ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೈಷಿ ಅವರನ್ನು “ಮುಸ್ಲಿಂ ಆಯುಕ್ತ” ಎಂದು ಕರೆದ ಒಂದು ದಿನದ ನಂತರ ಖುರೈಷಿ ಅವರು ತಿರುಗೇಟು ನೀಡಿದ್ದು, ಜನರನ್ನು ಅವರ ಧಾರ್ಮಿಕ ಗುರುತುಗಳ ಹೊರತಾಗಿ ಅವರ ಕೊಡುಗೆಗಳಿಂದ ನಿರ್ಣಯಿಸಬೇಕು ಎಂದು ಸೋಮವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಧರ್ಮದಿಂದಲ್ಲ
“ಕೆಲವರಿಗೆ, ಧಾರ್ಮಿಕ ಗುರುತುಗಳು ಅವರ ದ್ವೇಷ ರಾಜಕಾರಣವನ್ನು ಮುನ್ನಡೆಸುವ ಪ್ರಮುಖ ಅಂಶವಾಗಿದೆ ಎಂದು ನಾನು ಭಾವಿಸುತ್ತೇನೆ. ಭಾರತವು ತನ್ನ ಸಾಂವಿಧಾನಿಕ ಸಂಸ್ಥೆಗಳು ಮತ್ತು ತತ್ವಗಳಿಗಾಗಿ ಎದ್ದು ನಿಲ್ಲುತ್ತದೆ ಮತ್ತು ಹೋರಾಡುತ್ತದೆ.” ಎಂದು ಖುರೈಷಿ ಅವರು ಹೇಳಿದ್ದಾರೆ.
ಏಪ್ರಿಲ್ 4 ರಂದು ಅಂಗೀಕರಿಸಲ್ಪಟ್ಟ ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಖುರೈಷಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ದುಬೆ ಅವರು, “ನಿಮ್ಮ ಅಧಿಕಾರಾವಧಿಯಲ್ಲಿ ಜಾರ್ಖಂಡ್‌ನ ಸಂತಲ್ ಪರಗಣದಲ್ಲಿ ಗರಿಷ್ಠ ಸಂಖ್ಯೆಯ ಬಾಂಗ್ಲಾದೇಶಿ ನುಸುಳುಕೋರರನ್ನು ಮತದಾರರನ್ನಾಗಿ ಮಾಡಲಾಯಿತು” ಎಂದು ಪ್ರತಿಪಾದಿಸಿದ್ದರು.
“ಪ್ರವಾದಿ ಮುಹಮ್ಮದ್ ಅವರ ಇಸ್ಲಾಂ 712 ರಲ್ಲಿ ಭಾರತಕ್ಕೆ ಬಂದಿತು. ಈ ಭೂಮಿ [ವಕ್ಫ್], ಅದಕ್ಕೂ ಮೊದಲು, ಹಿಂದೂಗಳು ಅಥವಾ ಬುಡಕಟ್ಟು ಜನಾಂಗದವರು, ಜೈನರು ಅಥವಾ ಬೌದ್ಧ ಸೇರಿತ್ತು.” ಎಂದು ದುಬೆ ಹೇಳಿದ್ದರು.
ವಕ್ಫ್ ತಿದ್ದುಪಡಿ ಕಾಯ್ದೆಯು ವಕ್ಫ್ ಮಂಡಳಿಗಳ ಅಧಿಕಾರವನ್ನು ನಿರ್ಬಂಧಿಸುತ್ತದೆ ಮತ್ತು ಅವುಗಳ ಮೇಲೆ ಹೆಚ್ಚಿನ ಸರ್ಕಾರಿ ನಿಯಂತ್ರಣವನ್ನು ಅನುಮತಿಸುತ್ತದೆ. ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರು ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಅವರು, ಇದು ಸಮಾನತೆಯ ಹಕ್ಕು ಮತ್ತು ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದ್ದಾರೆ.
ಇಂತದ್ದೆ ಆತಂಕಗಳನ್ನು ಪ್ರತಿಧ್ವನಿಸಿದ್ದ ಖುರೈಷಿ ಅವರು, ವಕ್ಫ್ ತಿದ್ದುಪಡಿ ಕಾಯ್ದೆಯು ನಿಸ್ಸಂದೇಹವಾಗಿ ಮುಸ್ಲಿಮರ ಭೂಮಿಯನ್ನು ಕಸಿದುಕೊಳ್ಳಲು ಸರ್ಕಾರ ನಡೆಸುತ್ತಿರುವ ಒಂದು ಸ್ಪಷ್ಟವಾದ ದುಷ್ಟ ಯೋಜನೆ. ಸುಪ್ರೀಂ ಕೋರ್ಟ್ ಅದನ್ನು ಬಹಿರಂಗವಾಗಿ ಹೇಳುತ್ತದೆ ಎಂದು ನನಗೆ ಖಚಿತವಾಗಿದೆ.” ಎಂದು ಏಪ್ರಿಲ್ 17 ರಂದು ಹೇಳಿದ್ದರು. ಧರ್ಮದಿಂದಲ್ಲ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ತೆಲಂಗಾಣದಲ್ಲಿ ‘ರೋಹಿತ್ ವೇಮುಲ ಕಾಯ್ದೆ’ ಜಾರಿಗೊಳಿಸುವಂತೆ ಸಿಎಂ ರೇವಂತ್ ರೆಡ್ಡಿಗೆ ರಾಹುಲ್ ಗಾಂಧಿ ಪತ್ರ
ತೆಲಂಗಾಣದಲ್ಲಿ ‘ರೋಹಿತ್ ವೇಮುಲ ಕಾಯ್ದೆ’ ಜಾರಿಗೊಳಿಸುವಂತೆ ಸಿಎಂ ರೇವಂತ್ ರೆಡ್ಡಿಗೆ ರಾಹುಲ್ ಗಾಂಧಿ ಪತ್ರ

