Homeಮುಖಪುಟನೇಮಕಾತಿ ಹಗರಣ: 5 ಲೆಫ್ಟಿನೆಂಟ್ ಕರ್ನಲ್‌ಗಳ ಸಹಿತ 17 ಸೇನಾಧಿಕಾರಿಗಳ ವಿರುದ್ದ ಪ್ರಕರಣ ದಾಖಲು

ನೇಮಕಾತಿ ಹಗರಣ: 5 ಲೆಫ್ಟಿನೆಂಟ್ ಕರ್ನಲ್‌ಗಳ ಸಹಿತ 17 ಸೇನಾಧಿಕಾರಿಗಳ ವಿರುದ್ದ ಪ್ರಕರಣ ದಾಖಲು

- Advertisement -
- Advertisement -

ಸಶಸ್ತ್ರ ಪಡೆಗಳ ನೇಮಕಾತಿಯಲ್ಲಿನ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ‘ಲೆಫ್ಟಿನೆಂಟ್‌ ಕರ್ನಲ್’ ಶ್ರೇಣಿಯ ಐವರು ಅಧಿಕಾರಿಗಳು ಮತ್ತು ಆರು ಖಾಸಗಿ ವ್ಯಕ್ತಿಗಳನ್ನು ಒಳಗೊಂಡಂತೆ 17 ಸೇನಾ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪವಿದ್ದು, ಸಿಬಿಐ ಸೋಮವಾರ ದೇಶಾದ್ಯಂತ 30 ಸ್ಥಳಗಳಲ್ಲಿ ಈ ಬಗ್ಗೆ ಶೋಧ ನಡೆಸಿದೆ.

ವಾಯು ಸೇನಾ ರಕ್ಷಣಾ ದಳದ ಲೆಫ್ಟಿನೆಂಟ್ ಕರ್ನಲ್ ಎಂವಿಎಸ್ಎನ್ಎ ಭಗವಾನ್; ಕಪುರ್ಥಾಲಾದ ಸೇವಾ ಆಯ್ಕೆ ಕೇಂದ್ರದ ಲೆಫ್ಟಿನೆಂಟ್ ಕರ್ನಲ್ ಸುರೇಂದರ್ ಸಿಂಗ್; ಬರೇಲಿಯ 6 ಪರ್ವತ ವಿಭಾಗದ ಆರ್ಡನೆನ್ಸ್ ಘಟಕದ ಲೆಫ್ಟಿನೆಂಟ್ ಕರ್ನಲ್ ವೈ.ಎಸ್. ಚೌಹಾನ್, ಡಿಜಿ ನೇಮಕಾತಿ ನವದೆಹಲಿಯ ಜಂಟಿ ನಿರ್ದೇಶಕ ಲೆಫ್ಟಿನೆಂಟ್ ಕರ್ನಲ್ ಸುಖದೇವ್ ಅರೋರಾ, ಆಯ್ಕೆ ಕೇಂದ್ರ ದಕ್ಷಿಣ ಬೆಂಗಳೂರು ಗುಂಪು ಪರೀಕ್ಷಾ ಅಧಿಕಾರಿ (ಜಿಟಿಒ) ಲೆಫ್ಟಿನೆಂಟ್ ಕರ್ನಲ್ ವಿನಯ್ ಮತ್ತು ಕಪುರ್ಥಾಲ ಆಯ್ಕೆ ಕೇಂದ್ರ ಉತ್ತರ, ಜಿಟಿಒ ಮೇಜರ್ ಭಾವೇಶ್ ಕುಮಾರ್ ಸಿಬಿಐ ಪ್ರಕರಣ ದಾಖಲಿಸಿರುವ ಹಿರಿಯ ಅಧಿಕಾರಿಗಲಾಗಿದ್ದಾರೆ.

ಇದನ್ನೂ ಓದಿ: ಕಾನ್ಶಿರಾಮ್ ಜಯಂತಿ: JNU ಬಾಪ್ಸಾ ಅಧ್ಯಕ್ಷನ ಮೇಲೆ ABVP ಕಾರ್ಯಕರ್ತರಿಂದ ಹಲ್ಲೆ ಆರೋಪ

ಲೆಫ್ಟಿನೆಂಟ್ ಕರ್ನಲ್ ಎಂವಿಎಸ್ಎನ್ಎ ಭಗವಾನ್ ಅವರು ಈ ನೇಮಕಾತಿ ದಂಧೆಯ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಲವಾರು ಕೆಳಮಟ್ಟದ ಸೇನಾಧಿಕಾರಿಗಳು ಮತ್ತು ಆರೋಪಿತ ಅಧಿಕಾರಿಗಳ ಸಂಬಂಧಿಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

“ಕಪುರ್ಥಾಲಾ, ಬತಿಂಡಾ, ದೆಹಲಿ, ಕೈತಾಲ್, ಪಾಲ್ವಾಲ್, ಲಕ್ನೋ, ಬರೇಲಿ, ಗೋರಖ್‌ಪುರ, ವಿಶಾಖಪಟ್ಟಣಂ, ಜೈಪುರ, ಗುವಾಹಟಿ, ಜೋರ್ಹತ್ ಮತ್ತು ಚಿರಂಗೋನ್ ಒಟ್ಟು 13 ನಗರಗಳ ನಾಗರಿಕ ಪ್ರದೇಶಗಳು ಸೇರಿದಂತೆ, ಬೇಸ್ ಆಸ್ಪತ್ರೆ, ಕಂಟೋನ್ಮೆಂಟ್, ಇತರ ಸೇನಾ ಸಂಸ್ಥೆಗಳ 30 ಸ್ಥಳಗಳಲ್ಲಿ ಇಂದು ಹುಡುಕಾಟಗಳನ್ನು ನಡೆಸಲಾಯಿತು. ಇದು ಹಲವಾರು ದೋಷಾರೋಪಣೆ ದಾಖಲೆಗಳನ್ನು ಮರುಪಡೆಯಲು ಸಹಾಯವಾಯಿತು. ಹುಡುಕಾಟದ ಸಮಯದಲ್ಲಿ ಸಿಕ್ಕಿರುವ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ”ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ GST ಅಡಿಯಲ್ಲಿ ತರುವ ಪ್ರಸ್ತಾಪ ಇಲ್ಲ: ಕೇಂದ್ರ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...