರ ತಿಳಿಸಿದೆ. ಚೈನಾ ತನ್ನ ಸೈನಿಕರ ಸಾವು ನೋವಿನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಇದು ಗಡಿ ವಿವಾದಕ್ಕಿಂತಲೂ ಹೆಚ್ಚಾಗಿ ಬೇರೆ ರಾಜಕೀಯವೇ ಕಾರಣವೆಂದು ಕಾಣುತ್ತಿದೆ. ಭಾರತ ಚೈನಾ ಸಂಬಂಧ ಸುಧಾರಣೆಗೆ ಎರಡೂ ದೇಶಗಳ ನಡುವೆ 1993, 1996, 2003, 2005, 2006, 2008, 20012 ರಲ್ಲಿ ಒಟ್ಟು ಹತ್ತು ಐತಿಹಾಸಿಕ ಮಹತ್ವದ ಒಪ್ಪಂದಗಳು ಏರ್ಪಟ್ಟಿವೆ. ಎರಡೂ ದೇಶಗಳು ನಿಜ ನಿಯಂತ್ರಣ ರೇಖೆಯನ್ನು ಮಾನ್ಯ ಮಾಡಿ, ಉಲ್ಲಂಘಿಸಬಾರದೆಂದೂ ಒಪ್ಪಿ ಸಹಿಹಾಕಿವೆ. ಆದರೆ ನಿಜ ನಿಯಂತ್ರಣ ರೇಖೆಯ(LAC-Line of actual control) ಉಕ್ತಿ(ವ್ಯಾಖ್ಯಾನ) ಆಗಿಲ್ಲ. ಹೀಗಾಗಿ ನಿಜ ನಿಯಂತ್ರಣರೇಖೆಯ ಬಗ್ಗೆ ಎರಡೂ ಕಡೆಯವರ ನಡುವೆ ಕೆಲವು ಕ್ಷೇತ್ರಗಳಲ್ಲಿ ಭಿನ್ನ ಅಭಿಪ್ರಾಯಗಳು ಉಂಟಾಗುತ್ತಿರುತ್ತ್ತವೆ. ಆದ್ದರಿಂದ ನಿಜ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದ್ದಾರೆ ಎನ್ನುವ ಆರೋಪ ಪ್ರತ್ಯಾರೋಪಗಳು ಆಗಾಗ ಏಳುತ್ತಿದ್ದು ಗಡಿಯಲ್ಲಿನ ಸೈನ್ಯದ ಅಧಿಕಾರಿಗಳ ನಡುವೆ ಫ್ಲಾಗ್ ಮೀಟಿಂಗ್ ನಡೆದು ಬಗೆಹರಿಯುತ್ತಿತ್ತು.

ಆದರೆ ಇತ್ತೀಚಿನ ವಿದ್ಯಮಾನಗಳು ಬಹಳ ಕಸಿವಿಸಿ ಉಂಟುಮಾಡಿವೆ. ಸಿಕ್ಕಿಂ ಮತ್ತು ಚೈನಾದ ಟಿಬೆಟಿನ ನಡುವಿನ ಗಡಿ 1890 ರಲ್ಲಿಯೇ ಅಂದಿನ ಬ್ರಿಟಿಷ್ ಭಾರತದ ಸರ್ಕಾರ ಮತ್ತು ಅಂದಿನ ಚೈನಾದ ಕೇಂದ್ರ ಸರ್ಕಾರಗಳ ನಡುವೆ ಒಪ್ಪಂದವಾಗಿ ತೀರ್ಮಾನವಾಗಿದೆ. ಸ್ವತಂತ್ರ ಸಿಕ್ಕಿಂ ರಾಜ್ಯವನ್ನು ಭಾರತದಲ್ಲಿ 1975 ರಲ್ಲಿ ವಿಲೀನಗೊಳಿಸಿದುದರ ಬಗ್ಗೆ ಉಂಟಾದ ಭಿನ್ನಾಭಿಪ್ರಾಯಗಳು ಜೂನ್ 2003 ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಚೈನಾಗೆ ಭೇಟಿ ನೀಡಿದಾಗ ಆದ ಒಪ್ಪಂದದಲ್ಲಿ ಬಗೆಹರಿದು, ಏಪ್ರಿಲ್2005 ರಲ್ಲಿ ಚೈನಾದ ಪ್ರಧಾನಿ ವೆನ್ ಜಿಯಾಬಾವೊ ಭಾರತಕ್ಕೆ ಭೇಟಿ ನೀಡಿದಾಗ ಸಿಕ್ಕಿಂ ಭಾರತ ಗಣರಾಜ್ಯದ ಭಾಗವೆಂದೂ, ಟಿಬೆಟ್ ಚೈನಾ ಜನತಾ ಗಣರಾಜ್ಯದ ಭಾಗವೆಂದು ತೋರಿಸುವ ಭೂಪಟವನ್ನು ನೀಡಿದ್ದರು. ಹೀಗಾಗಿ ಸಿಕ್ಕಿಂ ಕ್ಷೇತ್ರದಲ್ಲಿ ಭಾರತ ಮತ್ತು ಚೈನಾದ ನಡುವೆ ಯಾವ ಗಡಿ ವಿವಾದಗಳೂ ಇಲ್ಲದಿದ್ದರೂ ಇತ್ತೀಚೆಗೆ ಎರಡು ದೇಶಗಳ ಸೈನಿಕರ ನಡುವಿನ ಘರ್ಷಣೆ ಆಶ್ಚರ್ಯಕರವಾದುದು. ಪಶ್ಚಿಮ ಕ್ಷೇತ್ರದಲ್ಲಿ ಗಾಲ್ವಾನ್ ನದಿ ಪ್ರದೇಶದಲ್ಲಿ ಎರಡು ದೇಶಗಳ ಸೈನಿಕರ ಜಮಾವಣೆ ನಡೆದು ಜೂನ್ 15 ರ ರಾತ್ರಿ ಘರ್ಷಣೆ ಉಂಟಾದುದು ಆಶ್ಚರ್ಯ ಮತ್ತು ಆತಂಕವನ್ನು ಉಂಟುಮಾಡಿದೆ. ಇಲ್ಲಿ ಚೈನಾದ ಕೇಳಿಕೆಯ ರೇಖೆ ಮತ್ತು ನಿಜ ನಿಯಂತ್ರಣ ರೇಖೆ ಕುಗ್ರಾಮ್ ಪರ್ವತ ಶ್ರೇಣಿಯ ಮೇಲೆ ಸಾಗುತ್ತಿದ್ದು, ಅದರ ಉಲ್ಲಂಘನೆ ಭಾರತದ ಕಡೆಯಿಂದ ಆಗಿದೆಯೋ, ಚೈನಾ ಕಡೆಯಿಂದ ಆಗಿದೆಯೋ ಎನ್ನುವುದು ತಿಳಿಯುತ್ತಿಲ್ಲ. ಅದಕ್ಕೆ ವೃತ್ತಪತ್ರಿಕೆಗಳಲ್ಲಿ ಬಂದ ವರದಿಗಳು ಏನನ್ನೂ ತಿಳಿಸುತ್ತಿಲ್ಲ. ಗಡಿ ಸಮೀಪದಲ್ಲಿ ನಿಜ ನಿಯಂತ್ರಣ ರೇಖೆಯನ್ನು ಉಲ್ಲಂಘಿಸದೆಯೇ ಮೂಲಸೌಕರ್ಯಗಳ ನಿರ್ಮಾಣಅಂದರೆ ದರ್ಬುಕ್ ನಿಂದ ಶೈಯಾಕ್-ದೌಲತ್ ಬೇಗ್ ಓಲ್ಡಿ-ಕರಕೋರಂ ಘಾಟಿಯವರೆಗಿನ ರಸ್ತೆ ನಿರ್ಮಾಣ ಭಾರತದ ಹಕ್ಕು. ಅದು 2019 ರಲ್ಲಿಯೇ ಮುಗಿದಿದ್ದು, ಚೈನಾ ಆ ಬಗ್ಗೆ ಯಾವ ತಕರಾರನ್ನೂ ಇಲ್ಲಿಯವರೆಗೆ ಮಾಡಿಲ್ಲ. ಇಲ್ಲಿ ಗಾಲ್ವಾನ್ ಕಣಿವೆಯ ಸಣ್ಣ ಭಾಗ ಮಾತ್ರ ನಿಜನಿಯಂತ್ರಣ ರೇಖೆಯ ಭಾರತದ ಕಡೆಗಿದ್ದು ಉಳಿದ ಭಾಗ ನಿಜನಿಯಂತ್ರಣ ರೇಖೆಯ ಚೈನಾದ ಭಾಗದಲ್ಲಿದೆ. ನಿಜನಿಯಂತ್ರಣ ರೇಖೆ ಭಾರತ-ಚೈನಾ ನಡುವೆ ತೀರ್ಮಾನವಾದ ಅಂತಿಮ ಗಡಿ ರೇಖೆಯಲ್ಲ. ಅಂತಿಮ ಗಡಿರೇಖೆಯ ತೀರ್ಮಾನಕ್ಕೆ ಭಾರತವು ಇನ್ನೂ ಚೌಕಾಶಿ ಮಾತುಕತೆಗೆ ಕೂರಬೇಕು.

ಪಾಂಗಾಂಗ್ ಸರೋವರದ ಉತ್ತರಕ್ಕಿರುವ ಚಾಂಗ್ ಚೆನ್ಮೋ ಪರ್ವತ ಶ್ರೇಣಿ ಅಲ್ಲಿಂದ ಪಶ್ಚಿಮದಲ್ಲಿ ದಕ್ಷಿಣಕ್ಕೆ ತಿರುಗಿ ಆಣೆ ಲಾ ಮೂಲಕ ಪಶ್ಚಿಮ ಪಾಂಗಾಂಗ್ ಸರೋವರದ ಪಶ್ಚಿಮ ತಿರುವಿನ ಬಿಂದುವಿನವರೆಗೆ ಹರಿಯುವ ದೊಡ್ಡ ಪರ್ವತ ಶ್ರೇಣಿಯೇ ನಿಜ ನಿಯಂತ್ರಣ ರೇಖೆ. ಅಷ್ಟೇ ಅಲ್ಲದೇ ಇದು ಉತ್ತಮ ಗಡಿರೇಖೆಯೂ ಹೌದು. ಅಲ್ಲದೇ 1868 ರಿಂದ 1954 ರವರೆಗೂ ನಿರ್ಮಿಸಲ್ಪಟ್ಟ ಹೆಚ್ಚಿನ ಭಾರತದ ಭೂಪಟಗಳು ಖುರ್ನಾಕ್ ಕೋಟೆಯ ಪಶ್ಚಿಮಕ್ಕಿರುವ ಒಂದು ಹುಲ್ಲುಗಾವಲು ಪ್ರದೇಶವನ್ನು ಬಿಟ್ಟರೆ, ಈ ಪರ್ವತ ಶ್ರೇಣಿಯಲ್ಲಿಯೇ ಗಡಿ ತೋರಿಸುತ್ತಿದ್ದವು. 1954 ರಲ್ಲಿ ಮೊಟ್ಟಮೊದಲ ಬಾರಿಗೆ ಭಾರತದ ಭೂಪಟದಲ್ಲಿ ಪೂರ್ವ ಪಾಂಗಾಂಗ್ ಸರೋವರದ ಪಶ್ಚಿಮ ಬಿಂದುವಿನವರೆಗೆ ಗಡಿ ರೇಖೆಯನ್ನು ವಿಸ್ತರಿಸಿ ಹೆಚ್ಚಿನ ಜಾಗವನ್ನು ಭಾರತದ ಗಡಿಯೊಳಗೆ ಸೇರಿಸಲಾಯಿತು. ಖುರ್ನಾಕ್ ಕೋಟೆಯ ಪಶ್ಚಿಮಕ್ಕಿರುವ ಹುಲ್ಲುಗಾವಲು ಪ್ರದೇಶವನ್ನು 1924 ಆಗಸ್ಟ್ 9 ರಂದಾದ ಒಪ್ಪಂದದ ಪ್ರಕಾರ ಲಡಾಖ್ ಟಿಬೆಟಿಗೆ ಬಿಟ್ಟುಕೊಟ್ಟಿತ್ತು. ಕೆಲವು ತಿಂಗಳ ಹಿಂದೆ ಭಾರತದ ಕಡೆಯಿಂದ ಈ ರೇಖೆಯ ಉಲ್ಲಂಘನೆಯಾಗಿ, ಎರಡೂ ಕಡೆಯ ಸೈನ್ಯದ ಬ್ರಿಗೇಡರುಗಳ ನಾಯಕತ್ವದಲ್ಲಿ ಧ್ವಜ ಸಭೆ ನಡೆದು ಭಾರತದ ಕಡೆಯವರು ಹಿಂದೆ ಬಂದಿದ್ದರು. ಈಗ ಇತ್ತೀಚೆಗೆ ಈ ಗಡಿ ರೇಖೆಯನ್ನು ಭಾರತದ ಕಡೆಯಿಂದ ಉಲ್ಲಂಘನೆ ಯಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಏಕೆಂದರೆ ಪತ್ರಿಕೆಗಳಲ್ಲಿ ಬಂದ ಸುದ್ದಿಯ ಪ್ರಕಾರ ಪಾಂಗಾಂಗ್ ಸರೋವರದ ಉತ್ತರದಲ್ಲಿ ಭಾರತದ ಸೈನಿಕರು ಕಾಣಿಸಿಕೊಂಡಿದ್ದಾರೆಂದು ಚೈನಾದ ಸೈನಿಕರು ಆಕ್ಷೇಪಣೆ ಮಾಡಿದ್ದಾರೆಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಚೈನಾ ಕಡೆಯಿಂದಲೇ ಗಡಿ ಉಲ್ಲಂಘನೆ ಆಗಿದೆ ಎಂಬ ವರದಿಗಳೂ ಇವೆ.

ಪಾಂಗಾಂಗ್ ಸರೋವರದ ಪಶ್ಚಿಮ ತಿರುವಿನ ಬಿಂದುವಿನಿಂದ ಪೂರ್ವಕ್ಕೆ ಭಾರತದ ಕೇಳಿಕೆಗೆ ಪುರಾವೆಗಳು ಸರಿಯಾಗಿಲ್ಲ ಹಾಗೆಯೇ ಸ್ಪಾಂಗೂರ್ ಪ್ರದೇಶವೂ ಸಹ. ಈ ಪಾಂಗಾಂಗ್ ಪ್ರದೇಶದ ಉತ್ತರ ಮತ್ತು ದಕ್ಷಿಣಕ್ಕೆ ಇದ್ದ ಕೆಲವು ಗಡಿ ವಿವಾದಗಳು 1924 ಆಗಸ್ಟ್ 9 ರಂದು ಲಡಾಖ್ ಮತ್ತು ಟಿಬೇಟಿನ ನಡುವೆ ಆದ ಒಪ್ಪಂದದ ಪ್ರಕಾರ ಬಗೆಹರಿದಿತ್ತು. ಆ ಒಪ್ಪಂದ ಹೀಗೆ ಇದೆ.

“ಟಿಬೆಟಿನ ಪರವಾಗಿ ರೆಗ್ಚಿಪಾ ಗಾರ್ಪೋನ್ ಮತ್ತು ಗಾರ್ಪೋನ್ ರವರ ಮೊಟಬೀರ್, ಭಾರತದ ಪರವಾಗಿ ಮೇಜರ್ ರಾಬ್‍ಸನ್ ಮತ್ತು ವಜೀರ್ ಫೆರೋಜ್ ಚಾಂದ್ `1924, ಆಗಸ್ಟ್ 9 ರಂದು ಸಹಿಮಾಡಿದ ಹೇಳಿಕೆಯಲ್ಲಿ ಹೀಗೆ ಹೇಳಲಾಗಿದೆ:

“ಉಜಾಂಗ್ ರಾಜ್ಯಗಳ ಜಮೀನ್ದಾರರುಗಳ ಹೇಳಿಕೆಯನ್ನು ಅವಲಂಬಿಸಿ ಗಾರ್ಟೋಕ್‍ನ ಗಾರ್ಪೋನ್, ಗಡಿಯನ್ನು ಪರ್ವತ ಸಾಲುಗಳಲ್ಲಿ ನಿಗದಿಗೊಳಿಸಬೇಕು, ಅಂದರೆ ಕೀ ಗಾಂಗ್ ಲಾ ದಿಂದ ಗುಡ್ಡಗಳ ಶಿಖರದಲ್ಲಿ ನಿಯಾಗ್‍ಜುವರೆಗೂ. ನಿಯಾಗ್‍ಜು ನಿಂದ ಗಡಿಯು ಥೋಲೆ ಕೊಂಕಾಗೆ ಸಾಗುತ್ತದೆ, ಅಲ್ಲಿಂದ ಗುಡ್ಡಸಾಲುಗಳ ಶಿಖರದಲ್ಲಿ ಸಾಗಿ ಗಪೋನಾಗ ಎನ್ನುವ ಬಿಂದುವಿನಲ್ಲಿ ಕೊನೆಗೊಳ್ಳುತ್ತದೆ, ಹಾಗಾಗಿ ಓಟೆ, ದೋಕ್ಪೋ ಕರ್ಪೋ ಮತ್ತು ಖುರ್ನಾಕ್ ಕೋಟೆಯ ಮೇವಿನ ಜಾಗವನ್ನು ಅದರೊಂದಿಗೆ ಮೂರು ಸಣ್ಣ ನಾಲಾಗಳಾದ ಮಿಪಾಲ್ ಗೋಮ, ಮಿಪಾಲ್ ಯಂಗ್ಮಾ, ರೋಮ ಗೋಮಗಳನ್ನೂ ಟಿಬೇಟಿನ ಪ್ರದೇಶದಲ್ಲಿ ಇರಿಸುತ್ತದೆ.”

ಲಡಾಖಿನ ಮುಖ್ಯ ಆಡಳಿತಗಾರ ವಜಿûೀರ್ ಫೆರೋeóï ಚಾಂದ್, ಗಾರ್ಟೋಕ್‍ನ ಮುಖ್ಯ ಆಡಳಿತಗಾರ ಗಾರ್ಪೋನ್, ಇನ್ನಿಬ್ಬರು ಅಧಿಕಾರಿಗಳೊಂದಿಗೆ ಸಹಿ ಮಾಡಿದ ಒಪ್ಪಂದ. ಖುರ್ನಾಕ್ ಕೋಟೆಯ ಪಶ್ಚಿಮ ಮತ್ತು ನೈರುತ್ಯದ ಮೇಯಿಸುವ ಜಾಗವನ್ನೂ ಈ ಒಪ್ಪಂದದ ಪ್ರಕಾರ ಟಿಬೇಟಿನವರಿಗೆ ಬಿಟ್ಟುಕೊಡಲಾಯಿತು.

ಪಾಂಗಾಂಗ್ ಸರೋವರದಲ್ಲಿ ಗಡಿ ರೇಖೆ 1891ದೇಮ್‍ಚೋಕ್ ಟಿಬೇಟಿನದೆಂದು ತೋರಿಸುವ ಭೂಪಟ 1907 ಇನ್ನೂ ದಕ್ಷಿಣಕ್ಕಿರುವ ದೇಮ್‍ಚೋಕ್ ಪ್ರದೇಶವು 1868 ರಿಂದ 1954ರ ವರೆಗೂ ಭಾರತದಲ್ಲಿ ತಯಾರಾದ ಭೂಪಟಗಳು ಟಿಬೇಟಿನ ಜಾಗವೆಂದು ತೋರಿಸುತ್ತವೆ. 1954 ರಲ್ಲಿ ನೆಹರೂ ಕಾಲದಲ್ಲಿ ಹೊಸ ಭೂಪಟ ತಯಾರಿಸಿ ಈ ಪ್ರದೇಶವನ್ನು ಭಾರತದ ಭೂಪಟದಲ್ಲಿ ಸೇರಿಸಿ, ಸೇನೆಯನ್ನು ಕಳುಹಿಸಿ ಅಲ್ಲಿ ಪರಿಗಾಸ್ ಎನ್ನುವ ಸ್ಥಳದಲ್ಲಿ ಸೇನಾ ಠಾಣೆಯನ್ನು ನಿರ್ಮಿಸಿದ್ದರು. ಆ ಕಾರಣದಿಂದ ಚೈನಾ ಪರಿಗಾಸ್ ಪ್ರದೇಶದ ವರೆಗೂ ನಿಜನಿಯಂತ್ರಣ ರೇಖೆಯ ಭಾರತದ ಕಡೆಗಿದೆ ಎಂದು ತೋರಿಸಿದರು. ಅಲ್ಲಿ ಒಂದು ಸ್ಪಾಟ್ ಇದೆಯೇ ಹೊರತು ರೇಖೆಯೇ ಇಲ್ಲ. ಆದ್ದರಿಂದ ಎರಡೂ ಕಡೆಯವರಿಗೂ ಕಸಿವಿಸಿ ಉಂಟಾಗಬಹುದು. ದೇಮ್‍ಚೋಕ್ ಪ್ರದೇಶವು ಭಾರತದ್ದು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿಲ್ಲ. ಚೌಕಾಶಿ ಮಾತುಕತೆಯಲ್ಲಿ ಈ ದೇಮ್‍ಚೋಕ್ ಪ್ರದೇಶವನ್ನು ಚೈನಾದ ಕಡೆ ಬಿಟ್ಟು ಬಿಡಬಹುದು. ಅದಕ್ಕೆ ಪ್ರತಿಯಾಗಿ ಚೈನಾ ಮಧ್ಯಮ ಕ್ಷೇತ್ರದಲ್ಲಿರುವ ನಾಲ್ಕು ವಿವಾದಿತ ಕ್ಷೇತ್ರಗಳಾದ ಚುವ ಚುಜೆ/ಗ್ಯೂ ಕೌರಿಕ್, ಹುಪ್ಸಾಂಗ್ ಖಡ್, ನಿಲಾಂಗ್ ಜಡಾಂಗ್, ಬರಹೋತಿ ಪ್ರದೇಶಗಳನ್ನು ತನ್ನ ಕೇಳಿಕೆಯಿಂದ ತೆಗೆದು ಭಾರತದ ಪರವಾಗಿ ಬಗೆಹರಿಸಬೇಕು.

ಪೂರ್ವ ಕ್ಷೇತ್ರದಲ್ಲಿ ಖಿನ್ಜೆಮಾನೆ ಪ್ರದೇಶವನ್ನು ಬಿಟ್ಟರೆ ಮೂಲ ಮೆಕ್‍ಮಹೋನ್ ರೇಖೆಯೇ ನಿಜ ನಿಯಂತ್ರಣ ರೇಖೆ, ಮೂಲ ಮೆಕ್‍ಮಹೋನ್ ರೇಖೆಗೆ ಉತ್ತರದಲ್ಲಿರುವ ಖಿನ್ಜೆಮಾನೆ ಪ್ರದೆಶದಲ್ಲಿ ನವಂಬರ 7 1959 ಕ್ಕೂ ಮೊದಲು ಭಾರತವು ಒಂದು ಠಾಣೆಯನ್ನು ಸ್ಥಾಪಿಸಿದ್ದುದರಿಂದ ಆ ಪ್ರದೇಶವನ್ನು ನಿಜ ನಿಯಂತ್ರಣ ರೇಖೆಯ ಭಾರತದ ಕಡೆ ಸೇರಿಸಲಾಗಿತ್ತು. ಥಾಗ್ ಲಾ ಗುಡ್ಡ ಪ್ರದೇಶ, ಲಾಂಗ್ಜು ನಿಜನಿಯಂತ್ರಣ ರೇಖೆಯ ಉತ್ತರಕ್ಕೆ ಚೈನಾದ ಕಡೆಗಿವೆ. ನಿಜನಿಯಂತ್ರಣ ರೇಖೆಗೆ ಎರಡೂ ಕಡೆಯವರೂ ಬದ್ಧರಾಗಿ ಅಂಟಿಕೊಂಡು ಉಲ್ಲಂಘಿಸದೇ ಗಡಿರೇಖೆಯ ಚೌಕಾಶಿ ಮಾತುಕತೆಗೆ ಕೂರಬೇಕು.

ಜೂನ್ 15ರ ಘರ್ಷಣೆ ವರದಿಯಾದ ನಂತರ ಚೈನಾದ ಮೇಲೆ ವ್ಯಾಪಾರ ನಿರ್ಬಂಧ ಹೇರುವ ಜಿಂಗೋಯಿಸಂನ್ನು ಭಾರತದಲ್ಲಿ ಏಳಿಸಲಾಗಿದೆ. ಚೈನಾದಿಂದ ಯಾವ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕು, ಯಾವುದನ್ನು ಮಾಡಿಕೊಳ್ಳಬಾರದು ಎಂದು ನಿರ್ಧರಿಸುವುದು ಭಾರತದ ಹಕ್ಕು. ನತದೃಷ್ಟವಶಾತ್ ಭಾರತ ಸರ್ಕಾರಗಳು ಆ ಹಕ್ಕುಗಳನ್ನು ಚಲಾಯಿಸಲಿಲ್ಲ. ಪಟಾಕಿಗಳು, ಗಾಳಿಪಟದ ದಾರಗಳು, ಗಾಳಿಪಟಗಳು, ರಾಕಿಗಳು, ಆಕಾಶ ಬುಟ್ಟಿಗಳು ಇತ್ಯಾದಿಗಳನ್ನೆಲ್ಲಾ ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ. ಇವನ್ನೆಲ್ಲಾ ನಮ್ಮಲ್ಲೇ ಸಾಕಷ್ಟು ತಯಾರಿಸಬಹುದು, ಸ್ಥಳೀಯರಿಗೆ ಉದ್ಯೋಗವೂ ಉಂಟಾಗುತ್ತದೆ. ಆದರೆ ವ್ಯಾಪಾರ ಬಹಿಷ್ಕಾರ ಹಾಕುವುದರಿಂದ ಚೈನಾಗೆ ಯಾವ ದೊಡ್ಡ ಹಾನಿಯೂ ಆಗುವುದಿಲ್ಲ. ಬದಲು ಭಾರತದಿಂದ ರಫ್ತಾಗುವ ವಸ್ತುಗಳೂ ಕಡಿಮೆಯಾಗಿ ನಮ್ಮ ಕೈಗಾರಿಕೆಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಉದ್ಯೋಗಗಳೂ ಕಡಿತಗೊಳ್ಳುತ್ತವೆ. ವಿದೇಶಿ ವ್ಯಾಪಾರ ಎಂದೂ ಏಕ ಮುಖವಾಗಿರುವುದಿಲ್ಲ, ಪರಸ್ಪರ ದ್ವಿಮುಖವಾದುದಾಗಿರುತ್ತದೆ. ಗಡಿ ವಿಷಯದಲ್ಲಿ ಭಾರತದ ಕಡೆ ಬಹಳ ತಪ್ಪು ತಿಳಿವಳಿಕೆಗಳನ್ನು ಬೆಳೆಸಲಾಗಿದೆ. ಅದರಲ್ಲಿ ಅಮೆರಿಕದ ಸಿಐಎ ಪಾತ್ರವೂ ದೊಡ್ಡದಿದೆ. ಎಷ್ಟೋ ವಿದ್ವಾಂಸರು ಭಾರತದ ಎಲ್ಲಾ ಕೇಳಿಕೆಗಳು ಸರಿಯಲ್ಲ, ವಿಶೇಷವಾಗಿ ಅಕ್ಸಾಯ್ ಚಿನ್ ಪ್ರದೇಶದ ಮೇಲಿನ ಕೇಳಿಕೆ ಹುರುಳಿಲ್ಲದ್ದು ಎಂದು ಬರೆದಿದ್ದಾರೆ. ಈ ತಪ್ಪು ತಿಳಿವಳಿಕೆಗಳನ್ನೆಲ್ಲಾ ಸರಿಪಡಿಸಿಕೊಂಡರೆ ಭಾರತ-ಚೈನಾ ಗಡಿ ವಿವಾದಗಳು ಬಹಳ ಸುಲಭವಾಗಿ ಬಗೆಹರಿಯುತ್ತವೆ.

ಆಯಾ ವಿವಾದಿತ ಪ್ರದೇಶಗಳ ಇತಿಹಾಸ, ಭೌಗೋಳಿಕತೆ, ಎರಡೂ ದೇಶಗಳ ಸ್ಟ್ರಾಟಜಿಕ್ ಹಿತಾಸಕ್ತಿಗಳನ್ನು ಪರಿಗಣಿಸಿ ಕೊಡುತೆಗೆದುಕೊಳ್ಳುವುದರ ಆಧಾರದ ಮೇಲೆ ಗಡಿ ನಿರ್ಧಾರಣೆಗೆ ಭಾರತವು ಕೂರಬೇಕು. ಈ ಚೌಕಾಶಿ ಮಾತುಕತೆಯಲ್ಲಿ ಬರೇ ತೆಗೆದುಕೊಳ್ಳುವುದಷ್ಟೇ ಇರುವುದಲ್ಲ, ಕೆಲವು ಕೇಳಿಕೆಗಳನ್ನು ಬಿಡುವುದೂ ಇರುತ್ತದೆ. ಉದಾಹರಣೆಗೆ ಪಶ್ಚಿಮ ಕ್ಷೇತ್ರದಲ್ಲಿ ಈಗ ಚೈನಾದ ವಶದಲ್ಲಿರುವ ದೆಪ್‍ಸ್ಯಾಂಗ್ ಪ್ರದೇಶವನ್ನು ಚೈನಾ ಭಾರತಕ್ಕೆ ಬಿಟ್ಟುಕೊಡಬೇಕು. ಅದಕ್ಕೂ ಉತ್ತರ ಪೂರ್ವದಲ್ಲಿರುವ ಅಕ್ಸಾಯ್ ಚಿನ್ ಪ್ರದೇಶದ ಮೇಲೆ ಭಾರತವು ತನ್ನ ಕೇಳಿಕೆಯನ್ನು ರದ್ದುಗೊಳಿಸಿ ಚೈನಾ ಪರವಾಗಿ ಬಗೆಹರಿಸಲು ಒಪ್ಪಿಕೊಳ್ಳಬೇಕು. ಗಡಿಯು ಕರಕೋರಂ ಪರ್ವತ ಶ್ರೇಣಿಯಲ್ಲಿ ಸಾಗಬೇಕು. ಪಾಂಗಾಂಗ್ ಪ್ರದೇಶದಲ್ಲಿ ಉತ್ತರಕ್ಕಿರುವ ಚಾಂಗ್ ಚೆನ್ಮೋ ಪರ್ವತ ಶ್ರೇಣಿ ಅಲ್ಲಿಂದ ದಕ್ಷಿಣಕ್ಕೆ ತಿರುಗಿ ಆಣೆ ಲಾ ಪರ್ವತ ಶ್ರೇಣಿಯನ್ನು ಪಾಂಗಾಂಗ್ ಸರೋವರದ ಪಶ್ಚಿಮತಿರುವಿನವರೆಗೂ ಗಡಿಯನ್ನಾಗಿ ಇಬ್ಬರೂ ಒಪ್ಪಿಕೊಳ್ಳಬೇಕು. ಅಲ್ಲಿಂದ ಸ್ಪ್ಯಾಂಗೂರ ಪ್ರದೇಶವನ್ನು ಚೈನಾ ಕಡೆಯೇ ಬಿಟ್ಟು ಭಾರತವು ತನ್ನ ಕೇಳಿಕೆಯನ್ನು ರದ್ದುಗೊಳಿಸಿ ಅದೇ ಮುಂದುವರಿದ ಪರ್ವತ ಶ್ರೇಣಿಯ ಮೇಲೆ ಗಡಿಯನ್ನು ನಿರ್ಧರಿಸಿ, ಹಾನ್ಲೆ ಮತ್ತು ಕೊಯುಲ್ ನದಿಗಳಿಗೆ ನೀರು ಬಸಿಯುವ ಪರ್ವತ ಶ್ರೇಣಿಯನ್ನು ಗಡಿಯನ್ನಾಗಿ ಮಾಡಿ, ದೇಮ್ ಚೋಕ್ ಪ್ರದೇಶವನ್ನು ಪೂರ್ತಿಯಾಗಿ ಭಾರತವು ತನ್ನ ಕೇಳಿಕೆಯಿಂದ ಬಿಡಬೇಕು. ಇದಕ್ಕೆ ಪ್ರತಿಯಾಗಿ ಚೈನಾ ಮಧ್ಯಮ ಕ್ಷೇತ್ರದಲ್ಲಿರುವ ನಾಲ್ಕು ವಿವಾದಿತ ಪ್ರದೇಶಗಳಾದ ಚುವ ಚುಜೆ (ಗ್ಯೂ ಕೌರಿಕ್), ಹುಪ್ಸಾಂಗ್ ಖಡ್, ನಿಲಾಂಗ್ ಜಡಾಂಗ್, ಬರಹೋತಿ ಪ್ರದೇಶಗಳನ್ನು ತನ್ನ ಕೇಳಿಕೆಯಿಂದ ತೆಗೆದು ಭಾರತದ ಪರವಾಗಿ ಬಗೆಹರಿಸಬೇಕು. ಸಿಕ್ಕಿಂನಲ್ಲಿ ಯಾವ ಗಡಿ ವಿವಾದಗಳೂ ಇಲ್ಲ. ಚೈನಾ ಮತ್ತು ಭಾರತ ಇಬ್ಬರಿಗೂ ಒಪ್ಪಿತವಾದ ಗಡಿ ನಿರ್ಧಾರವಾಗಿ ಹೋಗಿದೆ. ಪೂರ್ವ ಕ್ಷೇತ್ರದಲ್ಲಿ ಚೈನಾ ಅರುಣಾಚಲ ಪ್ರದೇಶದ ಮೇಲಿನ ಕೇಳಿಕೆಯನ್ನು ಬಿಟ್ಟುಕೊಡಬೇಕು. ಇಬ್ಬರೂ ಜಂಟಿಯಾಗಿ ಸರ್ವೆಮಾಡಿ ಮೂಲ ಮೆಕ್‍ಮಹೋನ್ ರೇಖೆಯಲ್ಲಿ ಆಗಬೇಕಾದ ಸಣ್ಣ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು. ಥಾಗ್ ಲಾ-ಖಿನ್ಜೆಮಾನೆ ಪ್ರದೇಶದಲ್ಲಿ ಭೂತಾನ-ಚೈನಾ-ಭಾರತದ ತ್ರಿಸಂಧಿಯನ್ನು ಮೂರೂ ದೇಶಗಳ ಪ್ರತಿನಿಧಿಗಳು ಸೇರಿ ಮಾತುಕತೆಯ ಮೂಲಕ ನಿರ್ಧರಿಸಿ, ಭಾರತ-ಭೂತಾನ, ಭಾರತ-ಚೈನಾ ಗಡಿಯನ್ನು ಭೌಗೋಳಿಕ ಆಧಾರದಲ್ಲಿ ನಿರ್ಧರಿಸಬಹುದು. ಅದೇ ರೀತಿ ಸಂಪೂರ್ಣ ಪೂರ್ವದಲ್ಲಿ ಭಾರತ-ಬರ್ಮಾ-ಚೈನಾದ ತ್ರಿಸಂಧಿಯನ್ನು ಮೂವರೂ ಕೂಡಿ ನಿರ್ಧರಿಸಬೇಕು. ಲಾಂಗ್ಜು ಪ್ರದೇಶದಲ್ಲಿಯೂ ಸರ್ವೆ ಮಾಡಿ ನಿರ್ದಿಷ್ಟ ಭೌಗೋಳಿಕತೆಯ ಆಧಾರದಲ್ಲಿ ಕೊಡುತೆಗೆದುಕೊಳ್ಳುವ ಆಧಾರದಲ್ಲಿ ಗಡಿ ರೇಖೆ ನಿರ್ಧರಿಸಬಹುದು.

ಭಾರತ ಮತ್ತು ಚೈನಾ ನಿಜ ನಿಯಂತ್ರಣ ರೇಖೆಯ ವ್ಯಾಖ್ಯಾನ ಮಾಡಿಕೊಳ್ಳಬೇಕು. ಅದರಿಂದ ಎರಡೂ ಕಡೆಯ ಜನರನ್ನು ಭಯಭೀತಿಗೊಳಿಸುವ ಘಟನೆಗಳು ನಿಲ್ಲಬೇಕು. ಎರಡೂ ಕಡೆಯ ಸೈನಿಕರಿಗೆ ಯಾವುದೇ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಅದು ಸಾಧ್ಯವಾಗಲಿ ಬಿಡಲಿ, ನೇರವಾಗಿ ಸದ್ಭಾವನೆಯಿಂದ ಗಡಿ ರೇಖೆಯ ನಿರ್ಧಾರಣೆಯ ಚೌಕಾಶಿ ಮಾತುಕತೆಗೆ ಭಾರತವು ಕೂರಬೇಕು.

(ಲೇಖಕರು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದು. ಭಾರತ ಚೈನಾ ಗಡಿವಿವಾದದ ಸಮಗ್ರವಾದ ಆಳವಾದ ಅಧ್ಯಯನ ಮಾಡಿ 8 ಪುಸ್ತಕಗಳನ್ನು ಕನ್ನಡದಲ್ಲಿ ಬರೆದಿದ್ದಾರೆ)


ಇದನ್ನು ಓದಿ: ಚೀನಾವನ್ನು ಎದುರಿಸಲು ಯುರೋಪಿನಲ್ಲಿರುವ ತನ್ನ ಸೈನ್ಯವನ್ನು ಕಡಿಮೆ ಮಾಡುತ್ತಿದ್ದೇವೆ: ಅಮೆರಿಕಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...